ಕೇಂದ್ರ ಸಂಸ್ಥೆಗಳ ಕಿರುಕುಳದಿಂದ ಮುಖಂಡರನ್ನು ಉಳಿಸಲು ಬಿಜೆಪಿ ಜತೆ ಮತ್ತೆ ಮೈತ್ರಿ ಮಾಡಿಕೊಳ್ಳಿ: ಉದ್ಧವ್ ಠಾಕ್ರೆಗೆ ಶಿವಸೇನಾ ಶಾಸಕನ ಪತ್ರ

ಕೇಂದ್ರ ತನಿಖಾ ಸಂಸ್ಥೆಗಳು ನೀಡುತ್ತಿರುವ ಕಿರುಕುಳದಿಂದ ನಮ್ಮ ಮುಖಂಡರನ್ನು ರಕ್ಷಿಸಲು ಬಿಜೆಪಿ ಜತೆ ಮತ್ತೆ ಮೈತ್ರಿ ಮಾಡಿಕೊಳ್ಳೋಣ ಎಂದು ಶಿವಸೇನಾ ಶಾಸಕ ಪ್ರತಾಪ್ ಸರ್ನಾಯಕ್, ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದಿದ್ದಾರೆ.

ಕೇಂದ್ರ ಸಂಸ್ಥೆಗಳ ಕಿರುಕುಳದಿಂದ ಮುಖಂಡರನ್ನು ಉಳಿಸಲು ಬಿಜೆಪಿ ಜತೆ ಮತ್ತೆ ಮೈತ್ರಿ ಮಾಡಿಕೊಳ್ಳಿ: ಉದ್ಧವ್ ಠಾಕ್ರೆಗೆ ಶಿವಸೇನಾ ಶಾಸಕನ ಪತ್ರ
Linkup
ಮುಂಬಯಿ: ಕೇಂದ್ರ ತನಿಖಾ ಸಂಸ್ಥೆಗಳು ನೀಡುತ್ತಿರುವ ಕಿರುಕುಳದಿಂದ ಪಾರಾಗಲು ಪಕ್ಷವು ಜತೆ ಕೈಜೋಡಿಸಬೇಕು ಎಂದು ಶಾಸಕ ಹೇಳಿದ್ದಾರೆ. ಮುಖ್ಯಮಂತ್ರಿ ಹಾಗೂ ಶಿವಸೇನಾ ಮುಖ್ಯಸ್ಥ ಅವರಿಗೆ ಪತ್ರೆ ಬರೆದಿರುವ , ಮುಂಬಯಿ ಹಾಗೂ ಥಾಣೆ ಸೇರಿದಂತೆ ಅನೇಕ ಪಾಲಿಕೆ ಚುನಾವಣೆಗಳು ಸಮೀಪದಲ್ಲಿ ಇರುವುದರಿಂದ ಕಾಲ ಮಿಂಚುವ ಮುನ್ನವೇ ಹಳೆಯ ಮಿತ್ರಪಕ್ಷಗಳು ಜತೆಗೂಡಬೇಕು ಎಂದು ಹೇಳಿದ್ದಾರೆ. ಥಾಣೆಯ ಓವಲಾ-ಮಾಜಿವಾಡ ಕ್ಷೇತ್ರದ ಶಾಸಕರಾಗಿರುವ ಪ್ರತಾಪ್, ಬಿಜೆಪಿ ಹಾಗೂ ಶಿವಸೇನಾ ಈಗ ಮಿತ್ರಪಕ್ಷಗಳಾಗಿ ಉಳಿಯದೆ ಇದ್ದರೂ, ಅವರ ನಾಯಕರ ನಡುವೆ ಉತ್ತಮ ಬಾಂಧವ್ಯವಿದೆ ಹಾಗೂ ನಾವು ಇದನ್ನು ಬಳಸಿಕೊಳ್ಳಬೇಕು ಎಂದಿದ್ದಾರೆ. 'ಕೇಂದ್ರದ ಹಲವು ಸಂಸ್ಥೆಗಳು ನನ್ನ ಹಾಗೂ ಅನಿಲ್ ಪರಬ್ ಮತ್ತು ರವೀಂದ್ರ ವಾಯ್ಕರ್ ಅವರಂತಹ ಇತರೆ ಶಿವಸೇನಾ ನಾಯಕರ ಬೆನ್ನುಬಿದ್ದಿವೆ. ಅವರು ಹಾಗೂ ಅವರ ಕುಟುಂಬದವರಿಗೆ ಕಿರುಕುಳ ನೀಡಲಾಗುತ್ತಿದೆ' ಎಂದು ಮುಖ್ಯಮಂತ್ರಿ ಕಚೇರಿಗೆ ಬರೆದಿರುವ ಪತ್ರದಲ್ಲಿ ಅವರು