ಮಗನನ್ನು ತುಂಡು ತುಂಡಾಗಿ ಕೊಲೆ ಮಾಡಿದ್ದಕ್ಕಾಗಿ ಪಶ್ಚಾತ್ತಾಪವಿಲ್ಲ ಎಂದ ನಿರ್ದೇಶಕನ ತಂದೆ!

ಯಾವುದಾವುದೋ ಕಾರಣಕ್ಕೆ ಕೊಲೆ ನಡೆಯುತ್ತದೆ. ಅಂತೆಯೇ ಮಗ ಮದುವೆ ಆಗಿಲ್ಲ ಎನ್ನುವ ಕಾರಣಕ್ಕೆ ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಿದ್ದ ಮಗನನ್ನು ಪಾಲಕರು ಕೊಲೆ ಮಾಡಿದ್ದಾರೆ. ಆ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಮಗನನ್ನು ತುಂಡು ತುಂಡಾಗಿ ಕೊಲೆ ಮಾಡಿದ್ದಕ್ಕಾಗಿ ಪಶ್ಚಾತ್ತಾಪವಿಲ್ಲ ಎಂದ ನಿರ್ದೇಶಕನ ತಂದೆ!
Linkup
ಲಂಡನ್: ಈಗಾಗಲೇ ವಿಶ್ವದಲ್ಲಿ ಚಿಕ್ಕ ಚಿಕ್ಕ ಕಾರಣಕ್ಕೆ ಕೊಲೆ ನಡೆದಿರುವುದನ್ನು ಕೇಳಿದ್ದೇವೆ. ನೂರು ರೂಪಾಯಿಗೂ ಕೊಲೆ ನಡೆದಿರಬಹುದು. ಮಗ ಮದುವೆಯಾಗಿಲ್ಲ ಎನ್ನುವ ಕಾರಣಕ್ಕೆ ಕೊಲೆ ಮಾಡಲಾಗಿದೆಯಂತೆ. ಹೌದು, ಲಂಡನ್‌ನಲ್ಲಿ ಈ ಕೊಲೆ ನಡೆದಿದೆ. ಬಾಬಕ್ ಮದುವೆ ಆಗಿರಲಿಲ್ಲ ಇರಾನ್ ಮೂಲದ ಬಾಬಕ್ ಖೊರಮ್ದಿನ್ ಲಂಡನ್‌ನಲ್ಲಿ ವಾಸ ಮಾಡುತ್ತಿದ್ದರು. 47 ವರ್ಷದ ಅವರು ಟೆಹ್ರಾನ್ ವಿಶ್ವವಿದ್ಯಾಲಯದಲ್ಲಿ ಫಿಲ್ಮ್‌ ಮೇಕಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಆದರೆ ಅವರು ಮದುವೆ ಮಾತ್ರ ಆಗಿರಲಿಲ್ಲ. ಮಗ ಮದುವೆ ಆಗಿಲ್ಲ ಅನ್ನೋ ಬಾಬಕ್ ಪಾಲಕರಿಗೆ ಬೇಸರ ತರಿಸುತ್ತಿತ್ತು. ಇದಕ್ಕಾಗಿಯೇ ಸಾಕಷ್ಟು ಜಗಳಗಳು ಕೂಡ ನಡೆದಿವೆ. ಪಾಲಕರಿಗೆ ಮುಜುಗರ ಮಗನಿಗೆ ಮದುವೆಯಾಗಿಲ್ಲ ಅಂತ ಹೇಳಿಕೊಳ್ಳೋದು ಬಾಬಕ್ ಪಾಲಕರಿಗೆ ಮುಜುಗರ ತರುತ್ತಿತ್ತು. ಸಾಕಷ್ಟು ಅವಮಾನ ಕೂಡ ಆಗುತ್ತಿದ್ದರಿಂದ ಪಾಲಕರು ಮಗನನ್ನು ಕೊಲೆ ಮಾಡುವ ನಿರ್ಧಾರ ಮಾಡಿದ್ದಾರೆ. ತಂದೆ-ತಾಯಿ ಕೊಲೆ ಮಾಡಿರುವುದಕ್ಕೆ ಸಾಕ್ಷಿ ಪುರಾವೆಗಳು ಸ್ಥಳೀಯ ಪೊಲೀಸರಿಗೆ ಲಭ್ಯವಾಗಿದೆಯಂತೆ. 2010ರಲ್ಲಿ ಲಂಡನ್‌ಗೆ ಹೋಗಿ ಬಂದಾದ ನಂತರ ಇರಾನ್‌ನಲ್ಲಿ ವಿಚಾರವಾಗಿ ಮಕ್ಕಳಿಗೆ ಪಾಠ ಮಾಡುತ್ತಿದ್ದರಂತೆ. ತಪ್ಪು ಒಪ್ಪಿಕೊಂಡ ಪಾಲಕರು ಈ ಕೊಲೆಯನ್ನು ಮರ್ಯಾದಾ ಹತ್ಯೆ ಎಂದು ಪರಿಗಣಿಸಲಾಗುತ್ತಿದೆ. ಇನ್ನು ಬಾಬರ್ ಅವರ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಗಾರ್ಬೇಜ್ ಬ್ಯಾಗ್‌, ಸೂಟ್‌ಕೇಸ್‌ನಲ್ಲಿ ಹಾಕಲಾಗಿದೆ. "ನನ್ನ ಮಗ ಒಬ್ಬಂಟಿಯಾಗಿದ್ದ. ನಮಗೆ ದೌರ್ಜನ್ಯ ನೀಡುತ್ತಿದ್ದ, ನಮ್ಮ ಜೀವ ಅಪಾಯದಲ್ಲಿತ್ತು. ಒಂದು ದಿನವೂ ನಾವು ಸುರಕ್ಷಿತವಾಗಿರಲಿಲ್ಲ. ಅವನಿಗೆ ಏನು ಬೇಕೋ ಅದನ್ನೇ ಮಾಡುತ್ತಿದ್ದ. ಹೀಗಾಗಿ ನಾನು ಮತ್ತು ಅವನ ತಾಯಿ ಸೇರಿಕೊಂಡು ಇನ್ನುಮುಂದೆ ನಮ್ಮ ಗೌರವ ಹಾಳುಮಾಡಿಕೊಳ್ಳಬಾರದು ಎಂದು ಕೊಲೆ ಮಾಡಿದೆವು. ಈ ಬಗ್ಗೆ ಪಶ್ಚಾತ್ತಾಪ ಕೂಡ ಇಲ್ಲ" ಎಂದು ಬಾಬರ್ ತಂದೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ.