ಬೆಂಗಳೂರಿನಲ್ಲಿ ಐವರು ಆತ್ಮಹತ್ಯೆ: ಡೆತ್ ನೋಟ್‍ನಲ್ಲಿ ಹೇಳಿರುವುದೆಲ್ಲಾ ಸುಳ್ಳು ಎಂದ ಶಂಕರ್‌

ಬೆಂಗಳೂರಿನ ಬ್ಯಾಡರಹಳ್ಳಿಯ ತಿಗಳರಪಾಳ್ಯದ ಐವರ ಸಾವು ಪ್ರಕರಣ ದಿನದಿಂದ ದಿನಕ್ಕೆ ರೋಚಕತೆ ಪಡೆಯುತ್ತಿದೆ. ಮೂರು ಡೆತ್‌ನೋಟ್‌ಗಳು ಸಿಕ್ಕ ಬೆನ್ನಲ್ಲೇ ತನಿಖೆ ಇನ್ನಷ್ಟು ತೀವ್ರಗೊಂಡಿದೆ. ಡೆತ್‌ನೋಟ್‌ನಲ್ಲಿರುವ ಮಕ್ಕಳ ಆರೋಪದ ಬಗ್ಗೆ ಶಂಕರ್‌ ಪ್ರತಿಕ್ರಿಯೆ ಏನು? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಬೆಂಗಳೂರಿನಲ್ಲಿ ಐವರು ಆತ್ಮಹತ್ಯೆ: ಡೆತ್ ನೋಟ್‍ನಲ್ಲಿ ಹೇಳಿರುವುದೆಲ್ಲಾ ಸುಳ್ಳು ಎಂದ ಶಂಕರ್‌
Linkup
ಬೆಂಗಳೂರು: ನಗರದಲ್ಲಿ ನಡೆದಿದ್ದ ಒಂದೇ ಮನೆಯಲ್ಲಿ ಐವರ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಟ್ವಿಸ್ಟ್‌ ಪಡೆದುಕೊಳ್ಳುತ್ತಿದೆ. ಸಾವನಪ್ಪಿರುವ ಪೈಕಿ ಮೂವರು ಮಕ್ಕಳು ತಂದೆ ವಿರುದ್ಧವೇ ಡೆತ್‌ ನೋಟ್‌ ಬರೆದಿಟ್ಟು ಹೋಗಿದ್ದಾರೆ. ಹೀಗಾಗಿ ಇದೀಗ ಈ ಪ್ರಕರಣ ತಂದೆ ವಿರುದ್ಧ ತಿರುಗಿ ಬೀಳುವ ಸಾಧ್ಯತೆ ಇದೆ. ಇನ್ನು ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಂಕರ್‌, ನನ್ನ ಮಗ ಡೆತ್ ನೋಟ್‍ನಲ್ಲಿ ಹೇಳೊರೋದೆಲ್ಲಾ ಸುಳ್ಳು. ನಾನು ಪ್ರಾಮಾಣಿಕವಾಗಿ ಕಷ್ಟಪಟ್ಟು ದುಡಿದಿದ್ದೇನೆ. 36 ವರ್ಷದ ಸಾಹಿತ್ಯ, 28 ವರ್ಷದ ಪತ್ರಿಕೋದ್ಯಮದಲ್ಲಿ ದುಡಿದಿದ್ದೆ. ಮೂವತ್ತು ವರ್ಷಗಳ ಹಿಂದೆಯೇ ನಾನು ಎರಡು ಬಾರ್‌ಗಳ ಓನರ್ ಆಗಿದ್ದವನು. ಇನ್ನು ತುಂಬಾ ಸತ್ಯಗಳಿವೆ, ವಿಚಾರಣೆ ಮುಗಿಸಿಕೊಂಡು ಬಂದು ಎಲ್ಲವನ್ನೂ ಬಿಚ್ಚಿಡುತ್ತೇನೆ ಎಂದು ಶಂಕರ್‌ ಹೇಳಿದ್ದಾರೆ. ಏನಿದು ಪ್ರಕರಣ! ಕಳೆದ ವಾರ ಬ್ಯಾಡರಹಳ್ಳಿಯ ತಿಗಳರಪಾಳ್ಯದಲ್ಲಿ ಐವರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪತ್ರಕರ್ತ ಶಂಕರ್‌ ಅವರ ಪತ್ನಿ ಭಾರತಿ (50), ಪುತ್ರಿಯರಾದ ಸಿಂಚನಾ (34), ಸಿಂಧುರಾಣಿ (31), ಪುತ್ರ ಮಧುಸಾಗರ್‌ (27), ಸಿಂಚನಾ ಪುತ್ರ 9 ತಿಂಗಳ ಮಗು ಕೂಡ ಸಾವನಪ್ಪಿತ್ತು. ಈ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಶ್ರೀಮಂತ ಕುಟುಂಬದದವರಾದ ಇವರ ಆತ್ಮಹತ್ಯೆಗೆ ಕಾರಣವೇನು ಎನ್ನುವ ಸಂಗತಿ ಇದೀಗ ಎಲ್ಲರನ್ನೂ ಕಾಡತೊಡಗಿದೆ. ಇನ್ನು ಕೇಸು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು, ಮೂರು ಡೆತ್‌ನೋಟ್‌ಗಳನ್ನು ಘಟನಾ ಸ್ಥಳದಿಂದ ವಶಕ್ಕೆ ಪಡೆದಿದ್ದಾರೆ. ಡೆತ್‌ನೋಟ್‌ನಲ್ಲಿ ಏನಿದೆ ?'ಎಂಡ್‌ ಆಫ್‌ ದ ಅಬ್ಯೂಸ್‌ ಆಫ್‌ ವಿಮೆನ್‌ ಆ್ಯಂಡ್‌ ಚೈಲ್ಡ್‌' (ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯದ ಕೊನೆ ) ಎಂದು ಮೂರು ಡೆತ್‌ನೋಟ್‌ನಲ್ಲೂಒಂದೇ ಹೆಡ್ಡಿಂಗ್‌ ಬರೆಯಲಾಗಿದೆ. ಪ್ರತಿ ಡೆತ್‌ನೋಟ್‌ ಸಹ 3-4 ಪುಟಗಳಿದ್ದು, ಇದರಲ್ಲಿ ಶಂಕರ್‌ ವಿರುದ್ಧದ ಕೆಲ ವೈಯಕ್ತಿಕ ವಿಚಾರವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ''ಅಪ್ಪನಿಗೆ ಅನೈತಿಕ ಸಂಬಂಧ ಇತ್ತು. ಇದರಿಂದ ಸಂಸಾರದಲ್ಲಿ ಗಲಾಟೆಗಳು ನಡೆದಿವೆ. ಅಪ್ಪ ಮತ್ತು ಪತಿಯಂದಿರು ಕಿರುಕುಳ ಕೊಡುತ್ತಿದ್ದರು. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದೆವು. ಗಂಡನ ಮನೆಯಲ್ಲೂ ನೆಮ್ಮದಿ ಇರಲಿಲ್ಲ. ತವರು ಮನೆಯಲ್ಲೂ ಸುಖ ಸಿಗಲಿಲ್ಲ, ಇನ್ಯಾವ ಖುಷಿಗೆ ಬದುಕಬೇಕು. ಹೀಗಾಗಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದೇಧಿವೆಧಿ'' ಎಧಿಂಬುದು ಸಿಂಚನಾ, ಸಿಂಧುರಾಣಿ ಡೆತ್‌ ನೋಟ್‌ನಲ್ಲಿಉಲ್ಲೇಖವಾಗಿದೆ. ಇಬ್ಬರು ಹೆಣ್ಣುಮಕ್ಕಳೂ ಪತಿಯರ ಬಗ್ಗೆ ಆರೋಪ ಮಾಡಿದ್ದಾರೆ. ಸಿಂಚನಾ ಗಂಡನ ಮನೆಯವರ ಕಿರುಕುಳದ ಬಗ್ಗೆ ಇಂಚಿಂಚಾಗಿ ಬರೆದಿದ್ದಾರೆ. ಮದುವೆಯಾದ ಹೊಸದರಲ್ಲಿಎರಡು ಬಾರಿ ಅಬಾರ್ಷನ್‌ ಆಗಿದ್ದರೂ ಪತಿ ಮನೆಯವರು ನಿರ್ಲಕ್ಷ್ಯ ವಹಿಸಿದ್ದರು. ಅಪ್ಪನ ಬಳಿ ಹೇಳಿಕೊಂಡರೂ ಗಂಡನ ಮನೆಯವರಿಗೆ ಸಪೋರ್ಟ್‌ ಮಾಡಿ ಮಾತನಾಡುತ್ತಿದ್ದರು. ಮಧುಸಾಗರ್‌ ಬರೆದಿರುವ ಟೆತ್‌ನೋಟ್‌ನಲ್ಲಿ ತಂದೆ ಶಂಕರ್‌ ಅನೈತಿಕ ಸಂಬಂಧಕ್ಕೆ ಬೇಸತ್ತಿದ್ದೆ. ಲ್ಯಾಪ್‌ಟಾಪ್‌ನ ಎಲ್ಲವೂ ಇದೆ ಎಂದು ಉಲ್ಲೇಖಿಸಿರುವುದಾಗಿ ತಿಳಿದು ಬಂದಿದೆ. ಡೆತ್‌ನೋಟ್‌ನಲ್ಲಿರುವ ಹ್ಯಾಂಡ್‌ ರೈಟಿಂಗ್‌ ಮೃತರದ್ದೇ ಎಂದು ಎಫ್‌ಎಸ್‌ಎಲ್‌ನಿಂದ ದೃಢೀಕರಿಸಿಕೊಳ್ಳಲಾಗುತ್ತದೆ. ಇದಾದ ಬಳಿಕ ಶಂಕರ್‌, ಅಳಿಯಂದಿರಾದ ಪ್ರವೀಣ್‌ ಹಾಗೂ ಶ್ರೀಕಾಂತ್‌ ವಿರುದ್ಧ ಕೇಸ್‌ ದಾಖಲಾಗುವ ಸಾಧ್ಯತೆಗಳಿವೆ. ನಮ್ಮಣ್ಣ ಒಳ್ಳೆಯವರು ಎಂದ ತಂಗಿ!ಇನ್ನು ಅಣ್ಣನ ಮೇಲಿನ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಂಕರ್‌ ತಂಗಿ ಪಾರ್ವತಿ, ಅವರ ತಪ್ಪು ಇಟ್ಟುಕೊಂಡು ಇನ್ನೊಬ್ಬರನ್ನ ದೂರುತ್ತಾರಲ್ಲ ಅದು ತಪ್ಪು. ನಮ್ಮಣ್ಣ ಆ ರೀತಿಯ ವ್ಯಕ್ತಿಯಲ್ಲ, ಬೇಕಿದ್ದರೆ ಅಕ್ಕಪಕ್ಕದ ಊರಿನವರನ್ನ ಕೇಳಿಕೊಳ್ಳಿ. ಅವನ ಹೆಂಡತಿ ಮದುವೆಯಾದಾಗಿನಿಂದಲೂ ನಮ್ಮಣ್ಣನಿಗೆ ಟಾರ್ಚರ್ ಕೊಡುತ್ತಿದ್ದರು. ನಮ್ಮಣ್ಣ ನೆಮ್ಮದಿಯಿಂದರಲಿ ಎಂದು ನಾವ್ಯಾರು ಮನೆಗೆ ಹೋಗುತ್ತಿರಲಿಲ್ಲ ಎಂದು ಪಾರ್ವತಿ ಅವರು ಕಣ್ಣೀರಿಟ್ಟಿದ್ದಾರೆ.