ಪೋಲ್ ಆಫ್ ಪೋಲ್ಸ್ ಸಮೀಕ್ಷೆ: ಬಂಗಾಳದಲ್ಲಿ ದೀದಿ, ಕೇರಳದಲ್ಲಿ ಪಿಣರಾಯಿ, ತಮಿಳು ನಾಡಲ್ಲಿ ಸ್ಟ್ಯಾಲಿನ್!
ಪೋಲ್ ಆಫ್ ಪೋಲ್ಸ್ ಸಮೀಕ್ಷೆ: ಬಂಗಾಳದಲ್ಲಿ ದೀದಿ, ಕೇರಳದಲ್ಲಿ ಪಿಣರಾಯಿ, ತಮಿಳು ನಾಡಲ್ಲಿ ಸ್ಟ್ಯಾಲಿನ್!
ಪಂಚರಾಜ್ಯ ಚುನಾವಣೆ ಕೊನೆಗೊಳ್ಳುತ್ತಿದ್ದಂತೆ ಚುನಾವಣೋತ್ತರ ಸಮೀಕ್ಷೆ ಎಲ್ಲರ ಗಮನ ಸೆಳೆದಿವೆ. ಪಂಚರಾಜ್ಯ ಚುನಾವಣೆಯ ಕೇಂದ್ರಬಿಂದುವಾಗಿರುವ ಪಶ್ಚಿಮ ಬಂಗಾಳದಲ್ಲಿಅಧಿಕಾರದ ಗದ್ದುಗೆ ಮಮತಾ ಬ್ಯಾನರ್ಜಿ ಪಾಲಾಗಲಿದೆ ಎಂದು ಸಮೀಕ್ಷೆ ಹೇಳುತ್ತಿದೆ.
ಎಲ್ಡಿಎಫ್ ಹೊಸದಿಲ್ಲಿ: ಪಂಚರಾಜ್ಯಗಳ ಗುರುವಾರ ಅಂತ್ಯಗೊಂಡಿದೆ. ಪಶ್ಚಿಮ ಬಂಗಾಳದ 8ನೇ ಹಾಗೂ ಅಂತಿಮ ಹಂತದ ಚುನಾವಣೆ ಕೊನೆಗೊಳ್ಳುತ್ತಿದ್ದಂತೆ ಎಲ್ಲರ ಗಮನ ಸೆಳೆದಿವೆ. ಪಂಚರಾಜ್ಯ ಚುನಾವಣೆಯ ಕೇಂದ್ರಬಿಂದುವಾಗಿರುವ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಗೆದ್ದರೂ, ಅಧಿಕಾರದ ಗದ್ದುಗೆ ಪಾಲಾಗಲಿದೆ ಎಂದು ಸಮೀಕ್ಷೆ ಹೇಳುತ್ತಿದೆ.
ಕೇರಳದಲ್ಲಿ ಬಿಜೆಪಿ ಕಳೆದ ಬಾರಿಗಿಂತಲೂ ಈ ಬಾರಿ ಉತ್ತಮ ಪ್ರದರ್ಶನ ನೀಡಿದೆ. ಆದರೆ ಪಿಣರಾಯಿ ವಿಜಯನ್ ನಾಯಕತ್ವದ ಎಲ್ಡಿಎಫ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆ ಹೇಳಿದೆ. ತಮಿಳುನಾಡಲ್ಲಿ ಡಿಎಂಕೆ ನಾಯಕ ಸ್ಟ್ಯಾಲಿನ್ ಯುಗ ಆರಂಭವಾಗಲಿದೆ ಎನ್ನಲಾಗುತ್ತಿದೆ. ಅಸ್ಸಾಂನಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಿದೆ. ಪುದುಚೇರಿ ಕುತೂಹಲಕ್ಕೂ ಚುನಾವಣೋತ್ತರ ಸಮೀಕ್ಷೆ ಉತ್ತರ ನೀಡಿದೆ.