ಮೇ 5ಕ್ಕೆ ಮಮತಾ ಬ್ಯಾನರ್ಜಿ, 7ಕ್ಕೆ ಎಂ.ಕೆ. ಸ್ಟಾಲಿನ್‌ ಪ್ರಮಾಣ ವಚನ; ಕೇರಳಲ್ಲಿ ಸ್ವಲ್ಪ ಲೇಟ್‌

ಮಮತಾ ಬ್ಯಾನರ್ಜಿ ಅವರು ಟಿಎಂಸಿ ಶಾಸಕಾಂಗ ಪಕ್ಷದ ನಾಯಕಿಯಾಗಿ ಸೋಮವಾರ ಆಯ್ಕೆಯಾಗಿದ್ದು, ಇದೇ ಮೇ 5ರಂದು ಅವರು ಮೂರನೇ ಅವಧಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಮೇ 5ಕ್ಕೆ ಮಮತಾ ಬ್ಯಾನರ್ಜಿ, 7ಕ್ಕೆ ಎಂ.ಕೆ. ಸ್ಟಾಲಿನ್‌ ಪ್ರಮಾಣ ವಚನ; ಕೇರಳಲ್ಲಿ ಸ್ವಲ್ಪ ಲೇಟ್‌
Linkup
ಹೊಸದಿಲ್ಲಿ: ಪಂಚರಾಜ್ಯ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ಐದೂ ರಾಜ್ಯಗಳಲ್ಲಿ ಸರಕಾರ ರಚನೆ ಕಸರತ್ತು ವೇಗ ಪಡೆದಿದೆ. ನೂತನ ಮುಖ್ಯಮಂತ್ರಿಗಳ ಪ್ರಮಾಣ ವಚನಕ್ಕೆ ವೇದಿಕೆ ಸಜ್ಜಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಅವರು ಟಿಎಂಸಿ ಶಾಸಕಾಂಗ ಪಕ್ಷದ ನಾಯಕಿಯಾಗಿ ಸೋಮವಾರ ಆಯ್ಕೆಯಾಗಿದ್ದು, ಮೇ 5ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ತಮಿಳುನಾಡಿನ ನೂತನ ಸಿಎಂ ಆಗಿ ಎಂ.ಕೆ. ಸ್ಟಾಲಿನ್‌ ಅವರು ಮೇ 7ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇತ್ತ ಕೇರಳದಲ್ಲಿ ಸರಕಾರ ರಚನೆ ಚರ್ಚೆಗೆ ಮಂಗಳವಾರ ಸಿಪಿಐ-ಎಂ ಸಭೆ ನಡೆಯಲಿದ್ದು, ಪಿಣರಾಯಿ ವಿಜಯನ್‌ ಅವರು ವಾರಾಂತ್ಯದೊಳಗೆ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಸಾಧ್ಯತೆಯಿದೆ. ಅಸ್ಸಾಂನಲ್ಲಿ ಮುಖ್ಯಮಂತ್ರಿ ಆಯ್ಕೆ ಕುತೂಹಲ ಮುಂದುವರಿದಿದೆ. ಹಾಲಿ ಸಿಎಂ ಸರ್ಬಾನಂದ ಸೋನೊವಾಲಾ ಅಥವಾ ಹಿಂಮಂತ ಬಿಸ್ವಾ ಶರ್ಮಾ ಹೆಸರು ಚಾಲ್ತಿಯಲ್ಲಿದ್ದು, ಇಬ್ಬರ ಪೈಕಿ ಯಾರಿಗೆ ಪಟ್ಟ ಎಂಬುದನ್ನು ಬಿಜೆಪಿ ಹೈಕಮಾಂಡ್‌ ನಿರ್ಧರಿಸಲಿದೆ ಎನ್ನಲಾಗಿದೆ. ಪುದುಚೆರಿಯಲ್ಲಿ ಬಿಜೆಪಿಯ ಮಿತ್ರಪಕ್ಷ ಎಐಎನ್‌ಆರ್‌ ಕಾಂಗ್ರೆಸ್‌ನ ವರಿಷ್ಠ ಎನ್‌.ಆರ್‌. ರಂಗಸ್ವಾಮಿ ಅವರು ಲೆಫ್ಟಿನೆಂಟ್‌ ಗವರ್ನರ್‌ ಅವರನ್ನು ಭೇಟಿ ಮಾಡಿ, ಸರಕಾರ ರಚನೆಯ ಹಕ್ಕು ಮಂಡಿಸಿದ್ದಾರೆ.