ಹೊಸದಿಲ್ಲಿ: ಇಂದಿಗೆ ಸರಿಯಾಗಿ ಹದಿಮೂರು ವರ್ಷಗಳ ಹಿಂದೆ ಇದೇ ದಿನ ಇಡೀ ದೇಶವೇ ಬೆಚ್ಚಿಬಿದ್ದಿತ್ತು. ಶಾಂತವಾಗಿ ಭಾರತದೊಳಗೆ ನುಗ್ಗಿದ್ದ ಉಗ್ರರು ಮುಂಬೈನ ಪ್ರತಿಷ್ಠಿತ ತಾಜ್ ಹೋಟೆಲ್ ಮೇಲೆ ದಾಳಿ ನಡೆಸಿ ಅಟ್ಟಹಾಸ ಮೆರೆದಿದ್ದರು.
ತಾಜ್ ಹೋಟೆಲ್ ಮೇಲಿನ ದಾಳಿಯ ವರದಿ ಸುದ್ದಿಯಾಗುತ್ತಿದ್ದಂತೆ ಉಗ್ರ ಅಜ್ಮಲ್ ಕಸಬ್‌ನ ಫೋಟೋ ಮಾಧ್ಯಮಗಳಲ್ಲಿ ಪ್ರಸಾರವಾಗಲು ಶುರುವಾಗಿದ್ದವು. ಅದರ ಜೊತೆಗೆ ಉಗ್ರ ಜೊತೆ ಸಮೀರ್ ಚೌಧರಿ ಅನ್ನುವ ಹೆಸರಿನ ಐಡಿ ಕಾರ್ಡ್ ಕೂಡ ಸಿಕ್ಕಿತ್ತು. ಈ ದಾಳಿಯಲ್ಲಿ ರಕ್ಷಣಾ ಪಡೆ ಒಂಭತ್ತು ಉಗ್ರರನ್ನು ಹತ್ಯೆ ಮಾಡಿದ್ದರೆ, ಅಜ್ಮಲ್ ಕಸಬ್‌ನನ್ನು ಮಾತ್ರ ಗಲ್ಲಿಗೇರಿಸಲಾಗಿತ್ತು. ಅಸಲಿಗೆ ಉಗ್ರ ಅಜ್ಮಲ್ ಕಸಬ್ ತನ್ನನ್ನು ತಾನು ಎಂದು ಬಿಂಬಿಸಲು ಸಂಚು ರೂಪಿಸಿದ್ದ ಎಂಬ ಅಚ್ಚರಿಯ ವಿಚಾರವನ್ನು ಪೊಲೀಸ್ ಅಧಿಕಾರಿಯೊಬ್ಬರು ಬಿಚ್ಚಿಟ್ಟಿದ್ದಾರೆ.
ಈ ಬಗ್ಗೆ ಮುಂಬೈ ದಾಳಿ ಪ್ರಕರಣದ ಪ್ರಮುಖ ತನಿಖಾಧಿಕಾರಿ, ಮುಂಬೈ ಮಾಜಿ ಪೊಲೀಸ್ ಕಮೀಷನರ್ ಅವರು ತಮ್ಮ ‘ಲೆಟ್ ಮಿ ಸೇ ಇಟ್ ನೌ’ (Let Me Say It Now) ಪುಸ್ತಕದಲ್ಲಿ ಹಲವು ಅಚ್ಚರಿಯ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಉಗ್ರ ಅಜ್ಮಲ್ ಕಸಬ್ ಜೊತೆ ಇತ್ತೆಂದು ಹೇಳಲಾದ ಸಮೀರ್ ಚೌಧರಿ ಎಂಬ ಹೆಸರಿನ ನಕಲಿ ಐಡಿ ಕಾರ್ಡ್‌ನಲ್ಲಿ ಹೈದರಾಬಾದ್ ಕಾಲೇಜೊಂದರ ವಿದ್ಯಾರ್ಥಿಯಾಗಿದ್ದು, ವಿಳಾಸ ಬೆಂಗಳೂರಿನದ್ದು ಎಂದು ನಮೂದಿಸಲಾಗಿತ್ತು. ಇದಕ್ಕೆ ಪೂರಕವೆಂಬಂತೆ ಉಗ್ರರು ಸಾರ್ವಜನಿಕ ಪ್ರದೇಶದಲ್ಲಿ ಕಾಣಿಸಿಕೊಂಡಾಗ ಕೈಯ್ಯಲ್ಲಿ ಕೇಸರಿ ದಾರವನ್ನು ಕಟ್ಟಿಕೊಂಡಿದ್ದರು. ಸಾಮಾನ್ಯವಾಗಿ ಹಿಂದುಗಳು ಕೈಗೆ ಕೆಂಪು ದಾರ ಕಟ್ಟಿಕೊಳ್ಳುತ್ತಾರೆ. ಹೀಗಾಗಿ ಕಸಬ್ ಕೈಯಲ್ಲಿ ಕೆಂಪು ದಾರವಿತ್ತು. 2008ರ ಉಗ್ರರ ದಾಳಿಯನ್ನು ಹಿಂದೂ ಉಗ್ರರು ನಡೆಸಿದ ಕೃತ್ಯ ಎಂದು ಬಣ್ಣಿಸುವ ಕೆಲಸ ನಡೆದಿತ್ತು. ಆತನ ಕೈಯಲ್ಲಿರುವ ದಾರವನ್ನು ನೋಡಿ ಆತ ಹಿಂದು ಎಂದು ಜನರು ಅಂದುಕೊಳ್ಳುತ್ತಾರೆ ಎನ್ನುವುದು ಉಗ್ರ ಸಂಘಟನೆಯ ಲೆಕ್ಕಾಚಾರವಾಗಿತ್ತು. ಅದೃಷ್ಟವಶಾತ್ ಆ ರೀತಿ ಆಗಿಲ್ಲ’ ಎಂದು ರಾಕೇಶ್ ಮರಿಯಾ ಹೇಳಿದ್ದಾರೆ.
