ಆರೋಗ್ಯಕ್ಕೆ ಉತ್ತಮ ನಿದ್ದೆ ತುಂಬಾ ಮುಖ್ಯ; ಗಾಢ ನಿದ್ರೆಯಿಂದ ಸಿಗುವ ಪ್ರಯೋಜನಗಳೇನು?

ನಾಲ್ಕೈದು ಗಂಟೆಗಳ ಕಾಲ ನಿದ್ದೆ ಮಾಡುವುದರಿಂದಲೂ ನಾವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ನಾವು ಅಂದುಕೊಂಡರೂ, ದೇಹವು ಅದೇ ರೀತಿಯಲ್ಲಿ ಪ್ರತಿಕ್ರಿಯಿಸುವುದಿಲ್ಲ. ದೇಹಕ್ಕೆ ಕನಿಷ್ಠ ಏಳರಿಂದ ಎಂಟು ಗಂಟೆಗಳ ಅಡೆತಡೆಯಿಲ್ಲದ, ಆಳವಾದ ನಿದ್ದೆಯ ಅಗತ್ಯವಿದೆ. ಕೆಲಸ ಅಥವಾ ಬೇರೆ ಯಾವುದೋ ಕಾರಣಕ್ಕೆ ನಿದ್ದೆಯನ್ನು ತ್ಯಾಗ ಮಾಡುವುದು ಮಾನವನ ಪ್ರಮುಖ ಲಕ್ಷಣ. ಬಿಡುವಿಲ್ಲದ ಜೀವನಶೈಲಿಯೇ ಇದಕ್ಕೆ ಕಾರಣ. ನಾಲ್ಕೈದು ಗಂಟೆಗಳ ಕಾಲ ನಿದ್ದೆ ಮಾಡುವುದರಿಂದಲೂ ನಾವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ನಾವು ಅಂದುಕೊಂಡರೂ, ದೇಹವು ಅದೇ ರೀತಿಯಲ್ಲಿ ಪ್ರತಿಕ್ರಿಯಿಸುವುದಿಲ್ಲ. ದೇಹಕ್ಕೆ ಕನಿಷ್ಠ ಏಳರಿಂದ ಎಂಟು ಗಂಟೆಗಳ ಅಡೆತಡೆಯಿಲ್ಲದ, ಗಾಢ ನಿದ್ರೆಯ ಅಗತ್ಯವಿದೆ. ಕಡಿಮೆ ನಿದ್ದೆಯನ್ನು ಮಾಡುವುದರಿಂದ ಉಂಟಾಗುವ ಸಾಮಾನ್ಯ ರೋಗಲಕ್ಷಣಗಳು ಮೆದುಳಿಗೆ ಮಂಕು ಬಡಿದಂತಾಗುವುದು (ಗೊಂದಲ, ಮರೆವು ಮತ್ತು ಗಮನ ಹಾಗೂ ಮಾನಸಿಕ ಸ್ಪಷ್ಟತೆಯ ಕೊರತೆ), ದೌರ್ಬಲ್ಯ, ತಲೆನೋವು, ಕಡಿಮೆ ಮನಸ್ಥಿತಿ ಮತ್ತು ನೆನಪಿನ ಮೆಮೊರಿ ಸಮಸ್ಯೆಗಳು ಕಂಡುಬರುತ್ತವೆ. ಕೆಲವರು ಇವುಗಳು ವಯಸ್ಸಿನಿಂದಾಗುತ್ತವೆ ಎಂದುಕೊಳ್ಳುತ್ತಾರೆ. ಮೆದುಳಿನ ಆರೋಗ್ಯ ಮತ್ತು ನಿದ್ರೆಯ ನಡುವಿನ ಸಂಪರ್ಕವನ್ನು ಅರ್ಥಮಾಡಿಕೊಂಡರೆ, ಆಲ್ಝೈಮರ್ ಮತ್ತು ಪಾರ್ಕಿನ್ಸನ್ ಕಾಯಿಲೆಗಳನ್ನು ತಡೆಗಟ್ಟುವುದು ಅಥವಾ ನಿರ್ವಹಿಸುವುದು ಮತ್ತು ಅಕಾಲಿಕ ವಯಸ್ಸಾಗುವಿಕೆಯನ್ನು ತಡೆಯುವುದು