19ನೇ ಚಿತ್ರಸಂತೆಗೆ ಸಜ್ಜಾಗುತ್ತಿದೆ ಚಿತ್ರಕಲಾ ಪರಿಷತ್ತು; 700ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ!

''ಕಳೆದ ವರ್ಷ ಕೋವಿಡ್‌ ಹಿನ್ನೆಲೆಯಲ್ಲಿ ಚಿತ್ರಸಂತೆಯನ್ನು ಆನ್‌ಲೈನ್‌ನಲ್ಲಿ ನಡೆಸಲಾಯಿತು. ಈ ಬಾರಿ ಕೋವಿಡ್‌ ಪ್ರಕರಣಗಳು ಕಡಿಮೆಯಾದ ಹಿನ್ನೆಲೆಯಲ್ಲಿ ಭೌತಿಕವಾಗಿ ಚಿತ್ರಸಂತೆ ನಡೆಸಲು ನಿರ್ಧರಿಸಲಾಯಿತು. ಅದರಂತೆ ಅರ್ಜಿಗಳನ್ನು ಆಹ್ವಾನಿಸಲಾಯಿತು. ಇದೀಗ ಮತ್ತೆ ಹೊಸ ಬಗೆಯ ಕೋವಿಡ್‌ ಪ್ರಕರಣಗಳು ಕೇಳಿ ಬರುತ್ತಿವೆ. ಹೀಗಾಗಿ ಚಿತ್ರಸಂತೆ ನಡೆಸಲು ಸರಕಾರದ ಅನುಮತಿ ಕೋರಿ ಪತ್ರ ಬರೆಯಲಾಗಿದೆ.

19ನೇ ಚಿತ್ರಸಂತೆಗೆ ಸಜ್ಜಾಗುತ್ತಿದೆ ಚಿತ್ರಕಲಾ ಪರಿಷತ್ತು; 700ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ!
Linkup
ಎಚ್‌.ಪಿ. ಪುಣ್ಯವತಿ, ಬೆಂಗಳೂರು: ನಡೆಸುವ ''ಯನ್ನು ಭೌತಿಕವಾಗಿ ನಡೆಸುವುದಾದರೆ ಜನವರಿ 9ಕ್ಕೆ ಇಲ್ಲವೇ ಆನ್‌ಲೈನ್‌ನಲ್ಲಿ ನಡೆಸುವುದಾದರೆ ಜ.26ಕ್ಕೆ ನಡೆಸಲು ತೀರ್ಮಾನಿಸಲಾಗಿದೆ. ಈ ಕುರಿತು ಅನುಮತಿಗಾಗಿ ಸರಕಾರಕ್ಕೆ ಪತ್ರ ರವಾನಿಸಲಾಗಿದೆ. ಈಗಾಗಲೇ ಅರ್ಜಿಗಳ ಮಹಾಪೂರ ಹರಿದುಬರುತ್ತಿದೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಈ ಬಾರಿ ಅದೇ ಪರಿಕಲ್ಪನೆಯಡಿಯೇ ಚಿತ್ರಸಂತೆ ನಡೆಸಲಾಗುವುದು. ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಪ್ರತಿ ವರ್ಷ ಮೊದಲ ಭಾನುವಾರ ನಡೆಯುತ್ತಿದ್ದ ಚಿತ್ರಸಂತೆ ಈ ಬಾರಿ ತಿಂಗಳ ಎರಡನೇ ಭಾನುವಾರ ನಡೆಸಲು ತೀರ್ಮಾನಿಸಲಾಗಿದೆ. ಅದರಂತೆ ಜ.9ರಂದು ಚಿತ್ರಸಂತೆ ಆಯೋಜಿಸಲಾಗುವುದು. ಹೊಸ ವರ್ಷದ ಮರುದಿನವೇ ಮೊದಲ ಭಾನುವಾರ ಬಂದಿರುವುದರಿಂದ ಅಂದು ನಡೆಸಿದರೆ ಹೆಚ್ಚು