ಜೀವ್ನ ಎಂಬ ಸಂತೆಯಲ್ಲಿ;
ನಮ್ಮ ಜೀವನದಲ್ಲಿ ಕೆಲವೊಮ್ಮೆ ನಮಗೇ ಅರಿವಾಗದಂತೆ ನಮ್ಮೊಳಗೆ ಬೇಸರ, ಜಿಗುಪ್ಸೆ, ಖಿನ್ನತೆ, ಭಯ, ಆತಂಕ ಮತ್ತು ಒಂಟಿತನಗಳು ಆವರಿಸಿಕೊಳ್ಳುತ್ತವೆ.
ಇವುಗಳಿಂದ ನಾವು ಇನ್ನಷ್ಟು ಬಲಹೀನರಾಗುತ್ತಾ ಹೋಗುತ್ತೇವೆ. ಹೇಗೆಂದರೆ, ಯಾರೊಂದಿಗೂ ಬೆರೆಯದೆ ಎಲ್ಲರಿಂದ ದೂರ ಇರುವುದು. ಯಾವುದಾದರು ಸಮಸ್ಯೆ ಬಂದಾಗ ಅದು ಕೇವಲ ನನಗಷ್ಟೆ ಬಂದಿದೆ ಎಂದು ಚಿಂತಿಸುತ್ತಾ.. ಮಾನಸಿಕ ತೊಂದರೆಯನ್ನು ಅನುಭವಿಸುತ್ತೇವೆ.
ಆದರೆ,
ಇವು ಎಲ್ಲರ ಜೀವನದಲ್ಲಿ ಸಹಜವಾಗಿ ಬರುವಂತಹವೇ!
ಆ ಸಂದರ್ಭದಲ್ಲಿ ಅಯ್ಯೋ! ನನಗ್ಯಾಕೆ ಹೀಗಾಯ್ತು ನನ್ನ ಜೀವನ ಮುಗಿದೇ ಹೋಯಿತು ಎಂದು ಅಥವಾ ಭರವಸೆ ತೊರೆದು ತಲೆಯಮೇಲೆ ಕೈ ಹೊತ್ತು ಯೋಚಿಸುತ್ತಾ ಕೂರುವ ಬದಲು,ಇವೆಲ್ಲವುಗಳಿಂದ ಹೊರಬರಲು ನಾವು ಪ್ರಯತ್ನ ಮಾಡಬೇಕು.
ಎಲ್ಲದನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತಾ, ಆತ್ಮ ವಿಶ್ವಾಸದಿಂದ ಹೆಜ್ಜೆ ಇಡಬೇಕು.
ಯಾರೋ.. ನಿಮ್ಮನ್ನ ಜರಿದರು, ಟೀಕೆ ಮಾಡಿದ್ರು ಅಂತ ಯಾವತ್ತು ಸುಮ್ಮನೆ ಕೂರಬೇಡಿ!!
ಬದುಕು ಹೀಗೆ ಎಲ್ಲವೂ ನಮ್ಮ ಲೆಕ್ಕಚಾರಗಳಂತೆ ಇರೋದಿಲ್ಲ ನಾವು ಅಂದು ಕೊಳ್ಳೋದೊಂದು ಆಗೋದು ಮತ್ತೊಂದು.. ನಾವು ಎಲ್ಲರ ಕಣ್ಣಿಗೂ ಮುದತರಿಸುವಂತೆ ಖಂಡಿತ ಇರಲಿಕ್ಕೆ ಸಾದ್ಯವಿಲ್ಲ.
ಕೆಲವರ ಕಣ್ಣಿಗೆ ಕೆಲವರು ತುಂಬ ಪಾಪದವರ ಹಾಗೆ ಕಂಡ್ರೆ ಇನ್ನು ಕೆಲವ ಕಣ್ಣಿಗೆ ಇವನೆಂತ ಕಾಡುಮನುಷ್ಯನಪ್ಪಾ ಅನಿಸುವ ಹಾಗೆ ಇರುತೇವೆ..
