ಎಲ್ಲ ಪ್ರಮುಖ ನಗರಗಳೂ ಸ್ಲಂಗಳಾಗಿ ಬದಲಾಗಿವೆ: ಸುಪ್ರೀಂಕೋರ್ಟ್ ಅಸಮಾಧಾನ

ಒತ್ತುವರಿ ಕಾರಣಗಳಿಂದಾಗಿ ದೇಶದ ಎಲ್ಲ ಪ್ರಮುಖ ನಗರಗಳೂ ಕೊಳೆಗೇರಿಗಳಾಗಿ ಬದಲಾಗಿವೆ ಎಂದು ಸುಪ್ರೀಂಕೋರ್ಟ್ ಗುರುವಾರ ಅಸಮಾಧಾನ ವ್ಯಕ್ತಪಡಿಸಿದೆ. ನಾವು 75ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದೇವೆ. ಆದರೆ 75 ವರ್ಷಗಳಿಂದ ಇದು ನಡೆಯುತ್ತಲೇ ಇದೆ ಎಂದು ಅದು ಹೇಳಿದೆ.

ಎಲ್ಲ ಪ್ರಮುಖ ನಗರಗಳೂ ಸ್ಲಂಗಳಾಗಿ ಬದಲಾಗಿವೆ: ಸುಪ್ರೀಂಕೋರ್ಟ್ ಅಸಮಾಧಾನ
Linkup
ಹೊಸದಿಲ್ಲಿ: ತನ್ನ ಭೂಮಿಯ ಅತಿಕ್ರಮಣದ ಚಟುವಟಿಕೆಗಳಿಗೆ ಹೊಣೆಗಾರಿಕೆ ತೆಗೆದುಕೊಳ್ಳಬೇಕು ಮತ್ತು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗುರುವಾರ ಸೂಚನೆ ನೀಡಿದೆ. ಗುಜರಾತ್‌ನಲ್ಲಿ 5000 ಗುಡಿಸಲುಗಳನ್ನು ಉಳಿಸಲು ಅನುಮತಿ ನೀಡಲು ನಿರಾಕರಿಸಿದೆ. 'ಎಲ್ಲ ಪ್ರಮುಖ ನಗರಗಳೂ ಕೊಳೆಗೇರಿಗಳಾಗಿ ಬದಲಾಗಿವೆ. ಇದು ಕಳೆದ 75 ವರ್ಷಗಳಿಂದ ನಡೆಯುತ್ತಿರುವ ಖೇದಕರ ಸಂಗತಿ. ನಾವು ಮುಂದಿನ ವರ್ಷ 75ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದೇವೆ' ಎಂದು ನಿವಾಸಿಗಳು, ತೆರವು ಕಾರ್ಯಾಚರಣೆ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ಮೂವರು ನ್ಯಾಯಮೂರ್ತಿಗಳ ನ್ಯಾಯಪೀಠ ತಿರಸ್ಕರಿಸಿದೆ. 'ಯಾವುದೇ ನಗರವನ್ನು ನೋಡಿ, ಚಂಡೀಗಡ ಒಂದು ಇದರಿಂದ ಹೊರತಾಗಿರಬಹುದು. ಆದರೆ ಚಂಡೀಗಡದಲ್ಲಿಯೂ ಸಮಸ್ಯೆಗಳಿವೆ. ಇದು ಎಲ್ಲಾ ಕಡೆಯೂ ನಡೆಯುತ್ತಿದೆ. ನಾವು ವಾಸ್ತವಿಕತೆಯತ್ತ ನೋಡೋಣ ಮತ್ತು ಸಮಸ್ಯೆಯನ್ನು ಹೇಗೆ ಬಗೆಹರಿಸಬಹುದು ಎಂದು ಆಲೋಚಿಸೋಣ' ಎಂದು ನ್ಯಾಯಮೂರ್ತಿಗಳಾದ ಎಎಂ ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ ಮತ್ತು ಸಿಟಿ ರವಿಕುಮಾರ್ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿತು. ಅನಧಿಕೃತ ಆಕ್ರಮಿತರ ವಿರುದ್ಧ ತಕ್ಷಣದಿಂದಲೇ ಕ್ರಿಮಿನಲ್ ಕ್ರಮ ಆರಂಭಿಸಿ ಎಂದು ರೈಲ್ವೇಸ್‌ಗೆ ನಿರ್ದೇಶನ ನೀಡಿದ ಕೋರ್ಟ್, ತನ್ನ ಹೊಣೆಗಾರಿಕೆಯಿಂದ ರೈಲ್ವೆ ಇಲಾಖೆ ನುಣುಚಿಕೊಳ್ಳಲು ಸಾಧ್ಯವಿಲ್ಲ. ಇದು ರಾಜ್ಯ ಸರ್ಕಾರದ ಜವಾಬ್ದಾರಿ ಮಾತ್ರವಲ್ಲ. ಒತ್ತುವರಿಗಳನ್ನು ತೆರವುಗೊಳಿಸಲು ನಿಗಮಗಳು ಜವಾಬ್ದಾರಿ ವಹಿಸಿಕೊಳ್ಳುವ ಸಮಯ ಬಂದಿದೆ ಎಂದ ಕೋರ್ಟ್, ರೈಲ್ವೇಸ್ ತೆಗೆದುಕೊಳ್ಳುವ ಕ್ರಮದ ಪರಾಮರ್ಶೆಯನ್ನು ಬಯಸಿದೆ. ಒತ್ತುವರಿಗಳು ನಡೆಯಲು ಅವಕಾಶ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೂಡ ರೈಲ್ವೆಗೆ ಸೂಚನೆ ನೀಡಲಾಗಿದೆ. ಈ ಆದೇಶವು ಗುಜರಾತ್‌ನ ಸೂರತ್‌ನಲ್ಲಿ ರೈಲ್ವೆಗೆ ಸೇರಿದ ಭೂಮಿಯಲ್ಲಿ ನಿರ್ಮಿಸಲಾದ ಅಪಾರ ಪ್ರಮಾಣದ ಗುಡಿಸಲುಗಳನ್ನು ನಾಶಪಡಿಸಲು ಅನುವು ಮಾಡಿಕೊಟ್ಟಿದೆ. ಈ ತೆರವು ಕಾರ್ಯಾಚರಣೆಯಿಂದ ಸುಮಾರು 10 ಸಾವಿರ ಜನರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ತೆರವುಗೊಳಿಸುವ ಪ್ರತಿ ಗುಡಿಸಲಿಗೆ ತಿಂಗಳಿಗೆ 2 ಸಾವಿರ ರೂದಂತೆ ಆರು ತಿಂಗಳು ಜಂಟಿಯಾಗಿ ಪರಿಹಾರ ನೀಡುವಂತೆ ಸರ್ಕಾರ ಮತ್ತು ರೈಲ್ವೆ ಕೋರ್ಟ್ ಸೂಚನೆ ನೀಡಿದೆ. ಸ್ಲಂ ನಿವಾಸಿಗಳು ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ (PMAY) ಅರ್ಹರಾಗಿದ್ದಾರೆ. ಅವುಗಳಿಗೆ ಅರ್ಜಿ ಸಲ್ಲಿಸಿದರೆ ಮತ್ತು ಅರ್ಹತೆ ತಲುಪಿದರೆ ಅದಕ್ಕೆ ವ್ಯವಸ್ಥೆ ಕಲ್ಪಿಸಬೇಕು ಎಂದು ಕೋರ್ಟ್ ಹೇಳಿದೆ. ಇದಕ್ಕೂ ಮುನ್ನ ರೈಲ್ವೆ ಹಳಿಗಳ ಉದ್ದಕ್ಕೂ ನಿರ್ಮಿಸಲಾಗಿರುವ ಕೊಳೆಗೇರಿ ನಿವಾಸಿಗಳ ತೆರವುಗೊಳಿಸಲು ಸುಪ್ರೀಂಕೋರ್ಟ್ ತಡೆ ನೀಡಿತ್ತು. ಕೇಂದ್ರ ಸರ್ಕಾರ, ರಾಜ್ಯ ಹಾಗೂ ಪಶ್ಚಿಮ ರೈಲ್ವೆಗೆ ನೋಟಿಸ್ ಜಾರಿ ಮಾಡಿತ್ತು.