ಭಾರಿ ಮಳೆಗೆ ಹೂ, ಹಣ್ಣು, ತರಕಾರಿಗೆ ಬಾಧೆ: ಲಕ್ಷಾಂತರ ರೂ. ಬೆಳೆ ಹಾನಿ; ರೈತರು ಕಂಗಾಲು!

ರೈತರು ಕಳೆದೆರಡು ದಶಕಗಳಿಂದ ಅತಿವೃಷ್ಟಿ-ಅನಾವೃಷ್ಟಿಯಂತಹ ಪ್ರಕೃತಿ ವಿಕೋಪಗಳಿಗೆ ಸಿಲುಕುವುದರ ಜತೆಗೆ ಉತ್ತಮವಾಗಿ ಬೆಳೆದ ಅಪಾರ ಪ್ರಮಾಣದ ತರಕಾರಿ, ಹೂ, ಹಣ್ಣಿನ ಫಸಲಿಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿದು ಅಸಲು ಸಿಗದಂತಾಗಿ ಸಾಲದ ಸುಳಿಗೆ ಸಿಲುಕುವಂತಾಗಿದೆ.

ಭಾರಿ ಮಳೆಗೆ ಹೂ, ಹಣ್ಣು, ತರಕಾರಿಗೆ ಬಾಧೆ: ಲಕ್ಷಾಂತರ ರೂ. ಬೆಳೆ ಹಾನಿ; ರೈತರು ಕಂಗಾಲು!
Linkup
ನಾಗರಾಜ ಎನ್‌.ಎಂ. ನಂದಗುಡಿ ಬೆಂಗಳೂರು: ಕೃಷಿಕರು ಬೆಳೆದಿರುವ ಅಪಾರ ಪ್ರಮಾಣದ ನಾನಾ ಬಗೆಯ ತರಕಾರಿಗಳು, ಕಾಯಿ ಪಲ್ಯೆ, ಹೂವಿನ ಫಸಲು ಬಿಡದೇ ಸುರಿಯುತ್ತಿರುವ ಜಡಿ ಮಳೆಯಿಂದಾಗಿ ರೋಗಗಳ ತೀವ್ರತೆ ವಿಪರೀತವಾಗಿ ಲಕ್ಷಾಂತರ ರೂ. ಹಾನಿಯಾಗಿ ಹಾಕಿದ ಬಂಡವಾಳ ಸಿಗದಂತಾಗಿ ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. ತಾಲೂಕಿನಾದ್ಯಂತ ಕಳೆದೆರಡು ವಾರಗಳಿಂದ ನಿರಂತರವಾಗಿ ಧಾರಾಕಾರವಾಗಿ ಜಡಿ ಮಳೆಯಾಗುತ್ತಿದ್ದು, ಭೂಮಿಯಲ್ಲಿ ತೇವಾಂಶ ಅಧಿಕವಾಗಿದೆ. ರೈತರು ಲಕ್ಷಾಂತರ ರೂ. ಬಂಡವಾಳ ಹೂಡಿ ಶ್ರಮವಹಿಸಿ ಬೆಳೆದ ಫಸಲು ಕೈಗೆಟುಕುವ ಮುನ್ನವೇ ರೋಗಗಳಿಗೆ ತುತ್ತಾಗಿ ಪರಿತಪಿಸುವಂತಾಗಿದೆ. ಹೂ, , ಬೆಳೆಗೆ ರಾಜ್ಯದಲ್ಲೇ ತನ್ನದೇ ಅದ ಖ್ಯಾತಿ ಹೊಂದಿರುವ ಹೊಸಕೋಟೆ ಭಾಗದ ರೈತರು ಕಳೆದೆರಡು ದಶಕಗಳಿಂದ ಅತಿವೃಷ್ಟಿ-ಅನಾವೃಷ್ಟಿಯಂತಹ ಪ್ರಕೃತಿ ವಿಕೋಪಗಳಿಗೆ ಸಿಲುಕುವುದರ ಜತೆಗೆ ಉತ್ತಮವಾಗಿ ಬೆಳೆದ ಅಪಾರ ಪ್ರಮಾಣದ ತರಕಾರಿ, , ಹಣ್ಣಿನ ಫಸಲಿಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿದು ಅಸಲು ಸಿಗದಂತಾಗಿ ಸಾಲದ ಸುಳಿಗೆ ಸಿಲುಕುವಂತಾಗಿದೆ. ಪ್ರತಿ ಬಾರಿಯೂ ಉತ್ತಮ ಫಸಲು ಬಂದು ತಕ್ಕ ಬೆಲೆಗೆ ಮಾರಾಟವಾಗಿ ಕಷ್ಟಗಳು ದೂರಾಗುವ ನಿರೀಕ್ಷೆಯಲ್ಲಿರುವ ರೈತರಿಗೆ ಕಟಾವಿಗೆ ಸನಿಹದಲ್ಲಿ ಹವಾಮಾನ ವೈಪರೀತ್ಯಕ್ಕೆ ಬೆಳೆ ಹಾಳಾಗಿ ಲಕ್ಷಾಂತರ ರೂ. ಆದಾಯದ ಕನಸು ನುಚ್ಚು ನೂರಾಗಿಸಿ ಭರವಸೆಗಳನ್ನು ಕಳೆದುಕೊಂಡು ಮುಂದೇನು? ಎಂಬ ಚಿಂತೆ ಮನೆ ಮಾಡುವಂತಾಗಿದೆ. ಇತ್ತೀಚೆಗೆ ಸುರಿಯತ್ತಿರುವ ಧಾರಾಕಾರ ಜಡಿ ಮಳೆಗೆ ತೇವಾಂಶ ಹೆಚ್ಚಾಗಿ ನೂರಾರು ಎಕರೆಯಲ್ಲಿ ಬೆಳೆದಿದ್ದ ವಿವಿಧ ಬಗೆಯ ತರಕಾರಿ, ಸೊಪ್ಪು, ನಾನಾ ಬಗೆಯ ಹೂವಿನ ತೋಟಗಳು ಹಲವು ಬಗೆಯ ರೋಗಗಳಿಗೆ ಸಿಲುಕಿ ಕೊಳೆತು ಬೆಳೆ ಹಾಳಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು, ನಷ್ಟದ ಪ್ರಮಾಣ ಪಟ್ಟಿ ಮಾಡಿ ಸರಕಾರಕ್ಕೆ ವರದಿ ಸಲ್ಲಿಸಿ ಪರಿಹಾರ ಕೊಡಿಸುವ ಮೂಲಕ ರೈತರ ಸಂಕಷ್ಟಕ್ಕೆ ನೆರವಾಗಬೇಕೆಂಬುದೇ ರೈತರ ಒತ್ತಾಸೆಯಾಗಿದೆ. 1.5 ಎಕರೆ ಪ್ರದೇಶದಲ್ಲಿ 2.5 ಲಕ್ಷ ರೂ ಬಂಡವಾಳ ಹೂಡಿ ಮಾರಿಗೋಲ್ಡ್‌ ಹೂವು ಬೆಳೆದಿದ್ದು, ಬೆಳೆ ಕಟಾವಿಗೆ ಬರುವ ಸಮಯಕ್ಕೆ 1 ತಿಂಗಳಿನಿಂದ ಜಡಿಮಳೆ ಸುರಿಯುತ್ತಿದ್ದು, ಗಿಡಗಳು ಕೊಳೆಯುತ್ತಿದೆ, ಹೂವಿಗೆ ರೋಗದ ಬಾಧೆಗೆ ಸಿಲುಕಿ ಬೆಳೆ ಹಾಳಾಗುತ್ತಿದೆ. ಮಾರುಕಟ್ಟೆಯಲ್ಲಿ ಬೆಲೆ ಇಲ್ಲದೇ ಅಸಲು ಸಿಗದೆ ನಷ್ಟವುಂಟಾಗಿದೆ. ಲಕ್ಷ್ಮಣ್, ಹೂವಿನ ಬೆಳೆಗಾರ, ಬನಹಳ್ಳಿ ತಾಲೂಕಿನಲ್ಲಿ ಉತ್ತಮವಾಗಿ ಜಡಿ ಮಳೆಯಾಗುತ್ತಿದ್ದು, ತೇವಾಂಶ ಅಧಿಕವಾದರೆ ಹಣ್ಣು, ತರಕಾರಿ, ಸೊಪ್ಪು, ಹೂವಿನ ಬೆಳೆಗಳಿಗೆ ಸೊರಗು, ಬೂದಿ ರೋಗ, ಎಲೆ ಚುಕ್ಕೆ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಶೇಕಡವಾರು 50 ರಷ್ಟು ಬೆಳೆ ಹಾನಿಯುಂಟಾದಲ್ಲಿ ಸರಕಾರಕ್ಕೆ ವರದಿ ಸಲ್ಲಿಸಲು ಅವಕಾಶವಿದೆ. ಈ ಬಗ್ಗೆ ಮಾಹಿತಿ ಪಡೆದು ಕ್ರಮ ವಹಿಸಲಾಗುವುದು. ಪ್ರಶಾಂತ್‌ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಹೊಸಕೋಟೆ