ಬೆಂಗಳೂರು: ಗಣ್ಯರಿಗೆ ಡ್ರಗ್ಸ್‌ ಪೂರೈಕೆ ಮಾಡುತ್ತಿದ್ದ ಪೆಡ್ಲರ್‌ಗಳ ಮುಖ್ಯಸ್ಥ ಬಂಧನ, ಇನ್ನಷ್ಟು ಮಂದಿಗೆ ಸಂಕಷ್ಟ?

ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣದಲ್ಲಿ ಶರೀಫ್‌ ಹಸನ್‌ ಮಸೂರಿ ಪಾತ್ರ ಖಚಿತವಾಗಿತ್ತು. ಆದರೆ, ಆರೋಪಿ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದ. ಈತನ ಬಗ್ಗೆ ತನಿಖೆ ನಡೆಸುವಾಗ 2018ರ ಪ್ರಕರಣದ ಆರೋಪಿಗಳಿಗೆ ಡ್ರಗ್ಸ್‌ ಪೂರೈಕೆ ಮಾಡಿರುವುದು, ಪ್ರತೀಕ್‌ ಶೆಟ್ಟಿ ಹಾಗೂ ಇಬ್ಬರು ವಿದೇಶಿ ಪ್ರಜೆಗಳ ವಿಚಾರಣೆಯಲ್ಲಿ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.

ಬೆಂಗಳೂರು: ಗಣ್ಯರಿಗೆ ಡ್ರಗ್ಸ್‌ ಪೂರೈಕೆ ಮಾಡುತ್ತಿದ್ದ ಪೆಡ್ಲರ್‌ಗಳ ಮುಖ್ಯಸ್ಥ ಬಂಧನ, ಇನ್ನಷ್ಟು ಮಂದಿಗೆ ಸಂಕಷ್ಟ?
Linkup
ಬೆಂಗಳೂರು: ಸ್ಯಾಂಡಲ್‌‍ವುಡ್‌ ಡ್ರಗ್‌ ಡೀಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಖ್ಯಾತ ಡ್ರಗ್‌ ಪೆಡ್ಲರ್‌ನನ್ನು ಕೇಂದ್ರ ಅಪರಾಧ ದಳದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ಭಟ್ಕಳದ ಶರೀಫ್‌ ಹಸನ್‌ ಮಸೂರಿ ಅಲಿಯಾಸ್‌ ಮೆಸ್ಸಿ ಬಂಧಿತ ಆರೋಪಿ. ಕಳೆದ ಒಂದು ವರ್ಷದಿಂದ ಆರೋಪಿ ತಲೆಮರೆಸಿಕೊಂಡಿದ್ದ. ಆ. 30ರ ರಂದು ಮೆಸ್ಸಿಯನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ತಿಳಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ಬಂಧಿತ ಆರೋಪಿಯನ್ನು ನ್ಯಾಯಾಲಯದ ಅನುಮತಿ ಪಡೆದು, 14 ದಿನಗಳ ಕಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾದಕ ಜಾಲದಲ್ಲಿ ತೊಡಗಿಸಿಕೊಂಡಿದ್ದ ಮೆಸ್ಸಿ, ವಿರೇನ್‌ ಖನ್ನಾ ಸೇರಿ ಬೆಂಗಳೂರಿನ ಬಹುಪಾಲು ಸೆಲೆಬ್ರಿಟಿಗಳ ಪಾರ್ಟಿಗಳಲ್ಲಿ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಎನ್ನಲಾಗಿದೆ. ಮೆಸ್ಸಿ ಪಾರ್ಟಿ ಮಾಡಿರುವ ಫೋಟೊಗಳು ಪೊಲೀಸರಿಗೆ ಲಭ್ಯವಾಗಿದೆ ಎನ್ನಲಾಗಿದೆ. ಆರೋಪಿ ಬಂಧನದಿಂದ ಪ್ರಕರಣದಲ್ಲಿ ಸಿಲುಕಿ ಜಾಮೀನಿನ ಮೇಲೆ ಹೊರ ಬಂದಿರುವ ಸ್ಯಾಂಡಲ್‌ ವುಡ್‌ ನಟಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಇತ್ತೀಚೆಗೆ ಬಹಿರಂಗಗೊಂಡಿರುವ ಎಫ್‌‍ಎಸ್‌‍ಎಲ್‌ ವರದಿಯಲ್ಲಿ ಇಬ್ಬರೂ ನಟಿಯರು ಡ್ರಗ್ಸ್‌ ಸೇವನೆ ಮಾಡಿರುವುದು ದೃಢಪಟ್ಟಿದೆ. 