ಗೋಡೆಯ ಮೇಲಿನ ಬರಹಗಳು ‘ಈ ದಾಳಿಯನ್ನು ನಡೆಸಿದ್ದು ಪಾಕಿಸ್ತಾನ’ ಎಂಬುದನ್ನು ಹೇಳುತ್ತಿದ್ದರೆ, ಇತ್ತ ಕಾಂಗ್ರೆಸ್ ಮುಖಂಡ ಎ.ಆರ್ ಅಂತುಲೇ ಅವರು, ಕಣ್ಣಿಗೆ ಕಂಡಿದ್ದಕ್ಕಿಂತಲೂ ಹೆಚ್ಚಿನದೇನೋ ಆಗಿದೆ. ಹೀಗಾಗಿ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಅವರ ಹತ್ಯೆಯ ತನಿಖೆಯನ್ನು ಪ್ರತ್ಯೇಕವಾಗಿ ನಡೆಸಬೇಕು ಎಂದು ಒತ್ತಾಯಿಸಿದ್ದರು. ಇದಾದ ಬಳಿಕ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರು, ಈ ದಾಳಿಯನ್ನು ನಡೆಸಿದ್ದು ಆರೆಸ್ಸೆಸ್ ಎಂದು ಆರೋಪಿಸುವ ‘ಆರೆಸ್ಸೆಸ್ ಕಿ ಸಾಜಿಶ್-26/11’ (RSS ki Saazish-26/11) ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ಪುಸ್ತಕವನ್ನು ರೋಜ್‌ನಾಮಾ ರಾಷ್ಟ್ರೀಯ ಸಹರಾ ಪತ್ರಿಕೆಯ ಸಂಪಾದಕ ಅಜೀಜ್ ಬರ್ನಿ ಬರೆದಿದ್ದರು.
ಐಎಸ್‌ಐ ಕಾರ್ಯನಿರ್ವಹಿಸುವ ರೀತಿಯನ್ನು ಗಮನಿಸಿದರೆ, ಅದು ದೇಶದೊಳಗೆ ದಾಳಿ ನಡೆಸಿ ಭಾರತದ ಮೇಲೆಯೇ ಆರೋಪಿಸುತ್ತದೆ ಎಂಬುವುದು ಸ್ಪಷ್ಟವಾಗುತ್ತದೆ. ಇದು ಸಿಮಿ ಮತ್ತು ಇಂಡಿಯನ್ ಮುಜಾಹಿದಿನ್‌ನಂತಹ ಸ್ವದೇಶಿ ಭಯೋತ್ಪಾದಕ ಗುಂಪುಗಳನ್ನು ಪೋಷಿಸಲು ಪ್ರಾಥಮಿಕ ಕಾರಣಗಳು. ಸ್ಥಳೀಯ ಉಗ್ರಗಾಮಿ ಸಂಘಟನೆಗಳು ದಾಳಿ ಮಾಡುವಂತೆ ಪ್ರೇರೇಪಿಸುವ ಮೂಲ ಕಾರಣಗಳೆಂದರೆ ತಾನು ದಾಳಿ ಮಾಡಿ, ಈ ಕೃತ್ಯ ತನ್ನದಲ್ಲ ಎಂದು ಸಾರುವುದು. ಇಂತಹ ಅಂಶಗಳನ್ನು ಐಎಸ್‌ಐ (ISI) ಹೊಂದಿದೆ. 26/11 ದಾಳಿ ಪ್ರಕರಣದ ತನಿಖೆ ಅವಧಿಯಲ್ಲಿ ‘ಕರ್ಕರೆಯನ್ನು ಕೊಂದಿದ್ದು ಯಾರು?’ (Who Killed Karkare) ಎಂಬ ಪುಸ್ತಕವನ್ನು ಹೊರತಂದ ನಿವೃತ್ತ ಪೊಲೀಸ್ ಇನ್ಸ್‌ಪೆಕ್ಟರ್, ಪೊಲೀಸ್ ಜನರಲ್ ಎಸ್‌ಂಎಂ ಮುಶ್ರಿಫ್, ತಾಜ್ ಹೋಟೆಲ್ ಮೇಲೆ ದಾಳಿ ನಡೆಸಿದ್ದೇ ಪಾಕಿಸ್ತಾನ ಎಂದು ಬಲವಾಗಿ ಆರೋಪಿಸಿದರು. ಜೊತೆಗೆ ಹೇಮಂತ್ ಕರ್ಕರೆಯ ಹತ್ಯೆಯ ಹಿಂದೆ ಬಲಪಂಥೀಯ ಗುಂಪುಗಳ ಕೈವಾಡ ಇದೆ ಎಂದು ಆರೋಪಿಸಿದರು.
