Pushpa Movie: ಶ್ರೀವಲ್ಲಿಯಾಗಿ ಪ್ರೇಕ್ಷಕರ ಮನಸೆಳೆಯಲು ಬಂದ್ರು ನಟಿ ರಶ್ಮಿಕಾ ಮಂದಣ್ಣ!

ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ'ದಲ್ಲಿ ರಶ್ಮಿಕಾ ಮಂದಣ್ಣ ಯಾವ ಪಾತ್ರ ಮಾಡುತ್ತಿದ್ದಾರೆ? ಅವರ ಪಾತ್ರ ಹೇಗಿರಲಿದೆ? ಈ ಎಲ್ಲ ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದೆ. 'ಪುಷ್ಪ' ಚಿತ್ರದ ರಶ್ಮಿಕಾ ಪಾತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ.

Pushpa Movie: ಶ್ರೀವಲ್ಲಿಯಾಗಿ ಪ್ರೇಕ್ಷಕರ ಮನಸೆಳೆಯಲು ಬಂದ್ರು ನಟಿ ರಶ್ಮಿಕಾ ಮಂದಣ್ಣ!
Linkup
'ಸ್ಟೈಲಿಶ್‌ ಸ್ಟಾರ್' ಅಲ್ಲು ಅರ್ಜುನ್‌ ಜೊತೆಗೆ '' ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದಾಗಲೇ ಫ್ಯಾನ್ಸ್‌ಗೆ ದೊಡ್ಡ ನಿರೀಕ್ಷೆ ಹುಟ್ಟಿಕೊಂಡಿತ್ತು. ಆ ಸಿನಿಮಾದಲ್ಲಿ ಅವರ ಪಾತ್ರ ಹೇಗಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ. 'ಪುಷ್ಪ' ಚಿತ್ರದಲ್ಲಿ ಶ್ರೀವಲ್ಲಿ ಎಂಬ ಪಾತ್ರಕ್ಕೆ ರಶ್ಮಿಕಾ ಮಂದಣ್ಣ ಬಣ್ಣ ಹಚ್ಚಿದ್ದಾರೆ. ಆ ಪಾತ್ರದ ಫಸ್ಟ್ ಲುಕ್ ಕೂಡ ಈಗ ರಿಲೀಸ್ ಆಗಿದ್ದು, ನೋಡುಗರ ಗಮನಸೆಳೆದಿದೆ. ಈ ಚಿತ್ರದಲ್ಲಿ ಜೊತೆಗೆ ಫಹಾದ್‌ ಫಾಸಿಲ್, ಧನಂಜಯ ಕೂಡ ನಟಿಸುತ್ತಿದ್ದಾರೆ. ಅವರೆಲ್ಲರ ಫಸ್ಟ್ ಲುಕ್ ರಿಲೀಸ್ ಆಗಿತ್ತು. ಆದರೆ, ರಶ್ಮಿಕಾ ನಿಭಾಯಿಸುತ್ತಿರುವ ಪಾತ್ರವೇನು? ಅವರ ಲುಕ್ ಹೇಗಿರಲಿದೆ ಎಂಬುದು ಪಾತ್ರ ಗೊತ್ತಾಗಿರಲಿಲ್ಲ. ಇದೀಗ ಅದು ಕೂಡ ಬಹಿರಂಗವಾಗಿದ್ದು, ಚಿತ್ತೂರು ಕಡೆಯ ಶ್ರೀವಲ್ಲಿ ಎಂಬ ಯುವತಿಯ ಪಾತ್ರದಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ಆ ಪ್ರಾಂತ್ಯದ ತೆಲುಗು ಭಾಷೆಯನ್ನೇ ಅವರು ಚಿತ್ರದಲ್ಲಿ ಹೇಳಿದ್ದಾರೆ ಕೂಡ. ಸುಕುಮಾರ್ ನಿರ್ದೇಶನದ ಈ ಸಿನಿಮಾ ಮೊದಲ ಭಾಗವು ಡಿಸೆಂಬರ್ 25ರಂದು ತೆರೆಗೆ ಬರಲಿದೆ. 