ನಟಿ ಸಮಂತಾ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಅವರ ಮ್ಯಾನೇಜರ್

ನಟಿ ಸಮಂತಾ ಅವರು ಏಕಾಏಕಿ ಆಸ್ಪತ್ರೆಗೆ ಭೇಟಿ ಮಾಡಿದ್ದು, ಅವರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ಸಮಂತಾ ಆರೋಗ್ಯದ ಬಗ್ಗೆ ಅವರ ಮ್ಯಾನೇಜರ್ ಅಪ್‌ಡೇಟ್ಸ್ ನೀಡಿದ್ದಾರೆ. ಆ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ನಟಿ ಸಮಂತಾ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಅವರ ಮ್ಯಾನೇಜರ್
Linkup
ಏಕಾಏಕಿ ನಟಿ ಅವರು ಆಸ್ಪತ್ರೆಗೆ ಭೇಟಿ ನೀಡಿರುವುದು ಅಭಿಮಾನಿಗಳಲ್ಲಿ ಆತಂಕ ಸೃಷ್ಟಿ ಮಾಡಿತ್ತು. ಸೋಮವಾರ ಸಮಮತಾ ಅವರು ಖಾಸಗಿ ಆಸ್ಪತ್ರೆಗೆ ಬೇಟಿ ನೀಡಿದ್ದರು, ಆ ಬಗ್ಗೆ ಕೆಲ ವದಂತಿಗಳು ಹರಡಿತ್ತು. ಅದಕ್ಕೆಲ್ಲ ತೆರೆ ಎಳೆದಿರುವ ಅವರ ಮ್ಯಾನೇಜರ್, ಸಮಂತಾ ಆರಾಮಾಗಿದ್ದಾರೆ ಎಂದಿದ್ದಾರೆ. ಸಮಂತಾ ಮ್ಯಾನೇಜರ್ ಹೇಳಿದ್ದೇನು? "ಸಮಂತಾ ಅವರಿಗೆ ಯಾವುದೇ ಗಂಭೀರವಾದ ಆರೋಗ್ಯ ಸಮಸ್ಯೆ ಇಲ್ಲ. ಅವರಿಗೆ ಸಣ್ಣದಾಗಿ ಕಫ ಆಗಿತ್ತು, ಹೀಗಾಗಿ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದಾರೆ. ಕೊರೊನಾ ಪರೀಕ್ಷೆಯನ್ನೂ ಕೂಡ ಮಾಡಿಸಿಕೊಂಡಿದ್ದಾರೆ. ಆದರೆ ಏನೂ ಸಮಸ್ಯೆ ಇಲ್ಲ. ಸದ್ಯ ಮನೆಯಲ್ಲಿ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಯಾವುದೇ ವದಂತಿಗಳನ್ನು ನಂಬಬೇಡಿ" ಎಂದು ನಟಿ ಸಮಂತಾ ಮ್ಯಾನೇಜರ್ ಹೇಳಿದ್ದಾರೆ. ಸಮಂತಾ ಮ್ಯಾನೇಜರ್ ಮಾತು ಕೇಳಿ ಅವರ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. '' ಹಾಡಿನಲ್ಲಿ ಸಮಂತಾ ಹೆಜ್ಜೆ; ಸಾಹಿತ್ಯದ ವಿರುದ್ಧ ದೂರು ದಾಖಲು ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ ನಟನೆಯ 'ಪುಷ್ಪ' ಚಿತ್ರದಲ್ಲಿ ಸಮಂತಾ ಅವರು ಮೊದಲ ಬಾರಿಗೆ ಐಟಂ ಡ್ಯಾನ್ಸ್ ಮಾಡಿದ್ದರು. ಈ ಹಾಡಿಗಾಗಿ ವಿಶೇಷವಾಗಿ ಸೆಟ್ ಹಾಕಲಾಗಿದ್ದು, ಸಮಂತಾ ಕೂಡ ಭಾರೀ ಮೊತ್ತದ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಇನ್ನು ಹಾಡು ಕೂಡ ವಿಶಿಷ್ಟವಾಗಿ ಮೂಡಿಬಂದಿದ್ದು, ಹಾಡಿನ ಸಾಹಿತ್ಯವು ಕೂಡ ಪುರುಷರನ್ನು ಕೀಳಾಗಿ ಕಂಡಿದೆ ಎಂದು ಕೆಲವರು ಆರೋಪ ಮಾಡಿದ್ದಾರೆ. Oo Antava ಹಾಡಿನ ಸಾಹಿತ್ಯದ ಮೂಲಕ ಪುರುಷರನ್ನು ಕೀಳಾಗಿ ಕಾಣಲಾಗಿದೆ ಎಂದು ಆರೋಪಿಸಿ ದೂರು ಕೂಡ ದಾಖಲಿಸಲಾಗಿದೆ. ಇಡೀ ಸಾಹಿತ್ಯದಲ್ಲಿಯೂ ಪುರುಷರು ಕಾಮುಕರು, ಆಸೆಬುರುಕರು ಎಂಬಂತೆ ಇದೆ ಎಂದು ಆರೋಪ ಮಾಡಲಾಗಿದೆ. ಆಂಧ್ರ ಪ್ರದೇಶ ಕೋರ್ಟ್‌ನಲ್ಲಿರುವ ಈ ದೂರಿನ ತನಿಖೆ ಇನ್ನೂ ಬಗೆಹರಿದಿಲ್ಲ. ಸಿನಿಮಾ ರಿಲೀಸ್‌ಗೂ ಮುನ್ನವೇ 'ಪುಷ್ಪ' ಚಿತ್ರ ಈಗಾಗಲೇ ಹಾಡು, ಲುಕ್ ಮೂಲಕ ಭಾರೀ ನಿರೀಕ್ಷೆ ಮೂಡಿಸಿದೆ. ಸಿನಿಮಾಗಳಲ್ಲಿ ಬ್ಯುಸಿಯಾದ ಸಮಂತಾ ಸಮಂತಾ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಕೆಲ ದಿನಗಳ ಹಿಂದೆ ಅವರು ಒಂದಾದ ಮೇಲೆ ಒಂದರಂತೆ ಪಾರ್ಟಿ, ಟ್ರಾವೆಲ್ ಮಾಡುತ್ತಿದ್ದರು. ಈಗ ಅವರು ಸಂಪೂರ್ಣ ಗಮನವನ್ನು ಸಿನಿಮಾಕ್ಕೆ ನೀಡುತ್ತಿದ್ದಾರೆ. ಹಾಲಿವುಡ್‌ಗೆ ಸಮಂತಾ ಕಾಲಿಟ್ಟಿದ್ದು, ಮುಂದಿನ ದಿನಗಳಲ್ಲಿ ಒಂದಾದ ಮೇಲೆ ಒಂದರಂತೆ ಪ್ರಾಜೆಕ್ಟ್ ಮಾಡುವ ಆಶಯದಲ್ಲಿದ್ದಾರೆ. 'Kaathu Vaakula Rendu Kaadhal', 'Shaakuntalam', 'Yashoda' ಸಿನಿಮಾಗಳಲ್ಲಿ ಸಮಂತಾ ನಟಿಸಿದ್ದು, ಅವುಗಳು ರಿಲೀಸ್ ಆಗಬೇಕಿವೆ. ಬೇಸರ ಹೊರಹಾಕಿದ್ದ ನಟಿ ಸಮಂತಾ ನಟ ನಾಗಚೈತನ್ಯ ಜೊತೆ ವಿಚ್ಛೇದನ ಪಡೆಯುವ ಸಮಯದಲ್ಲಿ ಸಮಂತಾ ಕುರಿತಂತೆ ಸಾಕಷ್ಟು ಅಂತೆ -ಅಂತೆ ಪುರಾಣಗಳು ಕೇಳಿಬಂತು ಎಂದು ಸಮಂತಾ ಬೇಸರ ಮಾಡಿಕೊಂಡಿದ್ದರು. ಈ ಕುರಿತು ಅವರು ಅನೇಕ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು, ಸೋಶಿಯಲ್ ಮೀಡಿಯಾ ಪೋಸ್ಟ್ ಕೂಡ ಹಂಚಿಕೊಂಡಿದ್ದರು.