ಧರ್ಮೋಕ್ರಸಿಯನ್ನು ಪಕ್ಕಕ್ಕೆ ಸರಿಸಿ, ಡೆಮೊಕ್ರಸಿ ಬರಲಿ, ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ: ಹಂಸಲೇಖ

ಸಂಗೀತ ನಿರ್ದೇಶಕ ಹಂಸಲೇಖ ಅವರು ಸಾಹಿತಿ ಎಸ್ ಜಿ ಸಿದ್ದರಾಮಯ್ಯ ಪುಸ್ತಕ ಬಿಡುಗಡೆ ವೇಳೆ ಇತ್ತೀಚೆಗೆ ನಡೆದ ವಿವಾದದ ಬಗ್ಗೆಯೂ ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ ಎಸ್ ಜಿ ಸಿದ್ದರಾಮಯ್ಯ ಬೆಂಬಲ ನೀಡಿರುವ ಬಗ್ಗೆಯೂ ಮಾತನಾಡಿದ್ದಾರೆ.

ಧರ್ಮೋಕ್ರಸಿಯನ್ನು ಪಕ್ಕಕ್ಕೆ ಸರಿಸಿ, ಡೆಮೊಕ್ರಸಿ ಬರಲಿ, ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ: ಹಂಸಲೇಖ
Linkup
ಸಂಗೀತ ನಿರ್ದೇಶಕ ಹಂಸಲೇಖ, ಮಾಜಿ ಸಿಎಂ ಅವರು ಸಾಹಿತಿ ಎಸ್ ಜಿ ಸಿದ್ದರಾಮಯ್ಯ ಅವರ 'ಯರೆಬೇವು' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಸಂಗೀತ ನಿರ್ದೇಶಕ ಹಂಸಲೇಖ ಹೇಳಿದ್ದೇನು? ನಾನು ಭಯಸ್ತ ಅಲ್ಲ, ಮಾಗಡಿ ರೋಡ್‌ನಲ್ಲಿ ದೊಡ್ಡ ದೊಡ್ಡ ಪೋಲಿ ಆಟ ಆಡಿ ದೊಡ್ಡ ತಂಡ ಕಟ್ಕೊಂಡಿದ್ದೆ, ಚರಿತ್ರೆಯೇ ಇದೆ. ನನಗೆ ಈಗ 70 ತಿನ್ನೋದು ಒಪ್ಪತ್ತು, ಉಳಿದ ಎರಡು ಹೊತ್ತು ಹಸಿವು ಹಸಿವಾ?? ಅದು ಬರೀ ಬಸವ. ಇನ್ನೊಂದಿಷ್ಟು ಇರುತ್ತೇವೆ ಎಂದುಕೊಂಡಿದ್ದೇನೆ, ಅದನ್ನು ಸಾಧಿಸಿ ಹೋಗುತ್ತೇವೆ. ದೇಸಿ ಸಮುದಾಯದ ಕರುಳಿನ ಕಥನ. ಸುಮಾರು ಎರಡು ದಶಕಗಳಿಂದ ದೇಸಿ ಎನ್ನುವ ಆಶಯ ಇಟ್ಟುಕೊಂಡು ಸುಶಿಕ್ಷಿತ ಕಲಾವಿದರನ್ನು ತಯಾರು ಮಾಡಬೇಕು ಎಂದು ದೇಸಿ ಸಂಸ್ಥೆ ಮಾಡಿದೆ. ಅಂದಿನ ಮುಖ್ಯಮಂತ್ರಿಗಳು ಆ ಸಂಸ್ಥೆ ಉದ್ಘಾಟನೆಗೆ ಬರಬೇಕಿತ್ತು, ಜನ ಕಡಿಮೆ ಇದ್ದಾರೆ ಅಂತ ರಿಪೋರ್ಟ್ ತಗೊಂಡು ಆ ಕಾರ್ಯಕ್ರಮಕ್ಕೆ ಬರಲಿಲ್ಲ. ದೇಸಿ ಅಂದರೆ ಬಡತನ, ಹೀಗಾಗಿ ಬರಲ್ಲ ಅಂತ ನನ್ನ ಪಕ್ಕದಲ್ಲಿದ್ದವರು ಅಂದ್ರು. ಗೋರೂರು ಚೆನ್ನಬಸಪ್ಪ ಅವರು ನಮ್ಮ ಸಂಸ್ಥೆ ಉದ್ಘಾಟನೆ ಮಾಡಿದ್ರು. ರಾಜ್ಯದ ಮಕ್ಕಳಿಗೆ ಹಾಲು ಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ, ನನಗೂ ಹಾಲು ಕೊಟ್ರು. ಸಾಹಿತ್ಯ, ಶಿಕ್ಷಣ ಕ್ಷೇತ್ರದಲ್ಲಿ ಎಲ್ಲಿ ತಲೆ ಹಾಕಿದರೂ ಕಡಿಮೆ ಅನುಭವ ಇದೆ ಅಂತ ಅನಿಸುತ್ತಿದ್ದರು. ಎಸ್.ಜಿ.ಸಿದ್ದರಾಮಯ್ಯ ಅವರು ನಮ್ಮನ್ನು ಎಲ್ಲ ಕಡೆ ಸಮರ್ಥಿಸಿಕೊಂಡ ಬಂದರು, ಎಸ್ ಜಿ ಎಸ್ ಏನೂ ಹೇಳಿದರೂ ಕಣ್ಣು ಮುಚ್ಚಿಕೊಂಡು ಮಾಡುವ ಶಿಷ್ಯ. ಇತ್ತೀಚೆಗೆ ನಡೆದ ಒಂದು ವಿವಾದದಲ್ಲಿ ಎಲ್ಲ ಸಮುದಾಯಗಳನ್ನು ಸಂಪರ್ಕಿಸಿ ಎಸ್‌ ಜಿ ಎಸ್ ಅವರು ನನ್ನ ಬೆಂಬಲಕ್ಕೆ ನಿಂತರು. ಅಂದು ನಾನು ಬ್ಲಡ್ ಫ್ರೈ ಬಗ್ಗೆ ಮಾತನಾಡಿದಾಗ ರಕ್ತ ತಿನ್ನೋರು, ತಿನ್ನೋದು ಬಿಟ್ಟೋರ ಒಳಗೆ ರಕ್ತ ಕುದಿತು. ನುಡಿದರೆ ಮುತ್ತಿನ ಹಾರದಂತೆ ಇರಬೇಕು ಅಂತ ಮಾತನಾಡುತ್ತೇವೆ, ಆದರೆ ಒಳಗಡೆ ಕಬ್ಬಿಣದ ಸಲಾಕೆಯಂತಿರುತ್ತದೆ. ಸಾರವನ್ನು ಕೊಡುವ ಯರೆವೇವು ಎಸ್ ಜಿ ಸಿದ್ದರಾಮಯ್ಯ. ಧರ್ಮೋಕ್ರಸಿಯನ್ನು ಪಕ್ಕಕ್ಕೆ ಸರಿಸಿ, ಡೆಮೊಕ್ರಸಿ ಬರಲಿ, ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ. ಏನದು ಹಳೆಯ ವಿವಾದ? ಹಂಸಲೇಖ ಅವರು ಸರಿಗಮಪ ಸಿಂಗಿಂಗ್ ರಿಯಾಲಿಟಿ ಶೋನ ( sa re ga ma pa ) ತೀರ್ಪುಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಪೇಜಾವರ ಶ್ರೀಗಳ ಬಗ್ಗೆ ಹಂಸಲೇಖ ಅವರು ನೀಡಿದ್ದ ಹೇಳಿಕೆ ವಿವಾದ ಆಗಿತ್ತು. ಈ ವಿವಾದಾತ್ಮಕ ಹೇಳಿಕೆ ವಿರುದ್ಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇನ್ಸ್‌ಪೆಕ್ಟರ್‌ ರಮೇಶ್ ನೇತೃತ್ವದಲ್ಲಿ ಹಂಸಲೇಖ ವಿಚಾರಣೆಯು ಸುಮಾರು ಅರ್ಧ ಗಂಟೆಗಳ ಕಾಲ ವಿಚಾರಣೆ ನಡೆದಿದೆ. ಸಾಕಷ್ಟು ಜನರು ಹಂಸಲೇಖ ಹೇಳಿಕೆ ವಿರುದ್ಧ ತಿರುಗಿಬಿದ್ದಿದ್ದರು. ಇನ್ನೂ ಕೆಲವರು ಹಂಸಲೇಖ ಪರ ಮಾತನಾಡಿದ್ದರು.