Vijay Prakash: ಬದುಕಿಗೆ ಸ್ಫೂರ್ತಿ ತುಂಬುವ 'ಆರಾಮ್ಸೆ' ಆಲ್ಬಂಗೆ ವಿಜಯ್ ಪ್ರಕಾಶ್ ಗಾಯನ

ಕನ್ನಡ ಚಿತ್ರರಂಗದ ಬ್ಯುಸಿ ಗಾಯಕ ಎನಿಸಿಕೊಂಡಿರುವ ವಿಜಯ್ ಪ್ರಕಾಶ್, ಸಾಮಾನ್ಯವಾಗಿ ಸಿನಿಮಾ ಗೀತೆಗಳನ್ನೇ ಹೆಚ್ಚಾಗಿ ಹಾಡುತ್ತಾರೆ. ಆದರೆ, ಇದೀಗ ಅವರೊಂದು ವಿಡಿಯೋ ಆಲ್ಬಂ ಸಾಂಗ್‌ಗೆ ಧ್ವನಿಯಾಗಿದ್ದಾರೆ.

Vijay Prakash: ಬದುಕಿಗೆ ಸ್ಫೂರ್ತಿ ತುಂಬುವ 'ಆರಾಮ್ಸೆ' ಆಲ್ಬಂಗೆ ವಿಜಯ್ ಪ್ರಕಾಶ್ ಗಾಯನ
Linkup
ಸ್ಯಾಂಡಲ್‌ವುಡ್‌ ಸೇರಿದಂತೆ ಬಹುಭಾಷೆಯಲ್ಲಿ ಗಾಯಕರಾಗಿ ಗುರುತಿಸಿಕೊಂಡಿರುವ ವಿಜಯ ಪ್ರಕಾಶ್, ಸಾಮಾನ್ಯವಾಗಿ ಆಲ್ಬಂ ಹಾಡುಗಳಲ್ಲಿ ಹಾಡುವುದು ತುಂಬ ಕಡಿಮೆ. ಆದರ, ಇದೀಗ ಅವರೊಂದು ವಿಡಿಯೋ ಆಲ್ಬಂಗೆ ಧ್ವನಿ ನೀಡಿದ್ದಾರೆ. ಆ ಹಾಡಿನ ಹೆಸರೇ 'ಆರಾಮ್ಸೆ'. ಅವಸರ ಮಾಡದೇ, ಎಲ್ಲವನ್ನೂ ತಾಳ್ಮೆಯಿಂದ ಪ್ರಯತ್ನಿಸು ಎಂಬುದಕ್ಕೆ ನಾವು ಕೆಲಸ ಮಾಡು, ಆರಾಮ್ಸೆ ಇರು ಎಂದೆಲ್ಲ ಹೇಳುತ್ತೇವೆ. ಸೋಲನ್ನು ಎದುರಿಸಬೇಕು, ಯಾವುದಕ್ಕೂ ಕುಗ್ಗಬಾರದು ಎಂಬ ಸಂದೇಶ ಇರುವ ಈ ಹಾಡಿಗೆ ಆರಾಮ್ಸೆ ಎಂಬುದನ್ನೇ ಶೀರ್ಷಿಕೆಯನ್ನಾಗಿಸಿ, ಈ ಹಾಡನ್ನು ಮಾಡಿದ್ದಾರೆ ಅಭಿಷೇಕ್ ಮಠದ್. ಕುಗ್ಗದೆ ಮುನ್ನಡೆಯಬೇಕು ಎಂಬ ಆಲೋಚನೆ 'ಆರಾಮ್ಸೆ ಹಾಡಿನ ಕನಸುಗಾರ ಅಂತಲೇ ನಾನು ಅಭಿಷೇಕ್‌ರನ್ನು ಕರೆಯುತ್ತೇನೆ. ಈ ಹಾಡನ್ನು ನಾನು ಹಾಡಿದ್ದೇನೆ. ಅವರು ನಟ, ನೃತ್ಯವನ್ನು ಚೆನ್ನಾಗಿ ಮಾಡುತ್ತಾರೆ. ಅವರಿಗೆ ತಮ್ಮ ಜೀವನದ ಹಾದಿಯಲ್ಲಿ ಕಂಡ ಸೋಲುಗಳು, ಅದರಿಂದ ಕುಗ್ಗದೆ ಮುನ್ನಡೆಯಬೇಕು ಎಂಬ ಆಲೋಚನೆ ಅವರದ್ದು. ಅದನ್ನು ಈ ಹಾಡಿನಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ. ನಾನು ಹಾಡಿರುವ ಈ ಹಾಡನ್ನು ತುಂಬ ಜನ ಇಷ್ಟಪಟ್ಟಿದ್ದಾರೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ' ಎಂದು ಹಾರೈಸಿದ್ದಾರೆ. 