ತುಂತುರು ಮಳೆ, ಹಿತಕರ ವಾತಾವರಣ: ಬೆಂಗಳೂರಿನ ಪಾರ್ಕ್‌ಗಳಿಗೆ ಜನರ ದಾಂಗುಡಿ..!

ಶನಿವಾರ ಮತ್ತು ಭಾನುವಾರ ಇಡೀ ದಿನ ನಿರಂತರವಾಗಿ ಮಳೆಬಿದ್ದ ಪರಿಣಾಮ ವಾಯು ವಿಹಾರಿಗಳು ಮತ್ತು ಪ್ರವಾಸಿಗರು ಉದ್ಯಾನಗಳಿಗೆ ಭೇಟಿ ನೀಡುವ ಪ್ರಮಾಣ ಸ್ವಲ್ಪ ಕಡಿಮೆಯಾಗಿತ್ತು. ಆದರೆ, ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

ತುಂತುರು ಮಳೆ, ಹಿತಕರ ವಾತಾವರಣ: ಬೆಂಗಳೂರಿನ ಪಾರ್ಕ್‌ಗಳಿಗೆ ಜನರ ದಾಂಗುಡಿ..!
Linkup
: ಲಾಕ್‌ಡೌನ್‌ ತೆರವಾದ ನಂತರ ಲಾಲ್‌ಬಾಗ್‌, ಕಬ್ಬನ್‌ ಸೇರಿದಂತೆ ಪ್ರಮುಖ ಪಾರ್ಕ್‌ಗಳಿಗೆ ಹೆಚ್ಚಿನ ಜನರು ಆಗಮಿಸುತ್ತಿದ್ದಾರೆ. ಶನಿವಾರ ಮತ್ತು ಭಾನುವಾರ ಇಡೀ ದಿನ ನಿರಂತರವಾಗಿ ಮಳೆಬಿದ್ದ ಪರಿಣಾಮ ವಾಯು ವಿಹಾರಿಗಳು ಮತ್ತು ಪ್ರವಾಸಿಗರು ಉದ್ಯಾನಗಳಿಗೆ ಭೇಟಿ ನೀಡುವ ಪ್ರಮಾಣ ಸ್ವಲ್ಪ ಕಡಿಮೆಯಾಗಿತ್ತು. ಆದರೆ, ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ಕಂಡು ಬಂತು. ಮಳೆಯಿಂದಾಗಿ ಗಿಡ ಮರಗಳ ಸೊಬಗು ಹೆಚ್ಚಿದ್ದು, ನೋಡುಗರ ಕಣ್ಸೆಳೆಯುತ್ತಿವೆ. ಮಕ್ಕಳೊಂದಿಗೆ ಬಂದಿದ್ದವರು ಲಾಲ್‌ಬಾಗ್‌ ಬಂಡೆ ಮೇಲೆ ಸುತ್ತಾಡಿದರು. ಕೆರೆಯ ದಡ, ಟೋಪಿಯಾರಿ ಗಾರ್ಡನ್‌, ಜಾಪನೀಸ್‌ ಗಾರ್ಡನ್‌ಗಳಲ್ಲಿ ಓಡಾಡಿ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಕೆಲವರು ತಿಂಡಿಯೊಂದಿಗೆ ಬಂದು ಭಾನುವಾರ ಪಿಕ್‌ನಿಕ್‌ನಂತೆ ಕಳೆದರು. ಕಬ್ಬನ್‌ಪಾರ್ಕ್‌ನಲ್ಲಿ ಎಂದಿನಂತೆ ಭಾನುವಾರ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಹೀಗಾಗಿ, ವಾಯು ವಿಹಾರಿಗಳು ನಿರಾತಂಕವಾಗಿ ಓಡಾಡಲು ಅನುಕೂಲವಾಗಿದೆ. ಮಕ್ಕಳೊಂದಿಗೆ ಸೈಕಲ್‌ ಕೂಡ ತುಳಿಯಲು ಉದ್ಯಾನ ಅಚ್ಚುಮೆಚ್ಚಿನ ತಾಣವಾಗಿದೆ. ಮಲ್ಲೇಶ್ವರದ ಸ್ಯಾಂಕಿ ಟ್ಯಾಂಕ್‌ ಬಳಿ ವಾಕಿಂಗ್‌ ಪಥ ನಿರ್ಮಿಸಲಾಗಿದ್ದು, ವಾಯು ವಿಹಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.