ನಿರ್ದೇಶಿಸಿದ ಸಿನಿಮಾ ತೆರೆಗೆ ಬರುವ ಮುನ್ನವೇ ಯಂಗ್ ಡೈರೆಕ್ಟರ್ ಸಾವು

ಕೊರೊನಾ ಮಹಾಮಾರಿಗೆ ಈಚೆಗಷ್ಟೇ ಸಂಯುಕ್ತ 2 ನಿರ್ಮಾಪಕ, 'present ಪ್ರಪಂಚ ೦% ಲವ್' ಚಿತ್ರದ ನಾಯಕ ನಟ ಮಂಜುನಾಥ್‌ ಬಲಿಯಾಗಿದ್ದರು. ಇದೀಗ '..೦% ಲವ್' ಚಿತ್ರದ ನಿರ್ದೇಶಕ ಅಭಿರಾಮ್ ಕೂಡ ಸಾವನ್ನಪ್ಪಿದ್ದಾರೆ.

ನಿರ್ದೇಶಿಸಿದ ಸಿನಿಮಾ ತೆರೆಗೆ ಬರುವ ಮುನ್ನವೇ ಯಂಗ್ ಡೈರೆಕ್ಟರ್ ಸಾವು
Linkup
ಕೆಲ ದಿನಗಳ ಹಿಂದಷ್ಟೇ ನಿರ್ಮಾಪಕ ಡಿ.ಎಸ್‌. ಮಂಜುನಾಥ್ ಕೋವಿಡ್‌ನಿಂದ ನಿಧನರಾಗಿದ್ದರು. 'ಕೆಮಿಸ್ಟ್ರಿ ಆಫ್‌ ಕರಿಯಪ್ಪ' ಹಾಗೂ 'ಸಂಯಕ್ತ 2' ಸಿನಿಮಾಗಳಿಗೆ ಬಂಡವಾಳ ಹೂಡಿದ್ದ ಅವರು, 'present ಪ್ರಪಂಚ ೦% ಲವ್' ಎಂಬ ಸಿನಿಮಾ ಮೂಲಕ ಹೀರೋ ಆಗಿದ್ದರು. ಆದರೆ, ದುರಾದೃಷ್ಟವಶಾತ್ ಸಿನಿಮಾ ತೆರೆಗೆ ಬರುವ ಮುನ್ನವೇ ನಿಧನರಾದರು. ಇದೀಗ ಆ ಸಿನಿಮಾದ ನಿರ್ದೇಶಕ ಅಭಿರಾಮ್‌ ಸಾವನ್ನಪ್ಪಿದ್ದಾರೆ! ಅವರಿಗೆ ಕಳೆದ ಒಂದು ವಾರದಿಂದ ಜ್ವರ, ಕೆಮ್ಮು ಇತ್ಯಾದಿ ಅನಾರೋಗ್ಯದ ಲಕ್ಷಣಗಳಿದ್ದರೂ ಈತ ಸೂಕ್ತ ಚಿಕಿತ್ಸೆ ಪಡೆದಿರಲಿಲ್ಲವಂತೆ. ಕೊರೊನಾ ಲಕ್ಷಣಗಳಿದ್ದರೂ, ಅವರು ಕೋವಿಡ್‌ ಪರೀಕ್ಷೆಯನ್ನು ಮಾಡಿಸಿಕೊಂಡಿರಲಿಲ್ಲ ಎನ್ನಲಾಗಿದೆ. ಅಂತಿಮವಾಗಿ ಅವರಿಗೆ ಉಸಿರಾಟದ ತೊಂದರೆಯೂ ಶುರುವಾಗಿದ್ದು, ಇಂದು (ಮೇ 28) ಹೃದಯಾಘಾತವಾಗಿ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಡಿ.ಎಸ್‌. ಮಂಜುನಾಥ್ ನಿರ್ಮಿಸಿದ್ದ 'ಸಂಯಕ್ತ 2' ಸಿನಿಮಾದ ಮೂಲಕ ಅಭಿರಾಮ್ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದ್ದರು. ನಂತರ ಮಂಜುನಾಥ್ ಅವರೇ ಚೊಚ್ಚಲ ಬಾರಿಗೆ ಹೀರೋ ಆಗಿದ್ದ 'present ಪ್ರಪಂಚ ೦% ಲವ್' ಸಿನಿಮಾವನ್ನು ಅಭಿರಾಮ್ ಕೈಗೆತ್ತಿಕೊಂಡಿದ್ದರು. ಆದರೆ, ಪ್ರೀತಿಯಿಂದ ಮಾಡಿದ ಸಿನಿಮಾ ತೆರೆಗೆ ಬರುವ ಮುನ್ನವೇ ಚಿತ್ರದ ಹೀರೋ ಮತ್ತು ನಿರ್ದೇಶಕರು ಇಬ್ಬರೂ ಸಾವನ್ನಪ್ಪಿರುವುದು ಬೇಸರದ ಸಂಗತಿ. 'present ಪ್ರಪಂಚ ೦% ಲವ್' ಸಿನಿಮಾದಲ್ಲಿ ಇಂದಿನ ಕಾಲಘಟ್ಟದ ಕಥೆಯಿದ್ದು, ಈಗಿನವರು ಸಮಯದ ಹಿಂದೆ, ಹಣದ ಹಿಂದಷ್ಟೇ ಓಡುತ್ತಿದ್ದಾರೆ. ತಮ್ಮ ಅಮೂಲ್ಯವಾದ ಜೀವನ ಎಲ್ಲಿ ಕಳೆದು ಹೋಗುತ್ತಿದೆ? ಹೇಗೆ ಮಾಯವಾಗುತ್ತಿದೆ ಎಂಬುದನ್ನು ಮರೆಯುತ್ತಿದ್ದಾರೆ. ಅದನ್ನೇ ಮುಖ್ಯವಾಗಿಟ್ಟುಕೊಂಡು ನಿರ್ದೇಶಕ ಅಭಿರಾಮ್‌ ಈ ಸಿನಿಮಾ ಮಾಡಿದ್ದರಂತೆ.