ಭಾರತದಲ್ಲಿ ಕ್ರಿಪ್ಟೋ ವಹಿವಾಟು ಬಂದ್‌ ಆಗುತ್ತಾ? ದುಬಾರಿ ತೆರಿಗೆ ಕಟ್ಟಬೇಕಾ? ಇಲ್ಲಿದೆ ಸಮಗ್ರ ಮಾಹಿತಿ!

ಹೊಸದಿಲ್ಲಿ: ಭಾರತದಲ್ಲಿ ಕ್ರಿಪ್ಟೋ ವಹಿವಾಟು ಕಾನೂನುಬದ್ಧವಾಗಿದೆಯೇ? ಅಥವಾ ಇದೊಂದು ಅಕ್ರಮ ವ್ಯವಹಾರವೇ? ಈ ಪ್ರಶ್ನೆಗಳಿಗೆ ಸ್ವತಃ ಕ್ರಿಪ್ಟೋ ವಹಿವಾಟು ನಡೆಸುತ್ತಿರು ಹೂಡಿಕೆದಾರರಲ್ಲೂ ಸ್ಪಷ್ಟ ಉತ್ತರ ದೊರೆಯುವುದು ಕಷ್ಟ. ಇದುವರೆಗೆ ಭಾರತದಲ್ಲಿ ಕ್ರಿಪ್ಟೋಕರೆನ್ಸಿ ವಹಿವಾಟು ಗ್ರೇ (ಬೂದು) ವಲಯದಲ್ಲಿಯೇ ಇದೆ. ಅಂದರೆ, ಈ ಕುರಿತು ಅಧಿಕೃತವಾಗಿ ಯಾವುದೇ ನಿರ್ಣಯ ಕೈಗೊಂಡಿಲ್ಲ. ಆದರೆ, ವಾಸ್ತವದಲ್ಲಿ ಬ್ಲಾಕ್‌ಚೈನ್ ಮಾರುಕಟ್ಟೆ ಕ್ಷಿಪ್ರವಾಗಿ ಬೆಳೆಯುತ್ತಲೇ ಸಾಗಿದೆ. ಸುಮಾರು 5 ವರ್ಷಗಳ ಹಿಂದೆಯೇ ಭಾರತದಲ್ಲಿ ಕ್ರಿಪ್ಟೋ ಕರೆನ್ಸಿಗಳ ಮೇಲೆ ನಿಯಂತ್ರಣ ಹೇರುವ ಪ್ರಯತ್ನಗಳಾಗಿವೆ. ಅದರೂ, ಕೋಟ್ಯಂತರ ಹೂಡಿಕೆದಾರರು ಕ್ರಿಪ್ಟೋಕರೆನ್ಸಿಗಳಲ್ಲಿ ಬಿಲಿಯನ್‌ಗಟ್ಟಲೆ ಹಣ ಹೂಡಿಕೆ ಮಾಡುತ್ತಲೇ ಇದ್ದಾರೆ. ಈ ಪೈಕಿ ಕಂಪನಿಗಳು, ಸರ್ಕಾರಿ ಅಧಿಕಾರಿಗಳು ಮತ್ತು ಮಂತ್ರಿಗಳೇ ಕ್ರಿಪ್ಟೋ ನಾಣ್ಯಗಳಲ್ಲಿ ಹೆಚ್ಚು ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ. ಕ್ರಿಪ್ಟೋಕರೆನ್ಸಿಗಳು ಭಾರತದಲ್ಲಿ ಜನಪ್ರಿಯವಾಗಿರಬಹುದು. ಆದರೆ, ಕ್ರಿಪ್ಟೋ ವಹಿವಾಟು ಕುರಿತಂತೆ ಬಹುಸಂಖ್ಯಾತರಿಗೆ ಇಂದಿಗೂ ಹಲವು ಪ್ರಶ್ನೆಗಳಿವೆ. ಭಾರತೀಯ ಕ್ರಿಪ್ಟೋ ಎಕ್ಸ್‌ಚೇಂಜ್‌ಗಳಲ್ಲಿ ಕ್ರಿಪ್ಟೋ ನಾಣ್ಯ ಖರೀದಿಸಿದರೆ ಕಾನೂನು ಉಲ್ಲಂಘನೆಯಾಗುತ್ತದೆಯೇ? ಭಾರತ ಸರಕಾರ ಕ್ರಿಪ್ಟೋ ವಹಿವಾಟನ್ನೇ ಬಂದ್ ಮಾಡುತ್ತದೆಯೇ? ಅಲ್ಲದೆ ಕ್ರಿಪ್ಟೋ ವಹಿವಾಟಿಗೆ ಸರಕಾರ ಹೇಗೆ ತೆರಿಗೆ ವಿಧಿಸಲಿದೆ? ಎಂಬ ಪ್ರಶ್ನೆಗಳೂ ಹೂಡಿಕೆದಾರರಲ್ಲಿವೆ. ಕ್ರಿಪ್ಟೋ ಕರೆನ್ಸಿ ಕುರಿತು ಪ್ರಮುಖ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಭಾರತದಲ್ಲಿ ಕ್ರಿಪ್ಟೋ ವಹಿವಾಟು ಬಂದ್‌ ಆಗುತ್ತಾ? ದುಬಾರಿ ತೆರಿಗೆ ಕಟ್ಟಬೇಕಾ? ಇಲ್ಲಿದೆ ಸಮಗ್ರ ಮಾಹಿತಿ!
Linkup

ಭಾರತದಲ್ಲಿ 'ಎಲ್ಲ' ಕ್ರಿಪ್ಟೋ ಚಟುವಟಿಕೆಗಳನ್ನು ನಿಷೇಧಿಸಲಾಗಿದೆಯೇ? ಭಾರತದಲ್ಲಿ ಕ್ರಿಪ್ಟೋ ಮೈನಿಂಗ್‌ (ಗಣಿಗಾರಿಕೆ) ಕಾನೂನುಬದ್ಧವೇ? ಕ್ರಿಪ್ಟೋ ಆದಾಯಕ್ಕೆ ಎಷ್ಟು ತೆರಿಗೆ ಪಾವತಿಸಬೇಕು? ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ.

ಭಾರತದಲ್ಲಿ ಕ್ರಿಪ್ಟೋ ವಹಿವಾಟು ಬಂದ್‌ ಆಗುತ್ತಾ? ದುಬಾರಿ ತೆರಿಗೆ ಕಟ್ಟಬೇಕಾ? ಇಲ್ಲಿದೆ ಸಮಗ್ರ ಮಾಹಿತಿ!

ಹೊಸದಿಲ್ಲಿ:

ಭಾರತದಲ್ಲಿ ಕ್ರಿಪ್ಟೋ ವಹಿವಾಟು ಕಾನೂನುಬದ್ಧವಾಗಿದೆಯೇ? ಅಥವಾ ಇದೊಂದು ಅಕ್ರಮ ವ್ಯವಹಾರವೇ? ಈ ಪ್ರಶ್ನೆಗಳಿಗೆ ಸ್ವತಃ ಕ್ರಿಪ್ಟೋ ವಹಿವಾಟು ನಡೆಸುತ್ತಿರು ಹೂಡಿಕೆದಾರರಲ್ಲೂ ಸ್ಪಷ್ಟ ಉತ್ತರ ದೊರೆಯುವುದು ಕಷ್ಟ.

ಇದುವರೆಗೆ ಭಾರತದಲ್ಲಿ ಕ್ರಿಪ್ಟೋಕರೆನ್ಸಿ ವಹಿವಾಟು ಗ್ರೇ (ಬೂದು) ವಲಯದಲ್ಲಿಯೇ ಇದೆ. ಅಂದರೆ, ಈ ಕುರಿತು ಅಧಿಕೃತವಾಗಿ ಯಾವುದೇ ನಿರ್ಣಯ ಕೈಗೊಂಡಿಲ್ಲ. ಆದರೆ, ವಾಸ್ತವದಲ್ಲಿ ಬ್ಲಾಕ್‌ಚೈನ್ ಮಾರುಕಟ್ಟೆ ಕ್ಷಿಪ್ರವಾಗಿ ಬೆಳೆಯುತ್ತಲೇ ಸಾಗಿದೆ. ಸುಮಾರು 5 ವರ್ಷಗಳ ಹಿಂದೆಯೇ ಭಾರತದಲ್ಲಿ ಕ್ರಿಪ್ಟೋ ಕರೆನ್ಸಿಗಳ ಮೇಲೆ ನಿಯಂತ್ರಣ ಹೇರುವ ಪ್ರಯತ್ನಗಳಾಗಿವೆ. ಅದರೂ, ಕೋಟ್ಯಂತರ ಹೂಡಿಕೆದಾರರು ಕ್ರಿಪ್ಟೋಕರೆನ್ಸಿಗಳಲ್ಲಿ ಬಿಲಿಯನ್‌ಗಟ್ಟಲೆ ಹಣ ಹೂಡಿಕೆ ಮಾಡುತ್ತಲೇ ಇದ್ದಾರೆ. ಈ ಪೈಕಿ ಕಂಪನಿಗಳು, ಸರ್ಕಾರಿ ಅಧಿಕಾರಿಗಳು ಮತ್ತು ಮಂತ್ರಿಗಳೇ ಕ್ರಿಪ್ಟೋ ನಾಣ್ಯಗಳಲ್ಲಿ ಹೆಚ್ಚು ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ.

ಕ್ರಿಪ್ಟೋಕರೆನ್ಸಿಗಳು ಭಾರತದಲ್ಲಿ ಜನಪ್ರಿಯವಾಗಿರಬಹುದು. ಆದರೆ, ಕ್ರಿಪ್ಟೋ ವಹಿವಾಟು ಕುರಿತಂತೆ ಬಹುಸಂಖ್ಯಾತರಿಗೆ ಇಂದಿಗೂ ಹಲವು ಪ್ರಶ್ನೆಗಳಿವೆ. ಭಾರತೀಯ ಕ್ರಿಪ್ಟೋ ಎಕ್ಸ್‌ಚೇಂಜ್‌ಗಳಲ್ಲಿ ಕ್ರಿಪ್ಟೋ ನಾಣ್ಯ ಖರೀದಿಸಿದರೆ ಕಾನೂನು ಉಲ್ಲಂಘನೆಯಾಗುತ್ತದೆಯೇ? ಭಾರತ ಸರಕಾರ ಕ್ರಿಪ್ಟೋ ವಹಿವಾಟನ್ನೇ ಬಂದ್ ಮಾಡುತ್ತದೆಯೇ? ಅಲ್ಲದೆ ಕ್ರಿಪ್ಟೋ ವಹಿವಾಟಿಗೆ ಸರಕಾರ ಹೇಗೆ ತೆರಿಗೆ ವಿಧಿಸಲಿದೆ? ಎಂಬ ಪ್ರಶ್ನೆಗಳೂ ಹೂಡಿಕೆದಾರರಲ್ಲಿವೆ. ಕ್ರಿಪ್ಟೋ ಕರೆನ್ಸಿ ಕುರಿತು ಪ್ರಮುಖ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಭಾರತದಲ್ಲಿ 'ಎಲ್ಲ' ಕ್ರಿಪ್ಟೋ ಚಟುವಟಿಕೆಗಳನ್ನು ನಿಷೇಧಿಸಲಾಗಿದೆಯೇ?
ಭಾರತದಲ್ಲಿ 'ಎಲ್ಲ' ಕ್ರಿಪ್ಟೋ ಚಟುವಟಿಕೆಗಳನ್ನು ನಿಷೇಧಿಸಲಾಗಿದೆಯೇ?

