ಸೋದರತ್ತೆ ಮಗಳ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಿರ್ದೇಶಕ ಚೇತನ್ ಕುಮಾರ್!

'ಬಹದ್ದೂರ್', 'ಭರಾಟೆ' ಸಿನಿಮಾಗಳ ನಿರ್ದೇಶಕ ಚೇತನ್ ಕುಮಾರ್ ಅವರು ಸೋದರತ್ತೆ ಮಗಳು ಮಾನಸಾ ಜೊತೆ ಮೈಸೂರಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ

ಸೋದರತ್ತೆ ಮಗಳ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಿರ್ದೇಶಕ ಚೇತನ್ ಕುಮಾರ್!
Linkup
ಕನ್ನಡದ ಅನೇಕ ಸಿನಿಮಾಗಳಿಗೆ ಹಾಡು ಬರೆದಿರುವ ಹಾಗೂ 'ಬಹದ್ದೂರ್', 'ಭರಾಟೆ' ಸಿನಿಮಾಗಳ ನಿರ್ದೇಶಕ ಅವರು ಸೋದರತ್ತೆ ಮಗಳ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಲಾಕ್‌ಡೌನ್ ಇರೋದರಿಂದ ಬಹಳ ಸರಳವಾಗಿ ಚೇತನ್ ಮದುವೆ ನಡೆದಿದೆ. ಮೈಸೂರಿನ ಕಲ್ಪವೃಕ್ಷ ರಾಘವೇಂದ್ರ ಸ್ವಾಮಿ ಮಠದಲ್ಲಿ ಚೇತನ್ ಹಾಗೂ ಮಾನಸಾ ಮದುವೆ ನಡೆದಿದೆ. ಬಹಳ ವರ್ಷಗಳಿಂದ ಚೇತನ್ ಹಾಗೂ ಮಾನಸಾ ಪ್ರೀತಿ ಮಾಡುತ್ತಿದ್ದರು. ಅವರಿಬ್ಬರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಿದೆ. ಚೇತನ್ ಮದುವೆಯಲ್ಲಿ ಕೆಲವು ಸ್ಯಾಂಡಲ್‌ವುಡ್ ಮಂದಿ ಆಗಮಿಸಿದ್ದರು. 'ಅಯೋಗ್ಯ' ಸಿನಿಮಾ ನಿರ್ದೇಶಕ ಮಹೇಶ್, ಧ್ರುವ ಸರ್ಜಾ, ಪ್ರೇರಣಾ ಶಂಕರ್ ಅವರು ಚೇತನ್ ಮದುವೆಗೆ ಆಗಮಿಸಿ ಶುಭಾ ಹಾರೈಸಿದ್ದಾರೆ. ಕಳೆದ ಮಾರ್ಚ್ ತಿಂಗಳಲ್ಲಿ ಚೇತನ್-ಮಾನಸಾ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮಾನಸಾ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಪುನೀತ್ ರಾಜ್‌ಕುಮಾರ್ ನಟನೆಯ 'ಜೇಮ್ಸ್' ಸಿನಿಮಾಕ್ಕೆ ಚೇತನ್ ನಿರ್ದೇಶನ ಮಾಡುತ್ತಿದ್ದಾರೆ. ಲಾಕ್‌ಡೌನ್ ನಂತರದಲ್ಲಿ ಈ ಸಿನಿಮಾದ ಶೂಟಿಂಗ್ ನಡೆಯಲಿದೆ. ಕೊನೆಯದಾಗಿ ಚೇತನ್ ನಿರ್ದೇಶನದ 'ಭರಾಟೆ' ಸಿನಿಮಾ ರಿಲೀಸ್ ಆಗಿತ್ತು. ಆದರೆ ಬಾಕ್ಸ್‌ ಆಫೀಸ್‌ನಲ್ಲಿ ಈ ಸಿನಿಮಾ ಅಷ್ಟಾಗಿ ಯಶಸ್ಸು ಗಳಿಸಲಿಲ್ಲ.