ಪುನೀತ್ ರಾಜ್‌ಕುಮಾರ್‌ ಪುಣ್ಯತಿಥಿ: ಅಶ್ವತ್ಥ ನಾರಾಯಣ ಅವರಿಂದ ಪುಷ್ಪಾಂಜಲಿ, ಅನ್ನ ಸಂತರ್ಪಣೆ

ಪುನೀತ್ ರಾಜ್‌ಕುಮಾರ್‌ ಪುಣ್ಯತಿಥಿ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ ಅವರಿಂದ ಪುಷ್ಪಾಂಜಲಿ, ಅನ್ನ ಸಂತರ್ಪಣೆ ನಡೆಯಿತು. ಈ ಕುರಿತಾದ ಮತ್ತಷ್ಟು ವಿವರಗಳು ಹಾಗೂ ಮಾಹಿತಿಗಳು ಇಲ್ಲಿದೆ.

ಪುನೀತ್ ರಾಜ್‌ಕುಮಾರ್‌ ಪುಣ್ಯತಿಥಿ: ಅಶ್ವತ್ಥ ನಾರಾಯಣ ಅವರಿಂದ ಪುಷ್ಪಾಂಜಲಿ, ಅನ್ನ ಸಂತರ್ಪಣೆ
Linkup
ಬೆಂಗಳೂರು: ಇತ್ತೀಚೆಗೆ ಹಠಾತ್ತಾಗಿ ನಿಧನರಾದ ಸಿನಿಮಾ ನಟ ಪುನೀತ್ ರಾಜಕುಮಾರ್ ಅವರ 11ನೇ ದಿನದ ಪುಣ್ಯತಿಥಿಯ ಅಂಗವಾಗಿ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವೆಡೆಗಳಲ್ಲಿ ಸೋಮವಾರ ನಡೆದ ಶ್ರದ್ಧಾಂಜಲಿ ಮತ್ತು ಅನ್ನ ಸಂತರ್ಪಣೆ ಕಾರ್ಯಕ್ರಮಗಳಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಪಾಲ್ಗೊಂಡಿದ್ದರು. ಯಶವಂತಪುರ ಬಸ್ ನಿಲ್ದಾಣದ ಎದುರಿನ ಸಂವಿಧಾನ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲಿಗೆ ಪಾಲ್ಗೊಂಡ ಸಚಿವರು, ಪುನೀತ್ ಭಾವಚಿತ್ರಕ್ಕೆ ಗೌರವ ನಮನಗಳನ್ನು ಸಲ್ಲಿಸಿ, ಪುಷ್ಪಾಂಜಲಿಯನ್ನು ಸಮರ್ಪಿಸಿದರು. ಬಳಿಕ ಅವರು, ಪುಣ್ಯತಿಥಿಯಲ್ಲಿ ಪಾಲ್ಗೊಂಡಿದ್ದ ಪುನೀತ್ ಅವರ ಸಾವಿರಾರು ಅಭಿಮಾನಿಗಳಿಗೆ ಖುದ್ದಾಗಿ ನಿಂತು ಅನ್ನ ಸಂತರ್ಪಣೆಯನ್ನು ವಿತರಿಸಿದರು. ಚಿತ್ರ ನಿರ್ಮಾಪಕರಾದ ಸುರೇಶ್ ಗೌಡ ಮತ್ತು ಬಿಜೆಪಿ ಮುಖಂಡ ವೈರಮುಡಿ, ಚೌಧರಿ ಅವರು ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ನಂತರ ಸಚಿವರು, ಮಲ್ಲೇಶ್ವರಂನ ವೈಯಾಲಿಕಾವಲ್ ಜಂಕ್ಷನ್ನಿನ 10ನೇ ಅಡ್ಡರಸ್ತೆಯಲ್ಲಿ ನಡೆದ ಪುನೀತ್ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಕೂಡ ಪಾಲ್ಗೊಂಡು, ಅಗಲಿದ ನಟನಿಗೆ ಶ್ರದ್ಧಾಪೂರ್ವಕ ಪ್ರಣಾಮಗಳನ್ನು ಸಲ್ಲಿಸಿದರು. ಇಲ್ಲೂ ಸಹ ಬಿಜೆಪಿ ಮುಖಂಡ ವೆಂಕಟೇಶ ಅವರು ಸಾರ್ವಜನಿಕ ಅನ್ನ ಸಂತರ್ಪಣೆ ವಿನಿಯೋಗವನ್ನು ವ್ಯವಸ್ಥೆ ಮಾಡಿದ್ದರು. ನಟ ಪುನೀತ್ ರಾಜ್‌ಕುಮಾರ್ ನಿಧನರಾಗಿ ನವೆಂಬರ್ 8 ಕ್ಕೆ 11 ದಿನಗಳಾದ ಹಿನ್ನೆಲೆಯಲ್ಲಿ ಪುಣ್ಯರಾಧನೆ ಕಾರ್ಯಕ್ರಮ ನಡೆಯುತ್ತಿದೆ. ಪುನೀತ್ ನಿವಾಸ ಹಾಗೂ ಕಂಠೀರವ ಸ್ಟುಡಿಯೋದಲ್ಲಿ ವಿಶೇಷ ಪೂಜೆಯೂ ನೆರವೇರಿದೆ. 12 ನೇ ದಿನಗ ಕಾರ್ಯಕ್ರಮ ಮಂಗಳವಾರ ಅರಮನೆ ಮೈದಾನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಚಿತ್ರರಂಗದ ಪ್ರಮುಖರು ಹಾಗೂ ಆಪ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ.