ಕೇಂದ್ರ ಸಚಿವ ಹರ್ದೀಪ್ ಪುರಿ ಪತ್ನಿ ವಿರುದ್ಧದ ಟ್ವೀಟ್ ಅಳಿಸಿ ಹಾಕಿ: ಸಾಮಾಜಿಕ ಕಾರ್ಯಕರ್ತನಿಗೆ ಕೋರ್ಟ್ ಸೂಚನೆ

ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಪತ್ನಿ ಲಕ್ಷ್ಮಿ ಪುರಿ ವಿರುದ್ಧ ವಿದೇಶದಲ್ಲಿ ಆಸ್ತಿ ಖರೀದಿ ಆರೋಪಗಳನ್ನು ಮಾಡಿದ್ದ ಸಾಮಾಜಿಕ ಕಾರ್ಯಕರ್ತ ಸಾಕೇತ್ ಗೋಖಲೆ ಅವರಿಗೆ ಟ್ವೀಟ್‌ಗಳನ್ನು ಅಳಿಸುವಂತೆ ಕೋರ್ಟ್ ಆದೇಶಿಸಿದೆ.

ಕೇಂದ್ರ ಸಚಿವ ಹರ್ದೀಪ್ ಪುರಿ ಪತ್ನಿ ವಿರುದ್ಧದ ಟ್ವೀಟ್ ಅಳಿಸಿ ಹಾಕಿ: ಸಾಮಾಜಿಕ ಕಾರ್ಯಕರ್ತನಿಗೆ ಕೋರ್ಟ್ ಸೂಚನೆ
Linkup
ಹೊಸದಿಲ್ಲಿ: ಲಕ್ಷ್ಮಿ ಮುರ್ಡೇಶ್ವರ್ ಪುರಿ ಅವರ ವಿರುದ್ಧ ಮಾಡಿರುವ ಅವಮಾನಕರ ಅನ್ನು ಕೂಡಲೇ ಅಳಿಸಿ ಹಾಕುವಂತೆ ಸಾಮಾಜಿಕ ಕಾರ್ಯಕರ್ತ ಸಾಕೇತ್ ಗೋಖಲೆ ಅವರಿಗೆ ಮಂಗಳವಾರ ಸೂಚನೆ ನೀಡಿದೆ. ಲಕ್ಷ್ಮಿ ಮತ್ತು ಅವರ ಪತಿ, ಕೇಂದ್ರ ಸಚಿವ ಅವರ ಕುರಿತು ಯಾವುದೇ ಅವಹೇಳನಾಕಾರಿ ಟ್ವೀಟ್ ಮಾಡದಂತೆ ಅದು ನಿರ್ಬಂಧಿಸಿದೆ. ಆದೇಶ ನೀಡಿದ 24 ಗಂಟೆಗಳ ಒಳಗೆ ಅದನ್ನು ಪಾಲಿಸುವಲ್ಲಿ ಸಾಕೇತ್ ಗೋಖಲೆ ವಿಫಲವಾದರೆ, ಆ ಟ್ವೀಟ್‌ಗಳನ್ನು ಟ್ವಿಟ್ಟರ್ ತೆರವುಗೊಳಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಸಿ. ಹರಿಶಂಕರ್ ಅವರು ಮಧ್ಯಂತರ ಆದೇಶದಲ್ಲಿ ಹೇಳಿದ್ದಾರೆ. ಪ್ರಕರಣದ ವಿಚಾರಣೆಯಲ್ಲಿ ಟ್ವಿಟ್ಟರ್ ಅನ್ನು ಕಕ್ಷಿದಾರವನ್ನಾಗಿಸುವಂತೆ ವಿಶ್ವಸಂಸ್ಥೆಯ ಮಾಜಿ ಸಹಾಯಕ ಪ್ರಧಾನ ಕಾರ್ಯದರ್ಶಿ ಆಗಿರುವ ಅವರಿಗೆ ಕೋರ್ಟ್ ಸೂಚಿಸಿದೆ. ಲಕ್ಷ್ಮಿ ಅವರು ಸ್ವಿಟ್ಜರ್ಲೆಂಡ್‌ನಲ್ಲಿ ಖರೀದಿಸಿರುವ ಕೆಲವು ಆಸ್ತಿಗಳ ಕುರಿತಂತೆ ಹವ್ಯಾಸಿ ಪತ್ರಕರ್ತರೂ ಆಗಿರುವ ಜೂನ್ 13 ಮತ್ತು 26ರಂದು ಸಾಕೇತ್ ಗೋಖಲೆ ಟ್ವೀಟ್‌ಗಳನ್ನು ಮಾಡಿದ್ದರು. ಇದರಲ್ಲಿ ಹರ್ದೀಪ್ ಸಿಂಗ್ ಪುರಿ ಅವರನ್ನೂ ಉಲ್ಲೇಖಿಸಿದ್ದರು. ಇದರ ವಿರುದ್ಧ ದಾಖಲಿಸಿದ್ದ ಲಕ್ಷ್ಮಿ ಪುರಿ, ಗೋಖಲೆ ಅವರು 5 ಕೋಟಿ ರೂ ಹಾನಿ ಪರಿಹಾರ ನೀಡಬೇಕು ಮತ್ತು ತಮ್ಮ ಟ್ವೀಟ್‌ಗಳನ್ನು ಅಳಿಸಿ ಹಾಕುವಂತೆ ಅವರಿಗೆ ನಿರ್ದೇಶನ ನೀಡಬೇಕು ಎಂದು ಕೋರಿದ್ದರು. ಕರಂಜವಾಲಾ ಮತ್ತು ಕಂಪೆನಿ ಮೂಲಕ ಪ್ರಕರಣ ದಾಖಲಿಸಿದ್ದ ಅವರು, ಟ್ವೀಟ್‌ಗಳಲ್ಲಿ ಗೋಖಲೆ ಅವರು ತಮ್ಮ ಹಾಗೂ ತಮ್ಮ ಕುಟುಂಬದವರ ವಿರುದ್ಧ ಸುಳ್ಳು ಮತ್ತು ವಾಸ್ತವಕ್ಕೆ ದೂರವಾದ, ಮಾನಹಾನಿಕರ ಅಂಶಗಳನ್ನು ದಾಖಲಿಸಿದ್ದಾರೆ ಎಂದು ಆರೋಪಿಸಿದ್ದರು.