ಛತ್ತೀಸ್‌ಗಢದಲ್ಲಿ ನಕ್ಸಲರಿಂದ ಪತಿ ಅಪಹರಣ : ಹುಡುಕಿಕೊಂಡು ಕಾಡಿಗೆ ಹೊರಟ ಪತ್ನಿ, ಮಗು!

ನಕ್ಸಲರಿಂದ ಅಪಹರಣವಾಗಿದ್ದ ಎಂಜಿನಿಯರ್‌ ಪತಿಯನ್ನು ಹುಡುಕಲು ಖುದ್ದು ಪತ್ನಿಯೇ ಸಣ್ಣ ಮಗುವಿನೊಂದಿಗೆ ಕಾಡಿಗೆ ಹೋಗಿರುವ ಘಟನೆ ನಡೆದಿದೆ. ಈ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಛತ್ತೀಸ್‌ಗಢದಲ್ಲಿ ನಕ್ಸಲರಿಂದ ಪತಿ ಅಪಹರಣ : ಹುಡುಕಿಕೊಂಡು ಕಾಡಿಗೆ ಹೊರಟ ಪತ್ನಿ, ಮಗು!
Linkup
ರಾಯ್‌ಪುರ: ದಲ್ಲಿ ರಿಂದ ವಾಗಿದ್ದ ಎಂಜಿನಿಯರ್‌ ಪತಿಯನ್ನು ಹುಡುಕಲು ಖುದ್ದು ಯೇ ಸಣ್ಣ ಮಗುವಿನೊಂದಿಗೆ ಕಾಡಿಗೆ ಹೋಗಿರುವ ಘಟನೆ ನಡೆದಿದೆ. ಸೋನಾಲಿ ಪವಾರ್‌ ತನ್ನ ಪತಿಯನ್ನು ಬಿಡುಗಡೆ ಮಾಡುವಂತೆ ನಕ್ಸಲರಿಗೆ ವಿಡಿಯೋ ಮೂಲಕ ಭಾವನಾತ್ಮಕ ಮನವಿ ಮಾಡಿದ್ದರು. ಆದರೆ, ಅತ್ತ ಕಡೆಯಿಂದ ಯಾವುದೇ ಸಂದೇಶವಾಗಲೀ, ಬಿಡುಗಡೆಯ ಮುನ್ಸೂಚನೆಯಾಗಲೀ ಸಿಕ್ಕಿರಲಿಲ್ಲ. ಹೀಗಾಗಿ ಖುದ್ದು ತಾವೇ ಪತಿಯನ್ನು ಹುಡುಕಲು ತಮ್ಮ ಹೆಣ್ಣು ಮಗುವಿನೊಂದಿಗೆ ಅಬುಜ್ಮಾದ್‌ ಅರಣ್ಯಕ್ಕೆ ಪ್ರವೇಶಿಸಿದ್ದಾರೆ. ಈ ಮಧ್ಯೆ, ಅಪಹರಣಗೊಂಡಿದ್ದ ಎಂಜಿನಿಯರ್‌ ಅಶೋಕ್‌ ಪವಾರ್‌ ಹಾಗೂ ನೌಕರ ಆನಂದ್‌ ಯಾದವ್‌ ಅವರನ್ನು ನಕ್ಸಲರು ಮಂಗಳವಾರ ಬಿಡುಗಡೆ ಮಾಡಿದ್ದಾರೆ. ಆದರೆ, ಪತಿಗಾಗಿ ಶೋಧಿಸುತ್ತಾ ಹೋದ ಪತ್ನಿ ಇನ್ನೂ ಅರಣ್ಯದಲ್ಲೇ ಉಳಿದಿದ್ದಾರೆ. ಅಪಹೃತನ ಪತ್ನಿಯು ಸ್ಥಳೀಯ ಪತ್ರಕರ್ತರು ಮತ್ತು ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದು, ಅವರಿಗೆ ವಿಷಯ ಮುಟ್ಟಿಸಲಾಗಿದೆ ಎಂದು ತಿಳಿದುಬಂದಿದೆ. ಅಶೋಕ್‌ ಪವಾರ್‌ ಹಾಗೂ ಯಾದವ್‌ ಅವರನ್ನು ಬಿಜಾಪುರ ಜಿಲ್ಲೆಯ ಕುತ್ರುನಲ್ಲಿರಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಪಂಕಜ್‌ ಶುಕ್ಲಾ ಬುಧವಾರ ಮಾಹಿತಿ ನೀಡಿದ್ದಾರೆ. ಶೀಘ್ರವೇ ಪತಿಯನ್ನು ಭೇಟಿ ಮಾಡಲು ಆಕೆಗೆ ಅನುವು ಮಾಡಿಕೊಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತನ್ನ ಮಕ್ಕಳಿಗಾಗಿಯಾದರೂ ಪತಿಯನ್ನು ಬಿಡುಗಡೆ ಮಾಡುವಂತೆ ಮಹಿಳೆ ಮಾಡಿದ್ದ ಭಾವನಾತ್ಮಕ ವಿಡಿಯೊ ಮನವಿಯನ್ನು ನೋಡಿದ ಬಳಿಕ ನಕ್ಸಲರು ಎಂಜಿನಿಯರ್‌ ಹಾಗೂ ಸಹಾಯಕನನ್ನು ಬಿಡುಗಡೆ ಮಾಡಿದ್ದಾರೆ ಎಂದು ಸ್ಥಳೀಯ ಪತ್ರಕರ್ತರೊಬ್ಬರು ಮಾಹಿತಿ ನೀಡಿದ್ದಾರೆ. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, 5 ವರ್ಷದ ಮಗು ಕುಟುಂಬ ಸದಸ್ಯರೊಂದಿಗೆ ಮನೆಯಲ್ಲಿದೆ. ಎರಡೂವರೆ ವರ್ಷದ ಮತ್ತೊಂದು ಮಗುವನ್ನು ತಾಯಿ ತನ್ನೊಂದಿಗೆ ಕಾಡಿಗೆ ಕರೆದೊಯ್ದಿದ್ದರು. ಫೆ.11ರಂದು ನಿರ್ಮಾಣ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂಜಿನಿಯರ್‌ ಪವಾರ್‌ ಅವರನ್ನು ನಕ್ಸಲರು ಅಪಹರಿಸಿದ್ದರು.