ಪುನೀತ್ ರಾಜ್‌ಕುಮಾರ್ ಅಂತಿಮ ದರ್ಶನಕ್ಕೆ ರಾಧಿಕಾ ಪಂಡಿತ್ ಯಾಕೆ ಬರಲಿಲ್ಲ? ಸ್ಪಷ್ಟನೆ ನೀಡಿದ ನಟಿ

ನಟಿ ರಾಧಿಕಾ ಪಂಡಿತ್ ಯಾಕೆ ಪುನೀತ್ ರಾಜ್‌ಕುಮಾರ್ ಅವರನ್ನು ಕೊನೆಯದಾಗಿ ನೋಡಲು ಬರಲಿಲ್ಲ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದು, ಅದಕ್ಕೆ ರಾಧಿಕಾ ಸೋಶಿಯಲ್ ಮೀಡಿಯಾದಲ್ಲಿ ಉತ್ತರ ನೀಡಿದ್ದಾರೆ.

ಪುನೀತ್ ರಾಜ್‌ಕುಮಾರ್ ಅಂತಿಮ ದರ್ಶನಕ್ಕೆ ರಾಧಿಕಾ ಪಂಡಿತ್ ಯಾಕೆ ಬರಲಿಲ್ಲ? ಸ್ಪಷ್ಟನೆ ನೀಡಿದ ನಟಿ
Linkup
ನಟಿ ಅವರು ಜೊತೆ 'ಹುಡುಗರು', 'ದೊಡ್ಮನೆ ಹುಡುಗ' ಸಿನಿಮಾ ಮಾಡಿದ್ದಾರೆ. ರಾಧಿಕಾ ಮನೆಯ ಕಾರ್ಯಕ್ರಮಗಳಿಗೆ ಅಪ್ಪು ಹಾಜರಿ ಹಾಕಿದ್ದರು. ಹೀಗಿದ್ದಾಗ್ಯೂ ರಾಧಿಕಾ ಪಂಡಿತ್ ಯಾಕೆ ಅಪ್ಪುರನ್ನು ಕೊನೆಯದಾಗಿ ನೋಡಲು ಬರಲಿಲ್ಲ ಎಂದು ನೆಟ್ಟಿಗರೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಿದ್ದಾರೆ, ಅದಕ್ಕೆ ರಾಧಿಕಾ ಕೂಡ ಸಹನೆಯಿಂದ ಉತ್ತರ ನೀಡಿದ್ದಾರೆ. ಅಪ್ಪುರನ್ನು ನೆನೆದ ರಾಧಿಕಾ ಪಂಡಿತ್ ಪುನೀತ್ ರಾಜ್‌ಕುಮಾರ್ ಜೊತೆಗಿನ ಫೋಟೋ ಹಂಚಿಕೊಂಡು ನಟಿ ರಾಧಿಕಾ ಪಂಡಿತ್, "ನೀವು ಇಲ್ಲ ಎಂದು ಒಪ್ಪಿಕೊಳ್ಳಲು ಇನ್ನೂ ಹೃದಯ ತಿರಸ್ಕರಿಸುತ್ತಿದೆ. ಈ ಖಾಲಿತನವನ್ನು ಎಂದಿಗೂ ಭರ್ತಿ ಮಾಡಲಾಗದು. ನೀವಿಲ್ಲದೆ ಚಿತ್ರರಂಗ ಮೊದಲಿನಂತೆ ಇರೋದಿಲ್ಲ. ನಿಮ್ಮ ಜೊತೆ ಕೆಲಸ ಮಾಡುವ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು. ನಿಮ್ಮನ್ನು ತುಂಬ ಮಿಸ್ ಮಾಡಿಕೊಳ್ತೀನಿ" ಎಂದು ಹೇಳಿದ್ದರು. ರಾಧಿಕಾ ಯಾಕೆ ಕೊನೆಯದಾಗಿ ಪುನೀತ್‌ರನ್ನು ನೋಡಲಿಲ್ಲ? ರಾಧಿಕಾ ಪೋಸ್ಟ್‌ಗೆ ಸಾಕಷ್ಟು ಕಾಮೆಂಟ್ ಬಂದಿದ್ದು, ಯಾಕೆ ರಾಧಿಕಾ ಪಂಡಿತ್ ಅಪ್ಪುರನ್ನು ಕೊನೆಯದಾಗಿ ನೋಡಲು ಬರಲಿಲ್ಲ? ಇಷ್ಟುದಿನವಾದ ನಂತರ ಪೋಸ್ಟ್ ಮಾಡೋಕೆ ನೆನಪಾಯ್ತಾ? ಹೀಗೆ ನೂರಾರು ರೀತಿಯ ಕಾಮೆಂಟ್ಸ್ ಬಂದಿತ್ತು. ಅದಕ್ಕೆಲ್ಲ ರಾಧಿಕಾ ಪಂಡಿತ್ ಸಹನೆಯಿಂದ ಉತ್ತರ ನೀಡಿದ್ದಾರೆ. ನೆಟ್ಟಿಗರ ಪ್ರಶ್ನೆಗೆ ರಾಧಿಕಾ ಹೇಳಿದ್ದೇನು? "ಜೀವನದಲ್ಲಿ ಆದಷ್ಟು ಒಬ್ಬರ ಮೇಲೆ ಕೋಪ ಇದ್ರು ಪ್ರೀತಿ ಹಂಚಿ, ತಾಳ್ಮೆಯಿರಲಿ. ನಾನು ಅಂತಿಮ ದರ್ಶನ ಪಡೆದೆನೋ ಇಲ್ವೋ ಎಂಬುದು ಅವರ ಕುಟುಂಬಕ್ಕೆ ತಿಳಿದಿದೆ, ನಮಗೆ ತಿಳಿದಿದೆ. ಕ್ಯಾಮೆರಾ ಮುಂದೆ ಬಂದು ಮಾತನಾಡುವ ಶಕ್ತಿ ನನಗಿರಲಿಲ್ಲ. ಕ್ಯಾಮೆರಾ ಮುಂದೆ ಬಂದು ಮಾತನಾಡದೆ ಇರುವುದು ದೊಡ್ಡ ತಪ್ಪು ಎಂದು ನಾನು ಭಾವಿಸಲಿರಲಿಲ್ಲ. ಅವರ ಮೇಲಿರುವ ಪ್ರೀತಿಗೆ ನೀವು ಹೀಗೆ ಮಾತನಾಡುತ್ತಿರುವುದು ಸಹಜ. ಅಪ್ಪು ಸರ್ ಅಗಲಿಕೆ ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಾದ ನಿಮಗೆ ಎಷ್ಟು ನೋವು ನೀಡುತ್ತಿದೆಯೋ, ಅಷ್ಟೇ ನೋವು ನನಗೂ ನಮ್ಮ ಕುಟುಂಬಕ್ಕೂ ಆಗಿದೆ. ನಮ್ಮೆಲ್ಲರ ನೆಚ್ಚಿನ ಅಪ್ಪು ಸರ್ ಅಗಲಿಕೆ ಎಂದೆಂದಿಗೂ ನಮ್ನನ್ನು ಕಾಡುತ್ತಲೇ ಇರುತ್ತದೆ" ಎಂದು ರಾಧಿಕಾ ಪಂಡಿತ್ ( ) ಹೇಳಿದ್ದಾರೆ. ಪುನೀತ್ ನಿಧನರಾಗಿ 12 ದಿನಗಳು ಕಳೆಯಿತುಪುನೀತ್ ರಾಜ್‌ಕುಮಾರ್ ( ) ನಿಧನವಾಗಿ 12 ದಿನಗಳು ಕಳೆದಿವೆ. 12ನೇ ದಿನದ ಪುಣ್ಯಸ್ಮರಣೆಯಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ 30 ಸಾವಿರ ಅಭಿಮಾನಿಗಳು ಊಟ ಮಾಡಿಕೊಂಡು ಹೋಗಿದ್ದಾರೆ. ಸ್ವತಃ ಅಶ್ವಿನಿ ಪುನೀತ್ ರಾಜ್‌ಕುಮಾರ್, ಡಾ ಶಿವರಾಜ್‌ಕುಮಾರ್ ಅವರು ಅಭಿಮಾನಿಗಳಿಗೆ ಊಟ ಬಡಿಸಿದ್ದಾರೆ. ಇದರ ಜೊತೆಗೆ ಪುನೀತ್ ಮನೆಗೆ ಪರಭಾಷಾ ನಟರಾದ ಉದಯನಿಧಿ, ಅಕ್ಕಿನೇನಿ ನಾಗಾರ್ಜುನ, ಸೂರ್ಯ, ರಾಜೇಂದ್ರ ಪ್ರಸಾದ್, ರಾಮ್ ಚರಣ್ ತೇಜ ಮುಂತಾದವರು ಬಂದು ಕುಟುಂಬಕ್ಕೆ ಸಾಂತ್ವನ ತಿಳಿಸಿದ್ದಾರೆ.