ಬೆಂಗಳೂರಿನ ಹನುಮಂತನಗರದಲ್ಲಿ ಉಚಿತ ಲಸಿಕೆಯ ನಿರಂತರ ಸೇವೆ: ಸ್ಟಾಕ್‌ ಇಲ್ಲ ಎನ್ನುವ ಮಾತೇ ಇಲ್ಲ!

ಬಹುತೇಕ ಕಡೆ ಫ್ರೀ ವ್ಯಾಕ್ಸಿನ್‌ಗೆ ನೋ ಸ್ಟಾಕ್ ಅಂತ ಬೋರ್ಡ್‌ ಹಾಕಲಾಗುತ್ತಿದೆ. ಆದರೆ ಇಲ್ಲಿ ಮಾತ್ರ ಅಂತಹ ಯಾವುದೇ ಸಮಸ್ಯೆ ಇಲ್ಲ. ನಿರಂತರವಾಗಿ ಇಲ್ಲಿ ಲಸಿಕೆ ನೀಡಲಾಗುತ್ತಿದೆ. ಪ್ರತಿನಿತ್ಯ 80 ಮಂದಿಗೆ ಕೋವಿಡ್‌ ಲಸಿಕೆ ನೀಡಲಾಗುತ್ತಿದ್ದು, ಈವರೆಗೆ 4500ಕ್ಕೂ ಅಧಿಕ ಮಂದಿ ಇದರ ಲಾಭ ಪಡೆದುಕೊಂಡಿದ್ದಾರೆ.

ಬೆಂಗಳೂರಿನ ಹನುಮಂತನಗರದಲ್ಲಿ ಉಚಿತ ಲಸಿಕೆಯ ನಿರಂತರ ಸೇವೆ: ಸ್ಟಾಕ್‌ ಇಲ್ಲ ಎನ್ನುವ ಮಾತೇ ಇಲ್ಲ!
Linkup
ಬೆಂಗಳೂರು: ಕೊರೊನಾ ತೊಲಗಿಸುವ ನಿಟ್ಟಿನಲ್ಲಿ ದೇಶದಲ್ಲಿ ಲಸಿಕೆ ಅಭಿಯಾನ ಆರಂಭವಾಗಿದೆ. ಎಲ್ಲ ರಾಜ್ಯಗಳಲ್ಲೂ ಲಸಿಕೆ ನೀಡಲಾಗುತ್ತಿದೆ. ಆರಂಭದಲ್ಲಿ ಜನರು ಲಸಿಕೆ ಪಡೆದುಕೊಳ್ಳಲು ಹಿಂದೇಟು ಹಾಕಿದರು, ನಂತರದ ದಿನಗಳಲ್ಲಿ ವ್ಯಾಕ್ಸಿನ್‌ ಪಡೆಯಲು ಜನರು ಮುಂದೆ ಬರುತ್ತಿದ್ದಾರೆ. ಈ ಮಧ್ಯೆ ಬೆಂಗಳೂರಿನ ಹನುಮಂತನಗರದಲ್ಲಿರುವ ತಂಡವೊಂದು ತಮ್ಮ ವಾರ್ಡನ ಪ್ರತಿಯೊಬ್ಬರು ಲಸಿಕೆ ಪಡೆಯುವ ಉದ್ದೇಶದಿಂದ ನಿರಂತರ ಕೆಲಸ ಮಾಡುತ್ತಿದೆ. ಹೌದು, ಹಿರಿಯ ಬಿಜೆಪಿ ನಾಯಕರದ ಎಸ್‌ ಅನಂತಕುಮಾರ್ ಹಾಗೂ ಹನುಮಂತನಗರ‌ ವಾರ್ಡ್‌ನ ಬಿಜೆಪಿ ಅದ್ಯಕ್ಷ ಜಯರಾಂ(ರಾಜು) ರಾಜೇಶ್, ಮಧುಸೂಧನ್, ಪುರುಷೊತ್ತಮ ರವರು ಕಳೆದ ಕೆಲವು ವಾರಗಳಿಂದ ಜನರಿಗೆ ಸಮರ್ಪಕವಾಗಿ ಲಸಿಕೆ ತಲುಪುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಎಲ್ಲಿ ಲಸಿಕೆ ನೀಡುತ್ತಿದ್ದಾರೆ? ಗವಿಪುರಂ ಬಿಬಿಎಂಪಿ ವಾರ್ಡ್‌ 155ರ ಆರೊಗ್ಯಕೇಂದ್ರ ಶ್ರೀ ಗವಿ ಗಂಗಾಧರೇಶ್ವರ ದೇವಸ್ಥಾನ ಎದರು ಚಿಕ್ಕದಾದ ಒಂದು ವ್ಯವಸ್ಥೆಯನ್ನು ಮಾಡಿಕೊಂಡು, ನಿರಂತರವಾಗಿ ಲಸಿಕೆ ನೀಡುವ ಕಾರ್ಯಕ್ರಮವನ್ನು ಈ ತಂಡ ನಡೆಸುತ್ತಿದೆ. ಮುಂಜಾನೆ10 ರಿಂದ ಸಂಜೆ 4 ಗಂಟೆ ವರೆಗೆ ಸಾರ್ವಜನಿಕರು ಇಲ್ಲಿಗೆ ಬಂದು ಲಸಿಕೆ ಪಡೆಯಬಹುದಾಗಿದೆ. ಬಿಬಿಎಂಪಿ ಸಹಯೋಗದಲ್ಲಿ ಈ ಲಸಿಕಾ ಕಾರ್ಯಕ್ರಮ ನಡೆಯುತ್ತಿದ್ದು, ಈ ಲಸಿಕಾ ಕಾರ್ಯಕ್ರಮದ ಮುಂದಾಳತ್ವವನ್ನ ವೈದ್ಯರಾದ ರಿಜ್ವಾನ್ ಬೇಗಂ ವಹಿಸಿದ್ದಾರೆ. ಇಲ್ಲಿನ ಇನ್ನೊಂದು ಪ್ರಮುಖ ವಿಚಾರ ಎಂದರೆ ಬಹುತೇಕ ಕಡೆ ಫ್ರೀ ವ್ಯಾಕ್ಸಿನ್‌ಗೆ ನೋ ಸ್ಟಾಕ್ ಅಂತ ಬೋರ್ಡ್‌ ಹಾಕಲಾಗುತ್ತಿದೆ. ಆದರೆ ಇಲ್ಲಿ ಮಾತ್ರ ಅಂತಹ ಯಾವುದೇ ಸಮಸ್ಯೆ ಇಲ್ಲ. ನಿರಂತರವಾಗಿ ಇಲ್ಲಿ ಲಸಿಕೆ ನೀಡಲಾಗುತ್ತಿದೆ. ಪ್ರತಿನಿತ್ಯ 80 ಮಂದಿಗೆ ಕೋವಿಡ್‌ ಲಸಿಕೆ ನೀಡಲಾಗುತ್ತಿದ್ದು, ಈವರೆಗೆ 4500ಕ್ಕೂ ಅಧಿಕ ಮಂದಿ ಇದರ ಲಾಭ ಪಡೆದುಕೊಂಡಿದ್ದಾರೆ. ಇನ್ನು ಇಲ್ಲಿಗೆ ತಮ್ಮ ವಾರ್ಡ್‌ ಹಾಗೂ ಇನ್ನಿತರ ಕಡೆಗಳಿಂದ ಜನರನ್ನು ಕರೆದುಕೊಂಡು ಬರುವುದು, ಜನರಿಗೆ ಮಾಹಿತಿ ನೀಡುವುದು, ಲಸಿಕೆ ಖಾಲಿಯಾಗದಂತೆ ನೋಡಿಕೊಳ್ಳುವ ಕಾರ್ಯವನ್ನು ನಿಸ್ವಾರ್ಥವಾಗಿ ಬಿಜೆಪಿ ನಾಯಕರದ ಎಸ್‌ ಅನಂತಕುಮಾರ್ ಹಾಗೂ ಬಿಜೆಪಿ ಹನುಮಂತನಗರ‌ ವಾರ್ಡ್ ಅದ್ಯಕ್ಷ ಜಯರಾಂ(ರಾಜು) ರಾಜೇಶ್, ಮಧುಸೂಧನ್, ಪುರುಷೊತ್ತಮ ರವರು ಮಾಡುತ್ತಿದ್ದಾರೆ. ಅಲ್ಲದೆ ಅಲ್ಲಿಗೆ ಬರುವವರಿಗೆ ನೀರು, ಆಹಾರ, ಏನಾದರೂ ಆರೋಗ್ಯ ಸಮಸ್ಯೆ ಬಂದರೆ ಅದಕ್ಕೂ ಇವರ ತಂಡ ಸ್ಪಂದಿಸುತ್ತಿದೆ. ಬೆಂಗಳೂರಿನ ಯಾವುದೇ ಮೂಲೆಯಿಂದ ಬಂದರು ನಾವು ಲಸಿಕೆ ನೀಡುತ್ತೇವೆ ಎಂದು ಈ ತಂಡ ಹೇಳುತ್ತಿದೆ. ಒಂದು ಆಧಾರ್‌ ಕಾರ್ಡ್‌ ಹಾಗೂ ಫೋನ್‌ ತೆಗೆದುಕೊಂಡು ಬಂದರೆ ಸಾಕು ಎನ್ನುತ್ತಿದ್ದಾರೆ. ಅಲ್ಲದೇ ಲಸಿಕೆ ತೆಗೆದುಕೊಳ್ಳಲು ಇಚ್ಚಿಸುವವರು ಈ ದೂರವಾಣಿ ಸಂಖ್ಯೆಗೆ ಕರೆ ಮಾಡುವಂತೆ ಮನವಿ ಮಾಡಿದ್ದಾರೆ.( ಎಸ್.ಅನಂತಕುಮಾರ್ 9481788767)