ಇನ್ನು ಕೆಲವರೋ ನಮ್ಮನ್ನ ಕಂಡು ಆಗದೆ ಸುಮ್ಮನೆ ನಮ್ಮ ಮೇಲೆ ಗೂಬೆ ಕೂರಿಸುತ್ತ ನಾವು ಮಾಡಿದ್ದ ಕೆಲಸದಲ್ಲೇಲ್ಲ ತಪ್ಪು ಕಂಡುಹಿಡಿಯುತ್ತ ಇರುತ್ತಾರೆ,
ಅವರ ಸಮಸ್ಯೆ ಬೇರೇನು ಅಲ್ಲ ಹೊಟ್ಟೆಕಿಚ್ಚು ಅಷ್ಟೆ,
ನಾವು ಸಾಮಾನ್ಯ ಮನುಷ್ಯರು ಎಲ್ಲ ಸಂಧರ್ಭದಲ್ಲಿಯೂ ಒಂದೇ ಸಮ ಇರಲು ಸಾದ್ಯವಿಲ್ಲ
ಕೆಲವು ಮಾತುಗಳು ನಿಂದನೆಗಳು ನಮ್ಮನ್ನ ಕುಗ್ಗಿಸಿ ನೆಲಕ್ಕೆ ಬಡಿದುಬಿಡುತ್ತವೆ,ಮಹತ್ತರ ಸಾಧನೆ ಮಾಡಬೇಕು ತುಂಬ ಎತ್ತರಕ್ಕೆ ಬೆಳೆಯಬೇಕುಎನ್ನುವ ಛಲ ನಮ್ನಲ್ಲಿ ಇದ್ದರೂ ಇಂತಹ ಕೆಲಸಕ್ಕೆ ಬಾರದ ಕೆಲವು ನಿಂದನೆ ಗಳಿಂದ ಮೂಲೆಹಿಡಿದು ಕೂತವರು ಬಹಳಷ್ಟು ಮಂದಿ ಇದ್ದಾರೆ..
ಅಸಲಿಗೆ ಒಬ್ಬರನ್ನೂ ಸುಮ್ಮನೆ ನಿಂದಿಸಿ ಅವರಿಗೆ ಸಿಗೋದಾದ್ರು ಏನು ಅನ್ನೋ ಪ್ರಶ್ನೆ ಎಲ್ಲರಿಗೂ ಕಾಡುತ್ತದೆ..
ಒಂದು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು ಇಂತವರನ್ನ ಬದಲಾಯಿಸಲು ಆ ಬ್ರಹ್ಮನಿಂದಲೂ ಸಾದ್ಯವಿಲ್ಲ
ಜನ ಕೈತೋರಿಸೋದು ಬೆಟ್ಟಕ್ಕೆ.. ಹಣ್ಣುತುಂಬಿದ ಮರವೆ ಹೆಚ್ಚು ಕಲ್ಲೇಟು ತಿನ್ನೋದು.. ದಾಸರು ಹೇಳಲಿಲ್ಲವಾ? ನಿಂದಕರಿರಬೇಕು ಹಂದಿಯ ಹಾಗೆ ಅಂಥ don't worry ನಿಮ್ಮ ಕೆಲಸ ನೀವು ಮಾಡ್ತಾಇರಿ ನಿಮ್ಮ ಛಲ ಕಂಡು ಯಶಸ್ಸು ನಿಮ್ಮ ಬೆನ್ನು ಹಿಂದೆ ಬೀಳಬೇಕು ಹಾಗೆ ಓಡಿ..ತುಂಬ ನೋವಾದಾಗೆಲ್ಲ ನಿಮಗೆ ನೀವೆ ಹೇಳಿಕೋಳ್ಳಿ ' ಇನ್ನು ಎಂಥವರನ್ನೆಲ್ಲ ನೋಡಿದ್ದೇನೆ ಇವರೆಲ್ಲ ಯಾವಲೆಕ್ಕ? ಸಾಕಾಗುವಷ್ಟು ಮಾತಾಡಿ ಬಾಯಿಯ ಚಪಲ ತೀರಿಸಿಕೊಳ್ಳಲಿ' ಅವರಿಗೆ ಒಂದು excuse ಕೋಡಿ ,ನೀವು ಗೆಲ್ಲುತ್ತೀರ ನಿಮ್ಮನ್ನ ನೋಡಿ ಇನ್ನು.. ಮಾತನಾಡಲಿ
ಆದರೆ,
ನನಗನ್ನಿಸಿಬಿಡುತ್ತೆ , ಅಲ್ಲಾ.. ಕೆಳಗೆ ಬಿದ್ದಾಗಲೂ ಎದ್ದು ನಿಲ್ಲುವ ಶಕ್ತಿ ಇದ್ದಾಗಲೂ ಕೂಡ ಯಾಕೇ ಈ ಮನಸ್ಸು
ಮತ್ಯಾರೋ ಬಂದು ಎಬ್ಬಿಸಲ್ಲಿ ಅಂತ ಕೈ ಎತ್ತುತ್ತೆ?
ಅದೇ ಕೈಯನ್ನ ನೆಲಕ್ಕೂರಿ ಎದ್ದುನಿಲ್ಲಾಲಾಗದಷ್ಟು ಬಲಹೀನನಾಗಿ ಮಾಡಿಸಿಬಿಡುತ್ತಾ ಒಂದು ಬೀಳುವಿಕೆ??