ಜನ ಬರುವುದು ಕಷ್ಟ ಎಂಬ ಕಾರಣಕ್ಕಾಗಿ ಎರಡನೇ ವಾರ ನಡೆಸಲು ನಿರ್ಧರಿಸಲಾಗಿದೆ. ಈಗಾಗಲೇ ನಾನಾ ರಾಜ್ಯಗಳಿಂದ 700ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ''ಕಳೆದ ವರ್ಷ ಕೋವಿಡ್‌ ಹಿನ್ನೆಲೆಯಲ್ಲಿ ಚಿತ್ರಸಂತೆಯನ್ನು ಆನ್‌ಲೈನ್‌ನಲ್ಲಿ ನಡೆಸಲಾಯಿತು. ಈ ಬಾರಿ ಕೋವಿಡ್‌ ಪ್ರಕರಣಗಳು ಕಡಿಮೆಯಾದ ಹಿನ್ನೆಲೆಯಲ್ಲಿ ಭೌತಿಕವಾಗಿ ಚಿತ್ರಸಂತೆ ನಡೆಸಲು ನಿರ್ಧರಿಸಲಾಯಿತು. ಅದರಂತೆ ಅರ್ಜಿಗಳನ್ನು ಆಹ್ವಾನಿಸಲಾಯಿತು. ಇದೀಗ ಮತ್ತೆ ಹೊಸ ಬಗೆಯ ಕೋವಿಡ್‌ ಪ್ರಕರಣಗಳು ಕೇಳಿ ಬರುತ್ತಿವೆ. ಹೀಗಾಗಿ ಚಿತ್ರಸಂತೆ ನಡೆಸಲು ಸರಕಾರದ ಅನುಮತಿ ಕೋರಿ ಪತ್ರ ಬರೆಯಲಾಗಿದೆ,'' ಎಂದು ಕರ್ನಾಟಕ ಚಿತ್ರಕಲಾ ಪರಿಷತ್‌ನ ಗೌರವ ಕಾರ್ಯದರ್ಶಿ ಪ್ರೊ. ಕೆ.ಎಸ್‌.ಅಪ್ಪಾಜಯ್ಯ ತಿಳಿಸಿದರು. ಯಾವುದೇ ತರಹದ ಚಿತ್ರಸಂತೆ ಮಾಡಿದರೂ ಪರಿಷತ್‌ ಆವರಣದ 15 ಕೊಠಡಿಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಕಲಾಕೃತಿಗಳನ್ನು ಪ್ರದರ್ಶಿಸಲಾಗುವುದು ಎಂದು ಅವರು ಹೇಳಿದರು. ಕಲಾವಿದರಿಗೆ ಲಸಿಕೆ ಕಡ್ಡಾಯ ''ಚಿತ್ರಸಂತೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಕಲಾವಿದರು ಕೋವಿಡ್‌ ಲಸಿಕೆಯನ್ನು ಎರಡು ಡೋಸ್‌ ಪೂರ್ಣಗೊಳಿಸಿರಬೇಕು. ಇವರು ಅರ್ಜಿ ಜತೆಗೆ ಸರ್ಟಿಫಿಕೇಟ್‌ ಕೂಡ ಲಗತ್ತಿಸಬೇಕು. ಒಂದು ವೇಳೆ ಆನ್‌ಲೈನ್‌ನಲ್ಲಿ ಚಿತ್ರಸಂತೆ ಮಾಡುವುದಾದರೆ ಚಿತ್ರಕಲಾ ಪರಿಷತ್‌ನ ನಾನಾ ಕೊಠಡಿಗಳನ್ನು ಗ್ಯಾಲರಿಗಳನ್ನಾಗಿ ಬಳಸಿಕೊಳ್ಳಲಾಗುವುದು. ಜತೆಗೆ ಒಂದು ಸಾವಿರ ಕಲಾವಿದರಿಂದ ಕಲಾಕೃತಿಗಳನ್ನು ಆಹ್ವಾನಿಸಿ, ಒಂದು ಸಾವಿರಕ್ಕೂ ಹೆಚ್ಚು ಕಲಾಕೃತಿಗಳನ್ನು ಪ್ರದರ್ಶಿಸಲಾಗುವುದು. ಉಳಿದಂತೆ ಕಲಾಸಂತೆಯು