ಇನ್ನು ಕೆಲ ದಿನಗಳಲ್ಲೇ ಬೆಂಗಳೂರು - ಮೈಸೂರು ನಡುವಿನ ಎಕ್ಸ್‌ಪ್ರೆಸ್‌ ಹೈವೆ ಲೋಕಾರ್ಪಣೆ: ವಿಶೇಷತೆ ಏನು?

ಬೆಂಗಳೂರು ಮತ್ತು ಮೈಸೂರು ನಡುವಿನ ಕ್ಸ್‌ಪ್ರೆಸ್‌ ಹೈವೆ ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿದೆ. ಈ ನೂನತ ದಶಪಥದ ಹೆದ್ದಾರಿ ಬಗ್ಗೆ ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರ್‌ ಹರ್ಷ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಈ ಹೆದ್ದಾರಿಯಯ ವಿಶೇಷತೆ ಏನು? ಇಲ್ಲಿದೆ ಈ ರಸ್ತೆ ಬಗ್ಗೆಗ್ಗಿನ ಸಂಪೂರ್ಣ ಮಾಹಿತಿ.

ಇನ್ನು ಕೆಲ ದಿನಗಳಲ್ಲೇ ಬೆಂಗಳೂರು - ಮೈಸೂರು ನಡುವಿನ ಎಕ್ಸ್‌ಪ್ರೆಸ್‌ ಹೈವೆ ಲೋಕಾರ್ಪಣೆ: ವಿಶೇಷತೆ ಏನು?
Linkup
ಆರ್‌.ಶ್ರೀಧರ್‌ ರಾಮನಗರ ಬೆಂಗಳೂರು ಮತ್ತು ಮೈಸೂರು ನಡುವೆ ವಾಹನ ಸಂಚಾರ ದಟ್ಟಣೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಅಭಿವೃದ್ಧಿಪಡಿಸುತ್ತಿರುವ ಹತ್ತುಪಥದ ಹೆದ್ದಾರಿಯ ಮೊದಲ ಹಂತದ ಕಾಮಗಾರಿ ಮುಗಿಯುವ ಹಂತ ತಲುಪಿದ್ದು, ಇದು ಶೀಘ್ರವೇ ಲೋಕಾರ್ಪಣೆಯಾಗಲಿದೆ. ದಶಪಥದ ಹೆದ್ದಾರಿ ಕಾಮಗಾರಿ ಪ್ರಗತಿ ಬಗ್ಗೆ ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರ್‌ ಹರ್ಷ ವ್ಯಕ್ತಪಡಿಸಿದ್ದಾರೆ. ಮೊದಲ ಹಂತದ ಕಾಮಗಾರಿ ಕೊನೆ ಹಂತದಲ್ಲಿದೆ. ಯೋಜನೆಗಾಗಿ ಒಟ್ಟು 8172 ಕೋಟಿ ರೂ.,ಗಳನ್ನು ವ್ಯಯಿಸಲಾಗುತ್ತಿದೆ. 2022ರ ಅಕ್ಟೋಬರ್‌ನಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ ಇದೆ ಎಂದು ಗಡ್ಕರಿ ಟ್ವೀಟ್‌ ಮಾಡಿದ್ದಾರೆ. ಎರಡು ವರ್ಷಗಳಿಂದ ಕೆಲಸ: ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 275ನ್ನು 10 ಲೇನ್‌ಗಳಿಗೆ ವಿಸ್ತರಿಸುವ ಕಾಮಗಾರಿಗೆ 2 ವರ್ಷಗಳ ಹಿಂದೆ ಚಾಲನೆ ನೀಡಲಾಗಿದೆ. ಈಗಾಗಲೇ ಪ್ಯಾಕೇಜ್‌ 1ರ ಕಾಮಗಾರಿ ಈ ವರ್ಷಾಂತ್ಯದಲ್ಲಿ ಮುಗಿಯಲಿದೆ. ಈ ಹೆದ್ದಾರಿ ಕಾಮಗಾರಿ ಸಂಪೂರ್ಣಗೊಂಡ ಬಳಿಕ ಬೆಂಗಳೂರು-ಮೈಸೂರು ನಡುವಿನ ಪ್ರಯಾಣದ ಸಮಯ 3 ಗಂಟೆಯಿಂದ ಒಂದೂವರೆ ಗಂಟೆಗೆ ಇಳಿಯಲಿದೆ. ಮಧ್ಯಪ್ರದೇಶದ ಕಂಪನಿ ಮಧ್ಯಪ್ರದೇಶ ಮೂಲದ ದಿಲೀಪ್‌ ಬಿಲ್ಡಾನ್ಕ್‌ ಕಂಪನಿ ಈ ರಸ್ತೆ ಅಭಿವೃದ್ಧಿ ಕಾಮಗಾರಿಯ ಗುತ್ತಿಗೆ ಪಡೆದಿದೆ. ಹೆದ್ದಾರಿ ವಿಸ್ತರಣೆ ಕಾಮಗಾರಿ ಲಾಕ್‌ಡೌನ್‌ ಘೋಷಣೆಗೆ ಮುನ್ನ ಭರದಿಂದ ಸಾಗಿತ್ತು. ಆದರೆ, ಕೋವಿಡ್‌ ಲಾಕ್‌ಡೌನ್‌ ಕಾರಣಕ್ಕೆ ಮಧ್ಯೆ ಒಂದೆರಡು ತಿಂಗಳು ಕೆಲಸ ನಿಂತಿತ್ತು. ಇದೀಗ ಮತ್ತೆ ಭರದಿಂದ ಕೆಲಸಗಳು ಸಾಗಿವೆ. ಎಲ್ಲಿಂದ ಎಲ್ಲಿವರೆಗೆ?: ಸದ್ಯ 25ರಿಂದ 30 ಮೀಟರ್‌ ಅಗಲ ಇರುವ ಹೆದ್ದಾರಿಯನ್ನು 45ರಿಂದ 60 ಮೀಟರ್‌ವರೆಗೆ ಹೆಚ್ಚಿಸಲಾಗುತ್ತಿದೆ. ಬೆಂಗಳೂರು-ಮೈಸೂರು ನಡುವೆ ಸದ್ಯ 135 ಕಿಲೋಮೀಟರ್‌ ಅಂತರವಿದೆ. ಇದರಲ್ಲಿ ಬೆಂಗಳೂರು ಹೊರವಲಯದ ನೈಸ್‌ ಜಂಕ್ಷನ್‌ ಬಳಿಯ 18ನೇ ಕಿ.ಮೀ. ಮೈಲಿಗಲ್ಲಿನ ಬಳಿ ಪಂಚಮುಖಿ ದೇವಸ್ಥಾನದಿಂದ ರಸ್ತೆ ವಿಸ್ತರಣೆ ಕಾರ್ಯ ಆರಂಭಗೊಂಡು ಮೈಸೂರಿನ ಕೊಲಂಬಿಯಾ ಏಷ್ಯಾ ಜಂಕ್ಷನ್‌ನಲ್ಲಿ ಮುಕ್ತಾಯಗೊಳ್ಳಲಿದೆ. ಒಟ್ಟು 118 ಕಿ.ಮೀ ಉದ್ದಕ್ಕೆ ಹತ್ತು ಪಥಗಳ ರಸ್ತೆ ನಿರ್ಮಾಣ ಆಗುತ್ತಿದೆ. ಕೆಲ ಕಡೆ ಸಂಪೂರ್ಣ: ಬಿಡದಿ, ರಾಮನಗರ- ಚನ್ನಪಟ್ಟಣ ಮಾರ್ಗದಲ್ಲಿಒಟ್ಟು 29.33 ಉದ್ದದ ಬೈಪಾಸ್‌ ರಸ್ತೆಯನ್ನು ಹೊಸತಾಗಿ ನಿರ್ಮಾಣ ಮಾಡಲಾಗಿದ್ದು, ಈ ರಸ್ತೆಯಲ್ಲಿ ವಾಹನಗಳು ಓಡಾಡುತ್ತಿವೆ. ಬಿಡದಿ ಸಮೀಪದ ಕೆರೆ ಮೇಲೆ, ರಾಮನಗರ-ಚನ್ನಪಟ್ಟಣ ನಡುವೆ ಅರ್ಕಾವತಿ ನದಿ ಮೇಲೆ, ಕಣ್ವ ನದಿ ಮೇಲೆ ಹಾಗೂ ಮತ್ತೊಂದು ಕೆರೆಯ ಮೇಲೆ ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ಈ ಸೇತುವೆಗಳು ಹಾಗೂ ಅಲ್ಲಲ್ಲಿ ಅಂಡರ್‌ಪಾಸ್‌ಗಳ ನಿರ್ಮಾಣ ಕಾಮಗಾರಿಗಳಷ್ಟೇ ಸದ್ಯ ಬಾಕಿ ಉಳಿದುಕೊಂಡಿವೆ. ವಿಶೇಷತೆಗಳೇನು? ಒಟ್ಟು ಅಂತರ: 135 ಕಿ.ಮೀ. 10 ಪಥದ ರಸ್ತೆ: 118 ಕಿ.ಮೀ. ಎಲ್ಲಿಂದ ಎಲ್ಲಿವರೆಗೆ?: ಕೆಂಗೇರಿ ಬಳಿಯ ಪಂಚಮುಖಿ ದೇಗುಲದಿಂದ ಮೈಸೂರಿನ ಕೊಲಂಬಿಯಾ ಏಷಿಯ ಆಸ್ಪತ್ರೆ ಮದ್ಯೆ ಸಿಗುವ ಊರುಗಳು: ಕುಂಬಳಗೂಡು, ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗ ಪಟ್ಟಣ ಪ್ಯಾಕೇಜ್‌-1 ಕೆಂಗೇರಿಯಿಂದ, ಬಿಡದಿ, ರಾಮನಗರ, ಚನ್ನಪಟ್ಟಣ ಮತ್ತು ಮದ್ದೂರು ತಾಲೂಕಿನ ನಿಡಘಟ್ಟವರೆಗೆ 56.20 ಕಿಮೀ ಪ್ಯಾಕೇಜ್‌- 2 ಮಂಡ್ಯ, ಶ್ರೀರಂಗಪಟ್ಟಣ ಮೂಲಕಮೈಸೂರಿನ ಕೋಲಂಬಿಯ ಏಷಿಯ ಆಸ್ಪತ್ರೆವರೆಗೆ 61.04 ಕಿ.ಮೀ. ಬೈಪಾಸ್‌ ರಸ್ತೆಗಳು: ಬಿಡದಿ ಬಳಿ 6.9 ಕಿ.ಮೀ. ರಾಮನರದಿಂದ ಚನ್ನಪಟ್ಟಣದವರೆಗೆ 22.35 ಕಿ.ಮೀ. ಮದ್ದೂರು ಬಳಿ 4.5 ಕಿ.ಮೀ. ಮಂಡ್ಯದಲ್ಲಿ10 ಕಿ.ಮೀ. ಶ್ರೀರಂಗಪಟ್ಟಣದಲ್ಲಿ8 ಕಿ.ಮೀ.