Gowli: ಶ್ರೀನಗರ ಕಿಟ್ಟಿ ನಾಯಕತ್ವದ 'ಗೌಳಿ' ಚಿತ್ರದಲ್ಲಿ ನಟಿ ಪಾವನಾಗೆ ಡಿಫರೆಂಟ್ ಪಾತ್ರ!

'ಗೊಂಬೆಗಳ ಲವ್', 'ಜಟ್ಟ' ಸಿನಿಮಾಗಳ ಖ್ಯಾತಿಯ ನಟಿ ಪಾವನಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಸದ್ಯ ಶ್ರೀನಗರ ಕಿಟ್ಟಿ ನಟನೆಯ 'ಗೌಳಿ' ಸಿನಿಮಾದಲ್ಲಿ ಪಾವನಾ ಅತ್ಯಂತ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆ ಕುರಿತು ಇಲ್ಲಿದೆ ಮಾಹಿತಿ.

Gowli: ಶ್ರೀನಗರ ಕಿಟ್ಟಿ ನಾಯಕತ್ವದ 'ಗೌಳಿ' ಚಿತ್ರದಲ್ಲಿ ನಟಿ ಪಾವನಾಗೆ ಡಿಫರೆಂಟ್ ಪಾತ್ರ!
Linkup
'ಗೊಂಬೆಗಳ ಲವ್‌', 'ಜಟ್ಟ', 'ಕನ್ನಡಿಗ' ಸಿನಿಮಾಗಳ ಖ್ಯಾತಿಯ ನಟಿ ಅವರು ಈಗ ಶ್ರೀನಗರ ಕಿಟ್ಟಿ ನಾಯಕರಾಗಿರುವ '' ಸಿನಿಮಾದಲ್ಲಿ ನಾಯಕಿಯಾಗಲು ಒಪ್ಪಿದ್ದಾರೆ. ಪ್ರತಿ ಸಿನಿಮಾದಲ್ಲಿ ವಿಭಿನ್ನ ಪಾತ್ರಗಳನ್ನು ಪೋಷಣೆ ಮಾಡುವ ಅವರು, 'ಗೌಳಿ'ಯಲ್ಲೂ ವಿಶಿಷ್ಟ ಪಾತ್ರ ನಿರ್ವಹಿಸಲಿದ್ದಾರೆ. 'ಈ ಸಿನಿಮಾದಲ್ಲಿ ನನ್ನದು ಶ್ರೀನಗರ ಕಿಟ್ಟಿ ಅವರ ಪತ್ನಿಯ ಪಾತ್ರ. ಅದಕ್ಕಾಗಿ ವಿಭಿನ್ನ ಲುಕ್‌ ಇರುತ್ತದೆ. ವಿಶಿಷ್ಟ ಕಥೆ ನನ್ನನ್ನು ಅರಸಿ ಬಂದಿದ್ದಕ್ಕೆ ನನಗೆ ಖುಷಿಯಿದೆ. ಇದರಲ್ಲಿ ನಟನೆಗೆ ಅವಕಾಶವಿದೆ. ನಿರ್ದೇಶಕ ಸೂರ ಎಲ್ಲಾ ಪಾತ್ರಗಳನ್ನು ಬಹಳ ಚೆನ್ನಾಗಿ ಬರೆದುಕೊಂಡಿದ್ದಾರೆ. ಆಗಸ್ಟ್‌ನಲ್ಲಿ ಚಿತ್ರೀಕರಣ ಆರಂಭವಾಗಲಿದೆ' ಎಂದು ಪಾವನಾ ಹೇಳಿದ್ದಾರೆ. ಗೌಳಿ ಸಿನಿಮಾದಲ್ಲಿ ಕಿಟ್ಟಿಯವರ ಪಾತ್ರವೇ ವಿಭಿನ್ನವಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಇದರ ಮೋಷನ್‌ ಪೋಸ್ಟರ್‌ನಲ್ಲಿಇದೊಂದು ರಾ ಸಬ್ಜೆಕ್ಟ್ ಎಂಬುದು ಗೊತ್ತಾಗುತ್ತದೆ. ಇಡೀ ಸಿನಿಮಾ ಕಾಡಿನಲ್ಲಿ ನಡೆಯುತ್ತದೆ. ನಿರ್ದೇಶಕ ಸೂರ ಅವರಿಗೆ ಈ ಸಿನಿಮಾ ಮೊದಲ ಪ್ರಯತ್ನವಾಗಿದೆ. 