ಡ್ರಗ್ಸ್ ಕೇಸ್‌ನಲ್ಲಿ ಶಾರುಖ್ ಪುತ್ರ ಆರ್ಯನ್‌ ಬಂಧನ; 'ಸ್ಯಾಂಡಲ್‌ವುಡ್‌ ಕ್ವೀನ್‌' ರಮ್ಯಾ ಹೇಳಿದ್ದೇನು?

ಮುಂಬೈನ ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡಲಾಗುತ್ತಿತ್ತು ಎಂಬ ಖಚಿತ ಮಾಹಿತಿಯ ಮೇರೆಗೆ ಶನಿವಾರ (ಅ.2) ರಾತ್ರಿ ಎನ್‌ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್‌ರನ್ನು ವಶಕ್ಕೆ ಪಡೆದು, ನಂತರ ಬಂಧಿಸಲಾಗಿತ್ತು! ಇದೀಗ ಆ ಬಗ್ಗೆ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ.

ಡ್ರಗ್ಸ್ ಕೇಸ್‌ನಲ್ಲಿ ಶಾರುಖ್ ಪುತ್ರ ಆರ್ಯನ್‌ ಬಂಧನ; 'ಸ್ಯಾಂಡಲ್‌ವುಡ್‌ ಕ್ವೀನ್‌' ರಮ್ಯಾ ಹೇಳಿದ್ದೇನು?
Linkup
ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡುತ್ತಿದ್ದ ಆರೋಪದ ಮೇಲೆ ಶಾರುಖ್ ಖಾನ್ ಪುತ್ರ ಬಂಧನವಾಗಿದೆ. ಶನಿವಾರ (ಅ.2) ರಾತ್ರಿ ನಡೆದ ಎನ್‌ಸಿಬಿ ದಾಳಿಯಲ್ಲಿ ಆರ್ಯನ್ ಸಿಕ್ಕಿಬಿದ್ದಿದ್ದರು. ಸದ್ಯ ಅವರನ್ನು ನ್ಯಾಯಾಲಯವು ಎನ್‌ಸಿಬಿ ಕಸ್ಟಡಿಗೆ ನೀಡಿದೆ. ಈ ಮಧ್ಯೆ ನಟಿ ಅವರು ಶಾರುಖ್ ಪುತ್ರನ ಬಂಧನದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, ಹಲವು ಅನುಮಾನಗಳನ್ನು ಹೊರಹಾಕಿದ್ದಾರೆ. 'ಆರ್ಯನ್ ಖಾನ್ ಬಳಿ ಮಾದಕ ವಸ್ತು ಇರುವುದಕ್ಕೆ ಅಥವಾ ಆರ್ಯನ್ ಮಾದಕ ವಸ್ತು ಸೇವಿಸಿದ್ದರ ಬಗ್ಗೆ ದಾಖಲೆ ಇಲ್ಲ. ಆದಾಗ್ಯೂ, ಅವರನ್ನು ಬಂಧಿಸಿ, ವಿಚಾರಣೆ ಮಾಡಲಾಗಿದೆ. ಆದರೆ, ಮತ್ತೊಂದೆಡೆ ಕೇಂದ್ರ ಸಚಿವರ ಪುತ್ರ ಕಾರು ಚಲಾಯಿಸಿ, ನಾಲ್ವರು ರೈತರನ್ನು ಕೊಲೈಗೈದಿದ್ದಾನೆ ಮತ್ತು ಆದಾಗ್ಯೂ ಆತ ಆರಾಮಾಗಿ ಓಡಾಡಿಕೊಂಡಿದ್ದಾನೆ. ಯಾಕೆ ಆತನ ಬಂಧನ ಇನ್ನೂ ಆಗಿಲ್ಲ? ಯಾವುದೇ ಮಾಹಿತಿ ನೀಡದೆ, ಮೃತ ರೈತರ ಕುಟುಂಬದವರನ್ನು ಭೇಟಿಯಾಗಲು ಹೋಗುತ್ತಿದ್ದ ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸುತ್ತೀರಿ. ಇದು ಹೊಸ ಭಾರತ. ಅಧಿಕಾರದಲ್ಲಿರುವ ಹುಚ್ಚಾಟದಿಂದ ದೇಶ ನಡೆಯುತ್ತಿದೆ' ಎಂದು ರಮ್ಯಾ ಕಟು ಶಬ್ದಗಳಿಂದ ಟೀಕೆ ಮಾಡಿದ್ದಾರೆ. 