'ಇ-ರುಪಿ'ಯಿಂದ ಯಾರಿಗೆಲ್ಲ ಲಾಭ? ಏನೆಲ್ಲ ಅನುಕೂಲ? ಇಲ್ಲಿದೆ ಪೂರ್ಣ ಮಾಹಿತಿ!
'ಇ-ರುಪಿ'ಯಿಂದ ಯಾರಿಗೆಲ್ಲ ಲಾಭ? ಏನೆಲ್ಲ ಅನುಕೂಲ? ಇಲ್ಲಿದೆ ಪೂರ್ಣ ಮಾಹಿತಿ!
ವಿಶ್ವಾದ್ಯಂತ ಡಿಜಿಟಲ್ ಕರೆನ್ಸಿ ಕುರಿತು ಬಹು ಚರ್ಚೆಯಾಗುತ್ತಿರುವ ಸಮಯದಲ್ಲಿ ಭಾರತ ಕೂಡ ಇ-ರುಪಿ ಬಿಡುಗಡೆ ಮಾಡಿದೆ. ಇ-ರುಪಿಯಿಂದ ಹಲವು ಅನುಕೂಲಗಳಿವೆ ಎಂದು ಹೇಳಲಾಗುತ್ತಿದೆ. ಈ ಕುರಿತ ಪೂರ್ಣ ಮಾಹಿತಿ ಇಲ್ಲಿದೆ.
ಹೊಸದಿಲ್ಲಿ: ವಿಶ್ವಾದ್ಯಂತ ಕುರಿತು ಬಹು ಚರ್ಚೆಯಾಗುತ್ತಿರುವ ಸಮಯದಲ್ಲಿ ಭಾರತ ಕೂಡ ಬಿಡುಗಡೆ ಮಾಡಿದೆ. ದೇಶದಲ್ಲಿ ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವುದು ಇ-ರುಪಿಯ ಪ್ರಮುಖ ಉದ್ದೇಶ.
ಹಾಗೆಂದ ಮಾತ್ರಕ್ಕೆ ಇ-ರುಪಿ ಕ್ರಿಪ್ಟೋಕರೆನ್ಸಿಯಲ್ಲ. ಇದೊಂದು ಇ-ವೋಚರ್ ಆಧಾರಿತ ಡಿಜಿಟಲ್ ಪಾವತಿ ವೇದಿಕೆ. ಇದು ಪ್ರಿಪೇಯ್ಡ್ ಇ-ವೋಚರ್ ಆಗಿದ್ದು, ಇದನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (NPCI) ಅಭಿವೃದ್ಧಿಪಡಿಸಿದೆ.
ಇ-ರೂಪಾಯಿ ಅಥವಾ ಇ-ರುಪಿ () ನಗದುರಹಿತ ಮತ್ತು ಇಂಟರ್‌ನೆಟ್ ಸಂಪರ್ಕ ರಹಿತ ಸಾಧನವಾಗಿದೆ. ಇದು ಕ್ಯೂಆರ್ ಕೋಡ್ ಅಥವಾ ಎಸ್‌ಎಂಎಸ್ ಸ್ಟ್ರಿಂಗ್ ಆಧಾರಿತ ಇ-ವೋಚರ್ ಆಗಿದ್ದು, ಫಲಾನುಭವಿಗಳ ಮೊಬೈಲ್‌ಗೆ ಕಳುಹಿಸಲಾಗುತ್ತದೆ. ಇದು ಯಾವುದೇ ಮಧ್ಯವರ್ತಿ ಒಳಗೊಳ್ಳದೆ ಸೇವಾ ಪೂರೈಕೆದಾರರಿಗೆ ಸಕಾಲಿಕವಾಗಿ ಪಾವತಿ ಮಾಡುತ್ತದೆ.
ಚಲಾವಣೆಗೆ ಭೌತಿಕ ಹಣವಿದೆ. ಇದರ ಜತೆಗೆ ಆನ್‌ಲೈನ್ ಪಾವತಿ, ಡಿಜಿಟಲ್ ಹಣ ವರ್ಗಾವಣೆಯೂ ಹೆಚ್ಚುತ್ತಿದೆ. ಈ ಸಂದರ್ಭದಲ್ಲಿ ಇ-ರುಪಿಯ ಅಗತ್ಯ ಏನಿತ್ತು ಎಂಬ ಪ್ರಶ್ನೆ ಎದುರಾಗುತ್ತದೆ. ಇ-ರುಪಿಯಿಂದ ಹಲವು ಅನುಕೂಲಗಳಿವೆ ಎಂದು ಹೇಳಲಾಗುತ್ತಿದೆ. ಇದರಿಂದ ಸರಕಾರಿ ಯೋಜನೆಗಳು, ಹಾಗೂ ಸೌಲಭ್ಯಗಳನ್ನು ತಲುಪಿಸುವಲ್ಲಿ ಹಣದ ಪೋಲಾಗುವಿಕೆಯನ್ನು ತಪ್ಪಿಸಬಹುದು ಎನ್ನಲಾಗಿದೆ.
