Exit Poll: ಪುದುಚೆರಿಯಲ್ಲಿ ಅರಳಲಿದೆ ಕಮಲ, ಅಸ್ಸಾಂನಲ್ಲಿ ಬಿಜೆಪಿ ಬಚಾವ್‌

ಚುನಾವಣೋತ್ತರ ಸಮೀಕ್ಷೆಗಳು ಎರಡು ರಾಜ್ಯಗಳನ್ನು ಬಿಜೆಪಿಗೆ ಕೊಟ್ಟಿದ್ದು, ಅಸ್ಸಾಂ ಹಾಗೂ ಪುದುಚೆರಿಯಲ್ಲಿ ಎನ್‌ಡಿಎ ಅಧಿಕಾರಕ್ಕೇರಲಿದೆ ಎಂದು ಹೇಳಿವೆ. ಅಸ್ಸಾಂನಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲಿದ್ದರೆ, ಪುದುಚೆರಿಯಲ್ಲಿ ಅಧಿಕಾರಕ್ಕೇರಲಿದೆ.

Exit Poll: ಪುದುಚೆರಿಯಲ್ಲಿ ಅರಳಲಿದೆ ಕಮಲ, ಅಸ್ಸಾಂನಲ್ಲಿ ಬಿಜೆಪಿ ಬಚಾವ್‌
Linkup
ಹೊಸದಿಲ್ಲಿ: ಪಂಚರಾಜ್ಯಗಳ ವಿಧಾನಸಭೆ ಚುನಾವಣಾ ಸಮರದ ಕೊನೆಯ ಹಂತದ ಮತದಾನ ಪಶ್ಚಿಮ ಬಂಗಾಳದಲ್ಲಿ ಗುರುವಾರ ಮುಕ್ತಾಯಗೊಂಡ ಕೂಡಲೇ ಹೊರಬಿದ್ದಿರುವ ಚುನಾವಣೋತ್ತರ ಸಮೀಕ್ಷೆಗಳು ಎರಡು ರಾಜ್ಯಗಳನ್ನು ಬಿಜೆಪಿಗೆ ಕೊಟ್ಟಿವೆ. ಅಸ್ಸಾಂನ 126 ಸೀಟುಗಳ ಪೈಕಿ ಬಹುಮತಕ್ಕೆ ಅಗತ್ಯವಾದ 64 ಸೀಟುಗಳನ್ನು ಬಿಜೆಪಿ ಮತ್ತು ಮಿತ್ರಪಕ್ಷಗಳು ಬಾಚಿಕೊಳ್ಳುವ ಮೂಲಕ ಅಧಿಕಾರ ಉಳಿಸಿಕೊಳ್ಳುವುದು ಖಚಿತವಾಗಿದೆ. ಆದರೆ ಎರಡನೇ ಅವಧಿಯ ಆಡಳಿತಕ್ಕೆ ಸಿಎಂ ಬದಲಾವಣೆಯ ಮಾತುಗಳು ಕೇಳಿಬರುತ್ತಿವೆ. ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ 58-71 ಸ್ಥಾನಗಳಲ್ಲಿ, ಯುಪಿಎ 53-66, ಇತರರು 0-5 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಟೈಮ್ಸ್‌ ನೌ- ಸಿ ವೋಟರ್‌ ಸಮೀಕ್ಷೆ ಹೇಳಿದೆ. ಉಳಿದ ಸಮೀಕ್ಷೆಗಳ ವಿವರ ಕೆಳಗಿನ ಟೇಬಲ್‌ನಲ್ಲಿದೆ.
ಎನ್‌ಡಿಎ ಯುಪಿಎ ಇತರ
ಇಂಡಿಯಾ ಟುಡೇ-ಆಕ್ಸಿಸ್‌ ಮೈ ಇಂಡಿಯಾ 75-85 40-50 1-4
ಟೈಮ್ಸ್‌ ನೌ-ಸಿ ವೋಟರ್‌ 58-71 53-66 0-5
ಟುಡೇಸ್‌ ಚಾಣಾಕ್ಯ 61-79 47-65 0-3
ರಿಪಬ್ಲಿಕ್‌-ಸಿಎನ್‌ಎಕ್‌ 74-84 40-50 1-3
ಜನ್‌ ಕೀ ಬಾತ್‌ 68-78 48-58 0-0
ಅದೇ ರೀತಿ ಕಮಲ ಪಾಳಯ ಅಧಿಕಾರದ ಗದ್ದುಗೆ ಏರುವ ಮತ್ತೊಂದು ಪ್ರದೇಶ ಪುದುಚೆರಿಯಾಗಿದೆ. ಕೇಂದ್ರಾಡಳಿತ ಪ್ರದೇಶದ 30 ಸೀಟುಗಳ ಪೈಕಿ ಬಹುಮತಕ್ಕೆ ಅಗತ್ಯವಾದ 16 ಕ್ಕೂ ಹೆಚ್ಚು (19 ರಿಂದ 23) ಸೀಟುಗಳನ್ನು ಎನ್‌ಡಿಎ ಒಕ್ಕೂಟ ಬಾಚಿಕೊಳ್ಳಲಿದೆ ಎಂದು ಟೈಮ್ಸ್‌ ನೌ-ಸಿ ವೋಟರ್‌ ಸಮೀಕ್ಷೆ ಹೇಳಿದೆ. ಎಲ್ಲಾ ಸಮೀಕ್ಷೆಗಳು ಹೆಚ್ಚು ಕಡಿಮೆ ಇದೇ ಆಸು ಪಾಸಿನ ಸಂಖ್ಯೆಯನ್ನು ಎನ್‌ಡಿಎಗೆ ನೀಡಿವೆ.
ಎನ್‌ಡಿಎ ಯುಪಿಎ ಇತರ
ಇಂಡಿಯಾ ಟುಡೇ-ಆಕ್ಸಿಸ್‌ ಮೈ ಇಂಡಿಯಾ 20-24 6-10 0-4
ಟೈಮ್ಸ್‌ ನೌ-ಸಿ ವೋಟರ್‌ 19-23 6-10 1-2
ರಿಪಬ್ಲಿಕ್‌-ಸಿಎನ್‌ಎಕ್‌ 16-20 11-13 0-0
ಜನ್‌ ಕೀ ಬಾತ್‌ 19-24 6-11 0-0
ಅಸ್ಸಾಂ, ಪುದುಚೆರಿ ಸೇರಿ ಐದು ರಾಜ್ಯಗಳ ಚುನಾವಣಾ ಫಲಿತಾಂಶ ಮೇ 2 ರಂದು ಪ್ರಕಟವಾಗಲಿದೆ.