'ಜೀವನದಲ್ಲಿ ಎಷ್ಟೋ ತಿರಸ್ಕಾರಗಳು ಬರುತ್ತವೆ. ಅಂದಮಾತ್ರಕ್ಕೆ ಬದುಕನ್ನು ಕೈಬಿಡಬಾರದು. ಇಲ್ಲಿಯೇ ಮುಂದುವರಿಯಬೇಕು. ಈ ಅಂಶವು ಗಾಯಕ ವಿಜಯ್ ಪ್ರಕಾಶ್ ಅವರಿಗೆ ಇಷ್ಟವಾಯ್ತು. ಅವರು ಖುಷಿಯಿಂದ ಹಾಡಿದರು. ನಂತರ ಈ ಹಾಡನ್ನು ಚಿತ್ರೀಕರಣ ಮಾಡಿದ ರೀತಿಗೆ ಅವರು ಖುಷಿ ವ್ಯಕ್ತಪಡಿಸಿದರು. ನಮಗೆ ತುಂಬ ಬೆಂಬಲ ನೀಡಿದರು' ಎನ್ನುತ್ತಾರೆ ಅಭಿಷೇಕ ಮಠದ್. 'ಇದು ಒಬ್ಬ ಕಲಾವಿದನ ಸ್ಫೂರ್ತಿದಾಯಕ ಪ್ರಯಾಣದ ಬಗ್ಗೆ ಇರುವಂತಹ ಹಾಡಾಗಿದೆ. ಇದಕ್ಕೆ ನಾವು 'ಆರಾಮ್ಸೆ' ಎಂದು ಟೈಟಲ್ ನೀಡಿದ್ದೇವೆ. ಕಲಾವಿದನೊಬ್ಬನ ವೃತ್ತಿ ಜೀವನದ ಎಲ್ಲಾ ಅಡೆತಡೆಗಳು ಮತ್ತು ತೊಂದರೆಗಳನ್ನು ಈ ಹಾಡು ವಿವರಿಸುತ್ತದೆ. ನಟನೆಯ ವೃತ್ತಿ ಜೀವನದಲ್ಲಿ ಹಲವಾರು ನಿರಾಕರಣೆಗಳು ಮತ್ತು ನಿರಾಶೆಗಳ ನಂತರ ಅವರು ಹತಾಶೆಯಿಂದ ತಮ್ಮ ಜೀವನವನ್ನು ತ್ಯಜಿಸಲು ನಿರ್ಧರಿಸುತ್ತಾರೆ. ಆದರೆ, ಮತ್ತೆ ಅವನು ತನ್ನ ಜೀವನದಲ್ಲಿ ಗೆಲ್ಲುವುದಕ್ಕೆ ಮುಂದುವರಿಯುತ್ತಾನೆ. ಅಂದುಕೊಂಡಿದ್ದನ್ನು ಸಾಧಿಸುತ್ತಾನೆ. ಆ ಹೋರಾಟ ಮತ್ತು ನೋವುಗಳನ್ನು ವೀಡಿಯೊದಲ್ಲಿ ತೋರಿಸಲಾಗಿದೆ' ಎನ್ನುತ್ತಾರೆ ಅವರು. ಈ ಹಾಡಿಗೆ ರಿಷಿಕೇಶ್ ಛಾಯಾಗ್ರಹಣ ಮಾಡಿದ್ದಾರೆ. ಹಾಡಿನ ಕಾನ್ಸೆಪ್ಟ್, ನೃತ್ಯ ನಿರ್ದೇಶನ, ನಿರ್ದೇಶನ, ನಿರ್ಮಾಣವನ್ನು ಮಾಡಿರುವ ಅಭಿಷೇಕ್ ಮಠದ್ ಅವರೇ ಹಾಡಿನಲ್ಲೂ ಕಾಣಿಸಿಕೊಂಡಿದ್ದಾರೆ. ಅಭಿಷೇಕ್ ಈ ಹಿಂದೆ ದಿಗಂತ್ ಜೊತೆಗೆ ಒಂದು ಮ್ಯೂಸಿಕ್ ವಿಡಿಯೋ ಮಾಡಿದ್ದರು. ಅದಕ್ಕೆ ಅವರೇ ನೃತ್ಯ ನಿರ್ದೇಶನ ಮಾಡಿದ್ದರು. ನಂತರ ಚಂದನ್ ಶೆಟ್ಟಿ ಜೊತೆಗೆ ಟಿಕಿಲಾ, ಬಡಪಾಯಿ ಕುಡುಕ ಸಾಂಗ್‌ಗಳನ್ನು ಮಾಡಿದ್ದಾರೆ. ಈಚೆಗೆ ಅದಿತಿ ಪ್ರಭುದೇವ ಅವರೊಂದಿಗೆ 'ಪರ್ಫೆಕ್ಟ್ ಗರ್ಲ್' ಎಂಬ ಸಾಂಗ್ ಮಾಡಿದ್ದರು ಅಭಿಷೇಕ್‌. ಸದ್ಯ ಬಳೆಪೇಟೆ ಮತ್ತು ಸಮುದ್ರಂ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. 'ಮುಂದಿನ ದಿನಗಳಲ್ಲಿ ಉತ್ತಮ ಕಲಾವಿದನಾಗಿ ಗುರುತಿಸಿಕೊಳ್ಳಬೇಕು ಎಂಬುದು ನನ್ನ ಗುರಿ' ಎನ್ನುತ್ತಾರೆ ಅಭಿಷೇಕ್.