'ಲವ್ ಯೂ ರಚ್ಚು' ಅವಘಡ; 'ಹೆದರಿಕೊಂಡು ನಿರೀಕ್ಷಣಾ ಜಾಮೀನಿಗೆ ನಾನು ಅರ್ಜಿ ಹಾಕಿರಲಿಲ್ಲ'- ನಟ ಅಜಯ್ ರಾವ್

ರಾಮನಗರದ ಬಿಡದಿ ಬಳಿ 'ಲವ್ ಯೂ ರಚ್ಚು' ಸಿನಿಮಾದ ಶೂಟಿಂಗ್ ಮಾಡುವಾಗ ನಡೆದ ವಿದ್ಯುತ್‌ ಅವಘಡದಲ್ಲಿ ಫೈಟರ್‌ ವಿವೇಕ್‌ ಎಂಬುವವರು ನಿಧನರಾಗಿದ್ದರು. ಇದೀಗ ಆ ಕೇಸ್‌ಗೆ ಸಂಬಂಧಪಟ್ಟಂತೆ ನಟ ಅಜಯ್ ರಾವ್ ಅವರನ್ನು ಬಿಡದಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮಾಡಲಾಗಿದೆ.

'ಲವ್ ಯೂ ರಚ್ಚು' ಅವಘಡ; 'ಹೆದರಿಕೊಂಡು ನಿರೀಕ್ಷಣಾ ಜಾಮೀನಿಗೆ ನಾನು ಅರ್ಜಿ ಹಾಕಿರಲಿಲ್ಲ'- ನಟ ಅಜಯ್ ರಾವ್
Linkup
'ಕೃಷ್ಣ' ಅಜಯ್‌ ರಾವ್‌ ಮತ್ತು ಅಭಿನಯದ '' ಸಿನಿಮಾದ ಸೆಟ್‌ನಲ್ಲಿ ಆಗಸ್ಟ್‌ 9ರಂದು ನಡೆದ ವಿದ್ಯುತ್ ಅವಘಡದಿಂದಾಗಿ ಫೈಟರ್ ವಿವೇಕ್ ಸಾವನ್ನಪ್ಪಿದ್ದರು. ಆ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಲು ನಟ ಅಜಯ್ ರಾವ್‌ಗೆ ನೋಟಿಸ್‌ ನೀಡಲಾಗಿತ್ತು. ಇಂದು (ಆ.26) ರಾಮನಗರ ಜಿಲ್ಲೆಯ ಬಿಡದಿ ಪೊಲೀಸ್ ಠಾಣೆಗೆ ಅಜಯ್ ಹಾಜರಾಗಿದ್ದರು. ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಹೆದರಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿಲ್ಲ 'ನಾನು ಹೆದರಿಕೊಂಡು ಜಾಮೀನಿಗೆ ಅರ್ಜಿ ಹಾಕಿಲ್ಲ. ನಾನು ಓದಿರುವುದು ಎಸ್‌ಎಸ್‌ಎಲ್‌ಸಿ ಅಷ್ಟೇ, ಪಿಯುಸಿ ಕೂಡ ಮುಗಿಸಿಲ್ಲ. ಆದರೆ ನನಗೆ ಜ್ಙಾನ ಇದೆ. ನನಗೆ ಹೆದರಿಕೆ ಇದ್ದಿದ್ದರೇ ಓದು ನಿಲ್ಲಿಸಿ ಬೆಂಗಳೂರಿಗೆ ನಾನು ಬರುತ್ತಿರಲಿಲ್ಲ. ನನಗಾಗಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿಲ್ಲ. ನನ್ನನ್ನು ನಂಬಿಕೊಂಡು ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿರುವ ನಿರ್ಮಾಪಕರಿದ್ದಾರೆ. ಇನ್ನು, ಹಲವು ಸಿನಿಮಾಗಳ ಕೆಲಸಗಳು ಬಾಕಿ ಇವೆ. ಸಿನಿಮಾದ ರೀ-ರಿಲೀಸ್ ಇದೆ. ರಿಲೀಸ್‌ಗೆ ರೆಡಿಯಾಗಿರುವ ಸಿನಿಮಾಗಳು ಕೂಡ ಇದ್ದಾವೆ. ಎರಡು ವರ್ಷದ ಹಿಂದೆ ಕಮಿಟ್ ಆಗಿರುವ ಸಿನಿಮಾ ಕೂಡ ಇದೆ. ನಾನು ಜೈಲಿನಿಂದ ಹಾರಿಕೊಂಡು ಬಂದು ಶೂಟಿಂಗ್ ಮಾಡುವೆ ಅಂತ ಅವರಿಗೆ ಹೇಳೋದಕ್ಕೆ ಆಗುತ್ತಾ? ಕಾನೂನಾತ್ಮಕವಾಗಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದೇನೆ, ಭಯದಿಂದ ಅಲ್ಲ' ಎಂದು ಅವರು ಹೇಳಿದ್ದಾರೆ. ಇಂದು ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಅಜಯ್‌ಗೆ ನಿರೀಕ್ಷಣಾ ಜಾಮೀನು ಸಿಕ್ಕಿದೆ. ಕೆಲವರು ತಪ್ಪು ಮಾಹಿತಿ ನೀಡಿದ್ದಾರೆ 'ಗಾಯಾಳು ರಂಜಿತ್‌ಗೆ ಕೆಲವರು ತಪ್ಪು ಮಾಹಿತಿ ನೀಡಿದ್ದಾರೆ. ಖಾಸಗಿಯಾಗಿ ವಿಡಿಯೋ ಮಾಡಿ ಅವರಿಂದ ತಪ್ಪಾಗಿ ಹೇಳಿಸಿದ್ದಾರೆ. ಅದರ ಅವಶ್ಯಕತೆ ಏನಿತ್ತು ಅನ್ನೋದು ಗೊತ್ತಿಲ್ಲ. ಕೆಲವರು ಕೆಟ್ಟದಾಗಿ ಬಿಂಬಿಸುತ್ತಾರೆ, ಒಳ್ಳೆಯದನ್ನು ಬಿಂಬಿಸುತ್ತಾರೆ. ಅದಕ್ಕೆಲ್ಲ ನಾವು ತಲೆಕೆಡಿಸಿಕೊಳ್ಳೋಕೆ ಆಗಲ್ಲ. ಸೆಟ್‌ನಲ್ಲಿ ನಾನೊಬ್ಬನೇ ಇರಲಿಲ್ಲ. ಎಲ್ಲರೂ ಇದ್ದಾಗ ನಾನು ಎಲ್ಲರಂತೆ ಹೋಗಲು ಆಗಲ್ಲ. ನಾನು ಒಬ್ಬ ತಿಳುವಳಿಕೆ ಇರುವ ವ್ಯಕ್ತಿ. ಗುಂಪು ಸೇರಿರುವ ಸ್ಥಳದಲ್ಲಿ ನಾನು ಹೋಗೋದು ಸರಿಯಲ್ಲ. ಬೇರೆಯವರು ಇದ್ದಾಗ ನಾನು ಕೂಲ್ ಆಗಿ ಮುಂದಿನ ಬಗ್ಗೆ ಯೋಚನೆ ಮಾಡಬೇಕು' ಎಂದು ಹೇಳಿದ್ದಾರೆ. ಹೀರೋ ಮೊದಲು ಹೋಗಬೇಕೆಂದು ರೂಲ್ಸ್ ಮಾಡಲಿ! 'ಫಿಲ್ಮ್ ಚೇಂಬರ್ ಒಂದು ರೂಲ್ಸ್ ಮಾಡಲಿ, ಚಿತ್ರೀಕರಣದ ವೇಳೆ ಏನೇ ಆದರೂ ಮೊದಲು ಹೀರೋ ಹೋಗಬೇಕೆಂದು.... ಈ ರೀತಿ ತಪ್ಪು ಮಾಹಿತಿ ಹಬ್ಬಿಸುತ್ತಿರುವವರು ಸಿಕ್ಕರೆ ಒಂದು ನಾಲ್ಕು ಒಳ್ಳೆಯ ಮಾತು ಹೇಳಬಹುದು. ಆದರೆ, ಅಂತಹವರು ಯಾರು ಎಂದೇ ಗೊತ್ತಿಲ್ಲ! ಅಂದು ಘಟನೆ ನಡೆದಾಗ ನಾಯಕಿ ಇರಲಿಲ್ಲ, ಅವತ್ತು ಬರೀ ಪ್ಯಾಚ್ ವರ್ಕ್ ನಡೆಯುತ್ತಿತ್ತು ಅಷ್ಟೇ. ಆದರೆ ಸಾಕ್ಷ್ಯಗಳನ್ನು ನಾಶಪಡಿಸುವ ಕೆಲಸವನ್ನು ಚಿತ್ರತಂಡ ಮಾಡಿಲ್ಲ. ನಿರ್ಮಾಪಕರು ಆತನ ಕುಟುಂಬಕ್ಕೆ ಏನು ಸಹಾಯ ಮಾಡಬೇಕೋ, ಮಾಡುತ್ತಾರೆ. ನಾನು ಸಹ ವಿವೇಕ್ ಕುಟುಂಬಕ್ಕೆ ನೆರವಾಗುವೆ. ಆದರೆ, ಇದಕ್ಕೂ ಹೀರೋನೇ ಮೊದಲು ಬರಬೇಕು ಅಂದ್ರೆ ಅದಕ್ಕೂ ರೆಡಿ ಇದ್ದೇನೆ. ನಿರ್ಮಾಪಕರಿಂದ ಆತನ ಕುಟುಂಬಕ್ಕೆ ಚೆಕ್ ಸಿಕ್ಕಿಲ್ಲ ಅನ್ನೋ ವಿಚಾರದ ಬಗ್ಗೆ ಮಾತನಾಡಲ್ಲ, ಆ ವಿಚಾರ ನನಗೆ ಗೊತ್ತಿಲ್ಲ. ನಿರ್ಮಾಪಕರು ನನ್ನ ಸಂಪರ್ಕಕ್ಕೆ ಸಿಕ್ಕಿಲ್ಲ. ಮುಂದೆ ಮತ್ತೆ ನನ್ನನ್ನು ವಿಚಾರಣೆಗೆ ಕರೆದರೆ ಬರುತ್ತೇನೆ' ಎಂದು ಅಜಯ್ ರಾವ್ ಹೇಳಿದ್ದಾರೆ.