ಮೆಕ್ಸಿಕೋ, ಪಾಕಿಸ್ತಾನ ಹಿಂದಿಕ್ಕಲು ಅಲ್ಫಾನ್ಸೊ ಜತೆ ಇತರ ಮಾವಿನ ಹಣ್ಣುಗಳ ರಫ್ತಿಗೆ ಭಾರತ ಸಿದ್ಧತೆ

ಭಾರತ ಅಲ್ಫಾನ್ಸೊ ಮಾತ್ರವಲ್ಲದೆ ಇತರ ಮಾವಿನ ಹಣ್ಣುಗಳ ರಫ್ತಿಗೂ ಮಾರುಕಟ್ಟೆಯನ್ನು ಕಂಡುಕೊಳ್ಳುತ್ತಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಬಂಗಾಳದ ಹಿಮಸಾಗರ ಮಾವು ದಕ್ಷಿಣ ಕೊರಿಯಾಗೆ ರಫ್ತಾಗಲಿದೆ.

ಮೆಕ್ಸಿಕೋ, ಪಾಕಿಸ್ತಾನ ಹಿಂದಿಕ್ಕಲು ಅಲ್ಫಾನ್ಸೊ ಜತೆ ಇತರ ಮಾವಿನ ಹಣ್ಣುಗಳ ರಫ್ತಿಗೆ ಭಾರತ ಸಿದ್ಧತೆ
Linkup
ಹೊಸದಿಲ್ಲಿ: ಭಾರತ ಅಲ್ಫಾನ್ಸೊ ಮಾತ್ರವಲ್ಲದೆ ಇತರ ಮಾವಿನ ಹಣ್ಣುಗಳ ರಫ್ತಿಗೆ ಮಾರುಕಟ್ಟೆಯನ್ನು ಕಂಡುಕೊಳ್ಳುತ್ತಿದೆ. ಯುಎಇ ಹೊರತುಪಡಿಸಿ ಯುರೋಪ್‌, ದಕ್ಷಿಣ ಕೊರಿಯಾ, ಜಪಾನ್‌, ಆಸ್ಪ್ರೇಲಿಯಾಗೂ ವೃದ್ಧಿಸಲಿದೆ. ಸದ್ಯಕ್ಕೆ ಮಾವಿನ ಹಣ್ಣಿನ ರಫ್ತಿನಲ್ಲಿ ಅಲ್ಫಾನ್ಸೊ ಮತ್ತು ಕೇಸರ್‌ ಮಾವಿನ ಹಣ್ಣು ಪ್ರಾಬಲ್ಯ ಸಾಧಿಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಬಂಗಾಳದ ಹಿಮಸಾಗರ ಮಾವು ದಕ್ಷಿಣ ಕೊರಿಯಾಗೆ ರಫ್ತಾಗಲಿದೆ. ಅಲ್ಫಾನ್ಸೊ, ಬಾದಾಮಿ, ಚೌನ್ಸಾ, ಲಾಂಗ್ರಾ, ದಶೇರಿ, ಕೇಸರ್‌, ಮುಲ್ಗೊಬಾ, ಹಿಮಸಾಗರ್‌, ಬಂಗಾನ್‌ಪಲ್ಲಿ ಮೊದಲಾದವುಗಳು ಜನಪ್ರಿಯ ಮಾವಿನ ಹಣ್ಣುಗಳ ತಳಿಗಳಾಗಿವೆ. ಆದರೆ ರಫ್ತಾಗುತ್ತಿರುವುದು ಅಲ್ಫಾನ್ಸೊ ಹಾಗೂ ಕೇಸರ್‌ ಮಾತ್ರ. ವಿಶ್ವದಲ್ಲೇ ಭಾರತ ಮಾವಿನ ಹಣ್ಣುಗಳನ್ನು ಅತಿ ಹೆಚ್ಚು ಉತ್ಪಾದಿಸುತ್ತಿದ್ದರೂ, ರಫ್ತು ಮಾರುಕಟ್ಟೆಯಲ್ಲಿ ಮೆಕ್ಸಿಕೊ, ಮೂಂಚೂಣಿಯಲ್ಲಿವೆ. ದೇಶಿಯ ಬಳಕೆ ಹೆಚ್ಚಿರುವುದರಿಂದ ಹಾಗೂ ಉತ್ತರ ಭಾರತದ ಮಾವಿನ ಹಣ್ಣುಗಳಲ್ಲಿ ಸಕ್ಕರೆಯ ಅಂಶ ಹೆಚ್ಚು ಇರುವುದು ರಫ್ತು ಮಾರುಕಟ್ಟೆಯಲ್ಲಿ ಹಿನ್ನಡೆಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಇದೀಗ ಬೇರೆ ಬೇರೆ ತಳಿಯ ಮಾವಿನ ಹಣ್ಣುಗಳನ್ನೂ ಜಾಗತಿಕ ಮಾರುಕಟ್ಟೆಗಳಿಗೆ ಪರಿಚಯಿಸಲು ಭಾರತ ಉದ್ದೇಶಿಸಿದೆ. ಈ ಮೂಲಕ ಮಾವಿನ ಹಣ್ಣು ಮಾರುಕಟ್ಟೆಯಲ್ಲಿ ಮತ್ತು ಪಾಕಿಸ್ತಾನದ ಪ್ರಭಾವ ತಗ್ಗಿಸಲು ಯೋಜನೆ ರೂಪಿಸಿದೆ.