2022ರಲ್ಲಿ ಮತ್ತೊಂದು ಭಾಗವನ್ನು ರಿಲೀಸ್ ಮಾಡುವುದಕ್ಕೆ ಚಿತ್ರತಂಡ ಪ್ಲ್ಯಾನ್ ಮಾಡಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್ ರಕ್ತ ಚಂದನ ಕಳ್ಳಸಾಗಾಣಿಕೆ ಮಾಡುವ ಲಾರಿ ಚಾಲಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ, ಜಗಪತಿ ಬಾಬು, ಪ್ರಕಾಶ್ ರಾಜ್, ಸುನೀಲ್, ವೆನ್ನೆಲ್ಲಾ ಕಿಶೋರ್ ಸೇರಿದಂತೆ ದೊಡ್ಡ ತಾರಾಬಳಗವಿದೆ. ದೇವಿ ಶ್ರೀ ಪ್ರಸಾದ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಒಂದು ಹಾಡು ಭಾರಿ ಸೌಂಡು ಮಾಡುತ್ತಿದೆ. ಮೈತ್ರಿ ಮೂವೀ ಮೇಕರ್ಸ್ ಸಂಸ್ಥೆ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದೆ. ಐದು ಭಾಷೆಯಲ್ಲಿ ಈ ಸಿನಿಮಾ ಏಕಕಾಲಕ್ಕೆ ರಿಲೀಸ್ ಆಗಲಿರುವುದು ವಿಶೇಷ. ಇನ್ನು, ರಶ್ಮಿಕಾಗೆ ದಿನದಿಂದ ದಿನಕ್ಕೆ ಜನಪ್ರಿಯತೆ ಹೆಚ್ಚಾಗುತ್ತಲೇ ಇದೆ. ತಮಿಳು, ತೆಲುಗು, ಹಿಂದಿ ಅಂತ ಸಿನಿಮಾಗಳ ಮೇಲೆ ಸಿನಿಮಾ ಮಾಡುತ್ತಿರುವ ರಶ್ಮಿಕಾ, ಇನ್‌ಸ್ಟಾಗ್ರಾಮ್‌ನಲ್ಲೂ ಬರೋಬ್ಬರಿ 2.15 ಕೋಟಿಗೂ ಬೆಂಬಲಿಗರನ್ನು ಹೊಂದಿದ್ದಾರೆ. ಆ ಮೂಲಕ ಇನ್‌ಸ್ಟಾಗ್ರಾಮ್‌ನಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ನಟಿಯರಲ್ಲಿ ರಶ್ಮಿಕಾ ಮೊದಲ ಸ್ಥಾನದಲ್ಲಿದ್ದಾರೆ. ಈ ಮಧ್ಯೆ ಇನ್ನೆರಡು ವರ್ಷ ರಶ್ಮಿಕಾ ಸಖತ್ ಬ್ಯುಸಿ ಎನ್ನಲಾಗಿದೆ. ಅಲ್ಲು ಅರ್ಜುನ್-ರಶ್ಮಿಕಾ ಕಾಂಬಿನೇಷನ್‌ನ ಬಹುನಿರೀಕ್ಷಿತ 'ಪುಷ್ಪ' ಸಿನಿಮಾ ಡಿಸೆಂಬರ್‌ನಲ್ಲಿ ರಿಲೀಸ್ ಆಗಲಿದೆ. ಹಿಂದಿಯ 'ಮಿಷನ್‌ ಮಜ್ನು' ಶೂಟಿಂಗ್ ಮುಗಿದಿದ್ದು, 'ಗುಡ್‌ಬೈ' ಸಿನಿಮಾದ ಶೂಟಿಂಗ್‌ನಲ್ಲಿ ರಶ್ಮಿಕಾ ಬ್ಯುಸಿ ಇದ್ದಾರೆ. ಇದೆಲ್ಲದರ ಜೊತೆಗೆ ತೆಲುಗಿನ ಶರ್ವಾನಂದ್‌ ಜೊತೆಗೆ 'ಆಡವಾಳ್ಳು ಮೀಕು ಜೋಹಾರ್ಲು' ಎಂಬ ಸಿನಿಮಾವನ್ನು ರಶ್ಮಿಕಾ ಒಪ್ಪಿಕೊಂಡಿದ್ದು, ಅದರ ಚಿತ್ರೀಕರಣದಲ್ಲೂ ಭಾಗಿಯಾಗಿದ್ದಾರೆ. ಹೀಗೆ ಸಾಲು ಸಾಲು ಸಿನಿಮಾಗಳು ಅವರ ಬಳಿ ಇದ್ದು, ಇದರ ಜೊತೆಗೆ ಹೊಸ ಹೊಸ ಆಫರ್‌ಗಳಿಗೇನೂ ಕೊರತೆ ಇಲ್ಲ!