2018ರ ಪ್ರಕರಣದಲ್ಲಿ ಭಾಗಿ! ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣದಲ್ಲಿ ಆರೋಪಿ ಪಾತ್ರ ಖಚಿತವಾಗಿತ್ತು. ಆದರೆ, ಆರೋಪಿ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದ. ಈತನ ಬಗ್ಗೆ ತನಿಖೆ ನಡೆಸುವಾಗ 2018ರ ಪ್ರಕರಣದ ಆರೋಪಿಗಳಿಗೆ ಡ್ರಗ್ಸ್‌ ಪೂರೈಕೆ ಮಾಡಿರುವುದು, ಪ್ರತೀಕ್‌ ಶೆಟ್ಟಿ ಹಾಗೂ ಇಬ್ಬರು ವಿದೇಶಿ ಪ್ರಜೆಗಳ ವಿಚಾರಣೆಯಲ್ಲಿ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಹೇಳಿದರು. ಡ್ರಗ್ಸ್‌ ಪೆಡ್ಲರ್‌ಗಳ ಮುಖ್ಯಸ್ಥ! ಮೆಸ್ಸಿ ನಗರದಲ್ಲಿದ್ದ ಸ್ಥಳೀಯ ಪೆಡ್ಲರ್‌ಗಳು ಮತ್ತು ಅಂತಾರಾಷ್ಟ್ರೀಯ ಡ್ರಗ್ಸ್‌ ಪೆಡ್ಲರ್‌ಗಳನ್ನು ಮಾಸಿಕ ಇಂತಿಷ್ಟು ಹಣ ನಿಗದಿ ಮಾಡಿ ನೇಮಿಸಿಕೊಂಡಿದ್ದ. ಹೀಗಾಗಿ, ಈತನನ್ನು ಡ್ರಗ್ಸ್‌ ಪೆಡ್ಲರ್‌ಗಳ ಮುಖ್ಯಸ್ಥ ಎಂದು ಕರೆಯುತ್ತಿದ್ದರು. ತಾನೂ ಆಯೋಜನೆ ಮಾಡುತ್ತಿದ್ದ ಪಾರ್ಟಿಗಳಿಗೆ ಡ್ರಗ್ಸ್‌ ಪೂರೈಕೆ ಮಾಡುತ್ತಿದ್ದ. ನೋಡಲು ಸ್ಮಾರ್ಟ್‌ ಆಗಿದ್ದರಿಂದ ಡ್ರಗ್ಸ್‌ ಪಡೆಯುತ್ತಿದ್ದ ಕೆಲವರು ಈತನನ್ನು ಮೆಸ್ಸಿ ಎಂದು ಕರೆಯುತ್ತಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಯಾರಾರ‍ಯರಿಗೆ ಪೂರೈಕೆ: ಸ್ಯಾಂಡಲ್‌ವುಡ್‌ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಮತ್ತು ಆಫ್ರಿಧಿಕಾದ ಲೂಮ್‌ ಪೆಪ್ಪರ್‌ ಸಾಂಬಾ ಹಾಗೂ ಆದಿತ್ಯ ಆಳ್ವ, ರವಿಶಂಕರ್‌ ಸೇರಿದಂತೆ ಇತರೆ ಆರೋಪಿಗಳ ಜತೆ ಸಂಪರ್ಕದಲ್ಲಿದ್ದ. ಮುಖ್ಯವಾಗಿ ಸಂಜನಾ ಗಲ್ರಾನಿಗೆ ಡ್ರಗ್ಸ್‌ ಪೂರೈಕೆ ಮಾಡುತ್ತಿದ್ದ ಎಂಬುದು ಗೊತ್ತಾಗಿದೆ. ಸೆಲೆಬ್ರಿಟಿಗಳು, ಉದ್ಯಮಿಗಳು, ರಾಜಕಾರಣಿಗಳ ಮಕ್ಕಳಿಗಾಗಿಯೇ ಪಾರ್ಟಿ ಆಯೋಜಿಸಿ ಅವರಿಗೆ ಡ್ರಗ್ಸ್‌ ಪೆಡ್ಲರ್‌ಗಳ ಮೂಲಕ ಮಾದಕ ವಸ್ತುಗಳಾದ ಕೋಕೇನ್‌, ಗಾಂಜಾ, ಎಂಡಿಎಂಎ ಪೂರೈಕೆ ಮಾಡುತ್ತಿದ್ದ.