'ಇ-ರುಪಿ'ಯ 10 ಅನುಕೂಲಗಳು
ಇ-ರುಪಿ ಎಂದರೆ ನಗದುರಹಿತ ಮತ್ತು ಸಂಪರ್ಕರಹಿತ ಡಿಜಿಟಲ್ ಪಾವತಿ. ಇದಕ್ಕೆ ಇಂಟರ್‌ನೆಟ್‌ನ ಅಗತ್ಯವಿಲ್ಲ. ಗ್ರಾಮೀಣ ಪ್ರದೇಶಕ್ಕೂ ಅನುಕೂಲಕಾರಿ.
ಸೇವೆಗಳ ಪ್ರಾಯೋಜಕರು ಮತ್ತು ಫಲಾನುಭವಿಗಳನ್ನು ಡಿಜಿಟಲ್ ಮೂಲಕ ಸಂಪರ್ಕಿಸುತ್ತದೆ.
ಹಲವು ಸರಕಾರಿ ಯೋಜನೆಗಳ ಹಣವನ್ನು ಪೋಲಾಗದಂತೆ ಫಲಾನುಭವಿಗಳಿಗೆ ತಲುಪಿಸುವುದನ್ನು ಖಚಿತಪಡಿಸುತ್ತದೆ.
ಇದು ಕ್ಯೂಆರ್ ಕೋಡ್ ಅಥವಾ ಎಸ್‌ಎಂಎಸ್ ಸ್ಟ್ರಿಂಗ್ ಆಧಾರಿತ ಇ-ವೋಚರ್ ಆಗಿದೆ, ಇದನ್ನು ಫಲಾನುಭವಿಗಳ ಮೊಬೈಲ್‌ಗೆ ತಲುಪಿಸಲಾಗುತ್ತದೆ.
ಈ ತಡೆರಹಿತ ಪಾವತಿಯಾಗಿದೆ. ಅಂದರೆ, ಬಳಕೆದಾರರು ಕಾರ್ಡ್, ಡಿಜಿಟಲ್ ಪಾವತಿ ಅಪ್ಲಿಕೇಶನ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಯಾವುದನ್ನೂ ಬಳಸದೆ ಇ-ರುಪಿ ವೋಚರ್ ಅನ್ನು ರಿಡೀಮ್ ಮಾಡಲು ಸಾಧ್ಯ.
ಯಾವುದೇ ಭೌತಿಕ ಇಂಟರ್ಫೇಸ್ ಇಲ್ಲದೆ ಇ-ರೂಪಾಯಿ ಸೇವೆಗಳ ಪ್ರಾಯೋಜಕರನ್ನು ಫಲಾನುಭವಿಗಳು ಮತ್ತು ಸೇವಾ ಪೂರೈಕೆದಾರರೊಂದಿಗೆ ಡಿಜಿಟಲ್ ರೀತಿಯಲ್ಲಿ ಸಂಪರ್ಕಿಸುತ್ತದೆ.
ವಹಿವಾಟು ಪೂರ್ಣಗೊಂಡ ನಂತರವೇ ಸೇವಾ ಪೂರೈಕೆದಾರರಿಗೆ ಪಾವತಿ ಮಾಡಲಾಗಿದೆಯೆಂದು ಇದು ಖಚಿತಪಡಿಸುತ್ತದೆ.
ಸ್ವಭಾವತಃ ಪೂರ್ವ- ಪಾವತಿಯಾಗಿರುವುದರಿಂದ, ಇದು ಯಾವುದೇ ಮಧ್ಯವರ್ತಿ ಒಳಗೊಳ್ಳದೆಯೇ ಸಕಾಲಿಕ ಪಾವತಿಯ ಸೇವೆ ಒದಗಿಸುತ್ತದೆ.
ನಿಯಮಿತ ಪಾವತಿಗಳ ಹೊರತಾಗಿ, ಆಯುಷ್ಮಾನ್ ಭಾರತ್, ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ, ರಸಗೊಬ್ಬರ ಸಬ್ಸಿಡಿ, ಹೆರಿಗೆ ಮತ್ತು ಮಕ್ಕಳ ಕಲ್ಯಾಣ ಯೋಜನೆಗಳು, ಟಿಬಿ ನಿರ್ಮೂಲನೆ ಕಾರ್ಯಕ್ರಮಗಳು, ಔಷಧಗಳು ಮೊದಲಾದ ಯೋಜನೆಗಳಡಿ ಇ-ರುಪಿಯನ್ನು ಬಳಸಬಹುದು.
ಈ ಡಿಜಿಟಲ್ ವೋಚರ್‌ಗಳನ್ನು ಖಾಸಗಿ ವಲಯವು ತಮ್ಮ ಉದ್ಯೋಗಿಗಳ ಕಲ್ಯಾಣ ಮತ್ತು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮಗಳಿಗೆ ಬಳಸಬಹುದು.