'ಗೌಳಿ ವಿಶಿಷ್ಟ ಅನುಭವ ನೀಡುವ ಸಿನಿಮಾ. ನನ್ನ ಪಾತ್ರವೂ ಹೊಸ ಲುಕ್‌ ಮತ್ತು ಹೊಸ ರೀತಿಯ ಅಭಿನಯ ಕೇಳುತ್ತದೆ. ಕಥೆ ಬಹಳ ಚೆನ್ನಾಗಿದೆ. ನನ್ನ ಪರ್ಫಾಮೆನ್ಸ್‌ಗೆ ಹೆಚ್ಚಿನ ಅವಕಾಶವಿದೆ' ಎಂದಿದ್ದಾರೆ ಪಾವನಾ. ಇನ್ನು, 'ಸದ್ದು ವಿಚಾರಣೆ ನಡೆಯುತ್ತಿದೆ' ಸಿನಿಮಾಕ್ಕಾಗಿ ನಟಿ ಪಾವನಾ ಮೈಸೂರಿನಲ್ಲಿಇರುವ ಪೊಲೀಸ್‌ ಟ್ರೈನಿಂಗ್ ಸ್ಕೂಲ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಕರಾಟೆ, ರೈಫಲ್‌ ಶೂಟಿಂಗ್‌ಗಳನ್ನೂ ಅವರು ಕಲಿಯುತ್ತಿದ್ದಾರೆ. ಆ ಬಗ್ಗೆ ಹೇಳಿಕೊಳ್ಳುವ ಅವರು, 'ನಾನು ಪೊಲೀಸ್‌ ಕಾನ್‌ಸ್ಟೇಟೇಬಲ್‌ ಪಾತ್ರದಲ್ಲಿ ನಟಿಸುತ್ತಿರುವುದರಿಂದ ಅವರು ಹೇಗೆ ಮಾರ್ಚ್ಫಾಸ್ಟ್‌ ಮಾಡ್ತಾರೆ, ಹೇಗೆ ಸಲ್ಯೂಟ್‌ ಹೊಡೆಯುತ್ತಾರೆ ಎನ್ನುವುದನ್ನು ಸರಿಯಾಗಿ ತಿಳಿದುಕೊಳ್ಳಬೇಕಿದೆ. ಸಿನಿಮಾ ಬಹಳ ನೈಜವಾಗಿ ಇರಲಿದ್ದು, ಇದಕ್ಕಾಗಿ ಪಿಸಿಗಳ ಹಾವಭಾವವನ್ನು ಸಹಜವಾಗಿ ಅನುಸರಿಸಬೇಕಿದೆ. ಈ ಕಾರಣಕ್ಕಾಗಿ ಪೊಲೀಸ್‌ ಟ್ರೈನಿಂಗ್ ಸ್ಕೂಲ್‌ ಸಹಾಯವನ್ನು ಪಡೆದೆವು. ಇದೇ ಕಟ್ಟಡದಲ್ಲಿ ಚಿತ್ರೀಕರಣವೂ ನಡೆಯಲಿದೆ' ಎಂದಿದ್ದಾರೆ. ಅಂದಹಾಗೆ, 'ಗೌಳಿ' ಚಿತ್ರವನ್ನು ಸೋಹನ್ ಫಿಲ್ಮ್ ಫ್ಯಾಕ್ಟರಿ ಅಡಿಯಲ್ಲಿ ರಘು ಸಿಂಗಮ್ ಎಂಬುವರು ನಿರ್ಮಾಣ ಮಾಡಲಿದ್ದಾರೆ. ಚಿತ್ರಕ್ಕೆ ಶಶಾಂಕ್ ಶೇಷಗಿರಿ ಸಂಗೀತ ನೀಡಲಿದ್ದು, ಪ್ರಜ್ವಲ್ ಗೌಡ ಛಾಯಾಗ್ರಹಣವಿರಲಿದೆ. ಈ ಹಿಂದೆ ಕನ್ನಡದ ಕೆಲ ನಿರ್ದೇಶಕರ ಬಳಿ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದ ಸೂರಗೆ ನಿರ್ದೇಶನದ ಮೊದಲ ಸಿನಿಮಾ.