ಛೇ, ತೀರಾ ಇಂತಹ ಒಂದು ಹೀನಾಯಕ ಸ್ಥಿತಿಗೆ ಯಾವ ಜೀವಿಗೂ ಬರಬಾರದು ,
ಬೀಳುವಿಕೆಯ ನಂತರವೂ ಎಳುವಿಕೆ ಇದ್ದೆ ಇರುತ್ತೆ.ಆಗ ನಾವು ಎದ್ದುನಿಂತರೇನೇ ಚಂದ. ಮತ್ಯಾರೋ ಎಬ್ಬಿಸಿ, ಸಮಾಧಾನಿಸೋದು.. Not good.
ಇದೆಲ್ಲಾ ಯಾವಾಗಾಗುತ್ತೆ ಅಂದ್ರೇ,
ಒಂದು ಏಕಾಂಗಿತನವನ್ನ ಸಿದ್ದಿಸಿಕೊಳ್ಳದೇ ಇದ್ದಾಗ, ಒಂದು ಒಂಟಿತನವನ್ನ ಬಲವಾಗಿ ಗಟ್ಟಿಯಾಗಿಸಿಕೊಳ್ಳದೇ ಇದ್ದಾಗ ಮಾತ್ರ, ನೋವು, ಕಷ್ಟಗಳು, ದುಃಖಗಳು, ಬದುಕಿನೂದ್ದಕ್ಕೂ ಹಿಂಬಾಲಿಸುತ್ತಲ್ಲೇ ಇರುತ್ತೆ.
ಕಾಲಕ್ಕೂ ಯಾರದೋ ಆಸರೆಗಳ ಮೇಲೇ ಅವಲಂಬಿಸೋದು , ಯಾರನ್ನೋ ನಂಬುವುದು ಇದೀಯಲ್ಲ.. ಇವುಗಳನ್ನೆ ನಿಜವಾದ ಮೂಢನಂಬಿಕೆಗಳು ಅಂತಾರೇ.
ಯಾವುದನ್ನೇ ನಂಬಬೇಕಾದಾರೂ ಮೊದಲು ನಮ್ಮ ಮೇಲೇ ನಮಗೆ ನಂಬಿಕೆ ಹುಟ್ಟಬೇಕು. ಆ ನಂಬಿಕೆ ಬಲವಾಗ್ಬೇಕು.
ಇಲ್ಲಾಂದ್ರೇ ನಾವೇಂತಾ ಶಕ್ತಿವಂತ ದೇವರನ್ನ ಆಸರಿಸಿದರೂ ಯಾವ ದೇವರು ನಮ್ಮ ಕೈ ಹಿಡಿಯಲಾರ.
ಬೆಳಗ್ಗಿನಿಂದ ಸಂಜೆತನಕ ನಮ್ಮ ಸೂತ್ತಲೂ ನೂರು ಜನ ಇರಬಹುದು. ಆದರೆ ನೆನಪಿರಲ್ಲಿ, ರಾತ್ರಿಯಾದರೇ ಪ್ರತಿಯೊಬ್ಬರು ಒಂಟಿಗಳೇ. ಪಕ್ಕದಲ್ಲಿ ಮಲಗಿರುವ ಸಂಬಂಧಕ್ಕೂ ಕೂಡ ಬೇರೆಯದೇ ನಿದ್ರೆಯಿರುತ್ತೆ. ಒಂದೇ ಬಾಂಧವ್ಯ ಅಂದಮಾತ್ರಕ್ಕೆ ನಿದಿರೆಯಲ್ಲಿ ಯಾವ ಸಂಬಂಧಕ್ಕೂ ಪಾಲು ಹಂಚಲಾಗುವುದಿಲ್ಲ. ಅಲ್ವಾ? ನಮ್ಮ ನಿದಿರೆ ನಮ್ದು - ಅವರ ನಿದಿರೆ ಅವರದು.
ಕೇವಲ ದಿನ ಮುಗಿದ ಮೇಲೇ ಬರುವ ರಾತ್ರಿಯ ನಿದಿರೆಯಷ್ಟೇ ಅಲ್ಲ, ಬದುಕು ಮುಗಿದ ಮೇಲೇ ಬರುವ ಚಿರನಿದಿರೆಯಲ್ಲೂ ಕೂಡ ಯಾರೂ ನಮ್ಮೊಂದಿಗಿರುವುದಿಲ್ಲ. ಹಾಗಂತ ಸಂಬಂಧಗಳೇ ಇಲ್ಲದೇ ಬದುಕಬೇಕು, ಸಂಬಂಧಗಳನ್ನೆಲ್ಲಾ ತೊರೆದು ಜೀವಿಸಬೇಕು ಅಂತ ನಾನು ಯಾವತ್ತಿಗೂ ಹೇಳಲ್ಲ..
ಒಬ್ಬ ಮನುಷ್ಯನ ಉಸಿರಾಟಕ್ಕೆ ಗಾಳಿಯಿರುವಷ್ಟೆ - ಅವರ ಜೀವನಕ್ಕೆ ಸಂಬಂಧಗಳು ಅಷ್ಟೇ ಮುಖ್ಯ.