'ಆಯೋಜಕರು ಸಿಕ್ಕಿಲ್ಲ ಹಾಗಾಗಿ, ಡ್ರಗ್ಸ್ ಸೇವನೆ ಮಾಡಿರುವವರನ್ನು ವಶಕ್ಕೆ ಪಡೆದುಕೊಂಡೆವು ಎಂದು ಎನ್‌ಸಿಬಿ ಹೇಳಿದೆ. ಆದರೆ, ಆರ್ಯನ್‌ ಖಾನ್‌ರಿಂದ ಡ್ರಗ್ಸ್ ಸಿಕ್ಕಿದೆ ಮತ್ತು ಅವರು ಡ್ರಗ್ಸ್‌ ಸೇವನೆ ಮಾಡಿದ್ದಾರೆ ಎಂದು ಎನ್‌ಸಿಬಿ ಇನ್ನೂ ನಿರ್ದಿಷ್ಟವಾಗಿ ಹೇಳಿಲ್ಲ ಎಂಬುದನ್ನು ನಾವು ಗಮನಿಸಬೇಕು. ಆಯೋಜಕರು ಯಾರು ಎನ್‌ಸಿಬಿಗೆ ಎಂದು ಗೊತ್ತಿದೆ. ಅವರು ಸುಲಭವಾಗಿ ವಾರೆಂಟ್ ನೀಡಿ, ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಬಹುದು. ಆದರೆ, ಯಾಕೆ ಇನ್ನೂ ಮಾಡಿಲ್ಲ? ನ್ಯಾಯಾಲಯದಲ್ಲಿ ವಾಟ್ಸಾಪ್ ಚಾಟ್‌ಗಳನ್ನು ಸಾಕ್ಷಿಯಾಗಿ ಸ್ವೀಕರಿಸಲಾಗುವುದಿಲ್ಲ. ಇನ್ನು, ವಿಚಾರಣೆ ವೇಳೆ ಆರ್ಯನ್ ಅವರು ಹೇಳಿದ್ದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಎನ್ಸಿಬಿ ಹೇಳುತ್ತಿದೆ. 'ದೀಪಿಕಾ ಹಲವು ಬಾರಿ ಕಣ್ಣೀರು ಹಾಕಿದರು.. ಆರ್ಯನ್ ಅತ್ತರು..' ಎನ್ನುವ ಗಾಸಿಪ್‌ ಹರಡಿಸುವುದರಲ್ಲಿ ಕೆಲವರಿಗೆ ಖುಷಿ ಇದೆ. ವಿಚಾರಣೆಗಳ ವೇಳೆ ಅಧಿಕಾರಿಗಳನ್ನು ಬಿಟ್ಟು ಬೇರೆ ಯಾರು ಇರುವುದಿಲ್ಲ. ಹೀಗಿದ್ದರೂ, ಅದು ಹೇಗೆ ಮಾಧ್ಯಮಗಳಿಗೆ ಮಾಹಿತಿ ತಲುಪುತ್ತದೆ? ಇದಕ್ಕೆ ಉತ್ತರ ಹುಡುಕಬೇಕು' ಎಂದು ಅವರು ಹೇಳಿದ್ದಾರೆ. ಎನ್‌ಸಿಬಿ ವಶದಲ್ಲಿರುವ ಆರ್ಯನ್!ಸದ್ಯ ನ್ಯಾಯಾಲಯವು ಆರ್ಯನ್‌ರನ್ನು ಎನ್‌ಸಿಬಿ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ಕಸ್ಟಡಿಗೆ ನೀಡಿದೆ. ಅ.4ರಂದು ಮುಂಬೈನ ಕಿಲ್ಲಾ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ವಕೀಲರ ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು ಅಕ್ಟೋಬರ್ 7ರವರೆಗೂ ಆರ್ಯನ್ ಖಾನ್‌ರನ್ನು ಎನ್‌ಸಿಬಿ ಕಸ್ಟಡಿಗೆ ಕೊಟ್ಟಿದೆ. ಆರ್ಯನ್ ಖಾನ್ ಜೊತೆಗೆ ಅರ್ಬಾಜ್ ಮರ್ಚೆಂಟ್ ಮತ್ತು ಮೂನ್‌ಮೂನ್ ಎಂಬುವರನ್ನೂ ಎನ್‌ಸಿಬಿ ವಶಕ್ಕೆ ನೀಡಿ ನ್ಯಾಯಾಲಯ ಆದೇಶಿಸಿದೆ. ಗುರುವಾರಕ್ಕೆ ಕಸ್ಟಡಿ ಅವಧಿ ಮುಕ್ತಾಯಗೊಳ್ಳಲಿದ್ದು, ಮತ್ತೊಮ್ಮೆ ನ್ಯಾಯಾಧೀಶರ ಮುಂದೆ ಮೂವರನ್ನೂ ಹಾಜರುಪಡಿಸಲಾಗುತ್ತದೆ. ಆನಂತರ ಆರ್ಯನ್‌ಗೆ ಜಾಮೀನು ಸಿಗಲಿದೆಯೇ? ಇಲ್ಲವೇ ಎಂಬುದು ಸದ್ಯದ ಕುತೂಹಲವಾಗಿದೆ.