ಎಷ್ಟು ಮುಖ್ಯ ಎಂದು ನೀವು ಅರ್ಥಮಾಡಿಕೊಳ್ಳುತ್ತೀರಿ. ದೀರ್ಘಕಾಲದ ನಿದ್ರಾಹೀನತೆ ಮತ್ತು ದುರ್ಬಲ ಮೆದುಳಿನ ಕ್ರಿಯೆಯ ನಡುವಿನ ಕೊಂಡಿಯನ್ನು ಹಲವಾರು ಸಂಶೋಧನೆಗಳು ತೋರಿಸಿವೆ. ಸ್ಟಕ್ ಆಗುವುದು, ಯೋಚಿಸಲೂ ಆಗದಂತಹ ಸ್ಥಿತಿಯನ್ನು ಪ್ರತಿಯೊಬ್ಬರೂ ಅನುಭವಿಸಿರುತ್ತಾರೆ. ಯೋಚಿಸಲು ಕಷ್ಟವಾಗುವುದು, ಕಾರ್ಯಗತಗೊಳಿಸುವಲ್ಲಿ ನಿಧಾನ, ನಾವೀನ್ಯತೆಯ ಕೊರತೆಯು ಕಳಪೆ ನಿದ್ರೆಯ ಕಾರಣದಿಂದಾಗಿ ಬರುತ್ತದೆ. ಅಸಮರ್ಪಕ ನಿದ್ದೆಯು ಒತ್ತಡ ನಿಭಾಯಿಸುವ ನಮ್ಮ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ನಾವು ಗಾಢ ನಿದ್ರೆಯಲ್ಲಿರುವಾಗ ಮೆದುಳು ತ್ಯಾಜ್ಯಗಳನ್ನು ಹೊರಹಾಕುತ್ತದೆ. ನಮ್ಮ ದೇಹದಲ್ಲಿನ ತ್ಯಾಜ್ಯವನ್ನು ಹೊರಹಾಕುವ ಅಂಗದಂತೆಯೇ ಮೆದುಳು ಕೂಡ, ಅತಿಯಾದ ಆಲೋಚನೆ, ಒತ್ತಡ ಮತ್ತು ಮಿತಿಮೀರಿದ ಮಾಹಿತಿಯಿಂದ ಉಂಟಾಗಿರುವ ಮೆಟಬಾಲಿಕ್ ತ್ಯಾಜ್ಯಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಮೆದುಳಿನಲ್ಲಿ ನಿರಂತರವಾಗಿ ಟಾಕ್ಸಿಕ್ ಉತ್ಪಾದನೆಯಾಗುತ್ತದೆ ಮತ್ತು ಈ ಮಾದರಿಗಳು ಮಿತಿಮೀರಿದ ಸಂದರ್ಭದಲ್ಲಿ ಮಾನಸಿಕ ಆಯಾಸ ಉಂಟಾಗುತ್ತದೆ. ನಾವು ಗಾಢ ನಿದ್ರೆಯಲ್ಲಿರುವಾಗ ನಮ್ಮ ಮೆದುಳು ಕುಗ್ಗುತ್ತದೆ. ಇದು ಸೆರೆಬ್ರೊಸ್ಪೈನಲ್ ದ್ರವವು ಮೆದುಳಿನ ನಿರ್ದಿಷ್ಟ ಭಾಗಗಳನ್ನು ಪ್ರವೇಶಿಸಲು ಜಾಗವನ್ನು ಸೃಷ್ಟಿಸುತ್ತದೆ ಮತ್ತು ಆಲ್ಝೈಮರ್ನ ಕಾಯಿಲೆಯಿರುವ ವ್ಯಕ್ತಿಗಳ ಮೆದುಳಿನಲ್ಲಿ ಕಂಡುಬರುವ ಬೀಟಾ-ಅಮಿಲಾಯ್ಡ್ ಪ್ಲೇಕ್‌ಗಳಂತಹ ತ್ಯಾಜ್ಯ ಮತ್ತು ಹೆಚ್ಚುವರಿ ಪ್ರೋಟೀನ್ ಕಣಗಳನ್ನು ತೆಗೆದುಹಾಕುತ್ತದೆ. ಹೆಚ್ಚಿನ ಬೀಟಾ-ಅಮಿಲಾಯ್ಡ್ ಪ್ಲೇಕ್ ರಚನೆ ಮತ್ತು ಶೇಖರಣೆಯಾದರೆ ನ್ಯೂರಾನ್‌ಗಳ ನಡುವಿನ ಸಂವಹನವನ್ನು ಅಡ್ಡಿಪಡಿಸುತ್ತದೆ. ಇದು ಮೆಮೊರಿ ನಷ್ಟ, ಮಾತಿನ ಮಂದಗತಿ, ನಿಧಾನ ಚಲನೆ ಮತ್ತು ಗೊಂದಲಕ್ಕೆ ಕಾರಣವಾಗುತ್ತದೆ. ನಿದ್ರಾಹೀನತೆಯು ನಿಮ್ಮ ಮೆದುಳಿನಲ್ಲಿರುವ ಬೂದು ಮತ್ತು ಬಿಳಿ ದ್ರವ್ಯವನ್ನು ಸಹ ನಾಶಪಡಿಸುತ್ತದೆ. ಇವು ಮೆದುಳಿನ ಆರೋಗ್ಯ, ಮೆಮೊರಿ ಮತ್ತು ಮಾಹಿತಿ ಸಂಸ್ಕರಣೆ, ನರಕೋಶಗಳ ನಡುವಿನ ಸಂವಹನ ಮತ್ತು ಸಂವೇದನಾ ಗ್ರಹಿಕೆಯ ಎರಡು ಪ್ರಮುಖ ಅಂಶಗಳಾಗಿವೆ. ಅರಿವಿನ ಕಾಯಿಲೆಗಳಾದ ಆಲ್ಝೈಮರ್ಸ್, ಪಾರ್ಕಿನ್ಸನ್ ಮತ್ತು ಬುದ್ಧಿಮಾಂದ್ಯತೆಯನ್ನು ಉರಿಯೂತದ ಪರಿಸ್ಥಿತಿಗಳು ಎಂದು ಕರೆಯಲಾಗುತ್ತದೆ. ದೀರ್ಘಕಾಲದ ನಿದ್ರೆಯ ಕೊರತೆಯು ಇವುಗಳನ್ನು ಹೆಚ್ಚಿಸಬಹುದು. ಉರಿಯೂತವನ್ನು ತಗ್ಗಿಸಲು ನಾವು ಕರ್ಕ್ಯುಮಿನ್ ಪೂರಕಗಳನ್ನು ನೀಡಬಹುದಾದರೂ, ಅದು ನಿದ್ರೆಗೆ ಬದಲಿಯಾಗಿರುವುದಿಲ್ಲ. ದುರದೃಷ್ಟವಶಾತ್, ಜನರು ಈ ಎಲ್ಲವನ್ನು ಮರೆತುಬಿಡುತ್ತಾರೆ ಮತ್ತು ಜೀವನದ ನಂತರದ ಹಂತಗಳಲ್ಲಿ ಮಾತ್ರ ತಮ್ಮ ನಿದ್ರೆಯ ಅವಶ್ಯಕತೆಗಳನ್ನು ನೋಡಿಕೊಳ್ಳಲು ಪ್ರಾರಂಭಿಸುತ್ತಾರೆ. ಆಲ್ಝೈಮರ್ ಮತ್ತು ಪಾರ್ಕಿನ್ಸನ್ ರಾತ್ರೋರಾತ್ರಿ ಸಂಭವಿಸುವುದಿಲ್ಲ. ಬದಲಿಗೆ ಇದು ನಿಧಾನವಾಗಿ ಪ್ರಾರಂಭವಾಗುವ ಪ್ರಕ್ರಿಯೆ. ನಿದ್ರೆಗೆ ಆದ್ಯತೆ ನೀಡಿದರೆ ಅದನ್ನು ತಡೆಯಬಹುದು ಅಥವಾ ಕನಿಷ್ಠ ಉತ್ತಮವಾಗಿ ನಿರ್ವಹಿಸಬಹುದು. ಇಂದು ನಿಮ್ಮ ಜೀವನಶೈಲಿ ಮತ್ತು ನಿದ್ರೆಯ ಗುಣಮಟ್ಟವು ನಾಳೆ ನಿಮ್ಮ ಅರಿವಿನ ಆರೋಗ್ಯದ ಗುಣಮಟ್ಟವನ್ನು ನಿರ್ಧರಿಸುತ್ತದೆ.

ಆರೋಗ್ಯಕ್ಕೆ ಉತ್ತಮ ನಿದ್ದೆ ತುಂಬಾ ಮುಖ್ಯ; ಗಾಢ ನಿದ್ರೆಯಿಂದ ಸಿಗುವ ಪ್ರಯೋಜನಗಳೇನು?
