Rajkumar Birthday: ಡಾ ರಾಜ್‌ಕುಮಾರ್ ಈಗಲೂ ಅಪ್ಪಟ ಬಂಗಾರದ ಮನುಷ್ಯ! ಯಾಕೆ ?

( ಮಾಸ್ತಿ)ಹತ್ತು ಎಂಜಿಆರ್‌ರನ್ನು ಒಟ್ಟು ಸೇರಿಸಿದರೆ ಒಬ್ಬ ಡಾ. ರಾಜ್‌ ಕುಮಾರ್‌ ಎಂದು ಯಾರೋ ಹೇಳಿದ್ದಲ್ಲ, ತಮಿಳು ನೆಲದಲ್ಲಿ ಅದೇ ತಮಿಳಿನ ಸೂಪರ್‌ ಸ್ಟಾರ್‌ ರಜನಿಕಾಂತ್‌ ನಿರ್ಭಯದಿಂದ ಹೇಳಿದ ಮಾತು. ಈ ಮಾತು ಎಷ್ಟು ವಾಸ್ತವವಾಗಿತ್ತೆಂದರೆ, ಆ ನೆಲದ ಯಾರೊಬ್ಬರೂ ಈ ಮಾತಿಗೆ ಪ್ರತಿರೋಧ ವ್ಯಕ್ತಪಡಿಸಲೇ ಇಲ್ಲ. ಇದು ಡಾ. ರಾಜ್‌ಕುಮಾರ್‌ ಎಂಬ ಪ್ರತಿಭೆಗೆ ಸಿಕ್ಕ ಗೌರವ. ಇಂದು ನಾವೆಲ್ಲರೂ ಪ್ರೀತಿಯಿಂದ ‘ಅಣ್ಣಾವ್ರು’ ಎಂದು ಪ್ರೀತಿಯಿಂದ ಕರೆಯುವ ರಾಜ್‌ಕುಮಾರ್‌ ಅವರ ಹುಟ್ಟುಹಬ್ಬ. ಅವರಿಲ್ಲದೇ ಆಚರಿಸುತ್ತಿರುವುದು ನಮ್ಮ ದುರ್ದೈವ.​ಸಂಸ್ಕಾರಕ್ಕೆ ಇನ್ನೊಂದು ಹೆಸರುಬೆಂಗಳೂರಿನ ಒಂದು ಕಾರ್ಯಕ್ರಮದಲ್ಲಿ ಪಕ್ಕದ ತೆಲುಗಿನ ಮೆಗಾಸ್ಟಾರ್‌ ಚಿರಂಜೀವಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಅವರನ್ನು ಮಾತನಾಡಿಸಲು ಅವರ ಬಳಿಗೆ ಯಾರೇ ಹೋದರೂ ಚಿರಂಜೀವಿಯವರು ಹಿರಿಯರು ಕಿರಿಯರೆನ್ನದೆ ಎದ್ದು ನಿಂತು ಗೌರವದಿಂದ ಮಾತನಾಡುತ್ತಿದ್ದರು. ಇದನ್ನು ಗಮನಿಸಿದ ಒಬ್ಬ ಪತ್ರಕರ್ತರು, ‘‘ಸಾರ್‌ ನೀವು ದೊಡ್ಡ ನಟರು. ನಿಮಗಿಂತ ಚಿಕ್ಕವರು ಬಂದು ಮಾತಾಡಿಸಿದರೂ ಎದ್ದು ನಿಂತು ಗೌರವ ಸೂಚಿಸುತ್ತೀರಲ್ಲಾ... ಈ ಸಂಸ್ಕಾರ ನಿಮ್ಗೆ ಬಂದಿದ್ಹೇಗೆ?,’’ ಎಂದು ಕೇಳಿದರು. ಆಗ ಚಿರಂಜೀವಿ ಹೇಳಿದ ಉತ್ತರ: ‘‘ನಾನು ಈ ಸೌಜನ್ಯವನ್ನು ಕಲಿತಿದ್ದು ನಿಮ್ಮ ರಾಜ್‌ ಕುಮಾರ್‌ ಅವರಿಂದ’’!

Linkup