ಆನ್‌ಲೈನ್‌ನಲ್ಲಿ ನಡೆಯಲಿದೆ. ಪ್ರತಿ ಕಲಾವಿದರ ಕುರಿತು ಪ್ರತ್ಯೇಕ ವೆಬ್‌ ಪೇಜ್‌ ನಿರ್ಮಿಸಲಾಗುವುದು'' ಎಂದರು. ಡಿ.5ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಚಿತ್ರಸಂತೆಗೆ ನವೆಂಬರ್‌ ತಿಂಗಳಲ್ಲಿಯೇ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಅದರಂತೆ ನಾನಾ ರಾಜ್ಯಗಳ ಕಲಾವಿದರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈಗಾಗಲೇ 700ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಡಿ.5ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸರಕಾರ ಯಾವ ರೀತಿಯ ಅನುಮತಿ ನೀಡುತ್ತದೆಯೋ ಅದರ ಆಧಾರದ ಮೇಲೆ ಮತ್ತೆ ದಿನಾಂಕ ವಿಸ್ತರಿಸುವ ಸಾಧ್ಯತೆಯೂ ಇದೆ ಎಂದು ಚಿತ್ರಕಲಾ ಪರಿಷತ್‌ನ ಪದಾಧಿಕಾರಿಗಳು ತಿಳಿಸಿದರು. ಎಂದಿನಂತೆ 'ಎಲ್ಲರಿಗಾಗಿ ಕಲೆ' ಶೀರ್ಷಿಕೆಯಡಿ ಕಲಾವಿದರು ಮತ್ತು ಕಲಾಸಕ್ತರನ್ನು ತಣಿಸಲು ದೇಶ-ವಿದೇಶಗಳ ಕಲಾಕೃತಿಗಳು ಸಂತೆಗೆ ಬರಲು ಅಣಿಯಾಗಲಿವೆ. ದೂ: 080 22261816, 22263424. ವಿವಿಧ ಕಲಾ ಪ್ರಕಾರದ ಚಿತ್ರಗಳು ಸಾಂಪ್ರದಾಯಿಕ ಮೈಸೂರು ಶೈಲಿಯ ಕಲೆ, ತಂಜಾವೂರು ಶೈಲಿ, ರಾಜಸ್ಥಾನಿ ಶೈಲಿ, ಮಧುಬನಿ ಶೈಲಿ, ತೈಲ ಮತ್ತು ಜಲವರ್ಣಗಳಲ್ಲಿ ರಚಿಸಿರುವ ಚಿತ್ರಗಳು, ಆಕ್ರಿಲಿಕ್‌, ಗಾಜಿನ ಮೇಲೆ ಬಿಡಿಸಿರುವ ಚಿತ್ರಗಳು, ಕೊಲಾಜ್‌, ಲಿಥೋಗ್ರಾಫ್‌, ಡೂಡಲ್‌, ಎಂಬೋಸಿಂಗ್‌, ವಿಡಿಯೊ ಕಲೆ, ಗ್ರಾಫಿಕ್‌ ಕಲೆ, ಶಿಲ್ಪಕಲೆ, ಇನ್‌ಸ್ಟಲೇಶನ್‌(ಪ್ರತಿಧಿಷ್ಠಾಧಿಪನಾ ಕಲೆ), ಪರ್ಫಾಮೆನ್ಸ್‌ ಕಲೆ, ಮಿಶ್ರ ಮಾಧ್ಯಮ, ಫೋಟೋಗ್ರಫಿ ಹೀಗೆ ಹಲವು ಬಗೆಯ ಕಲಾ ಪ್ರಕಾರದ ಚಿತ್ರಗಳು ಒಂದೇ ಸೂರಿನಡಿ ನೋಡುಗರ ಗಮನಸೆಳೆಯಲಿವೆ.