ಭಾರತದಲ್ಲಿ ಕ್ರಿಪ್ಟೋಕರೆನ್ಸಿಗಳ ಮೇಲೆ ನಿಯಂತ್ರಣ ಹೇರಿಲ್ಲ ಎಂಬುದನ್ನು ಎಲ್ಲರೂ ಸ್ಪಷ್ಟವಾಗಿ ತಿಳಿಯಬೇಕು. ವಾಸ್ತವವಾಗಿ, ಭಾರತದಲ್ಲಿ ಕ್ರಿಪ್ಟೋಕರೆನ್ಸಿಗಳ ಮೇಲೆ ಎಂದಿಗೂ ನಿಷೇಧಿಸಲಾಗಿಲ್ಲ. ಆದರೆ, 2018 ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಕ್ರಿಪ್ಟೋ ವಹಿವಾಟಿಗೆ ಸಂಬಂಧಿಸಿದಂತೆ ಕೆಲವು ನಿರ್ಬಂಧಗಳನ್ನು ವಿಧಿಸಿತ್ತು. ವಾಣಿಜ್ಯ ಬ್ಯಾಂಕುಗಳು ಕ್ರಿಪ್ಟೋಕರೆನ್ಸಿ ಎಕ್ಸ್‌ಚೇಂಜ್‌ಗಳೊಂದಿಗೆ ವ್ಯವಹಾರ ಮಾಡುವುದನ್ನು ನಿಲ್ಲಿಸಲು ಎಲ್ಲ ಬ್ಯಾಂಕುಗಳಿಗೆ ಆರ್‌ಬಿಐ ನಿರ್ದೇಶನ ನೀಡಿತ್ತು. ಆದರೆ, ಈಗಾಗಲೇ ಕ್ರಿಪ್ಟೋ ಕರೆನ್ಸಿ ಹೊಂದಿರುವವರ ಕುರಿತ. ಅಲ್ಲದೆ ಕ್ರಿಪ್ಟೋ ನಾಣ್ಯ ಹೊಂದಲಿರುವವರ ಕುರಿತು ಆರ್‌ಬಿಐ ಏನನ್ನೂ ಹೇಳಿರಲಿಲ್ಲ. ಆದರೆ, ಆರ್‌ಬಿಐ ವಿಧಿಸಿದ್ದ ನಿರ್ಬಂಧವನ್ನೂ 2020 ರಲ್ಲಿ ಸುಪ್ರೀಂ ಕೋರ್ಟ್ ತೆರವುಗೊಳಿಸಿತು.

ಇದಾದ ಕೂಡಲೇ ಭಾರತದಲ್ಲಿ ಕ್ರಿಪ್ಟೋ ಎಕ್ಸ್‌ಚೇಂಜ್‌ಗಳು ಅನಿಯಂತ್ರವಾಗಿ ಬೆಳೆಯತೊಡಗಿದವು. ಈ ಮಧ್ಯೆಯೇ ಕ್ರಿಪ್ಟೋ ಎಕ್ಸ್‌ಚೇಂಜ್‌ಗಳ ಬಗ್ಗೆ ಜಾಗರೂಕರಾಗಿರಿ ಎಂದು ಬ್ಯಾಂಕುಗಳಿಗೆ ಅನೌಪಚಾರಿಕವಾಗಿ ಎಚ್ಚರಿಕೆಯನ್ನೂ ನೀಡಿತ್ತು. ಈ ಹಿನ್ನೆಲೆಯಲ್ಲಿ ಕೆಲವು ಬ್ಯಾಂಕುಗಳು ತಮ್ಮ ಮೂಲಕ ಕ್ರಿಪ್ಟೋ ವಿನಿಮಯ ಕೇಂದ್ರಗಳಲ್ಲಿ ಹಣ ಠೇವಣಿ ಮಾಡಲು ಜನರಿಗೆ ಅನುಮತಿ ನೀಡುತ್ತಿಲ್ಲ.

ಭಾರತದಲ್ಲಿ ಕ್ರಿಪ್ಟೋ ವಹಿವಾಟು ಕಾನೂನುಬದ್ಧವೇ?
ಭಾರತದಲ್ಲಿ ಕ್ರಿಪ್ಟೋ ವಹಿವಾಟು  ಕಾನೂನುಬದ್ಧವೇ?

