ಕೃಷಿ ಕಾಯ್ದೆ ಪ್ರತಿಭಟನೆ: ತಮ್ಮದೇ ವಕೀಲರ ಸಮಿತಿ ರಚಿಸುವ ಪೊಲೀಸರ ಪ್ರಸ್ತಾಪ ತಿರಸ್ಕರಿಸಿದ ಕೇಜ್ರಿವಾಲ್ ಸರಕಾರ
ಕೃಷಿ ಕಾಯ್ದೆ ಪ್ರತಿಭಟನೆ: ತಮ್ಮದೇ ವಕೀಲರ ಸಮಿತಿ ರಚಿಸುವ ಪೊಲೀಸರ ಪ್ರಸ್ತಾಪ ತಿರಸ್ಕರಿಸಿದ ಕೇಜ್ರಿವಾಲ್ ಸರಕಾರ
ಕೃಷಿ ಕಾಯ್ದೆಗಳ ವಿರುದ್ಧ ದಿಲ್ಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲಿನ ಪ್ರಕರಣಗಳನ್ನು ನಿಭಾಯಿಸಲು ವಕೀಲರ ಸಮಿತಿ ರಚಿಸುವ ಬಗ್ಗೆ ದಿಲ್ಲಿ ಪೊಲೀಸರು ನೀಡಿದ್ದ ಪ್ರಸ್ತಾಪವನ್ನು ಅರವಿಂದ್ ಕೇಜ್ರಿವಾಲ್ ಸಚಿವ ಸಂಪುಟ ತಿರಸ್ಕರಿಸಿದೆ.
ಹೊಸದಿಲ್ಲಿ: ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧದ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಸಂಬಂಧಿಸಿದ ಪ್ರಕರಣಗಳ ಕಾನೂನು ಹೋರಾಟಕ್ಕೆ ವಕೀಲರ ಸಮಿತಿಯೊಂದನ್ನು ರಚಿಸಬೇಕೆಂಬ ನಗರ ಪೊಲೀಸರ ಪ್ರಸ್ತಾಪವನ್ನು ಮುಖ್ಯಮಂತ್ರಿ ಅವರ ಸಚಿವ ಸಂಪುಟ ಶುಕ್ರವಾರ ತಳ್ಳಿಹಾಕಿದೆ.
ರೈತರ ಪ್ರತಿಭಟನೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ, ನ್ಯಾಯಾಲಯಗಳಲ್ಲಿ ದಿಲ್ಲಿ ಸರಕಾರದ ವಕೀಲರೇ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿರಲಿದ್ದಾರೆ ಎಂದು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಸಂಪುಟ ಸಭೆಯ ನಿರ್ಣಯವನ್ನು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ಅನುಮೋದನೆಗೆ ರವಾನಿಸಲಾಗಿದೆ.
ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಹಾಜರಾಗುತ್ತಿರುವ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳನ್ನು ಬದಲಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ದಿಲ್ಲಿ ಪೊಲೀಸರ ಮೂಲಕ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ.
ರಾಜಧಾನಿಯ ಗಡಿ ಭಾಗಗಳಲ್ಲಿ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಿರುವ ರೈತರ ವಿರುದ್ಧದ ಪ್ರಕರಣಗಳಲ್ಲಿ ಅವರ ಪರ ಹಾಜರಾಗಲು ದಿಲ್ಲಿ ಸರಕಾರದ ವಕೀಲರ ಸಮಿತಿ ರಚಿಸುವುದನ್ನು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ತಿರಸ್ಕರಿಸಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.
'ಕೃಷಿ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿನ ಆರೋಪಿ ರೈತರ ವಿರುದ್ಧ ಕೇಂದ್ರ ಸರಕಾರ ಬಹಿರಂಗವಾಗಿ ಕ್ರಮಕ್ಕೆ ಮುಂದಾಗಿದೆ. ಪ್ರಕರಣಗಳನ್ನು ಹೋರಾಡದಂತೆ ದಿಲ್ಲಿ ಸರಕಾರದ ವಕೀಲರನ್ನು ಗವರ್ನರ್ ತಡೆದಿದ್ದಾರೆ. ಪ್ರತಿಭಟನಾನಿರತ ರೈತರ ಪರವಾಗಿ ಪ್ರಕರಣಗಳಲ್ಲಿ ಹೋರಾಟ ನಡೆಸುವ ವಕೀಲರನ್ನು ಬದಲಿಸುವಂತೆ ಕೇಜ್ರಿವಾಲ್ ಸರಕಾರದ ಮೇಲೆ ಕೇಂದ್ರ ಒತ್ತಡ ಹೇರುತ್ತಿದೆ ಎಂದು ಕಚೇರಿ ಆರೋಪಿಸಿದೆ.
'ದಿಲ್ಲಿ ಸರಕಾರ ಪ್ರಕರಣಗಳ ತನಿಖೆ ನಡೆಸುತ್ತಿದೆ. ಆದರೆ ತನ್ನದೇ ವಕೀಲರ ಸಮಿತಿ ರಚಿಸಲು ಬಯಸಿದೆ. ದಿಲ್ಲಿ ಪೊಲೀಸರ ಪ್ರಸ್ತಾವವನ್ನು ಕಾನೂನು ಸಚಿವ ಸತ್ಯೇಂದರ್ ಜೈನ್ ತಿರಸ್ಕರಿಸಿದ್ದಾರೆ. ಆದರೆ ದಿಲ್ಲಿ ಪೊಲೀಸರ ಸಮಿತಿಯ ಕುರಿತು ನಿರ್ಧಾರ ತೆಗೆದುಕೊಳ್ಳಲು ಸಂಪುಟ ಸಭೆ ಕರೆಯುವಂತೆ ಗವರ್ನರ್ ಸರಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ' ಎಂದು ಅದು ದೂರಿದೆ.