ಸಂಬಂಧಗಳನ್ನ ತೊರೆದು ಸ್ವಾತಂತ್ರ್ಯ ಮತ್ತು ನೆಮ್ಮದಿಗಳನ್ನ ಹುಡುಕಿ ಹೊರಟವರು ಯಾವತ್ತಿಗೂ ಆಪಾತ್ರರೇ.
ಸಂಬಂಧಗಳನ್ನ ನಿಭಾಯಿಸುವುದು ಒಂದು ಕರ್ತವ್ಯ.
ಆ ಕರ್ತವ್ಯವನ್ನ ಜವಾಬ್ದಾರಿಯಾಗಿ ನಿಭಾಯಿಸುವುದರಲ್ಲೇ ಬದುಕಿಗೊಂದು ಪರಿಪೂರ್ಣತೆಯಿದೆ. ನಮ್ಮ ಜೊತೆಗಿರುವ ಸಂಬಂಧಗಳನ್ನ ಗೌರವಿಸಬೇಕು, ಪ್ರೀತಿಸಲೇಬೇಕು.
ಕಡೆತನಕ ಸುಂದರವಾಗಿ ಉಳಿಸಿಕೊಳ್ಳಬೇಕು.
ಆದರೆ, ಇದೆಲ್ಲದರ ಜೊತೆಜೊತೆಯಲ್ಲೂ ಕೂಡ ಯಾವ ಸಂಬಂಧಗಳ ಮೇಲೂ ಅತಿಯಾಗಿ ಡೀಪೇಂಡಾಗದೇ,
ನಮ್ಮದೇ ಆದ ಅರಿವು ನಮಗಿರಬೇಕು.
ಯಾರಿಗಾಗಿ ಯಾರೂ ಇಲ್ಲ.. ಅನ್ನೋದು ಎಷ್ಟು ಸತ್ಯನೋ? ಯಾವುದಕ್ಕಾಗಿಯೋ ನಾವು ಜೀವಿಸ್ತಿದ್ದಿವೀ ಅನ್ನೋದು ಅಷ್ಟೇ ಸತ್ಯ.
ಯಾವುದೋ ನೋವೊಂದು ನಮ್ಗಳ ಎದುರಿಗೆ ಬಂದಿದೇ ಅಂದ್ರೇ ಅದಕ್ಕೂ ಒಂದು ಬಲವಾದ ಕಾರಣವಿರುತ್ತೆ. ಆ ಕಾರಣ ಏನು? ಅಂತ ಯೋಚಿಸಿದಾಗ ಮಾತ್ರ ಬದುಕು ಸರಿಯಾಗಿ ಉತ್ತರಿಸುತ್ತೆ. ಅದು ಬಿಟ್ಟು.. ' ಛೇ, ನನಗೆ ಹೀಗಾಗ್ಬೇಕಾ..?? ' ಅಂತಂದ್ಕೊಂಡ್ರೇ, ಇಲ್ಲಿ ಯಾರೂ ಏನು ಮಾಡೋಕ್ಕಾಗಲ್ಲ.
*ಜೀವನ ಅನ್ನೋದು ಪೈಪೋಟಿಯಲ್ಲ ನಮ್ಮ ಬದುಕನ್ನು ನಾವೇ ಅನುಭವಿಸುತ್ತ ಖುಷಿ ಪಡಬೇಕೇ ವಿನಃ ಇನ್ನೊಬ್ಬರಿಗೆ ಹೋಲಿಸಿಕೊಂಡು ಇರುವ ಸುಖ ಕಳೆದು ಕೊಳ್ಳ ಬಾರದು.ತಿಳಿದುಕೊಳ್ಳಲು ಯಾವ ವಿಷಯವೂ ಸಣ್ಣದಲ್ಲ! ಮಾಡುವ ಮನಸ್ಸಿದ್ದರೆ ಯಾವ ಕೆಲಸವೂ ದೊಡ್ಡದಲ್ಲ. ಗೆಲುವು ಬೀಗುವುದನ್ನು ಕಲಿಸಿದರೆ, ಸೋಲು ಬಾಗುವುದನ್ನು ಕಲಿಸುತ್ತದೆ.. ನಾವೆಲ್ಲ ಕಳೆದು ಕೊಳ್ಳುವುದಾದರು ಏನು ಒಳ್ಳೆಯ ಪ್ರಯತ್ನದ ಕಡೆಗೆ ನಮ್ಮ ಪಯಣ ನಿರಂತರವಾಗಿ ಸಾಗಲಿ, ವಿಶ್ವಾಸದಿಂದ ಹೆಜ್ಜೆ ಇಡೋಣ.
ಭೂತೇಶ್✍️....