ಅಲ್ಲು ಅರ್ಜುನ್‌ಗೆ ತಗುಲಿದ ಕೊರೊನಾ ಸೋಂಕು! ಆರೋಗ್ಯದ ಬಗ್ಗೆ 'ಸ್ಟೈಲಿಶ್‌ ಸ್ಟಾರ್' ಹೇಳಿದ್ದೇನು?

ಕೆಲ ದಿನಗಳ ಹಿಂದಷ್ಟೇ ತೆಲುಗಿನ ಕಲಾವಿದರಾದ ಪವನ್‌ ಕಲ್ಯಾಣ್, ಪೂಜಾ ಹೆಗ್ಡೆ ಕೊರೊನಾ ಪಾಸಿಟಿವ್ ಆಗಿದ್ದರು. ಇದೀಗ ಈ ಮಹಾಮಾರಿ ಸೋಂಕು ಖ್ಯಾತ ನಟ ಅಲ್ಲು ಅರ್ಜುನ್ ಅವರಿಗೂ ತಗುಲಿದೆ. ಅವರು ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಅಲ್ಲು ಅರ್ಜುನ್‌ಗೆ ತಗುಲಿದ ಕೊರೊನಾ ಸೋಂಕು! ಆರೋಗ್ಯದ ಬಗ್ಗೆ 'ಸ್ಟೈಲಿಶ್‌ ಸ್ಟಾರ್' ಹೇಳಿದ್ದೇನು?
Linkup
ದೇಶಾದ್ಯಂತ ಕೊರೊನಾ ಎರಡನೇ ಅಲೆಯ ಅಟ್ಟಹಾಸ ಮುಂದುವರಿದಿದೆ. ಜತೆಗೆ ಕೊರೊನಾದಿಂದ ಉಂಟಾಗುತ್ತಿರುವ ಸಾವಿನ ಸಂಖ್ಯೆಯಲ್ಲೂ ತೀವ್ರ ಏರಿಕೆಯಾಗುತ್ತಿದೆ. ಇದೀಗ ನಟ ಅವರಿಗೂ ಕೊರೊನಾ ಸೋಂಕು ತಗುಲಿದೆ. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಬುಧವಾರ (ಏ.28) ಈ ಬಗ್ಗೆ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ. ಅಲ್ಲು ಅರ್ಜುನ್‌ಗೆ ಕೊರೊನಾ ಪಾಸಿಟಿಸ್ 'ಎಲ್ಲರಿಗೂ ನಮಸ್ಕಾರ. ನನಗೆ ಕೊರೊನಾ ಪಾಸಿಟಿವ್ ಆಗಿದೆ. ನಾನು ಸ್ವಯಂ ಪ್ರೇರಿತನಾಗಿ ಐಸೋಲೇಟ್ ಆಗಿದ್ದೇನೆ. ಜೊತೆಗೆ ಎಲ್ಲ ರೀತಿಯ ನಿಯಮಗಳನ್ನು ಪಾಲನೆ ಮಾಡುತ್ತಿದ್ದೇನೆ. ಈಚೆಗೆ ನನ್ನ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಶೀಘ್ರವೇ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿಕೊಳ್ಳುತ್ತೇನೆ. ದಯವಿಟ್ಟು ನನ್ನ ಪ್ರೀತಿ ಪಾತ್ರರು, ಆತ್ಮೀಯರು ಯಾವುದೇ ರೀತಿಯ ಆತಂಕಪಡಬೇಡಿ.. ನಾನು ಆರಾಮಾಗಿಯೇ ಇದ್ದೇನೆ. ಎಲ್ಲರೂ ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ..' ಎಂದಿದ್ದಾರೆ ಅಲ್ಲು ಅರ್ಜುನ್. ಶೀಘ್ರ ಚೇತರಿಕೆಗೆ ಫ್ಯಾನ್ಸ್ ಪ್ರಾರ್ಥನೆಅಲ್ಲು ಅರ್ಜುನ್‌ಗೆ ಕೊರೊನಾ ಪಾಸಿಟಿವ್‌ ಆಗಿದೆ ಎಂದು ತಿಳಿಯುತ್ತಲೇ, ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹಾರೈಸುತ್ತಿದ್ದಾರೆ. #Annaya #Anna #Get Well Soon Anna #GetWellSoonAlluArjun ಹ್ಯಾಷ್‌ ಟ್ಯಾಗ್ ಬಳಸಿ ಟ್ವೀಟ್ ಮಾಡುತ್ತಿದ್ದಾರೆ. ಸದ್ಯ ಟ್ವಿಟರ್ ಇಂಡಿಯಾದಲ್ಲಿ ಇದೇ ಟಾಪ್‌ ಟ್ರೆಂಡಿಂಗ್ ಟಾಪಿಕ್ ಆಗಿದೆ. ಇದರ ಜೊತೆಗೆ ಚಿತ್ರರಂಗದ ಗಣ್ಯರು, ಅಲ್ಲು ಅರ್ಜುನ್ ಸ್ನೇಹಿತರು ಕೂಡ ಶೀಘ್ರ ಗುಣವಾಗುವಂತೆ ಹಾರೈಸುತ್ತಿದ್ದಾರೆ. ಪೂಜಾ, ಪವನ್‌ಗೂ ಕೊರೊನಾ! ಇನ್ನು, ಮೆಗಾ ಫ್ಯಾಮಿಲಿಯ ರಾಮ್ ಚರಣ್, ವರುಣ್ ತೇಜ್, ನಾಗ ಬಾಬು ಅವರಿಗೂ ತಗುಲಿತ್ತು. ಅವರೆಲ್ಲ ಗುಣಮುಖರಾಗಿದ್ದಾರೆ. ಸದ್ಯ ಪವನ್‌ ಕಲ್ಯಾಣ್ ಅವರಿಗೆ ಕೋವಿಡ್ ಪಾಸಿಟಿವ್ ಆಗಿದ್ದು, ಚಿಕಿತ್ಸೆ ಮುಂದುವರಿದಿದೆ. ಇನ್ನು, ಅಲ್ಲು ಅರ್ಜುನ್ ಜೊತೆಗೆ 'ಅಲಾ ವೈಕುಂಠಪುರಮುಲೋ', 'ದುವ್ವಡ ಜಗನ್ನಾಥಂ' ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದ ನಟಿ ಪೂಜಾ ಹೆಗ್ಡೆಗೂ ಕೊರೊನಾ ಪಾಸಿಟಿವ್ ಆಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಅಲ್ಲು ಅರ್ಜುನ್ '' ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದರು. ಕೊರೊನಾದಿಂದಾಗಿ ಶೂಟಿಂಗ್ ಸ್ಥಗಿಗೊಂಡಿದೆ.