![](https://vijaykarnataka.com/photo/89967914/photo-89967914.jpg)
ಭಾರತ ಒಂದೇ ಅಲ್ಲದೆ ವಿದೇಶದವರು ಕೂಡ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಪ್ರಶಾಂತ್ ನೀಲ್ ನಿರ್ದೇಶನದ 'ಕೆಜಿಎಫ್' ಸಿನಿಮಾ ಏಪ್ರಿಲ್ 14ಕ್ಕೆ ತನ್ನ ಸಿಕ್ವೇಲ್ '' ರಿಲೀಸ್ ಮಾಡಲಿದೆ. 'ಕೆಜಿಎಫ್ 2' ನೋಡಲು ವೀಕ್ಷಕರು ಕಾಯುತ್ತಿದ್ದಾರೆ. ಅದರಲ್ಲೂ 'ಕೆಜಿಎಫ್ ಚಾಪ್ಟರ್ 1'ಗಿಂತ 'ಕೆಜಿಎಫ್ 2' ಭಾರೀ ಚೆನ್ನಾಗಿದೆ ಎಂದು ಚಿತ್ರತಂಡ ಮೊದಲೇ ಹೇಳಿದ್ದರಿಂದ ನಿರೀಕ್ಷೆ ಇನ್ನೂ ಹೆಚ್ಚಿದೆ. ಹಾಗಾದರೆ ಈ ಸಿನಿಮಾ ಹೇಗಿದೆಯಂತೆ?
ಕೆಜಿಎಫ್ 2 ಸಿನಿಮಾ ಹೇಗಿದೆ?
ಮಲಯಾಳಂ ನಟ ( ) ಅವರು 'ಕೆಜಿಎಫ್ 2' ಚಿತ್ರವನ್ನು ( ) ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲದೆ ಈ ಸಿನಿಮಾದ ವಿತರಣೆಯ ಹಕ್ಕನ್ನು ಕೂಡ ಪಡೆದಿದ್ದಾರೆ. ಸಿನಿಮಾ ನೋಡಿರುವುದರ ಬಗ್ಗೆ ಕೂಡ ಅವರು ಟ್ವೀಟ್ ಮಾಡಿದ್ದು, "ವಿಜಯ್ ಕಿರಗಂದೂರು ಜೊತೆ ಜೊತೆ ಕೆಲಸ ಮಾಡಲು ಖುಷಿಯಾಗುತ್ತಿದೆ. ಕೆಜಿಎಫ್ 2 ಸಿನಿಮಾ ನೋಡಿದ್ದು ಮನಸ್ಸಿಗೆ ಬಹಳ ಮುದ ನೀಡಿತು. ಪ್ರಶಾಂತ್ ನೀಲ್ ಅವರು ಹೊಸ ಸ್ಟಾಂಡರ್ಟ್ ಸೆಟ್ ಮಾಡಲಿದ್ದಾರೆ" ಎಂದು ಹೇಳಿದ್ದಾರೆ.
'ಕೆಜಿಎಫ್ 2' ಹಕ್ಕು ಯಾರು ಯಾರು ಪಡೆದಿದ್ದಾರೆ?
'ಕೆಜಿಎಫ್ 1' ಚಿತ್ರದ ವಿತರಣೆ ಹಕ್ಕನ್ನು ಕೆಆರ್‌ಜಿ ಸ್ಟುಡಿಯೋ ಮಾಡಿತ್ತು. ತೆಲುಗು, ತಮಿಳು ವಿತರಣೆ ಹಕ್ಕನ್ನು ವಿಶಾಲ್ ಫಿಲ್ಮ್ ಫ್ಯಾಕ್ಟರಿ ಪಡೆದಿತ್ತು, ಮಲಯಾಳ ಹಕ್ಕನ್ನು ಗ್ಲೋಬಲ್ ಯುನೈಟೆಡ್ ಮೀಡಿಯಾ ಪಡೆದಿತ್ತು. ಕೆಜಿಎಫ್ 2 ಸಿನಿಮಾದ ತೆಲುಗು ಹಕ್ಕು ದಿಲ್ ರಾಜು ಅವರ ಶ್ರೀ ವೆಂಕಟೇಶ್ವರ ಕ್ರಿಯೇಶನ್ಸ್ ಪಾಲಾಗಿದೆ, ತಮಿಳು ಹಕ್ಕು ಡ್ರೀಮ್ ವಾರಿಯರ್ ಪಿಕ್ಚರ್ಸ್ ಪಾಲಾಗಿದೆ. ಜೀ ಮೀಡಿಯಾ ಟಿವಿ ರೈಟ್ಸ್ ಪಡೆದಿದೆ.
ಕೊರೊನಾದಿಂದ ರಿಲೀಸ್ ಆಗೋದು ಲೇಟ್ !
ಕೊರೊನಾ ವೈರಸ್, ಲಾಕ್‌ಡೌನ್ ಕಾರಣಕ್ಕೆ ಇಷ್ಟುದಿನ ಈ ಚಿತ್ರವನ್ನು ರಿಲೀಸ್ ಮಾಡಿರಲಿಲ್ಲ. ಸಾಕಷ್ಟು ಬಾರಿ ಕೆಜಿಎಫ್ ಸಿನಿಮಾ ಟ್ರೈಲರ್ ರಿಲೀಸ್, ರಿಲೀಸ್ ದಿನಾಂಕದ ಬಗ್ಗೆ ಈ ಹಿಂದೆಯೇ ಕೆಲವು ಗಾಸಿಪ್ ಹಬ್ಬಿತ್ತು. ಆಗ ಉತ್ತರ ನೀಡಿದ್ದ ಪ್ರಶಾಂತ್ ನೀಲ್, "ಅಧಿಕೃತವಾಗಿ ಸಿನಿಮಾ ರಿಲೀಸ್ ದಿನಾಂಕ ಹೇಳುತ್ತೇವೆ. ಥಿಯೇಟರ್ ತುಂಬಿದಾಗ ಚಿತ್ರ ರಿಲೀಸ್ ಮಾಡುತ್ತೇವೆ" ಎಂದಿದ್ದರು.
ದಶಕಗಳ ನಂತರ ರವೀನಾ ಟಂಡನ್, ಸಂಜಯ್ ದತ್ ನಟನೆ
'ಕೆಜಿಎಫ್ 2' ಚಿತ್ರದಲ್ಲಿ ಸಂಜಯ್ ದತ್ ಅವರು ಅಧೀರನ ಪಾತ್ರದಲ್ಲಿ, ನಟಿ ರವೀನಾ ಟಂಡನ್ ಅವರು ರಮೀಕಾ ಸೇನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ರಾಜಕಾರಣಿಯ ಪಾತ್ರವಾಗಿದೆ. ಸಂಜಯ್ ದತ್ ಹಾಗೂ ರವೀನಾ ಟಂಡನ್ ಅವರು ದಶಕಗಳ ನಂತರದಲ್ಲಿ ಒಂದೇ ಸಿನಿಮಾದಲ್ಲಿ ನಟಿಸಿದ್ದರೂ ಕೂಡ, ಯಾವುದೇ ದೃಶ್ಯದಲ್ಲಿಯೂ ಒಟ್ಟಿಗೆ ನಟಿಸಿಲ್ಲವಂತೆ. ಈ ವಿಚಾರಕ್ಕೆ ರವೀನಾ ಟಂಡನ್ ಅವರು ಬೇಸರ ಮಾಡಿಕೊಂಡಿದ್ದಾರೆ.