ಬೆಂಗಳೂರು: ಮೂರೇ ತಿಂಗಳಲ್ಲಿ ತಂದೆಯಿಂದ ತರಬೇತಿ ಪಡೆದ ಯುವಕನಿಂದ ರಾಷ್ಟ್ರಮಟ್ಟದಲ್ಲಿ ಚಿನ್ನದ ಸಾಧನೆ!

ಕೇವಲ ಮೂರೇ ತಿಂಗಳಲ್ಲಿ ತಂದೆಯಿಂದ ತರಬೇತಿ ಪಡೆದ ಬೆಂಗಳೂರಿನ ಯುವಕನೊಬ್ಬ ರಾಷ್ಟ್ರೀಯ ಮಟ್ಟದ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದು ವಿಶೇಷ ಸಾಧನೆ ಮಾಡಿದ್ದಾನೆ. ಬೆಂಗಳೂರು: ಕೇವಲ ಮೂರೇ ತಿಂಗಳಲ್ಲಿ ತಂದೆಯಿಂದ ತರಬೇತಿ ಪಡೆದ ಬೆಂಗಳೂರಿನ ಯುವಕನೊಬ್ಬ ರಾಷ್ಟ್ರೀಯ ಮಟ್ಟದ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದು ವಿಶೇಷ ಸಾಧನೆ ಮಾಡಿದ್ದಾನೆ.
ಇದೀಗ, ಭಾರತೀಯ ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ ತಿರುವನಂತಪುರದಲ್ಲಿ ನವೆಂಬರ್ ಮೊದಲ ವಾರದಿಂದ ಆಯೋಜಿಸಿರುವ ಅಖಿಲ ಭಾರತ ಶೂಟಿಂಗ್ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಲಿರುವ ಇಂಜಿನಿಯರಿಂಗ್ ಪದವೀಧರ ಮೊಹಮ್ಮದ್ ರಾಯನ್ ಬೇಗ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಈ ತಿಂಗಳ ಎರಡನೇ ವಾರದಲ್ಲಿ ಪಶ್ಚಿಮ ಬಂಗಾಳದ ಅಸನ್ಸೋಲ್ನಲ್ಲಿ ನಡೆದ 31ನೇ ಅಖಿಲ ಭಾರತ ಜಿವಿ ಮಾವಲಂಕರ್ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ (ಎ-01) ಸ್ಮಾಲ್ ಬೋರ್ ಫ್ರೀ ರೈಫಲ್ ಪ್ರೋನ್ (ಎನ್ಆರ್) ಚಾಂಪಿಯನ್ಶಿಪ್ ನ 50 ಎಂ ಪುರುಷರ ವೈಯಕ್ತಿಕ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಬೇಗ್ ಈ ರಾಷ್ಟ್ರೀಯ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ.
ಇದನ್ನು ಓದಿ: ಫ್ರೆಂಚ್ ಓಪನ್: ಭಾರತದ ಸಾತ್ವಿಕ್ -ಚಿರಾಗ್ ಶೆಟ್ಟಿ ಜೋಡಿಗೆ ಡಬಲ್ಸ್ ಪ್ರಶಸ್ತಿ
ಕುತೂಹಲಕಾರಿ ಸಂಗತಿಯೆಂದರೆ, ನಗರದ ಫ್ರೇಜರ್ ಟೌನ್ನಲ್ಲಿ ನೆಲೆಸಿರುವ ಬೇಗ್, ಪಶ್ಚಿಮ ಬಂಗಾಳದಲ್ಲಿ ನಡೆದ ಸ್ಪರ್ಧೆಯಲ್ಲಿ ಸಾಧನೆ ಮಾಡಲು ಕೃಷಿ ಮತ್ತು ವ್ಯಾಪಾರದಲ್ಲಿ ತೊಡಗಿರುವ ತಮ್ಮ ತಂದೆ ಎಂಎನ್ ಬೇಗ್ ಅವರಿಂದ ಸುಮಾರು 3 ತಿಂಗಳ ತರಬೇತಿ ಪಡೆದಿದ್ದಾರೆ. ಅವರ ತಾಯಿ ಶೆಹನಾಜ್ ಬೇಗ್ ಗೃಹಿಣಿಯಾಗಿದ್ದಾರೆ.
"ನನ್ನ ತಂದೆ ಕಳೆದ 7-8 ವರ್ಷಗಳಿಂದ ಶೂಟಿಂಗ್ ಮಾಡುತ್ತಿದ್ದಾರೆ. 300 ಮೀಟರ್ ದೊಡ್ಡ ಬೋರ್ ಸ್ಪರ್ಧೆಯಲ್ಲಿ ಅವರು ಐದು ಬಾರಿ ಶಾಟ್ ಪ್ರಮಾಣಪತ್ರ ಪಡೆದಿದ್ದಾರೆ. ನಾನು ನನ್ನ ಎಂಜಿನಿಯರಿಂಗ್ ಮುಗಿದ ತಕ್ಷಣ ಕರ್ನಾಟಕ ಸ್ಟೇಟ್ ರೈಫಲ್ ಅಸೋಸಿಯೇಶನ್ ರೇಂಜ್ನಲ್ಲಿ ತರಬೇತಿ ಪಡೆಯುತ್ತಿದ್ದೇನೆ" ಎಂದು ಮೆಕ್ಯಾನಿಕಲ್ ಇಂಜಿನಿಯರಿಂಗ್ನಲ್ಲಿ 8ನೇ ರ್ಯಾಂಕ್ ಬಂದಿರವ ಬೇಗ್ ಹೇಳಿದ್ದಾರೆ.
“ಇಂಜಿನಿಯರಿಂಗ್ನಲ್ಲಿ ಉತ್ತಮ ರ್ಯಾಂಕ್ ಪಡೆದ ನಂತರ ಶೂಟಿಂಗ್ ನಲ್ಲಿ ಮಿಂಚುವುದು ನನ್ನ ಮುಂದಿನ ಗುರಿಯಗಿತ್ತು. ಗುರಿ ಇಟ್ಟುಕೊಂಡು ಅಖಿಲ ಭಾರತ ಜಿ.ವಿ.ಮಾವಲಂಕರ್ ಶೂಟಿಂಗ್ ಚಾಂಪಿಯನ್ ಷಿಪ್ ನಲ್ಲಿ ಚಿನ್ನದ ಪದಕ ಪಡೆದೆ. ನನ್ನ ತಂದೆಯಿಂದ ತರಬೇತಿ ಪಡೆದಿದ್ದೇನೆ. ವೃತ್ತಿಪರ ಕೋಚಿಂಗ್ ಪಡೆದಿಲ್ಲ" ಎಂದು ಬೇಗ್ ಎಕ್ಸ್ಪ್ರೆಸ್ಗೆ ತಿಳಿಸಿದ್ದಾರೆ.