ಕೇಂದ್ರ ಸರಕಾರದ ಸಾಲ 116 ಲಕ್ಷ ಕೋಟಿ ರೂ.ಗೆ ಏರಿಕೆ, ಮೂರೇ ತಿಂಗಳಲ್ಲಿ 7 ಲಕ್ಷ ಕೋಟಿ ರೂ. ಹೆಚ್ಚಳ!

ಕಳೆದ 2020ರ ಡಿಸೆಂಬರ್‌ ವೇಳೆಗೆ 109.26 ಲಕ್ಷ ಕೋಟಿ ರೂ.ಗಳಷ್ಟಿದ್ದ ಕೇಂದ್ರ ಸರಕಾರದ ಋುಣಭಾರ 2021ರ ಮಾರ್ಚ್ ಅಂತ್ಯಕ್ಕೆ 116 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಕೇಂದ್ರ ಸರಕಾರದ ಸಾಲ 116 ಲಕ್ಷ ಕೋಟಿ ರೂ.ಗೆ ಏರಿಕೆ, ಮೂರೇ ತಿಂಗಳಲ್ಲಿ 7 ಲಕ್ಷ ಕೋಟಿ ರೂ. ಹೆಚ್ಚಳ!
Linkup
ಹೊಸದಿಲ್ಲಿ: ಕೇಂದ್ರ ಸರಕಾರದ ಒಟ್ಟು ಋುಣ ಭಾರ 2021ರ ಮಾರ್ಚ್ ಅಂತ್ಯಕ್ಕೆ 116 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.6.36ರಷ್ಟು ವೃದ್ಧಿಸಿದೆ ಎಂದು ಶುಕ್ರವಾರ ಬಿಡುಗಡೆಯಾದ ಅಂಕಿ ಅಂಶಗಳು ತಿಳಿಸಿವೆ. ಕಳೆದ 2020ರ ಡಿಸೆಂಬರ್‌ ವೇಳೆಗೆ ಸರಕಾರದ ಋುಣಭಾರ 109.26 ಲಕ್ಷ ಕೋಟಿ ರೂ.ಗಳಷ್ಟಿತ್ತು ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಒಟ್ಟು ಋುಣಭಾರದಲ್ಲಿ ಸಾರ್ವಜನಿಕ ಶೇ.88.10ರಷ್ಟಿದೆ. ಶೇ.29.33ರಷ್ಟು ಪಾಲು ಮೆಚ್ಯುರಿಟಿಯಾಗುತ್ತಿರುವ ಬಾಂಡ್‌ಗಳಿಗೆ ಸಂಬಂಧಿಸಿದ್ದು, ಇವು 5 ವರ್ಷದೊಳಗೆ ಮೆಚ್ಯೂರಿಟಿಗೆ ಬರಲಿವೆ. 2020-21ರ ಜನವರಿ-ಮಾರ್ಚ್ ಅವಧಿಯಲ್ಲಿ 3,20,349 ಕೋಟಿ ರೂ. ಮೌಲ್ಯದ ಸಾಲಪತ್ರಗಳನ್ನು ಬಿಡುಗಡೆಗೊಳಿಸಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 76,000 ಕೋಟಿ ರೂ. ಮೌಲ್ಯದ ಸಾಲಪತ್ರಗಳನ್ನು ನೀಡಲಾಗಿತ್ತು. ಇದೇ ಅವಧಿಯಲ್ಲಿ ಸರಕಾರ ಕೇವಲ 29,145 ಕೋಟಿ ರೂ. ಹಣವನ್ನು ಮರು ಪಾವತಿಸಿದೆ. ಈ ಸಾಲಪತ್ರಗಳಲ್ಲಿ (ಸೆಕ್ಯೂರಿಟೀಸ್‌) ವಾಣಿಜ್ಯ ಬ್ಯಾಂಕುಗಳ ಬಳಿ ಶೇ. 37.77ರಷ್ಟು ಸೆಕ್ಯೂರಿಟಿಗಳಿದ್ದರೆ, ಇನ್ಸೂರೆನ್ಸ್‌ ಕಂಪನಿಗಳು ಮತ್ತು ಪ್ರಾವಿಡೆಂಟ್‌ ಫಂಡ್‌ಗಳ ಬಳಿ ಕ್ರಮವಾಗಿ ಶೇ. 25.3 ಹಾಗೂ ಶೇ. 4.44ರಷ್ಟಿವೆ. ಮ್ಯೂಚುವಲ್‌ ಫಂಡ್‌ಗಳ ಬಳಿ ಶೇ. 2.94 ಹಾಗೂ ಆರ್‌ಬಿಐ ಬಳಿ ಶೇ. 16.2ರಷ್ಟು ಸಾಲಪತ್ರಗಳಿವೆ.