Thalapathy 66: ಹಿಟ್ ನಿರ್ದೇಶಕ ವಂಶಿ ಪೈಡಿಪಲ್ಲಿ ಜೊತೆ ಕೈ ಜೋಡಿಸಿದ ‘ದಳಪತಿ’ ವಿಜಯ್

ಟಾಲಿವುಡ್‌ನ ಹಿಟ್ ಚಿತ್ರಗಳ ನಿರ್ದೇಶಕ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವಂಶಿ ಪೈಡಿಪಲ್ಲಿ ಜೊತೆಗೆ ‘ಇಳಯದಳಪತಿ’ ವಿಜಯ್ ಕೈ ಜೋಡಿಸಿದ್ದಾರೆ. ವಂಶಿ ಪೈಡಿಪಲ್ಲಿ ಮತ್ತು ವಿಜಯ್ ಕಾಂಬಿನೇಶನ್‌ನಲ್ಲಿ ಮೂಡಿಬರುವ ಚಿತ್ರವನ್ನು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಅಡಿಯಲ್ಲಿ ದಿಲ್ ರಾಜು ಮತ್ತು ಶಿರೀಶ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.

Thalapathy 66: ಹಿಟ್ ನಿರ್ದೇಶಕ ವಂಶಿ ಪೈಡಿಪಲ್ಲಿ ಜೊತೆ ಕೈ ಜೋಡಿಸಿದ ‘ದಳಪತಿ’ ವಿಜಯ್
Linkup
ಕಾಲಿವುಡ್‌ನ ಟಾಪ್ ನಟರ ಪೈಕಿ ‘ದಳಪತಿ’ ಕೂಡ ಒಬ್ಬರು. ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಚಿತ್ರಗಳನ್ನು ನೀಡುತ್ತಾ ಬಂದಿರುವ ‘ಇಳಯದಳಪತಿ’ ವಿಜಯ್ ಸದ್ಯ ‘ಬೀಸ್ಟ್’ ಚಿತ್ರದಲ್ಲಿ ಬಿಜಿಯಾಗಿದ್ದಾರೆ. ‘ಬೀಸ್ಟ್’ ಸಿನಿಮಾದ ಚಿತ್ರೀಕರಣ ಇನ್ನೂ ನಡೆಯುತ್ತಿದೆ. ಹೀಗಿರುವಾಗಲೇ ಹೊಸ ಚಿತ್ರಕ್ಕೆ ವಿಜಯ್ ಹಸಿರು ನಿಶಾನೆ ತೋರಿಸಿದ್ದಾರೆ. ಟಾಲಿವುಡ್‌ನ ಹಿಟ್ ಚಿತ್ರಗಳ ನಿರ್ದೇಶಕ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಜೊತೆಗೆ ‘ಇಳಯದಳಪತಿ’ ವಿಜಯ್ ಕೈ ಜೋಡಿಸಿದ್ದಾರೆ. ವಂಶಿ ಪೈಡಿಪಲ್ಲಿ ಮತ್ತು ವಿಜಯ್ ಕಾಂಬಿನೇಶನ್‌ನಲ್ಲಿ ಮೂಡಿಬರುವ ಚಿತ್ರವನ್ನು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಅಡಿಯಲ್ಲಿ ಮತ್ತು ಶಿರೀಶ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ವಂಶಿ ಪೈಡಿಪಲ್ಲಿ ಮತ್ತು ವಿಜಯ್ ಮೊದಲ ಬಾರಿಗೆ ಒಂದಾಗುತ್ತಿರುವ ಈ ಚಿತ್ರಕ್ಕೆ ಶೀರ್ಷಿಕೆ ಇನ್ನೂ ಫೈನಲೈಸ್ ಆಗಿಲ್ಲ. ಆದರೆ, ಇದು ವಿಜಯ್ ಅಭಿನಯದ 66ನೇ ಚಿತ್ರವಾಗಿರುವ ಕಾರಣ Thalapathy 66 ಎಂದು ಕರೆಯಲಾಗುತ್ತಿದೆ. ‘ದಳಪತಿ 66’ ಚಿತ್ರದ ಬಗ್ಗೆ ಇಂದು ನಿರ್ಮಾಣ ಸಂಸ್ಥೆ ಅಧಿಕೃತ ಘೋಷಣೆ ಮಾಡಿದೆ. ‘’ಈ ಸುದ್ದಿಯನ್ನು ಅಧಿಕೃತ ಪಡಿಸಲು ನಾವು