ರಾಕೇಶ್‌ ಝುಂಝುನ್‌ವಾಲಾ ಹೊಸ ವಿಮಾನ ಸಂಸ್ಥೆಗೆ ಕೈ ಜೋಡಿಸಿದ ಘಟಾನುಘಟಿಗಳು

ಹೂಡಿಕೆದಾರ ರಾಕೇಶ್‌ ಝುಂಝುನ್‌ವಾಲಾ ಆರಂಭಿಸಲು ಉದ್ದೇಶಿಸಿರುವ ಹೊಸ ವಿಮಾನಯಾನ ಕಂಪನಿಯಲ್ಲಿ ಪಾಲುದಾರನಾಗಲು ಇಂಡಿಗೋ ಮಾಜಿ ಅಧ್ಯಕ್ಷ ಆದಿತ್ಯ ಘೋಷ್‌ ನಿರ್ಧರಿಸಿದ್ದಾರೆ. ಜೆಟ್‌ ಏರ್‌ವೇಸ್‌ನ ಮಾಜಿ ಸಿಇಒ ಕೂಡ ಈ ಕಂಪನಿ ಸೇರಲಿದ್ದಾರೆ.

ರಾಕೇಶ್‌ ಝುಂಝುನ್‌ವಾಲಾ ಹೊಸ ವಿಮಾನ ಸಂಸ್ಥೆಗೆ ಕೈ ಜೋಡಿಸಿದ ಘಟಾನುಘಟಿಗಳು
Linkup
ಮುಂಬಯಿ: ಆರಂಭಿಸಲು ಉದ್ದೇಶಿಸಿರುವ ಹೊಸ ಸಂಸ್ಥೆಯಲ್ಲಿ ಪಾಲುದಾರನಾಗಲು ಸಂಸ್ಥೆಯ ಮಾಜಿ ಅಧ್ಯಕ್ಷ ಆದಿತ್ಯ ಘೋಷ್‌ ನಿರ್ಧರಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಜೆಟ್‌ ಏರ್‌ವೇಸ್‌ನ ಮಾಜಿ ಸಿಇಒ ಕೂಡ ಈ ಕಂಪನಿ ಸೇರಲಿದ್ದಾರೆ ಎಂದು ಗೊತ್ತಾಗಿದೆ. ಭಾರತದ ಸಾವಿರಾರು ಕೋಟಿ ರೂ. ಷೇರು ಮಾರುಕಟ್ಟೆ ಹೂಡಿಕೆದಾರ ರಾಕೇಶ್‌ ಝುಂಝುನ್‌ವಾಲಾ, ಕಡಿಮೆ ಪ್ರಯಾಣ ಬೆಲೆಯ ವಿಮಾನಯಾನ ಸಂಸ್ಥೆ ಆರಂಭಿಸಲು ಉದ್ದೇಶಿಸಿದ್ದಾರೆ. ಈ ಕಂಪನಿಯಲ್ಲಿ ಮುಂದಿನ ನಾಲ್ಕು ವರ್ಷಗಳಲ್ಲಿ 70 ವಿಮಾನಗಳನ್ನು ಹೊಂದಲು ಅವರು ಗುರಿ ಹಾಕಿಕೊಂಡಿದ್ದಾರೆ. ಈ ಸಂಸ್ಥೆಗೆ ಎಂದು ಹೆಸರಿಡಲು ಉದ್ದೇಶಿಸಲಾಗಿದೆ. ಕೊರೊನಾದಿಂದಾಗಿ ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಮಾನಯಾನ ಉದ್ಯಮ ಪತರಗುಟ್ಟಿ ಹೋಗಿರುವಾಗಲೇ ಹೊಸ ವಿಮಾನಯಾನ ಸಂಸ್ಥೆ ಆರಂಭಿಸಲು ಝುಂಝುನ್‌ವಾಲಾ ಉದ್ದೇಶಿಸಿದ್ದು, ವಿಮಾನಯಾನ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದೆ. ಹೊಸ ಕಂಪನಿಯಲ್ಲಿ ಝುಂಝುನ್‌ವಾಲಾ ಸುಮಾರು 260 ಕೋಟಿ ರೂ. (35 ಮಿ. ಡಾಲರ್‌) ಹಣಹೂಡಲು ಉದ್ದೇಶಿಸಿದ್ದು, ಕಂಪನಿಯ ಶೇ. 40 ರಷ್ಟು ಷೇರು ಹೊಂದಲು ಮುಂದಾಗಿದ್ದಾರೆ. ಈಗಾಗಲೇ ಕಂಪನಿಗೆ ನಿರಪೇಕ್ಷಣಾ ಪತ್ರ ಪಡೆಯಲು ವಿಮಾನಯಾನ ಇಲಾಖೆಯನ್ನೂ ಅವರು ಸಂಪರ್ಕಿಸಿದ್ದಾರೆ.