Linkup
ನಾಲ್ಕೈದು ಗಂಟೆಗಳ ಕಾಲ ನಿದ್ದೆ ಮಾಡುವುದರಿಂದಲೂ ನಾವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ನಾವು ಅಂದುಕೊಂಡರೂ, ದೇಹವು ಅದೇ ರೀತಿಯಲ್ಲಿ ಪ್ರತಿಕ್ರಿಯಿಸುವುದಿಲ್ಲ. ದೇಹಕ್ಕೆ ಕನಿಷ್ಠ ಏಳರಿಂದ ಎಂಟು ಗಂಟೆಗಳ ಅಡೆತಡೆಯಿಲ್ಲದ, ಆಳವಾದ ನಿದ್ದೆಯ ಅಗತ್ಯವಿದೆ. ಕೆಲಸ ಅಥವಾ ಬೇರೆ ಯಾವುದೋ ಕಾರಣಕ್ಕೆ ನಿದ್ದೆಯನ್ನು ತ್ಯಾಗ ಮಾಡುವುದು ಮಾನವನ ಪ್ರಮುಖ ಲಕ್ಷಣ. ಬಿಡುವಿಲ್ಲದ ಜೀವನಶೈಲಿಯೇ ಇದಕ್ಕೆ ಕಾರಣ. ನಾಲ್ಕೈದು ಗಂಟೆಗಳ ಕಾಲ ನಿದ್ದೆ ಮಾಡುವುದರಿಂದಲೂ ನಾವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ನಾವು ಅಂದುಕೊಂಡರೂ, ದೇಹವು ಅದೇ ರೀತಿಯಲ್ಲಿ ಪ್ರತಿಕ್ರಿಯಿಸುವುದಿಲ್ಲ. ದೇಹಕ್ಕೆ ಕನಿಷ್ಠ ಏಳರಿಂದ ಎಂಟು ಗಂಟೆಗಳ ಅಡೆತಡೆಯಿಲ್ಲದ, ಗಾಢ ನಿದ್ರೆಯ ಅಗತ್ಯವಿದೆ. ಕಡಿಮೆ ನಿದ್ದೆಯನ್ನು ಮಾಡುವುದರಿಂದ ಉಂಟಾಗುವ ಸಾಮಾನ್ಯ ರೋಗಲಕ್ಷಣಗಳು ಮೆದುಳಿಗೆ ಮಂಕು ಬಡಿದಂತಾಗುವುದು (ಗೊಂದಲ, ಮರೆವು ಮತ್ತು ಗಮನ ಹಾಗೂ ಮಾನಸಿಕ ಸ್ಪಷ್ಟತೆಯ ಕೊರತೆ), ದೌರ್ಬಲ್ಯ, ತಲೆನೋವು, ಕಡಿಮೆ ಮನಸ್ಥಿತಿ ಮತ್ತು ನೆನಪಿನ ಮೆಮೊರಿ ಸಮಸ್ಯೆಗಳು ಕಂಡುಬರುತ್ತವೆ. ಕೆಲವರು ಇವುಗಳು ವಯಸ್ಸಿನಿಂದಾಗುತ್ತವೆ ಎಂದುಕೊಳ್ಳುತ್ತಾರೆ. ಮೆದುಳಿನ ಆರೋಗ್ಯ ಮತ್ತು ನಿದ್ರೆಯ ನಡುವಿನ ಸಂಪರ್ಕವನ್ನು ಅರ್ಥಮಾಡಿಕೊಂಡರೆ, ಆಲ್ಝೈಮರ್ ಮತ್ತು ಪಾರ್ಕಿನ್ಸನ್ ಕಾಯಿಲೆಗಳನ್ನು ತಡೆಗಟ್ಟುವುದು ಅಥವಾ ನಿರ್ವಹಿಸುವುದು ಮತ್ತು ಅಕಾಲಿಕ ವಯಸ್ಸಾಗುವಿಕೆಯನ್ನು ತಡೆಯುವುದು ಎಷ್ಟು ಮುಖ್ಯ ಎಂದು ನೀವು ಅರ್ಥಮಾಡಿಕೊಳ್ಳುತ್ತೀರಿ. ದೀರ್ಘಕಾಲದ ನಿದ್ರಾಹೀನತೆ ಮತ್ತು ದುರ್ಬಲ ಮೆದುಳಿನ ಕ್ರಿಯೆಯ ನಡುವಿನ ಕೊಂಡಿಯನ್ನು ಹಲವಾರು ಸಂಶೋಧನೆಗಳು ತೋರಿಸಿವೆ. ಸ್ಟಕ್ ಆಗುವುದು, ಯೋಚಿಸಲೂ ಆಗದಂತಹ ಸ್ಥಿತಿಯನ್ನು ಪ್ರತಿಯೊಬ್ಬರೂ ಅನುಭವಿಸಿರುತ್ತಾರೆ. ಯೋಚಿಸಲು ಕಷ್ಟವಾಗುವುದು, ಕಾರ್ಯಗತಗೊಳಿಸುವಲ್ಲಿ ನಿಧಾನ, ನಾವೀನ್ಯತೆಯ ಕೊರತೆಯು ಕಳಪೆ ನಿದ್ರೆಯ ಕಾರಣದಿಂದಾಗಿ ಬರುತ್ತದೆ. ಅಸಮರ್ಪಕ ನಿದ್ದೆಯು ಒತ್ತಡ ನಿಭಾಯಿಸುವ ನಮ್ಮ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ನಾವು ಗಾಢ ನಿದ್ರೆಯಲ್ಲಿರುವಾಗ ಮೆದುಳು ತ್ಯಾಜ್ಯಗಳನ್ನು ಹೊರಹಾಕುತ್ತದೆ. ನಮ್ಮ ದೇಹದಲ್ಲಿನ ತ್ಯಾಜ್ಯವನ್ನು ಹೊರಹಾಕುವ ಅಂಗದಂತೆಯೇ ಮೆದುಳು ಕೂಡ, ಅತಿಯಾದ ಆಲೋಚನೆ, ಒತ್ತಡ ಮತ್ತು ಮಿತಿಮೀರಿದ ಮಾಹಿತಿಯಿಂದ ಉಂಟಾಗಿರುವ ಮೆಟಬಾಲಿಕ್ ತ್ಯಾಜ್ಯಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಮೆದುಳಿನಲ್ಲಿ ನಿರಂತರವಾಗಿ ಟಾಕ್ಸಿಕ್ ಉತ್ಪಾದನೆಯಾಗುತ್ತದೆ ಮತ್ತು ಈ ಮಾದರಿಗಳು ಮಿತಿಮೀರಿದ ಸಂದರ್ಭದಲ್ಲಿ ಮಾನಸಿಕ ಆಯಾಸ ಉಂಟಾಗುತ್ತದೆ. ನಾವು ಗಾಢ ನಿದ್ರೆಯಲ್ಲಿರುವಾಗ ನಮ್ಮ ಮೆದುಳು ಕುಗ್ಗುತ್ತದೆ. ಇದು ಸೆರೆಬ್ರೊಸ್ಪೈನಲ್ ದ್ರವವು ಮೆದುಳಿನ ನಿರ್ದಿಷ್ಟ ಭಾಗಗಳನ್ನು ಪ್ರವೇಶಿಸಲು ಜಾಗವನ್ನು ಸೃಷ್ಟಿಸುತ್ತದೆ ಮತ್ತು ಆಲ್ಝೈಮರ್ನ ಕಾಯಿಲೆಯಿರುವ ವ್ಯಕ್ತಿಗಳ ಮೆದುಳಿನಲ್ಲಿ ಕಂಡುಬರುವ ಬೀಟಾ-ಅಮಿಲಾಯ್ಡ್ ಪ್ಲೇಕ್‌ಗಳಂತಹ ತ್ಯಾಜ್ಯ ಮತ್ತು ಹೆಚ್ಚುವರಿ ಪ್ರೋಟೀನ್ ಕಣಗಳನ್ನು ತೆಗೆದುಹಾಕುತ್ತದೆ. ಹೆಚ್ಚಿನ ಬೀಟಾ-ಅಮಿಲಾಯ್ಡ್ ಪ್ಲೇಕ್ ರಚನೆ ಮತ್ತು ಶೇಖರಣೆಯಾದರೆ ನ್ಯೂರಾನ್‌ಗಳ ನಡುವಿನ ಸಂವಹನವನ್ನು ಅಡ್ಡಿಪಡಿಸುತ್ತದೆ. ಇದು ಮೆಮೊರಿ ನಷ್ಟ, ಮಾತಿನ ಮಂದಗತಿ, ನಿಧಾನ ಚಲನೆ ಮತ್ತು ಗೊಂದಲಕ್ಕೆ ಕಾರಣವಾಗುತ್ತದೆ. ನಿದ್ರಾಹೀನತೆಯು ನಿಮ್ಮ ಮೆದುಳಿನಲ್ಲಿರುವ ಬೂದು ಮತ್ತು ಬಿಳಿ ದ್ರವ್ಯವನ್ನು ಸಹ ನಾಶಪಡಿಸುತ್ತದೆ. ಇವು ಮೆದುಳಿನ ಆರೋಗ್ಯ, ಮೆಮೊರಿ ಮತ್ತು ಮಾಹಿತಿ ಸಂಸ್ಕರಣೆ, ನರಕೋಶಗಳ ನಡುವಿನ ಸಂವಹನ ಮತ್ತು ಸಂವೇದನಾ ಗ್ರಹಿಕೆಯ ಎರಡು ಪ್ರಮುಖ ಅಂಶಗಳಾಗಿವೆ. ಅರಿವಿನ ಕಾಯಿಲೆಗಳಾದ ಆಲ್ಝೈಮರ್ಸ್, ಪಾರ್ಕಿನ್ಸನ್ ಮತ್ತು ಬುದ್ಧಿಮಾಂದ್ಯತೆಯನ್ನು ಉರಿಯೂತದ ಪರಿಸ್ಥಿತಿಗಳು ಎಂದು ಕರೆಯಲಾಗುತ್ತದೆ. ದೀರ್ಘಕಾಲದ ನಿದ್ರೆಯ ಕೊರತೆಯು ಇವುಗಳನ್ನು ಹೆಚ್ಚಿಸಬಹುದು. ಉರಿಯೂತವನ್ನು ತಗ್ಗಿಸಲು ನಾವು ಕರ್ಕ್ಯುಮಿನ್ ಪೂರಕಗಳನ್ನು ನೀಡಬಹುದಾದರೂ, ಅದು ನಿದ್ರೆಗೆ ಬದಲಿಯಾಗಿರುವುದಿಲ್ಲ. ದುರದೃಷ್ಟವಶಾತ್, ಜನರು ಈ ಎಲ್ಲವನ್ನು ಮರೆತುಬಿಡುತ್ತಾರೆ ಮತ್ತು ಜೀವನದ ನಂತರದ ಹಂತಗಳಲ್ಲಿ ಮಾತ್ರ ತಮ್ಮ ನಿದ್ರೆಯ ಅವಶ್ಯಕತೆಗಳನ್ನು ನೋಡಿಕೊಳ್ಳಲು ಪ್ರಾರಂಭಿಸುತ್ತಾರೆ. ಆಲ್ಝೈಮರ್ ಮತ್ತು ಪಾರ್ಕಿನ್ಸನ್ ರಾತ್ರೋರಾತ್ರಿ ಸಂಭವಿಸುವುದಿಲ್ಲ. ಬದಲಿಗೆ ಇದು ನಿಧಾನವಾಗಿ ಪ್ರಾರಂಭವಾಗುವ ಪ್ರಕ್ರಿಯೆ. ನಿದ್ರೆಗೆ ಆದ್ಯತೆ ನೀಡಿದರೆ ಅದನ್ನು ತಡೆಯಬಹುದು ಅಥವಾ ಕನಿಷ್ಠ ಉತ್ತಮವಾಗಿ ನಿರ್ವಹಿಸಬಹುದು. ಇಂದು ನಿಮ್ಮ ಜೀವನಶೈಲಿ ಮತ್ತು ನಿದ್ರೆಯ ಗುಣಮಟ್ಟವು ನಾಳೆ ನಿಮ್ಮ ಅರಿವಿನ ಆರೋಗ್ಯದ ಗುಣಮಟ್ಟವನ್ನು ನಿರ್ಧರಿಸುತ್ತದೆ. ಆರೋಗ್ಯಕ್ಕೆ ಉತ್ತಮ ನಿದ್ದೆ ತುಂಬಾ ಮುಖ್ಯ; ಗಾಢ ನಿದ್ರೆಯಿಂದ ಸಿಗುವ ಪ್ರಯೋಜನಗಳೇನು?