ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಉಗ್ರನ ಗ್ರೆನೇಡ್ ದಾಳಿಗೆ ಓರ್ವ ಬಲಿ: 20ಕ್ಕೂ ಹೆಚ್ಚು ಮಂದಿಗೆ ಗಾಯ

ಭಾನುವಾರವಾದ ಕಾರಣ ಸಹಜವಾಗಿಯೇ ಮಾರುಕಟ್ಟೆ ಪ್ರದೇಶದಲ್ಲಿ ಜನ ಜಂಗುಳಿ ಇತ್ತು. ವೀಕೆಂಡ್ ಸಮಯದಲ್ಲಿ ಮಾರುಕಟ್ಟೆಯಲ್ಲಿ ಸೃಷ್ಟಿಯಾಗುವ ಜನ ಜಂಗುಳಿಯನ್ನೇ ಗುರಿಯಾಗಿಸಿ ಉಗ್ರ ದಾಳಿ ನಡೆಸಿದ್ದಾನೆ. ಉಗ್ರನ ಗ್ರೆನೇಡ್ ದಾಳಿ ವೇಳೆ 71 ವರ್ಷದ ವೃದ್ಧರೊಬ್ಬರು ಸ್ಥಳದಲ್ಲೇ ಸಾವಿಗೀಡಾದರು. ಗಾಯಾಳುಗಳನ್ನು ಹತ್ತಿರದ ಶ್ರೀ ಮಹಾರಾಜ್ ಹರಿ ಸಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಪೈಕಿ ಹಲವರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ಧಾರೆ ಎಂದು ತಿಳಿದುಬಂದಿದೆ. ಬಿಗಿ ಬಂದೋಬಸ್ತ್ ಮಧ್ಯದಲ್ಲೇ ಉಗ್ರ ಗ್ರೆನೇಡ್ ದಾಳಿ ನಡೆಸಿದ್ದಾನೆ ಎಂದು ತಿಳಿದುಬಂದಿದೆ.

ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಉಗ್ರನ ಗ್ರೆನೇಡ್ ದಾಳಿಗೆ ಓರ್ವ ಬಲಿ: 20ಕ್ಕೂ ಹೆಚ್ಚು ಮಂದಿಗೆ ಗಾಯ
Linkup
(ಜಮ್ಮು ಕಾಶ್ಮೀರ): ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಉಗ್ರರು ಆರ್ಭಟಿಸಿದ್ದಾರೆ. ಶ್ರೀನಗರದ ಜನನಿಬಿಡ ಪ್ರದೇಶದಲ್ಲಿ ಉಗ್ರರು ನಡೆಸಿದ ಗ್ರೆನೇಡ್‌ ದಾಳಿಯಲ್ಲಿ ಓರ್ವ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಭಾನುವಾರ ಸಂಜೆ 4.20ರ ಸುಮಾರಿಗೆ ಭಯೋತ್ಪಾದಕನೋರ್ವ ಜನನಿಬಿಡ ಮಾರುಕಟ್ಟೆ ಪ್ರದೇಶದ ಮಧ್ಯ ಭಾಗದಲ್ಲಿ ಗ್ರೆನೇಡ್ ನಡೆಸಿದ. ಪೊಲೀಸರು ಹಾಗೂ ಭದ್ರತಾ ಪಡೆಗಳನ್ನೇ ಗುರಿಯಾಗಿಸಿ ಈ ದಾಳಿ ನಡೆಸಿದ್ದ. ಮುನ್ನೆಚ್ಚರಿಕಾ ಕ್ರಮವಾಗಿ ಹರಿ ಸಿಂಗ್ ಹೈ ಸ್ಟ್ರೀಟ್‌ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಇದರ ಮಧ್ಯದಲ್ಲೇ ಉಗ್ರ ದಾಳಿ ನಡೆಸಿದ್ದಾನೆ. ಭಾನುವಾರವಾದ ಕಾರಣ ಸಹಜವಾಗಿಯೇ ಮಾರುಕಟ್ಟೆ ಪ್ರದೇಶದಲ್ಲಿ ಜನ ಜಂಗುಳಿ ಇತ್ತು. ವೀಕೆಂಡ್ ಸಮಯದಲ್ಲಿ ಮಾರುಕಟ್ಟೆಯಲ್ಲಿ ಸೃಷ್ಟಿಯಾಗುವ ಜನ ಜಂಗುಳಿಯನ್ನೇ ಗುರಿಯಾಗಿಸಿ ಉಗ್ರ ದಾಳಿ ನಡೆಸಿದ್ದಾನೆ. ಉಗ್ರನ ಗ್ರೆನೇಡ್ ದಾಳಿ ವೇಳೆ 71 ವರ್ಷದ ವೃದ್ಧರೊಬ್ಬರು ಸ್ಥಳದಲ್ಲೇ ಸಾವಿಗೀಡಾದರು. ಗಾಯಾಳುಗಳನ್ನು ಹತ್ತಿರದ ಶ್ರೀ ಮಹಾರಾಜ್ ಹರಿ ಸಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಪೈಕಿ ಹಲವರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ಧಾರೆ ಎಂದು ತಿಳಿದುಬಂದಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿ ರಾಕೇಶ್ ಬಲವಾನ ಅವರು, ಉಗ್ರ ದಾಳಿ ನಡೆಸಿದ ವೇಳೆ ಬಹಳ ಜನಸಂದಣಿ ಇತ್ತು ಎಂದು ತಿಳಿಸಿದ್ದಾರೆ. ಭಯೋತ್ಪಾದಕ ಎಸೆದ ಗ್ರೆನೇಡ್‌ ಸ್ಫೋಟಗೊಳ್ಳುತ್ತಿದ್ದಂತೆಯೇ ಸ್ಥಳದಲ್ಲಿ ಇದ್ದ 71 ವರ್ಷ ವಯಸ್ಸಿನ ವೃದ್ಧ ವ್ಯಕ್ತಿ ಸ್ಥಳದಲ್ಲೇ ಜೀವ ಬಿಟ್ಟರು. ಅದೇ ಸ್ಥಳದಲ್ಲಿ ಇದ್ದ ಯುವತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡವರ ಪೈಕಿ ಪೊಲೀಸರೂ ಇದ್ದಾರೆ ಎಂದು ತಿಳಿದುಬಂದಿದೆ. ಗ್ರೆನೇಡ್ ಸ್ಫೋಟ ಘಟನೆ ತಿಳಿದುಬಂದ ಕೂಡಲೇ ಸ್ಥಳಕ್ಕೆ ಹೆಚ್ಚಿನ ಭದ್ರತಾ ಪಡೆ ರವಾನೆ ಮಾಡಲಾಗಿದೆ. ಸದ್ಯ ಘಟನಾ ಸ್ಥಳವನ್ನು ಭದ್ರತಾ ಪಡೆ ಸುತ್ತುವರೆದಿದ್ದು, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಇದೀಗ ದಾಳಿಕೋರ ಉಗ್ರನಿಗಾಗಿ ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿವೆ. ಅತಿ ಶೀಘ್ರದಲ್ಲೇ ಉಗ್ರನನ್ನು ಪತ್ತೆ ಹಚ್ಚೋದಾಗಿ ಭದ್ರತಾ ಪಡೆಗಳು ತಿಳಿಸಿವೆ. ಈವರೆಗೆ ಯಾವುದೇ ಉಗ್ರ ಸಂಘಟನೆಯೂ ಈ ಘಟನೆಯ ಹೊಣೆಯನ್ನು ಹೊತ್ತುಕೊಂಡಿಲ್ಲ ಎಂದು ತಿಳಿದುಬಂದಿದೆ. ಇನ್ನು ರಾಜಕೀಯ ಪಕ್ಷಗಳು ಈ ಘಟನೆಯನ್ನು ಬಲವಾಗಿ ಖಂಡಿಸಿವೆ. ಘಟನೆ ಕುರಿತು ಟ್ವೀಟ್ ಮಾಡಿರುವ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ನಾನು ಈ ದಾಳಿಯನ್ನು ಬಲವಾಗಿ ಖಂಡಿಸುತ್ತೇನೆ. ಮೃತರ ಆತ್ಮಕ್ಕೆ ಶಾಂತಿ, ಸದ್ಗತಿ ಸಿಗಲಿ, ಸ್ವರ್ಗ ಪ್ರಾಪ್ತಿಯಾಗಲಿ ಹಾಗೂ ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಒಮರ್ ಅಬ್ದುಲ್ಲಾ ಪ್ರಾರ್ಥಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಗಳು ಕೊಂಚ ಕಡಿಮೆಯಾಗಿತ್ತಾದರೂ, ಆಗಾಗ ಉಗ್ರರು ತಮ್ಮ ಕಾಕದೃಷ್ಟಿಯನ್ನು ಜನಸಾಮಾನ್ಯರ ಮೇಲೆ ತೋರುತ್ತಿದ್ಧಾರೆ. ಕಣಿವೆ ರಾಜ್ಯದಾದ್ಯಂತ ಭದ್ರತಾ ಪಡೆಗಳು ಉಗ್ರರ ಹೆಡೆಮುರಿ ಕಟ್ಟುವ ಕಾರ್ಯಾಚರಣೆಯನ್ನು ನಿರಂತರವಾಗಿ ನಡೆಸುತ್ತಲೇ ಇದ್ದಾರೆ.