ತಿಳಿಸಿದ್ದಾರೆ. 'ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮತ್ತೆ ಕೈಜೋಡಿಸುವುದು ಒಳಿತು. ಇದು ಶಿವಸೇನಾ ನಾಯಕರನ್ನು ಸಮಸ್ಯೆಗಳಿಂದ ರಕ್ಷಿಸಬಲ್ಲದು ಎನ್ನುವುದು ಶಿವಸೈನಿಕರ ಅಭಿಪ್ರಾಯ' ಎಂದು ಹೇಳಿದ್ದಾರೆ. ಜಾರಿ ನಿರ್ದೇಶನಾಲಯವು ಕಳೆದ ವರ್ಷ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಾಪ್ ಸರ್ನಾಯಕ್ ಅವರಿಗೆ ಸೇರಿದ ಅನೇಕ ಸ್ಥಳಗಳ ಮೇಲೆ ದಾಳಿಗಳನ್ನು ನಡೆಸಿತ್ತು. ಅವರ ಮಗ ವಿಹಾಂಗ್ ಸರ್ನಾಯಕ್ ಅವರನ್ನು ಕೂಡ ವಿಚಾರಣೆಗೆ ಒಳಪಡಿಸಲಾಗಿತ್ತು. ಕಾಂಗ್ರೆಸ್, ಎನ್‌ಸಿಪಿಗೆ ಲಾಭ ಮಾಡಿಕೊಡುವ ಮೈತ್ರಿಮಹಾರಾಷ್ಟ್ರ ಸರಕಾರದಲ್ಲಿ ಮಿತ್ರಪಕ್ಷವಾಗಿರುವ ಕಾಂಗ್ರೆಸ್, ಪಾಲಿಕೆ ಚುನಾವಣೆಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಇನ್ನು ಮತ್ತೊಂದು ಪಾಲುದಾರ ಪಕ್ಷ ಎನ್‌ಸಿಪಿ, ಶಿವಸೇನಾದ ಶಾಸಕರಿಗೆ ಆಮಿಷವೊಡ್ಡಿ ಸೆಳೆದುಕೊಳ್ಳಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಮತ್ತು ಎನ್‌ಸಿಪಿಗೆ ಲಾಭ ಮಾಡಿಕೊಡುವುದಕ್ಕಾಗಿಯೇ ಬಿಜೆಪಿ ಜತೆಗಿನ ಮೈತ್ರಿಯನ್ನು ಸೇನಾ ಮುರಿದುಕೊಂಡಿದೆಯೇ ಎಂದು ಶಿವ ಸೇನಾ ಶಾಸಕರಿಗೆ ಅಚ್ಚರಿಯಾಗುತ್ತಿದೆ ಎಂಬುದಾಗಿ ಅವರು ಪತ್ರದಲ್ಲಿ ಬರೆದಿದ್ದಾರೆ. ಅವರೆಲ್ಲ ಜೈಲಿನಲ್ಲಿ ಇರಬೇಕಾಗಲಿದೆಶಿವಸೇನಾದ ಎಲ್ಲ ಭ್ರಷ್ಟ ನಾಯಕರಾದ ಪ್ರತಾಪ್ ಸರ್ನಾಯಕ್, ಅನಿಲ್ ಪರಬ್, ರವೀಂದ್ರ ವಾಯ್ಕರ್ ಅವರೆಲ್ಲರೂ ಜೈಲಿನಲ್ಲಿ ಇರಬೇಕಾಗಲಿದೆ. ಈ ಭಯದಿಂದಾಗಿ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಳ್ಳಬೇಕೆಂಬ ಸಲಹೆ ನೀಡುತ್ತಿದ್ದಾರೆ. ಸರ್ನಾಯಕ್ ಅವರು ಕಳೆದ 100 ದಿನಗಳಿಂದ ಕಾಣೆಯಾಗಿದ್ದಾರೆ ಎಂದು ತಾವು ಪೊಲೀಸ್ ಠಾಣೆಗೆ ದೂರು ನೀಡಿದ್ದಾಗಿ ಬಿಜೆಪಿ ನಾಯಕ ಕಿರಿತ್ ಸೋಮಯ್ಯ ಹೇಳಿದ್ದಾರೆ.