ಎಮ್ಮೆ ಹಾಲು ಕೊಡುತ್ತಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ ಭೂಪ!

ತನ್ನ ಎಮ್ಮೆ ಹಾಲು ಕೊಡುತ್ತಿಲ್ಲ ಎಂದು ರೈತನೊಬ್ಬ ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ನಡೆದಿದೆ. ತನ್ನ ಎಮ್ಮೆಗೆ ಯಾರೋ ಮಾಟ ಮಂತ್ರ ಮಾಡಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದಾನೆ.

ಎಮ್ಮೆ ಹಾಲು ಕೊಡುತ್ತಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ ಭೂಪ!
Linkup
ಭೋಪಾಲ್: ಹಸು ಕಳ್ಳತನ ಆಗಿದೆ ಎಂದು ಪೊಲೀಸರಿಗೆ ದೂರು ನೀಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ ತನ್ನ ಎಮ್ಮೆ ಕೊಡುತ್ತಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ್ದಾನೆ. ಜತೆಗೆ ಸಾಕ್ಷಿಯಾಗಿ ತನ್ನ ಎಮ್ಮೆಯನ್ನೂ ಠಾಣೆಗೆ ಎಳೆದೊಯ್ದಿದ್ದಾನೆ. ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ತನ್ನ ಹಾಲು ಕೊಡಲು ನಿರಾಕರಿಸುತ್ತಿದೆ. ಬಹುಶಃ ಯಾರೋ ಅದಕ್ಕೆ ಮಾಡಿರಬೇಕು ಎಂದು ಆತ ದೂರಿನಲ್ಲಿ ತಿಳಿಸಿದ್ದಾನೆ ಎಂದು ಅಧಿಕಾರಿಗಳು ಭಾನುವಾರ ಹೇಳಿದ್ದಾರೆ. ನಯಾಗಾಂವ್ ಗ್ರಾಮದ ಪೊಲೀಸ್ ಠಾಣೆಯ ಅಧಿಕಾರಿಗಳಿಂದ ರೈತ ಸಹಾಯ ಯಾಚಿಸುತ್ತಿರುವ ವಿಡಿಯೋ ಶನಿವಾರದಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 'ಬಾಬುಲಾಲ್ ಜಾತವ್ (45) ಎಂಬ ಹೆಸರಿನ ಗ್ರಾಮಸ್ಥ ನಯಾಗಾಂವ್ ಪೊಲೀಸ್ ಠಾಣೆಗೆ ಶನಿವಾರ ದೂರು ಸಲ್ಲಿಸಿದ್ದಾನೆ. ಕಳೆದ ಕೆಲವು ದಿನಗಳಿಂದ ತನ್ನ ಎಮ್ಮೆ ಹಾಲು ನೀಡಲು ನಿರಾಕರಿಸುತ್ತಿದೆ. ಎಷ್ಟೇ ಪ್ರಯತ್ನಿಸಿದರೂ ಅದು ಹಾಲು ಕೊಡುತ್ತಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾನೆ' ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಅರವಿಂದ್ ಶಾ ತಿಳಿಸಿದ್ದಾರೆ. ಈ ಎಮ್ಮೆಯ ಮೇಲೆ ಯಾರೋ ಮಾಟ ಮಂತ್ರ ಪ್ರಯೋಗ ಮಾಡಿರಬೇಕು. ಅದಕ್ಕೇ ಅದು ಹಾಲು ಕೊಡುತ್ತಿಲ್ಲ ಎಂದು ಕೆಲವು ಗ್ರಾಮಸ್ಥರು ತನಗೆ ಹೇಳಿದ್ದಾಗಿ ಜಾತವ್ ತಿಳಿಸಿದ್ದಾನೆ. ಮೊದಲು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದ ರೈತ, ಅದಾಗಿ ಸುಮಾರು ನಾಲ್ಕು ಗಂಟೆಯ ಬಳಿಕ ಮತ್ತೆ ಪೊಲೀಸ್ ಠಾಣೆಗೆ ಹೋಗಿದ್ದಾನೆ. ಈ ಬಾರಿ ತನ್ನ ಎಮ್ಮೆಯನ್ನೂ ಎಳೆದುಕೊಂಡು ಹೋಗಿದ್ದಾನೆ. ತನಗೆ ಸಹಾಯ ಮಾಡುವಂತೆ ಪೊಲೀಸರಿಗೆ ಅಂಗಲಾಚಿದ್ದಾನೆ. 'ಆ ಗ್ರಾಮಸ್ಥನಿಗೆ ಕೆಲವು ಪಶು ವೈದ್ಯಕೀಯ ಸಲಹೆಗಳನ್ನು ನಿಡುವಂತೆ ಠಾಣೆಯ ಉಸ್ತುವಾರಿ ಅಧಿಕಾರಿಗೆ ಸೂಚನೆ ನೀಡಿದ್ದೆ. ಭಾನುವಾರ ಬೆಳಿಗ್ಗೆ ಮತ್ತೆ ಎಮ್ಮೆಯೊಂದಿಗೆ ಪೊಲೀಸ್ ಠಾಣೆಗೆ ಬಂದಿದ್ದ ಆತ, ಇಂದು ತನ್ನ ಎಮ್ಮೆ ಹಾಲು ಕೊಟ್ಟಿದೆ ಎಂದು ಖುಷಿ ಹಂಚಿಕೊಂಡಿದ್ದಾನೆ' ಎಂದು ಅರವಿಂದ್ ಶಾ ತಿಳಿಸಿದ್ದಾರೆ.