ಭಾರತದಲ್ಲಿ ಕ್ರಿಪ್ಟೋ ಮಾರುಕಟ್ಟೆ ಇನ್ನೂ ಗ್ರೇ (ಬೂದು) ಪಟ್ಟಿಯಲ್ಲಿದೆ ಎಂದೇ ಹೇಳಬಹುದು. ಆದರೆ, ಕ್ರಿಪ್ಟೋ ನಾಣ್ಯಗಳನ್ನು ನಿಷೇಧಿಸುವ ಅಥವಾ ಅಂತಹ ಡಿಜಿಟಲ್ ಕರೆನ್ಸಿಗಳ ವಹಿವಾಟನ್ನು ಕಾನೂನುಬಾಹಿರ ಎಂದು ಎಲ್ಲಿಯೂ ಹೇಳಲಾಗಿಲ್ಲ. ಈ ಕುರಿತಂತೆ ಇನ್ನೂ ಯಾವುದೇ ಕಾನೂನು ಕೂಡ ಬಂದಿಲ್ಲ. ಪ್ರಸ್ತುತ, ಕೇಂದ್ರ ಸರ್ಕಾರವು ಕ್ರಿಪ್ಟೋ ವಹಿವಾಟನ್ನುನಿಯಂತ್ರಿಸುವ ಮಸೂದೆ ತರುವ ಕೆಲಸದಲ್ಲಿ ಕಾರ್ಯನಿರತವಾಗಿದೆ. ಇದೇ ಚಳಿಗಾಲದ ಅಧಿವೇಶನದಲ್ಲಿ ಕ್ರಿಪ್ಟೋ ವಿಧೇಯಕ ಪರಿಚಯಿಸುವ ನಿರೀಕ್ಷೆ ಇದೆ. ಈ ಮಸೂದೆಯು ದೇಶದಲ್ಲಿ ಕ್ರಿಪ್ಟೋ ಎಕ್ಸ್‌ಚೇಂಜ್‌ಗಳು ಹೇಗೆ ಕಾರ್ಯನಿರ್ವಹಿಸಬೇಕು? ಕ್ರಿಪ್ಟೋ ಆದಾಯಕ್ಕೆ ಹೇಗೆ ತೆರಿಗೆ ವಿಧಿಸಬೇಕು? ಮೊದಲಾದ ಪ್ರಮುಖ ನಿಯಮಗಳನ್ನು ಒಳಗೊಂಡಿರಲಿದೆ. ಆರ್‌ಬಿಐ ಕೂಡ ಕ್ರಿಪ್ಟೋ ಕರೆನ್ಸಿಗಳನ್ನು ಕಾನೂನುಬಾಹಿರ ಎಂದು ಹೇಳಿಲ್ಲ. ಆದರೂ, ಡಿಜಿಟಲ್‌ ಕರೆನ್ಸಿಗಳ ವಹಿವಾಟು ಕುರಿತಂತೆ ಹಲವು ಬಾರಿ ಕಳವಳ ವ್ಯಕ್ತಪಡಿಸಿದೆ.

ಭಾರತದಲ್ಲಿ ಕ್ರಿಪ್ಟೋ ಮೈನಿಂಗ್‌ (ಗಣಿಗಾರಿಕೆ) ಕಾನೂನುಬದ್ಧವೇ?
ಭಾರತದಲ್ಲಿ ಕ್ರಿಪ್ಟೋ ಮೈನಿಂಗ್‌ (ಗಣಿಗಾರಿಕೆ) ಕಾನೂನುಬದ್ಧವೇ?

