ವೈಯಕ್ತಿಕ ಜೀವನದ ಕುರಿತ ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಿದ 'ನಮ್ಮೂರ ಮಂದಾರ ಹೂವೇ' ನಟಿ ಪ್ರೇಮಾ!

'ಓಂ', 'ಕನಸುಗಾರ', 'ಸೂರ್ಯವಂಶ', 'ನಮ್ಮೂರ ಮಂದಾರ ಹೂವೇ' ಸಿನಿಮಾಗಳ ನಟಿ ಪ್ರೇಮಾ ಅವರ ವೈಯಕ್ತಿಕ ಜೀವನದ ಕುರಿತು ಸುಳ್ಳು ಸುದ್ದಿ ಹರಡಿದ್ದು, ಅವೆಲ್ಲವೂ ಕಟ್ಟು ಕಥೆ ಅಂತ ಪ್ರೇಮಾ ಹೇಳಿಕೊಂಡಿದ್ದಾರೆ. ಆ ಕುರಿತು ಮಾಹಿತಿ ಇಲ್ಲಿದೆ.

ವೈಯಕ್ತಿಕ ಜೀವನದ ಕುರಿತ ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಿದ 'ನಮ್ಮೂರ ಮಂದಾರ ಹೂವೇ' ನಟಿ ಪ್ರೇಮಾ!
Linkup
ಕನ್ನಡದಲ್ಲಿ ಅನೇಕ ಹಿಟ್ ಸಿನಿಮಾ ನೀಡಿರುವ ನಟಿ ಅವರು ಸದ್ಯ ಯಾವುದೇ ಚಿತ್ರಗಳಲ್ಲಿ ಅಭಿನಯಿಸುತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿಯೂ ಅಷ್ಟಾಗಿ ಸಕ್ರಿಯವಾಗಿರದ ಅವರ ಬಗ್ಗೆ ಕೆಲ ಗಾಸಿಪ್‌ಗಳು ಹರಡುತ್ತಿವೆ. ಪ್ರೇಮಾ ಎರಡನೇ ಮದುವೆಯಾಗುತ್ತಿದ್ದಾರೆ ಎಂದೆಲ್ಲ ಹೇಳಲಾಗುತ್ತಿದೆಯಂತೆ, ಇದೆಲ್ಲವೂ ಸುಳ್ಳು ಸುದ್ದಿ ಅಂತ ಸ್ವತಃ ಪ್ರೇಮಾ ಅವರೇ ಹೇಳಿದ್ದಾರೆ. ಏನಿದು ಗಾಸಿಪ್? "ನಟಿ ಪ್ರೇಮಾ ಮೊದಲ ಮದುವೆ ಮುರಿದು ಬಿದ್ದ ನಂತರದಲ್ಲಿ ಅವರ ತಂದೆ ನಿಧನರಾದರು. ಇನ್ನು ಪ್ರೇಮಾರಿಗೆ ಎರಡನೇ ಮದುವೆ ಮಾಡಿಕೊಳ್ಳಲು ಮನೆಯಲ್ಲಿ ತುಂಬ ಒತ್ತಾಯ ಮಾಡಲಾಗುತ್ತಿದೆ. ಈಗ ಅವರು ಮದುವೆಯಾಗಲಿದ್ದಾರೆ. ಪ್ರೇಮಾರಿಗೆ ಖಿನ್ನತೆಯಿದೆ. ಸೋಶಿಯಲ್ ಮೀಡಿಯಾದಲ್ಲಿ ಪ್ರೇಮಾ ಅವರು ಮತ್ತೆ ಮದುವೆಯಾಲಿ ಎಂಬೆಲ್ಲ ಅಭಿಪ್ರಾಯಗಳು ಕೇಳಿ ಬರುತ್ತಿವೆ" ಎಂದೆಲ್ಲ ಗಾಸಿಪ್‌ಗಳು ಹರಡುತ್ತಿವೆಯಂತೆ. ಸ್ಪಷ್ಟನೆ ನೀಡಿದ ಪ್ರೇಮಾ ನಟಿ ಪ್ರೇಮಾ ಅವರು ಈ ವಿಚಾರದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇವೆಲ್ಲವೂ ಸುಳ್ಳು ಸುದ್ದಿ ಎಂದು ನಟಿ ಪ್ರೇಮಾ ಸ್ಪಷ್ಟನೆ ನೀಡಿದ್ದಾರೆ. ಈ ಹಿಂದೆ ಕೂಡ ಅವರ ವೈಯಕ್ತಿಕ ವಿಚಾರದ ಬಗ್ಗೆ ಸಾಕಷ್ಟು ಊಹಾಪೋಹಗಳು ಹಬ್ಬಿದಾಗ 'ವೀಕೆಂಡ್ ವಿಥ್ ರಮೇಶ್' ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರೇಮಾ ಅವರು "ಮದುವೆ ವಿಚಾರ ಏನಾಯ್ತು ಅಂತ ಹೇಳಲು ಇಷ್ಟವಿಲ್ಲ, ನಾನು ಆರೋಗ್ಯವಾಗಿದ್ದೇನೆ, ನನಗೆ ಮಕ್ಕಳಿಲ್ಲ" ಎಂದು ಹೇಳಿದ್ದರು. ಸದ್ಯ ನಟನೆಯಿಂದ ಪ್ರೇಮಾ ದೂರ 2009ರಲ್ಲಿ 'ಶಿಶಿರ' ಸಿನಿಮಾದಲ್ಲಿ ಬಣ್ಣ ಹಚ್ಚಿದ್ದ ಪ್ರೇಮಾ ಅವರು 2017ರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಜೊತೆಗೆ 'ಉಪೇಂದ್ರ ಮತ್ತೆ ಬಾ' ಸಿನಿಮಾದಲ್ಲಿ ನಟಿಸಿದ್ದರು. ಅದಾದ ನಂತರದಲ್ಲಿ ಅವರು ಮತ್ತೆ ತೆರೆ ಮೇಲೆ ಕಾಣಿಸಿಕೊಂಡಿಲ್ಲ. ನಟಿ ಪ್ರೇಮಾ, ಡಾ ಶಿವರಾಜ್‌ಕುಮಾರ್, ಉಪೇಂದ್ರ ನಟಿಸಿದ್ದ 'ಓಂ' ಸಿನಿಮಾಕ್ಕೆ 26 ವರ್ಷ ಪೂರೈಸಿದೆ. ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು.