ಹುರ್ರಿಯತ್‌ ಬಣಗಳ ನಿಷೇಧಕ್ಕೆ ಕೇಂದ್ರ ಸಿದ್ಧತೆ: ಎನ್‌ಐಎ ದಾಳಿ ವೇಳೆ ಬಯಲಾಗಿದ್ದ ಆ ಭಯಾನಕ ಸತ್ಯವೇನು?

ಪಾಕಿಸ್ತಾನದ ವಿಶ್ವವಿದ್ಯಾಲಯಗಳಲ್ಲಿ ಎಂಬಿಬಿಎಸ್‌ ಸೀಟುಗಳ ಪೈಕಿ ಹುರ್ರಿಯತ್‌ ಮುಖಂಡರಿಗೆ ಕೋಟಾ ನೀಡಲಾಗುತ್ತಿದೆ. ಸುಮಾರು 10-12 ಲಕ್ಷ ರೂ. ಗೆ ವೈದ್ಯಕೀಯ ಸೀಟನ್ನು ಕಾಶ್ಮೀರಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡುವ ಹುರ್ರಿಯತ್‌ ಮುಖಂಡರು ಅದರಲ್ಲಿ ಬರುವ ಹಣ ಒಂದು ಪಾಲನ್ನು ಉಗ್ರ ಚಟುವಟಿಕೆಗೆ ಬಳಸಿಕೊಳ್ಳುತ್ತಿದ್ದಾರೆ. ಇದು ಎನ್‌ಐಎ ದಾಳಿ ವೇಳೆ ತಿಳಿದುಬಂದಿದೆ.

ಹುರ್ರಿಯತ್‌ ಬಣಗಳ ನಿಷೇಧಕ್ಕೆ ಕೇಂದ್ರ ಸಿದ್ಧತೆ: ಎನ್‌ಐಎ ದಾಳಿ ವೇಳೆ ಬಯಲಾಗಿದ್ದ ಆ ಭಯಾನಕ ಸತ್ಯವೇನು?
Linkup
ಶ್ರೀನಗರ: ಹಣ ಅಕ್ರಮ ವರ್ಗಾವಣೆ ಆರೋಪದ ಮೇರೆಗೆ ಜಮ್ಮು ಮತ್ತು ಕಾಶ್ಮೀರದ ಪ್ರತ್ಯೇಕತಾವಾದಿ ಸಂಘಟನೆಯಾದ 'ಹುರ್ರಿಯತ್‌ ಕಾನ್ಫರೆನ್ಸ್‌'ನ ಎರಡೂ ಬಣಗಳ ಮೇಲೆ ಕೇಂದ್ರ ಸರಕಾರವು ನಿಷೇಧ ಹೇರುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗೆ ದಾಳಿ ವೇಳೆ ಬಯಲಾಗಿದ್ದ ಪ್ರಕರಣದಲ್ಲಿ, ಪಾಕಿಸ್ತಾನದ ವಿಶ್ವವಿದ್ಯಾಲಯಗಳಲ್ಲಿ ಎಂಬಿಬಿಎಸ್‌ ಸೀಟುಗಳ ಪೈಕಿ ಹುರ್ರಿಯತ್‌ ಮುಖಂಡರಿಗೆ ಕೋಟಾ ನೀಡಲಾಗುತ್ತಿದೆ. ಸುಮಾರು 10-12 ಲಕ್ಷ ರೂ. ಗೆ ವೈದ್ಯಕೀಯ ಸೀಟನ್ನು ಕಾಶ್ಮೀರಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡುವ ಹುರ್ರಿಯತ್‌ ಮುಖಂಡರು, ಅದರಲ್ಲಿ ತಮ್ಮ ಕಮಿಷನ್‌ ಹಣ ಪಡೆಯುತ್ತಿದ್ದಾರೆ. ಅದರಲ್ಲಿ ಕೆಲವು ಭಾಗವನ್ನು ಕಣಿವೆಯಲ್ಲಿ ಭಯೋತ್ಪಾದನೆ ಚಟುವಟಿಕೆಗಳಿಗೆ ಬಳಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದರ ಹಿನ್ನೆಲೆಯಲ್ಲಿ ಹುರ್ರಿಯತ್‌ ಮುಖಂಡರ ವಿರುದ್ಧ ಹಣ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಅಡಿಯಲ್ಲಿ ಹುರ್ರಿಯತ್‌ ಸಂಘಟನೆ ಮೇಲೆ ಕಾಯಂ ನಿಷೇಧ ಹೇರಲು ಗೃಹ ಸಚಿವಾಲಯ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂದು ತಿಳಿದುಬಂದಿದೆ. ಪಾಕ್‌ ಪೋಷಿತ ಉಗ್ರ ಸಂಘಟನೆಗಳಾದ ಲಷ್ಕರೆ ತೊಯ್ಬಾ, ಹಿಜ್ಬುಲ್‌ ಮುಜಾಹಿದ್ದೀನ್‌, ದುಖ್ತಾರನ್‌-ಮಿಲ್ಲತ್‌ನ ಉಗ್ರರಿಗೆ ಮತ್ತು ಅವರ ಸಹಚರರಿಗೆ ಆಶ್ರಯ ಕಲ್ಪಿಸಲು ಕಮಿಷನ್‌ ಹಣವನ್ನು ಪ್ರತ್ಯೇಕತಾವಾದಿ ನಾಯಕರು ಬಳಸುತ್ತಿರುವ ಬಗ್ಗೆ ತನಿಖಾ ಸಂಸ್ಥೆಗಳು ಪತ್ತೆ ಮಾಡಿವೆ. 26 ಸಮೂಹಕ್ಕೆ ಇಬ್ಬರು ನಾಯಕರು: 1993ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿದ್ದ 26 ಪ್ರಾದೇಶಿಕ ಸಂಘಟನೆಗಳು ಒಟ್ಟಾಗಿ ಹುರ್ರಿಯತ್‌ ಕಾನ್ಫರೆನ್ಸ್‌ ಸ್ಥಾಪಿಸಿಕೊಂಡು, ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸ ತೊಡಗಿದವು. ಸಂಘಟನೆಗಳ ಪೈಕಿ ಪಾಕಿಸ್ತಾನ ಪರವಾದ, ನಿಷೇಧಿತ ಸಂಘಟನೆಗಳಾದ ಜಮಾತ್‌-ಇ-ಇಸ್ಲಾಮಿ, ಜೆಕೆಎಲ್‌ಎಫ್‌ ಕೂಡ ಇದ್ದದ್ದು ಗಮನಾರ್ಹ. ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ 2005ರಲ್ಲಿ ಹುರ್ರಿಯತ್‌ ಸಂಘಟನೆ ಎರಡು ಬಣಗಳಾಗಿ ಒಡೆದು ಹೋಯಿತು. ಮೂಲಭೂತವಾದಿಗಳ ಬಣಕ್ಕೆ ಸಯ್ಯದ್‌ ಅಲಿ ಶಾ ಗಿಲಾನಿ ನಾಯಕನಾದರೆ, ಕಣಿವೆ ಸುಧಾರಣೆಗೆ ಕೆಲವು ಸಂಧಾನಗಳಿಗೆ ಸಿದ್ಧವಿದ್ದ ಬಣಕ್ಕೆ ಮಿರ್ವೈಜ್‌ ನಾಯಕನಾದ.