ಭಾರತದಲ್ಲಿ ಸಾಮಾನ್ಯ ಜನರು ಕರೆನ್ಸಿ ನೋಟು ಮುದ್ರಿಸುವುದು ಕಾನೂನುಬಾಹಿರ, ಇದೊಂದು ಮಹಾಪರಾಧ ಎಂದೇ ಪರಿಗಣಿಸಲಾಗಿದೆ. ಏಕೆಂದರೆ ಒಂದು ದೇಶದ ಕರೆನ್ಸಿಯನ್ನು ಮುದ್ರಿಸುವ ಅಧಿಕಾರ ಆಯಾ ದೇಶದ ಸರಕಾರಕ್ಕೆ ಮಾತ್ರವೇ ಸೀಮಿತ. ಆದರೆ, ಕ್ರಿಪ್ಟೋಕರೆನ್ಸಿಗಳ ವಿಚಾರಕ್ಕೆ ಬಂದರೆ, ಇಲ್ಲಿ ಯಾರು ಬೇಕಾದರೂ ಕ್ರಿಪ್ಟೋ ಕಾಯಿನ್‌ಗಳನ್ನು ಮೈನಿಂಗ್‌ ಮಾಡಬಹುದು. ಪ್ರಸ್ತುತ ಭಾರತದಲ್ಲಿ ಕ್ರಿಪ್ಟೋ ಮೈನಿಂಗ್‌ ಚಟುವಟಿಕೆ ಅನಿಯಂತ್ರಿತವಾಗಿದೆ. ಆದರೆ, ಚೀನಾದಲ್ಲಿ ಕ್ರಿಪ್ಟೋಕರೆನ್ಸಿ ಕ್ರಿಪ್ಟೋ ಮೈನಿಂಗ್‌ ಮೇಲೆ ಪೂರ್ಣ ನಿಷೇಧ ಹೇರಲಾಗಿದೆ. ಭಾರತದಲ್ಲಿ ಇಂತಹ ಯಾವುದೇ ಕಾನೂನುಗಳಿಲ್ಲ. ನಿಮ್ಮ ಖಾಸಗಿ ಕಂಪ್ಯೂಟಿಂಗ್ ಉಪಕರಣಗಳನ್ನು ಬಳಸಿ ಕ್ರಿಪ್ಟೋ ಕಾಯಿನ್‌ಗಳನ್ನು ಮೈನಿಂಗ್‌ ಮಾಡಬಹುದು.

ಭಾರತದಲ್ಲಿ ಬಿಟ್‌ಕಾಯಿನ್ ಕಾನೂನುಬದ್ಧವೇ?
ಭಾರತದಲ್ಲಿ ಬಿಟ್‌ಕಾಯಿನ್ ಕಾನೂನುಬದ್ಧವೇ?

ಭಾರತದಲ್ಲಿ ಬಿಟ್‌ಕಾಯಿನ್ "ಕಾನೂನುಬದ್ಧವೇ? ಎಂಬ ಪ್ರಶ್ನೆಗೆ 'ಇಲ್ಲ' ಎಂದೇ ಹೇಳಬೇಕು. ಕೇಂದ್ರ ಸರಕಾರ ಕೂಡ ಬಿಟ್ಕಾಯಿನ್‌ಗೆ ಕಾನೂನು ಮಾನ್ಯತೆ ನೀಡಲು ಮನಸ್ಸು ಮಾಡಿಲ್ಲ. ಇತ್ತೀಚೆಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದರು. ಬಿಟ್‌ಕಾಯಿನ್‌ಗೆ ಕಾನೂನು ಮಾನ್ಯತೆ ನೀಡುವ ಯಾವುದೇ ಪ್ರಸ್ತಾಪವಿಲ್ಲ ಎಂದು ತಿಳಿಸಿದ್ದರು.

ಭಾರತದಲ್ಲಿ ಕ್ರಿಪ್ಟೋ ಕರೆನ್ಸಿಗಳಿಗೆ ತೆರಿಗೆ ಪಾವತಿಸಬೇಕೇ?
ಭಾರತದಲ್ಲಿ ಕ್ರಿಪ್ಟೋ ಕರೆನ್ಸಿಗಳಿಗೆ ತೆರಿಗೆ ಪಾವತಿಸಬೇಕೇ?

