ಪ್ರಭಾಸ್ ನಂತರ ಯಾರೊಂದಿಗೆ ಪ್ರಶಾಂತ್ ನೀಲ್ ಸಿನಿಮಾ ಮಾಡ್ತಾರೆ? ಹೊರಬಿತ್ತು ಅಧಿಕೃತ ಮಾಹಿತಿ!

'ಕೆಜಿಎಫ್: ಚಾಪ್ಟರ್ 2' ಸಿನಿಮಾ ತೆರೆಕಾಣುವ ಮೊದಲೇ ಪ್ರಭಾಸ್ ನಟನೆಯ 'ಸಲಾರ್' ಚಿತ್ರವನ್ನು ಕೈಗೆತ್ತಿಕೊಂಡರು ಪ್ರಶಾಂತ್ ನೀಲ್‌. ಇದೀಗ ಅವರ 5ನೇ ಸಿನಿಮಾದ ಕುರಿತು ಹೊಸ ಅಪ್‌ಡೇಟ್ ಸಿಕ್ಕಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಪ್ರಭಾಸ್ ನಂತರ ಯಾರೊಂದಿಗೆ ಪ್ರಶಾಂತ್ ನೀಲ್ ಸಿನಿಮಾ ಮಾಡ್ತಾರೆ? ಹೊರಬಿತ್ತು ಅಧಿಕೃತ ಮಾಹಿತಿ!
Linkup
'ಕೆಜಿಎಫ್‌' ಸಿನಿಮಾ ನಂತರ ನಿರ್ದೇಶಕ ಪ್ರಶಾಂತ್ ನೀಲ್‌ಗೆ ಈಗ ದೇಶಾದ್ಯಂತ ಬೇಡಿಕೆ ಇದೆ. ಅವರ ಮೂರನೇ ಸಿನಿಮಾ 'ಕೆಜಿಎಫ್‌: ಚಾಪ್ಟರ್ 2' ಮೇಲೆ ಹುಟ್ಟಿಕೊಂಡಿರುವ ಕ್ರೇಜ್ ಸಾಮಾನ್ಯವಾದುದೇನಲ್ಲ! ಅದು ತೆರೆಕಾಣುವ ಮೊದಲೇ ಅವರು ನಟ ಜೊತೆಗೆ 'ಸಲಾರ್‌' ಸಿನಿಮಾವನ್ನು ಕೈಗೆತ್ತಿಕೊಂಡು, ಒಂದು ಹಂತದ ಶೂಟಿಂಗ್ ಕೂಡ ಮುಗಿಸಿ, ಸದ್ಯ ಬ್ರೇಕ್ ಕೊಟ್ಟಿದ್ದಾರೆ. ಈ ಮಧ್ಯೆ ಹೊಸದೊಂದು ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ. ಪ್ರಭಾಸ್ ಜೊತೆಗೆ 'ಸಲಾರ್' ಮಾಡಿದ ನಂತರ ಯಾವ ನಟನೊಂದಿಗೆ ಸಿನಿಮಾ ಮಾಡಲಿದ್ದಾರೆ ಎಂಬ ವಿಚಾರ ಈಗ ಅಧಿಕೃತವಾಗಿ ಬಹಿರಂಗಗೊಂಡಿದೆ! ಪ್ರಶಾಂತ್-ಎನ್‌ಟಿಆರ್ ಸಿನಿಮಾ ಕನ್ಫರ್ಮ್‌! ಬಹುನಿರೀಕ್ಷಿತ 'ಸಲಾರ್' ಮುಗಿದ ಮೇಲೆ ಟಾಲಿವುಡ್ ನಟ ಜೂ. ಎನ್‌ಟಿಆರ್ ಅವರೊಂದಿಗೆ ಪ್ರಶಾಂತ್ ನೀಲ್ ಸಿನಿಮಾ ಮಾಡೋದು ಖಚಿತವಾಗಿದೆ. ಅದನ್ನು ಸ್ವತಃ ಎನ್‌ಟಿಆರ್ ಬಹಿರಂಗಪಡಿಸಿದ್ದಾರೆ. ಪ್ರಸ್ತುತ 'ಆರ್‌ಆರ್‌ಆರ್‌' ಸಿನಿಮಾದ ಕೆಲಸಗಳು ಕೊನೇ ಹಂತದಲ್ಲಿವೆ. ಕೊರೊನಾ ಕಾರಣದಿಂದ ಸದ್ಯ ಬ್ರೇಕ್ ನೀಡಲಾಗಿದೆ. ಅದು ಮುಗಿದ ಮೇಲೆ 'ಜನತಾ ಗ್ಯಾರೇಜ್' ನಿರ್ದೇಶಕ ಕೊರಟಾಲ ಶಿವ ಜೊತೆ ತಾರಕ್‌ (ಎನ್‌ಟಿಆರ್‌) ಒಂದು ಸಿನಿಮಾ ಮಾಡಲಿದ್ದಾರೆ. ಆ ನಂತರ ಅವರ 31ನೇ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡಲಿದ್ದಾರೆ. ಈ ವಿಚಾರವನ್ನು ಸ್ವತಃ ಎನ್‌ಟಿಆರ್ ತಿಳಿಸಿದ್ದಾರೆ. ವಿಶೇಷವೆಂದರೆ, ಈ ಸಿನಿಮಾವನ್ನು ಮೈತ್ರಿ ಮೂವೀ ಮೇಕರ್ಸ್ ಸಂಸ್ಥೆ ನಿರ್ಮಾಣ ಮಾಡಲಿದೆ. ಸದ್ಯ ಪ್ರಶಾಂತ್ ನೀಲ್ ನಿರ್ದೇಶನದ 'ಕೆಜಿಎಫ್: ಚಾಪ್ಟರ್‌ 2' ರಿಲೀಸ್ ಆಗಬೇಕು. ಅದರ ಜೊತೆಗೆ ಸಲಾರ್‌ ಸಿನಿಮಾದ ಕೆಲಸಗಳು ಮುಗಿಯಬೇಕು. ಇದೆಲ್ಲ ಮುಗಿಯವುದಕ್ಕೆ 2022 ಮೇ ಆಗಬಹುದು ಎಂಬ ಮಾಹಿತಿ ಇದೆ. ಅತ್ತ ಎನ್‌ಟಿಆರ್ ಕೂಡ 'ಆರ್‌ಆರ್‌ಆರ್' ಹಾಗೂ ಕೊರಟಾಲ ಶಿವ ಜೊತೆಗಿನ ಸಿನಿಮಾ ಮುಗಿಸಬೇಕಿದೆ. ಸದ್ಯ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಜೊತೆಗೆ ಮಾಡುತ್ತಿರುವ 'ಸಲಾರ್', ಪ್ರಶಾಂತ್ ಅವರ 4ನೇ ಸಿನಿಮಾವಾಗಿದೆ. ಪ್ರಭಾಸ್, ಎನ್‌ಟಿಆರ್ ಅಲ್ಲದೆ, ಮತ್ತೋರ್ವ ಸ್ಟಾರ್ ನಟನಿಗೆ ಪ್ರಶಾಂತ್ ಸಿನಿಮಾ ಮಾಡುವ ಕುರಿತು ಮಾಹಿತಿ ಇದೆ. ಹೌದು, ತಮಿಳಿನ ಸ್ಟಾರ್ ನಟ 'ದಳಪತಿ' ವಿಜಯ್ ಅವರ ಜೊತೆಗೆ ಪ್ರಶಾಂತ್ ನೀಲ್ ಒಂದು ಸಿನಿಮಾ ಮಾಡಲಿದ್ದಾರಂತೆ! ತೆಲುಗಿನ ನಿರ್ಮಾಪಕ 'ದಿಲ್' ರಾಜು ಇದರ ನಿರ್ಮಾಣ ಮಾಡುವ ಸಾಧ್ಯತೆ ಇದೆ ಎಂಬ ವದಂತಿ ಕೂಡ ಹಬ್ಬಿದೆ. ಒಟ್ಟಿನಲ್ಲಿ 'ಸಲಾರ್' ನಂತರ ಎನ್‌ಟಿಆರ್ ಜೊಗೆ ಪ್ರಶಾಂತ್ ಸಿನಿಮಾ ಮಾಡೋದು ಸದ್ಯದ ಕನ್ಫರ್ಮ್ ಮಾಹಿತಿ.