ಬೆಂಗಳೂರು: ಕಾರ್ಮಿಕನಿಗೆ ಸೋಂಕು ಹಿನ್ನೆಲೆ ಪ್ರಸಿದ್ದ ನಮ್ಮೂರ ತಿಂಡಿ ಹೋಟೆಲ್‌ ಬಂದ್‌!

ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದೆ. ಬೆಂಗಳೂರು ಹಾಗೂ ದಕ್ಷಿಣ ಕನ್ನಡದಲ್ಲಿ ಕೊರೊನಾ ಸೋಂಕು ಭಾರೀ ಸದ್ದು ಮಾಡುತ್ತಿದೆ. ಇನ್ನು ಕಾರ್ಮಿಕನೊರ್ವನಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಬೆಂಗಳೂರಿನ ಪ್ರಸಿದ್ಧ ನಮ್ಮೂರ ತಿಂಡಿ ಹೋಟೆಲ್‌ ಮುಚ್ಚಲಾಗಿದೆ. ಇನ್ನು ಇದರಿಂದ ಹೋಟೆಲ್‌ನಲ್ಲಿ ಆಹಾರ ಸೇವಿಸಿದ್ದವರಿಗೆ ಭಯ ಕಾಡಲಾರಂಭಿಸಿದೆ.

ಬೆಂಗಳೂರು: ಕಾರ್ಮಿಕನಿಗೆ ಸೋಂಕು ಹಿನ್ನೆಲೆ ಪ್ರಸಿದ್ದ ನಮ್ಮೂರ ತಿಂಡಿ ಹೋಟೆಲ್‌ ಬಂದ್‌!
Linkup
ಬೆಂಗಳೂರು: ಕಾರ್ಮಿಕನೊಬ್ಬನಿಗೆ ಕೊರೊನಾ ಸೋಂಕು ತಗಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ನಾಗರಬಾವಿ ಮುಖ್ಯರಸ್ತೆಯ ಎನ್‌ಜಿಎಫ್‌ ಬಡಾವಣೆಯಲ್ಲಿರುವ '' ಹೋಟೆಲ್‌ ಅನ್ನು ಬಿಬಿಎಂಪಿ ಆರೋಗ್ಯಾಧಿಕಾರಿಗಳ ತಂಡ ಮಂಗಳವಾರ ಮುಚ್ಚಿಸಿದೆ. 'ನಮ್ಮೂರ ತಿಂಡಿ' ಹೋಟೆಲ್‌ನಲ್ಲಿ ಕೆಲಸ ಮಾಡುವ ಎಲ್ಲ ಸಿಬ್ಬಂದಿಗಳಿಗೆ ಕೋವಿಡ್‌ ಪರೀಕ್ಷೆ ಮಾಡಿದಾಗ, ಒಬ್ಬರಿಗೆ ಸೋಂಕು ತಗಲಿರುವುದು ಕಂಡು ಬಂದಿದೆ. ಸೋಂಕಿತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿ, ಉಳಿದ ಎಲ್ಲ ಸಿಬ್ಬಂದಿಯನ್ನೂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಬಳಿಕ ಹೋಟೆಲ್‌ನಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಿ, ಮುಚ್ಚಿಸಲಾಗಿದೆ. ''ಹೋಟೆಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉಳಿದ ಸಿಬ್ಬಂದಿಯ ಪರೀಕ್ಷಾ ಫಲಿತಾಂಶ ಬಂದ ನಂತರ ಮುಂದಿನ ಕ್ರಮದ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಅಲ್ಲದೆ, ರಾಜರಾಜೇಶ್ವರಿನಗರ ವಲಯದಲ್ಲಿರುವ ಎಲ್ಲ ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಕೋವಿಡ್‌ ಪರೀಕ್ಷೆ ಮಾಡಿಸಲು ಮತ್ತು ಲಸಿಕೆ ಕೊಡಿಸಲು ಮಾಲೀಕರಲ್ಲಿ ಮನವಿ ಮಾಡಿಕೊಳ್ಳಲಾಗಿದೆ,'' ಎಂದು ವಲಯ ಆಯುಕ್ತ ರೆಡ್ಡಿ ಶಂಕರಬಾಬು ತಿಳಿಸಿದರು.