6 ರಿಂದ 12 ವರ್ಷದ ಮಕ್ಕಳಿಗೆ ಕೋವ್ಯಾಕ್ಸಿನ್‌ ಲಸಿಕೆ ಪ್ರಯೋಗ: ದಿಲ್ಲಿ ಏಮ್ಸ್‌ನಲ್ಲಿ ನೋಂದಣಿ

ಕೋವ್ಯಾಕ್ಸಿನ್‌ ಲಸಿಕೆಯ ಪ್ರಯೋಗಕ್ಕಾಗಿ 6 ರಿಂದ 12 ವರ್ಷದ ಮಕ್ಕಳ ನೋಂದಣಿ ಪ್ರಕ್ರಿಯೆ ಮಂಗಳವಾರದಿಂದ ಆರಂಭವಾಗಲಿದೆ. ಈ ಕುರಿತು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್‌) ತಿಳಿಸಿರುವುದಾಗಿ ವರದಿಯಾಗಿದೆ.

6 ರಿಂದ 12 ವರ್ಷದ ಮಕ್ಕಳಿಗೆ ಕೋವ್ಯಾಕ್ಸಿನ್‌ ಲಸಿಕೆ ಪ್ರಯೋಗ: ದಿಲ್ಲಿ ಏಮ್ಸ್‌ನಲ್ಲಿ ನೋಂದಣಿ
Linkup
ಹೊಸದಿಲ್ಲಿ: ಲಸಿಕೆಯ ಪ್ರಯೋಗಕ್ಕಾಗಿ 6 ರಿಂದ 12 ವರ್ಷದ ಮಕ್ಕಳ ನೋಂದಣಿ ಪ್ರಕ್ರಿಯೆ ಮಂಗಳವಾರದಿಂದ ಆರಂಭವಾಗಲಿದೆ. ಈ ಕುರಿತು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌) ತಿಳಿಸಿರುವುದಾಗಿ ವರದಿಯಾಗಿದೆ. 2 ರಿಂದ 6 ವರ್ಷದ ಮಕ್ಕಳ ಮೇಲಿನ ಪ್ರಯೋಗದ ನಂತರ ಈ ಪ್ರಕ್ರಿಯೆ ಶುರುವಾಗುತ್ತಿದೆ. 12 ರಿಂದ 18 ವರ್ಷದ ಮಕ್ಕಳ ನೋಂದಣಿ ಮುಗಿದಿದ್ದು, ಮೊದಲ ಡೋಸ್‌ ನೀಡಲಾಗಿದೆ ಎಂದು ಏಮ್ಸ್‌ ಪ್ರಕಟಣೆಯಲ್ಲಿ ತಿಳಿಸಿದೆ. ಭಾರತ ಔಷಧ ಮಹಾನಿಯಂತ್ರಕರು (ಡಿಸಿಜಿಐ) 2 ರಿಂದ 18 ವರ್ಷದ ಮಕ್ಕಳ ಮೇಲೆ ಪ್ರಯೋಗಕ್ಕೆ ಮೇ 12ರಂದು ಅನುಮತಿ ನೀಡಿದ್ದರು ಎಂದು ಏಮ್ಸ್‌ನ ಡಾ.ಸಂಜಯ್‌ ರಾಯ್ ಅವರು ತಿಳಿಸಿದ್ದಾರೆ. ಈ ವರ್ಷದ ಮಕ್ಕಳ ಮೇಲೆ ಲಸಿಕೆ ಪ್ರಯೋಗವು ಮೂರು ಹಂತದಲ್ಲಿ ನಡೆಯಲಿದೆ. 2-6, 6-12 ಮತ್ತು 12-18 ವರ್ಷ ವಯೋಮಾನದ ಗುಂಪುಗಳಲ್ಲಿ ತಲಾ 175 ಮಕ್ಕಳಿಗೆ, 28 ದಿನಗಳ ಅಂತರದಲ್ಲಿ ಲಸಿಕೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು. ಮಕ್ಕಳಲ್ಲಿ ಇನ್ನೂ ಕೋವಿಡ್‌-19 ಪರಿಣಾಮ ಗಾಢವಾಗಿ ಕಾಣುತ್ತಿಲ್ಲ. ಆದರೆ, ಸೋಂಕು ರೂಪಾಂತರಗೊಂಡಲ್ಲಿ ಪ್ರತಿಕೂಲ ಪರಿಣಾಮ ಆಗಬಹುದು. ಹೀಗಾಗಿ, ಪರಿಸ್ಥಿತಿ ಎದುರಿಸಲು ಸಿದ್ಧತೆ ನಡೆದಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.