ಮಲಯಾಳಂ ಚಿತ್ರರಂಗಕ್ಕೆ ಅಡಿಯಿಟ್ಟ ಕನ್ನಡ ನಟಿ ಕಾವ್ಯ ಶೆಟ್ಟಿ

'ಬ್ರೋ ಡ್ಯಾಡಿ' ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಕಾವ್ಯ ಶೆಟ್ಟಿ ಪದಾರ್ಪಣೆ ಮಾಡಿದ್ದಾರೆ.

ಮಲಯಾಳಂ ಚಿತ್ರರಂಗಕ್ಕೆ ಅಡಿಯಿಟ್ಟ ಕನ್ನಡ ನಟಿ ಕಾವ್ಯ ಶೆಟ್ಟಿ
Linkup
ಮಂಗಳೂರು ಮೂಲದ ಕನ್ನಡದ ಪ್ರತಿಭಾವಂತ ನಟಿ ಕಾವ್ಯ ಶೆಟ್ಟಿ. ಮಾಡೆಲ್ ಆಗಿ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದು 'ನಮ್ ದುನಿಯಾ ನಮ್ ಸ್ಟೈಲ್' ಚಿತ್ರದ ಮೂಲಕ. 'ಶಿವಾನಿ' ಚಿತ್ರದ ಮೂಲಕ ತೆಲುಗು ಹಾಗೂ ತಮಿಳು ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದ ಕಾವ್ಯ ಶೆಟ್ಟಿ ಇಲ್ಲಿಯವರೆಗೂ 10ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 'ಇಷ್ಟಕಾಮ್ಯ', 'ಝೂಮ್', 'ಸ್ಮೈಲ್ ಪ್ಲೀಸ್', 'ಸಂಹಾರ', 'ಯುವರತ್ನ' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿರುವ ಕಾವ್ಯ ಶೆಟ್ಟಿ ಸದ್ಯ ಹೈದರಾಬಾದ್‌ನಲ್ಲಿದ್ದಾರೆ. ಅಲ್ಲಿ 'ಬ್ರೋ ಡ್ಯಾಡಿ' ಚಿತ್ರದ ಚಿತ್ರೀಕರಣದಲ್ಲಿ ಕಾವ್ಯ ಶೆಟ್ಟಿ ಬಿಜಿಯಾಗಿದ್ದಾರೆ. 'ಬ್ರೋ ಡ್ಯಾಡಿ' ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೂ ಕಾವ್ಯ ಶೆಟ್ಟಿ ಪದಾರ್ಪಣೆ ಮಾಡಿದ್ದಾರೆ. ಮಲಯಾಳಂನ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ ಆಕ್ಷನ್ ಕಟ್ ಹೇಳುತ್ತಿರುವ ಎರಡನೇ ಚಿತ್ರ 'ಬ್ರೋ ಡ್ಯಾಡಿ'. ಹೀಗಾಗಿ 'ಬ್ರೋ ಡ್ಯಾಡಿ' ಚಿತ್ರದ ಬಗ್ಗೆ ಮಾಲಿವುಡ್‌ನಲ್ಲಿ ಅಪಾರ ನಿರೀಕ್ಷೆ ಇದೆ. ಈ ಹಿಂದೆ 'ಲೂಸಿಫರ್' ಚಿತ್ರವನ್ನು ಪೃಥ್ವಿರಾಜ್ ಸುಕುಮಾರನ್ ನಿರ್ದೇಶನ ಮಾಡಿದ್ದರು. 'ಲೂಸಿಫರ್' ಬಾಕ್ಸ್‌ಆಫೀಸ್‌ನಲ್ಲಿ ಬಿಗ್ ಹಿಟ್ ಆಗಿತ್ತು. 'ಲೂಸಿಫರ್' ಚಿತ್ರದಂತೆಯೇ 'ಬ್ರೋ ಡ್ಯಾಡಿ' ಚಿತ್ರದಲ್ಲೂ ಪೃಥ್ವಿರಾಜ್ ಮತ್ತು ಮೋಹನ್ ಲಾಲ್ ಕಾಂಬಿನೇಶನ್ ಮುಂದುವರೆದಿದೆ. 'ಬ್ರೋ ಡ್ಯಾಡಿ' ಚಿತ್ರದಲ್ಲಿ ಕಾವ್ಯ ಶೆಟ್ಟಿ ಪಾತ್ರವೇನು ಎಂಬುದು ಬಹಿರಂಗವಾಗಿಲ್ಲ. ಆದರೆ, ಸೂಸನ್ ಎಂಬ ಪಾತ್ರಕ್ಕಾಗಿ ಕಾವ್ಯ ಶೆಟ್ಟಿ ಜೀವ ತುಂಬುತ್ತಿದ್ದಾರೆ. 'ಬ್ರೋ ಡ್ಯಾಡಿ' ಸಿನಿಮಾ ಔಟ್‌ ಅಂಡ್ ಔಟ್ ಫ್ಯಾಮಿಲಿ ಎಂಟರ್‌ಟೇನರ್ ಆಗಿರಲಿದೆ. ಅಂದ್ಹಾಗೆ, ಕನ್ನಡದ 'ಲವ್ ಮಾಕ್ಟೇಟ್' ಚಿತ್ರದ ತೆಲುಗು ಅವತರಣಿಕೆ 'ಗುರ್ತುಂಡಾ ಸೀತಾಕಲಮ್' ಚಿತ್ರದಲ್ಲೂ ಕಾವ್ಯ ಶೆಟ್ಟಿ ಅಭಿನಯಿಸಿದ್ದಾರೆ. 'ಗುರ್ತುಂಡಾ ಸೀತಾಕಲಮ್' ಸಿನಿಮಾದಲ್ಲಿ ತಮನ್ನಾ ಹಾಗೂ ಸತ್ಯದೇವ್ ನಟಿಸಿದ್ದಾರೆ.