ರಾಕೇಶ್ ಮರಿಯಾ ಅವರು ತಮ್ಮ ಪುಸ್ತಕದಲ್ಲಿ ಅಜ್ಮಲ್ ಕಸಬ್ ಒಬ್ಬ ಹಿಂದು ಉಗ್ರನೆಂದೇ ಬಿಂಬಿಸಲು ಪ್ರಯತ್ನ ನಡೆದಿತ್ತು. ಅದನ್ನು ತಡೆಯದೇ ಇರುತ್ತಿದ್ದರೆ ಅಜ್ಮಲ್ ಕಸಬ್, ಸಮೀರ್ ಚೌಧರಿ ಆಗುತ್ತಿದ್ದ ಎಂದು ಹೇಳಿದ್ದಾರೆ. ‘ನನ್ನ ಕಾರ್ಯಾಚರಣೆಯ ವೇಳೆ ಹಿಂದೂಗಳು ಧರಿಸುವ ಕೆಂಪು ದಾರವನ್ನು ಹಿಡಿದು ನಾನು ಲಷ್ಕರ್ ಉಗ್ರರಿಗೆ ಕೊಟ್ಟೆ. ಹತ್ತು ಮಂದಿ ಆ ಧಾರವನ್ನು ಧರಿಸಿದ್ದರು. ಇದರಿಂದ ಲಷ್ಕರ್ ಉಗ್ರರು ತನಿಖೆ ಪ್ರಾರಂಭವಾದಾಗ ತಿರುವು ಪಡೆಯುತ್ತದೆ ಎಂದು ಅವರು ಭಾವಿಸಿ ಸಂತಸಪಟ್ಟಿದ್ದರು ಎಂದು ಹೇಳಿದ್ದಾರೆ. ಈ ದಾಳಿಗೂ ಮೊದಲು ನವೆಂಬರ್ ಮೊದಲ ವಾರದಲ್ಲಿ ಲಷ್ಕರ್ ಉಗ್ರರು ಭಾರತೀಯ ದೋಣಿಯನ್ನು ವಶಪಡಿಸಿ ಮುಂಬೈ ಮೂಲಕ ಬಂದಿಳಿದು ದಾಳಿ ನಡೆಸಲು ಸಂಚು ರೂಪಿಸಿ ವಿಫಲರಾಗಿದ್ದರು. ಈ ಪ್ಲಾನ್ ವಿಫಲವಾದ ನಂತರ ನಾವು ಮಿಕ್ಕಿ ಮೌಸ್ ಪ್ರಾಜೆಕ್ಟ್ ಎಂದು ಕರೆಯುವ ಡೆನ್ಮಾರ್ಕ್ ಆಪರೇಷನ್‌ಗೆ ನಮ್ಮ ಗಮನವನ್ನು ಕೇಂದ್ರೀಕರಿಸಿದ್ದೆವು. ಅತ್ತ ನವೆಂಬರ್ 26ರಂದು ನನಗೆ ‘ಟಿವಿ ಆನ್ ಮಾಡಿ, ಆಪರೇಷನ್ ಶುರುವಾಗಿದೆ’ ಎಂದು ಸಾಜಿದ್‌ನಿಂದ ಮೆಸೇಜ್ ಬಂದಿತ್ತು ಎಂದು ಅವರು ಹೇಳಿದ್ದಾರೆ.