ಓಮಿಕ್ರಾನ್‌ ಭೀತಿ: ಪಾಳಿಯಲ್ಲಿ ನಡೆಯಲಿದೆ ಸಂಸತ್‌ ಬಜೆಟ್‌ ಅಧಿವೇಶನ

ಒಂದು ವೇಳೆ ಬಜೆಟ್‌ ಅಧಿವೇಶನ ಪಾಳಿಯಲ್ಲಿ ನಡೆದಿದ್ದೇ ಆದಲ್ಲಿ, 2021ರ ಬಳಿಕ ಪಾಳಿಯಲ್ಲಿ ಬಜೆಟ್‌ ಅಧಿವೇಶನ ನಡೆಯಯುತ್ತಿರುವ ಎರಡನೇ ನಿದರ್ಶನ ಇದಾಗಿರಲಿದೆ. 2021ರಲ್ಲೂ ಕೋವಿಡ್‌ ಭೀತಿಯಿಂದಾಗಿ ಪಾಳಿಯಲ್ಲಿ ಅಧಿವೇಶನ ನಡೆದಿತ್ತು.

ಓಮಿಕ್ರಾನ್‌ ಭೀತಿ: ಪಾಳಿಯಲ್ಲಿ ನಡೆಯಲಿದೆ ಸಂಸತ್‌ ಬಜೆಟ್‌ ಅಧಿವೇಶನ
Linkup
ಹೊಸದಿಲ್ಲಿ: ಕೋವಿಡ್ ಮೂರನೇ ಅಲೆ ಭೀತಿಯಿಂದಾಗಿ ಮುಂಬರುವ ಸಂಸತ್‌ನ ಬಜೆಟ್ ಅಧಿವೇಶನ ಪಾಳಿಯಲ್ಲಿ ನಡೆಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಜನವರಿ 31 ರಿಂದ ಆರಂಭವಾಗಲಿದ್ದು, ಫೆ. 1 ರಂದು ಬೆಳಿಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ಭಾಷಣ ಮಾಡಲಿದ್ದಾರೆ. ಒಂದು ವೇಳೆ ಬಜೆಟ್‌ ಅಧಿವೇಶನ ಪಾಳಿಯಲ್ಲಿ ನಡೆದಿದ್ದೇ ಆದಲ್ಲಿ, 2021ರ ಬಳಿಕ ಪಾಳಿಯಲ್ಲಿ ಬಜೆಟ್‌ ಅಧಿವೇಶನ ನಡೆಯಯುತ್ತಿರುವ ಎರಡನೇ ನಿದರ್ಶನ ಇದಾಗಿರಲಿದೆ. 2021ರಲ್ಲೂ ಕೋವಿಡ್‌ ಭೀತಿಯಿಂದಾಗಿ ಪಾಳಿಯಲ್ಲಿ ಅಧಿವೇಶನ ನಡೆದಿತ್ತು. ಈಗ ಸಿಕ್ಕಿರುವ ಮಾಹಿತಿ ಪ್ರಕಾರ ರಾಜ್ಯಸಭೆ ಬೆಳಗಿನ ಪಾಳಿಯಲ್ಲೂ, ಲೋಕಸಭೆ ಮಧ್ಯಾಹ್ನದ ಪಾಳಿಯಲ್ಲೂ ಕಾರ್ಯ ನಿರ್ವಹಿಸಲಿದೆ. ಓಮಿಕ್ರಾನ್‌ ರೂಪಾಂತರಿ ತಳಿಯಿಂದ ಉಂಟಾಗಿರುವ ಕೋವಿಡ್‌ನ ಮೂರನೇ ಅಲೆ ಹಾಗೂ ಹಲವು ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರಿಗೆ ಕೋವಿಡ್‌ ಸೋಂಕು ತಟ್ಟಿದೆ. ಹೀಗಾಗಿ ಪಾಳಿಯಲ್ಲಿ ಕಲಾಪಗಳು ನಡೆಯಲಿವೆ. ಸಂಸತ್‌ ಭವನದಲ್ಲಿ ದೈಹಿಕ ಅಂತರ ಕಾಪಾಡಲು ಹಾಗೂ ಜನ ಸಂದಣಿ ನಿಯಂತ್ರಣ ಮಾಡಲು ಪಾಳಿಯಲ್ಲಿ ಕಲಾಪಗಳನ್ನು ನಡೆಸಲು ತೀರ್ಮಾನ ಮಾಡಲಾಗಿದೆ ಎಂದು ಈ ಬಗ್ಗೆ ಮಾಹಿತಿ ಇರುವವರಿಂದ ಗೊತ್ತಾಗಿದೆ. ಹಿರಿಯ ಅಧಿಕಾರಿಗಳ ಪ್ರಕಾರ ಪಾಳಿಯಲ್ಲಿ ಅಧಿವೇಶನ ನಡೆಸುವ ಬಗ್ಗೆ, ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಹಾಗೂ ರಾಜ್ಯಸಭೆ ಸಭಾಧ್ಯಕ್ಷ ವೆಂಕಯ್ಯ ನಾಯ್ಡು ಈಗಾಗಲೇ ಚರ್ಚೆ ನಡೆಸಿದ್ದಾರೆ. 2020 ಹಾಗೂ 2021ರಲ್ಲಿ ಕಲಾಪಗಳನ್ನು ಪಾಳಿಯಲ್ಲಿ ನಡೆಸಿದ ಹಾಗೆ ಈ ಬಾರಿಯ ಕಲಾಪಗಳನ್ನು ಪಾಳಿಯನ್ನು ನಡೆಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. 2021ರ ಬಜೆಟ್‌ ಅಧಿವೇಶನ ನಡೆಸಿದ ಹಾಗೇ, ಈ ಬಾರಿಯ ಬಜೆಟ್‌ ಅಧೀವೇಶನವನ್ನೂ ಪಾಳಿಯಲ್ಲಿ ನಡೆಸಲಾಗುತ್ತದೆ. ರಾಜ್ಯಸಭೆ ಅಧಿವೇಶನ ಬೆಳಗಿನ ಪಾಳಿಯಲ್ಲೂ, ಲೋಕಸಭೆ ಅಧಿವೇಶನ ಮಧ್ಯಾಹ್ನದ ಪಾಳಿಯಲ್ಲೂ ನಡೆಸಲಾಗುತ್ತದೆ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಅಧಿವೇಶನ ನಿರ್ಧರಿತ ದಿನದಷ್ಟು ನಡೆಯುವುದು ಕೂಡ ಅನುಮಾನವಾಗಿದೆ. ಕೋವಿಡ್‌ ಆತಂಕ ಹಾಗೂ ಉತ್ತರ ಪ್ರದೇಶ, ಪಂಜಾಬ್‌, ಉತ್ತರಾಖಂಡ, ಗೋವಾ, ಮಣಿಪುರ ರಾಜ್ಯಗಳ ಚುನಾವಣೆ ಇರುವುದರಿಂದ ಬೇಗನೇ ಅಧಿವೇಶನ ಮುಕ್ತಾಯವಾಗುವ ಸಾಧ್ಯತೆ ಇದೆ. ಲೋಕಸಭೆ ಕಲಾಪಗಳು ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆ ವೆರಗೆ ನಡೆಯಲಿದೆ. ಇನ್ನು ಬೆಳಗ್ಗಿನ ಪಾಳಿಯಲ್ಲಿ ನಡೆಯುವ ರಾಜ್ಯಸಭೆ ಅಧಿವೇಶನ ಎಷ್ಟು ಹೊತ್ತಿಗೆ ಆರಂಭವಾಗಿ ಎಷ್ಟು ಹೊತ್ತಿಗೆ ಅಂತ್ಯವಾಗಲಿದೆ ಎನ್ನುವುದನ್ನು ಸಭಾಪತಿ ವೆಂಕಯ್ಯ ನಾಯ್ಡು ಅವರು ತೀರ್ಮಾನಿಸಲಿದ್ದಾರೆ. ಒಟ್ಟಾರೆ ಉಭಯ ಸದನದ ಕಲಾಪಗಳು ತಲಾ ಐದು ಗಂಟೆ ನಡೆಯಲಿದೆ. ಇನ್ನು ಪಾಳಿಯಲ್ಲಿ ಕಲಾಪಗಳು ನಡೆಯುವುದರಿಂದ ಉಭಯ ಸದನಗಳಲ್ಲೂ ಎಲ್ಲಾ ವ್ಯವಸ್ಥೆಗಳು ಮಾಡಿಕೊಳ್ಳಲಾಗಿದೆ. ದೈಹಿಕ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಒಂದೇ ಸದನದ ಸದಸ್ಯರನ್ನು ಎರಡು ಸದನಗಳಲ್ಲಿ ವಿಂಗಡಿಸಿ ಕೂರಿಸಲಾಗುತ್ತದೆ.