ಮುಂಬೈನಲ್ಲಿ ಸಮುದ್ರಕ್ಕೆ ಹೊಂದಿಕೊಂಡಿರುವ ಬಂಗಲೆ ಖರೀದಿಸಿದ ನಟ ರಾಮ್‌ ಚರಣ್!

'ಮೆಗಾಸ್ಟಾರ್' ಚಿರಂಜೀವಿ ಪುತ್ರ ರಾಮ್ ಚರಣ್ ಅವರು ಸಮುದ್ರಕ್ಕೆ ಹೊಂದಿಕೊಂಡಿರುವ ಬಂಗಲೆಯನ್ನು ಖರೀದಿ ಮಾಡಿದ್ದಾರೆ. ಹೈದರಾಬಾದ್‌ನಲ್ಲಿ ನೆಲೆಸುವ ಅವರು ಯಾಕೆ ಮುಂಬೈನಲ್ಲಿ ಮನೆ ಖರೀದಿ ಮಾಡಿದರು? ಕಾರಣ ಇಲ್ಲಿದೆ. ಪೂರ್ತಿ ಲೇಖನ ಓದಿ

ಮುಂಬೈನಲ್ಲಿ ಸಮುದ್ರಕ್ಕೆ ಹೊಂದಿಕೊಂಡಿರುವ ಬಂಗಲೆ ಖರೀದಿಸಿದ ನಟ ರಾಮ್‌ ಚರಣ್!
Linkup
'ಮೆಗಾಸ್ಟಾರ್' ಚಿರಂಜೀವಿ ಪುತ್ರ ರಾಮ್ ಚರಣ್ ಅವರು ಮುಂಬೈನಲ್ಲಿ ಬಂಗಲೆ ಖರೀದಿ ಮಾಡಿದ್ದಾರೆ, ಮುಂಬೈನ ಶ್ರೀಮಂತ ನಗರಗಳಲ್ಲಿ ಒಂದಾದ ಖಾರ್ ಪ್ರದೇಶದಲ್ಲಿ ರಾಮ್ ಚರಣ್ ಮನೆ ಖರೀದಿ ಮಾಡಿರುವುದು ಹೆಗ್ಗಳಿಕೆಯ ವಿಷಯ. ಆ ಬಂಗಲೆಯಿಂದ ನಿಂತು ನೋಡಿದರೆ ಸಮುದ್ರದ ದೃಶ್ಯ ಕಾಣುವುದಂತೆ. ಮುಂಬೈನಲ್ಲಿ ಮನೆ ಖರೀದಿಸಿದ್ದೇಕೆ? ರಾಮ್ ಚರಣ್ ಪತ್ನಿ ಉಪಾಸನಾ ಅವರು ಈಗಾಗಲೇ ಗೃಹ ಪ್ರವೇಶದ ಕಾರ್ಯಕ್ರಮ ಈಡೇರಿಸಿದ್ದಾರೆ. ತೆಲುಗು ಜೊತೆಗೆ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿರುವ ರಾಮ್‌ ಚರಣ್ ಬಾಲಿವುಡ್‌ನ ನಿರ್ಮಾಪಕರನ್ನು ಭೇಟಿ ಮಾಡಲು ಹೆಚ್ಚು ಬಾರಿ ಮುಂಬೈನಲ್ಲಿ ನೆಲೆಸಬೇಕಾಗಿ ಬರುವುದು. ಆದರೆ ಹೋಟೆಲ್‌ನಲ್ಲಿ ಇರೋದು ಇಷ್ಟವಿಲ್ಲದ ಕಾರಣ ರಾಮ್ ಚರಣ್ ಮನೆ ಖರೀದಿ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ರಾಮ್ ಚರಣ್ ಸಿನಿಮಾಗಳ ಕಥೆಯೇನು? ನಿರ್ಮಾಪಕರನ್ನು ಭೇಟಿಯಾಗಲು ಮುಂಬೈಗೆ ಬಂದಾಗ ತಮ್ಮದೇ ಆದ ಸ್ವಂತ ಸ್ಥಳ ಇರಬೇಕು ಎನ್ನೋದು 'ಮಗಧಿರ' ನಟನ ಆಸೆಯಾಗಿತ್ತು. ಹೀಗಾಗಿ ಅವರ ಅಭಿರುಚಿಗೆ ತಕ್ಕಂತೆ ಸಮುದ್ರಕ್ಕೆ ಹೊಂದಿಕೊಂಡಿರುವ ಬಂಗಲೆಯನ್ನು ಖರೀದಿ ಮಾಡಿದ್ದಾರೆ. ಎಸ್ ರಾಜಮೌಳಿ ನಿರ್ದೇಶನದ 'ಆರ್‌ಆರ್‌ಆರ್‌' ಸಿನಿಮಾದಲ್ಲಿ ರಾಮ್ ಚರಣ್ ಕೂಡ ನಟಿಸುತ್ತಿದ್ದಾರೆ. ನಿರ್ದೇಶಕ ಶಂಕರ್ ಜೊತೆಗೆ ರಾಮ್ ಸಿನಿಮಾ ಮಾಡಲಿದ್ದಾರೆ. ಶೀಘ್ರದಲ್ಲಿಯೇ ಆ ಸಿನಿಮಾ ಶೂಟಿಂಗ್ ಕೂಡ ಆರಂಭವಾಗಲಿದೆಯಂತೆ. ಆ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ನಟಿಸಲಿದ್ದಾರೆ ಎಂದು ಕೂಡ ಮಾತಿದೆ. 200 ಕೋಟಿ ರೂ ಆಸ್ತಿ ಖರೀದಿ ಮಾಡ್ತಾರಾ ರಾಮ್ ಚರಣ್ ಪತ್ನಿ? ಜೀವಿತಾ ರಾಜಶೇಖರ್ ಅವರ 200 ಕೋಟಿ ರೂಪಾಯಿ ಆಸ್ತಿಯನ್ನು ರಾಮ್ ಚರಣ್ ಪತ್ನಿ ಉಪಾಸನಾ ಖರೀದಿ ಮಾಡುತ್ತಾರೆ ಎಂಬ ಮಾತು ಕೂಡ ಕೇಳಿ ಬಂದಿತ್ತು. ಈ ಬಗ್ಗೆ ಉಪಾಸನಾ ಪ್ರತಿಕ್ರಿಯೆ ನೀಡಿಲ್ಲ. ಇತ್ತೀಚೆಗೆ ರಾಮ್ ಚರಣ್ ಹಾಗೂ ಪತ್ನಿ ಉಪಾಸನಾ ಲಂಚ್ ಡೇಟ್ ಹೋಗಿದ್ದರು. 2012ರಲ್ಲಿ ಈ ಜೋಡಿಯ ಮದುವೆ ನಡೆದಿತ್ತು.