ಇಷ್ಟು ದಿನ ಕಾಯುತ್ತಿದ್ವಿ. ಇಂದು ನಮಗೆ ಹೆಮ್ಮೆ ಆಗುತ್ತಿದೆ. ನಟ ವಿಜಯ್ ಮತ್ತು ನಿರ್ದೇಶಕ ವಂಶಿ ಪೈಡಿಪಲ್ಲಿ ಜೊತೆಗೆ ‘ದಳಪತಿ 66’ ಚಿತ್ರವನ್ನು ನಿರ್ಮಾಣ ಮಾಡುತ್ತಿರುವ ಸುದ್ದಿಯನ್ನು ಹಂಚಿಕೊಳ್ಳಲು ನಮಗೆ ಸಂತೋಷವಾಗುತ್ತಿದೆ’’ ಎಂದು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಟ್ವೀಟ್ ಮಾಡಿದೆ. ನಟ ವಿಜಯ್‌ಗೆ ನಿರ್ದೇಶಕ ವಂಶಿ ಪೈಡಿಪಲ್ಲಿ ಆಕ್ಷನ್ ಕಟ್ ಹೇಳುತ್ತಿರುವ ಸುದ್ದಿ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆ. ವಿಜಯ್ ಮತ್ತು ವಂಶಿ ಪೈಡಿಪಲ್ಲಿ ಕಾಂಬಿನೇಶನ್‌ನಲ್ಲಿ ಮೂಡಿಬರುವ ಚಿತ್ರಕ್ಕೆ ಈಗಾಗಲೇ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಆಗಿದೆ. ಸದ್ಯಕ್ಕೆ ‘ಬೀಸ್ಟ್’ ಚಿತ್ರದ ಶೂಟಿಂಗ್‌ನಲ್ಲಿ ಬಿಜಿಯಾಗಿರುವ ವಿಜಯ್, ಅದು ಕಂಪ್ಲೀಟ್ ಆದ ಬಳಿಕ ‘ದಳಪತಿ 66’ ಚಿತ್ರಕ್ಕೆ ಚಾಲನೆ ನೀಡಲಿದ್ದಾರೆ. ‘ದಳಪತಿ 66’ ಚಿತ್ರದ ತಾಂತ್ರಿಕ ವರ್ಗ ಮತ್ತು ತಾರಾಬಳಗದ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರಾ ವಿಜಯ್? 'ದಳಪತಿ 66' ಚಿತ್ರ ತಮಿಳು ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಸಿದ್ಧವಾಗಲಿದೆ. ಆ ಮೂಲಕ ಟಾಲಿವುಡ್‌ಗೂ ವಿಜಯ್ ಪದಾರ್ಪಣೆ ಮಾಡಲಿದ್ದಾರೆ. ಬಹುಕೋಟಿ ಬಜೆಟ್‌ನಲ್ಲಿ ತಯಾರಾಗುವ ಈ ಚಿತ್ರಕ್ಕಾಗಿ ನಟ ವಿಜಯ್‌ಗೆ ಬರೋಬ್ಬರಿ 120 ಕೋಟಿ ರೂಪಾಯಿ ಸಂಭಾವನೆ ನೀಡಲಾಗುತ್ತಿದೆ ಎಂಬ ಮಾತುಗಳು ಈ ಹಿಂದೆ ಕೇಳಿಬಂದಿತ್ತು. ಒಂದು ವೇಳೆ ಅದು ನಿಜವೇ ಆಗಿದ್ದರೆ, ದಕ್ಷಿಣ ಭಾರತ ಚಿತ್ರರಂಗದ ಇತಿಹಾಸದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎನಿಸಿಕೊಳ್ಳಲಿದ್ದಾರೆ ನಟ ವಿಜಯ್! 'ಬೀಸ್ಟ್' ಸದ್ಯಕ್ಕೆ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ 'ಬೀಸ್ಟ್' ಚಿತ್ರದ ಚಿತ್ರೀಕರಣದಲ್ಲಿ ವಿಜಯ್ ತೊಡಗಿದ್ದಾರೆ. 'ಬೀಸ್ಟ್' ಚಿತ್ರದಲ್ಲಿ ವಿಜಯ್ ಜೊತೆಗೆ ಪೂಜಾ ಹೆಗ್ಡೆ ನಾಯಕಿಯಾಗಿದ್ದಾರೆ. ಚಿತ್ರಕ್ಕೆ ಅನಿರುದ್ಧ್ ರವಿಚಂದ್ರರ್ ಸಂಗೀತ ನೀಡುತ್ತಿದ್ದಾರೆ.