ಭಾರತದಲ್ಲಿ ಪ್ರಸ್ತುತ ಕಾನೂನಿನ ಅನ್ವಯ ಯಾವುದೇ ರೀತಿಯ ಲಾಭದ ಆದಾಯದ ಮೇಲೆ ನೀವು ತೆರಿಗೆ ಪಾವತಿಸಬೇಕು. ಕ್ರಿಪ್ಟೋ ವಹಿವಾಟಿನಿಂದ ಬರುವ ಆದಾಯವೂ ಇದಕ್ಕಿಂತ ಭಿನ್ನವೇನಲ್ಲ. ಆದರೂ, ಕ್ರಿಪ್ಟೋ ವಹಿವಾಟಿನ ಆದಾಯದ ಮೇಲೆ ತೆರಿಗೆ ವಿಧಿಸಲು ಆದಾಯ ತೆರಿಗೆ ಕಾಯಿದೆಯಲ್ಲಿ ಯಾವುದೇ ನಿರ್ದಿಷ್ಟ ಕಾನೂನು ಚೌಕಟ್ಟಿಲ್ಲ. ಆದರೂ, ಕ್ರಿಪ್ಟೋ ಆದಾಯವನ್ನು ಆದಾಯ ತೆರಿಗೆ ರಿಟರ್ನ್ಸ್‌ (ITR) ಸಲ್ಲಿಕೆಯಲ್ಲ ಬಂಡವಾಳ ಲಾಭಗಳೆಂದು ವರದಿ ಮಾಡವಂತೆ ಆರ್ಥಿಕ ತಜ್ಞರು ಶಿಫಾರಸು ಮಾಡುತ್ತಾರೆ.

"ಕ್ರಿಪ್ಟೋ ಎಕ್ಸ್‌ಚೇಂಜ್‌ಗಳು ಮತ್ತು ಇತರ ಕ್ರಿಪ್ಟೋ ಸೇವೆಗಳನ್ನು ಒದಗಿಸುವ ಪ್ಲಾಟ್‌ಫಾರ್ಮ್‌ಗಳಿಂದ ಗಳಿಸಿದ ಆದಾಯವು ತೆರಿಗೆ ವ್ಯಾಪ್ತಿಗೆ ಒಳಪಡಲಿದೆ ಎಂದು ಸಂಸತ್‌ ಅಧಿವೇಶನದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿವರಿಸಿದ್ದಾರೆ.

ಬ್ಲಾಕ್‌ಚೈನ್ ತಂತ್ರಜ್ಞಾನವು ಭಾರತದಲ್ಲಿ ಕಾನೂನುಬದ್ಧವೇ?
ಬ್ಲಾಕ್‌ಚೈನ್ ತಂತ್ರಜ್ಞಾನವು ಭಾರತದಲ್ಲಿ ಕಾನೂನುಬದ್ಧವೇ?

ಬ್ಲಾಕ್‌ಚೈನ್ ತಂತ್ರಜ್ಞಾನವು ಕೃತಕ ಬುದ್ಧಿಮತ್ತೆ (AI), ಮಷೀನ್‌ ಲರ್ನಿಂಗ್‌ (ML) ಅಥವಾ ಉದಯೋನ್ಮುಖ ತಂತ್ರಜ್ಞಾನದ ಯಾವುದೇ ರೂಪದಂತೆ ಕಾನೂನುಬದ್ಧವಾಗಿದೆ. ವಾಸ್ತವವಾಗಿ, ಆಂಧ್ರ ಪ್ರದೇಶ ಸರ್ಕಾರವು ಎರಡು ವರ್ಷಗಳ ಹಿಂದೆ ಭೂ ದಾಖಲೆಗಳನ್ನು ನಿರ್ವಹಿಸಲು ಬ್ಲಾಕ್‌ಚೈನ್ ಆಧಾರಿತ ವೇದಿಕೆಯನ್ನು ನಿರ್ಮಿಸಿದೆ. ಆರ್‌ಬಿಐನ 'ಕೇಂದ್ರ ಬ್ಯಾಂಕ್ ಡಿಜಿಟಲ್ ಕರೆನ್ಸಿ' (ಸಿಬಿಡಿಸಿ) ಯಲ್ಲಿ ಕೂಡ ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಆಧರಿಸಿ ಕಾರ್ಯನಿರ್ವಹಿಸುತ್ತಿದೆ. ಮಹಾರಾಷ್ಟ್ರ ಸರ್ಕಾರವು ಇ-ಆಡಳಿತಕ್ಕಾಗಿ ಬ್ಲಾಕ್‌ಚೈನ್ ತಂತ್ರಜ್ಞಾನ ಬಳಸುತ್ತಿದೆ.